• Home
  • »
  • News
  • »
  • national-international
  • »
  • Kanpur: ಕೋಮಾದಲ್ಲಿದ್ದಾನೆಂದು 18 ತಿಂಗಳು ಶವವನ್ನು ಮನೆಯಲ್ಲಿಟ್ಟುಕೊಂಡ ಕುಟುಂಬ!

Kanpur: ಕೋಮಾದಲ್ಲಿದ್ದಾನೆಂದು 18 ತಿಂಗಳು ಶವವನ್ನು ಮನೆಯಲ