HOME » NEWS » National-international » FAMILY OF BALWINDER SINGH REFUSES TO CONDUCT LAST RITES UNTIL KILLERS ARE CAUGHT SNVS

‘ಹಂತಕರ ಹಿಡಿಯೋವರೆಗೂ ದಫನ್ ಮಾಡಲ್ಲ’ – ಶೌರ್ಯಚಕ್ರ ವಿಜೇತನ ಕುಟುಂಬ ಪಟ್ಟು

ಅ. 16ರಂದು ಪಂಜಾಬ್ನ ತರನ್ ತಾರನ್ನಲ್ಲಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದ ಶೌರ್ಯ ಚಕ್ರ ವಿಜೇತ ಬಲವಿಂದರ್ ಸಿಂಗ್ ಸಂಧು ಅವರ ಸಾವಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೊಣೆ ಎಂದು ಅವರ ಕುಟುಂಬ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

news18
Updated:October 17, 2020, 5:01 PM IST
‘ಹಂತಕರ ಹಿಡಿಯೋವರೆಗೂ ದಫನ್ ಮಾಡಲ್ಲ’ – ಶೌರ್ಯಚಕ್ರ ವಿಜೇತನ ಕುಟುಂಬ ಪಟ್ಟು
ಬಲವಿಂದರ್ ಸಿಂಗ್ ಸಂಧು ಅವರ ಅಂತಿಮ ದರ್ಶನಕ್ಕೆ ನೆರೆದ ಜನರು
  • News18
  • Last Updated: October 17, 2020, 5:01 PM IST
  • Share this:
ಅಮೃತಸರ(ಅ. 17): ಪಂಜಾಬ್​ನ ತರನ್ ತಾರನ್ ಜಿಲ್ಲೆಯಲ್ಲಿ ಶೌರ್ಯಚಕ್ರ ಪುರಸ್ಕೃತ ಬಲವಿಂದರ್ ಸಿಂಗ್ ಸಂಧು ನಿನ್ನೆ ಇಬ್ಬರು ಹಂತಕರ ಗುಂಡಿಗೆ ಬಲಿಯಾಗಿದ್ದು ಇಡೀ ದೇಶವನ್ನು ಬೆಚ್ಚಿಬೀಳಿಸಿತ್ತು. ಈಗ ಹಂತಕರನ್ನು ಹಿಡಿಯುವವರೆಗೂ ಸಂಧು ಅವರ ಮೃತದೇಹವನ್ನು ದಫನ್ ಮಾಡುವುದಿಲ್ಲ ಎಂದು ಅವರ ಕುಟುಂಬದವರು ಪಟ್ಟುಹಿಡಿದಿದ್ದಾರೆ. “ನನ್ನ ಪತಿಯ ಸಾವಿಗೆ ಗುಪ್ತಚರ ವೈಫಲ್ಯವೇ ಕಾರಣ. ಇದಕ್ಕೆ ರಾಜ್ಯ ಮತ್ತು ಕೇಂದ್ರ ಎರಡೂ ಸರ್ಕಾರಗಳೂ ಹೊಣೆ” ಎಂದು ಬಲವಿಂದರ್ ಸಿಂಗ್ ಸಂಧು ಅವರ ಪತ್ನಿ ಜಗದೀಶ ಕೌರ್ ಸಂಧು ಕಿಡಿಕಾರಿದ್ದಾರೆ.

ನಮ್ಮ ಕುಟುಂಬ ಸದಸ್ಯರಾದ ನಾನು, ನನ್ನ ಪತಿ, ಅವರ ಸಹೋದರ ರಂಜಿತ್ ಸಿಂಗ್ ಸಂಧು ಮ ತ್ತವರ ಪತ್ನಿ ಬಲರಾಜ್ ಕೌರ್ ಸಂಧು ಅವರೆಲ್ಲರೂ ಶೌರ್ಯ ಚಕ್ರ ವಿಜೇತರು. ಭಯೋತ್ಪಾದನೆ ವಿರುದ್ಧ ನಮ್ಮ ಹೋರಾಟ ಪರಿಗಣಿಸಿ ಕೇಂದ್ರ ಸರ್ಕಾರ ಈ ಗೌರವ ನೀಡಿದೆ…. ನನ್ನ ಕುಟುಂಬಕ್ಕೆ ರಾಜ್ಯ ಸರ್ಕಾರ ಭದ್ರತೆ ನೀಡದಿದ್ದರೆ ಕೇಂದ್ರ ಸರ್ಕಾರ ಭದ್ರತೆ ಒದಗಿಸಬೇಕಿತ್ತು. ಸಂಧು ಅವರು ಹಲವು ವರ್ಷಗಳ ಕಾಲ ಪಂಜಾಬ್​ನಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಡಿದ್ದರು. ಖಲಿಸ್ತಾನ್ ಭಯೋತ್ಪಾದನೆ ತಾರಕದಲ್ಲಿದ್ದಾಗ ಅನೇಕ ಉಗ್ರ ದಾಳಿಗಳನ್ನ ಎದುರಿಸಿದ್ದರು… ಅವರ ಹತ್ಯೆ ಭಯೋತ್ಪಾದಕರ ಕೃತ್ಯವಾಗಿದೆ ಎಂದು ಜಗದೀಶ್ ಕೌರ್ ಸಂಧು ಆರೋಪಿಸಿದ್ದಾರೆ.

ಇದನ್ನೂ ಓದಿ: ಬಾಲಿಯಾ ಶೂಟೌಟ್; ‘ಗುಂಡು ಹೊಡೆದವ ನಾನಲ್ಲ’ - ನಾಪತ್ತೆಯಾದ ಆರೋಪಿ ಹೇಳಿಕೆ

ತರನ್ ತಾರನ್ ಜಿಲ್ಲಾ ಪೊಲೀಸ್ ಶಿಫಾರಸಿನ ಮೇರೆಗೆ ಬಲವೀಂದರ್ ಸಿಂಗ್ ಸಂಧು ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ರಾಜ್ಯ ಸರ್ಕಾರ ವರ್ಷದ ಹಿಂದೆ ಹಿಂಪಡೆದಿತ್ತು. ಅವರ ಕುಟುಂಬದ ಎಲ್ಲಾ ಸದಸ್ಯರೂ ಕೂಡ ಭಯೋತ್ಪಾದಕರ ಹಿಟ್ ಲಿಸ್ಟ್​ನಲ್ಲಿದ್ದರು. ತರನ್ ತಾರನ್ ಜಿಲ್ಲೆಯ ಭಿಖಿವಿಂದ್​ನಲ್ಲಿರುವ ತಮ್ಮ ಕಚೇರಿ ಬಳಿ ಸಂಧು ಅವರನ್ನ ಇಬ್ಬರು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದಿದ್ದರು. ಬೈಕ್​ನಲ್ಲಿ ಬಂದಿದ್ದ ಆರೋಪಿಗಳು ಹೊಡೆದ ನಾಲ್ಕು ಗುಂಡುಗಳ ಸಂಧು ಅವರ ದೇಹ ಸೀಳಿದ್ದವು.

ಇದೇ ವೇಳೆ, ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಅವರು ಸಂಧು ಸಾವಿಗೆ ಸಂತಾಪ ಸೂಚಿಸಿದ್ದಾರೆ. ಫೀರೋಜ್​ಪುರ್ ಡಿಐಜಿಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ತನಿಖೆಗೆ ನಿಯೋಜಿಸಿದ್ದಾರೆ. ಈ ಪ್ರಕರಣವನ್ನು ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುವುದು. ತಪ್ಪಿತಸ್ಥರು ಯಾರೇ ಆದರೂ ಬಿಡುವುದಿಲ್ಲ ಎಂದು ಸಿಎಂ ಹೇಳಿದ್ದಾರೆ.

ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು; ಮೂವರ ಬಂಧನ

ಬಲವಿಂದರ್ ಸಿಂಗ್ ಸಂಧು ಮತ್ತವರ ಕುಟುಂಬದ ಧೈರ್ಯ ಸಾಹಸಗಳು ತರನ್ ತಾರನ್​ನಲ್ಲಿ ಮನೆಮಾತಾಗಿವೆ. ಭಯೋತ್ಪಾದನಾ ದಾಳಿಗಳನ್ನ ಎದುರಿಸುವುದು ಹೇಗೆಂದು ಇವರ ಕುಟುಂಬ ತೋರಿಸಿಕೊಟ್ಟಿದೆ, ಅನೇಕ ಮಂದಿಗೆ ಸ್ಫೂರ್ತಿ ಕೂಡ ಆಗಿದೆ. ಕಾಕತಾಳೀಯವೆಂದರೆ ಸಿಎಂ ಅಮರೀಂದರ್ ಸಿಂಗ್ ಅವರು ಕೂಡ ಖಲಿಸ್ತಾನೀ ಉಗ್ರರ ವಿರುದ್ಧ ಹೋರಾಟ ಮಾಡಿ ಮೆಚ್ಚುಗೆ ಗಳಿಸಿದವರೇ ಆಗಿದ್ದಾರೆ.
Published by: Vijayasarthy SN
First published: October 17, 2020, 5:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading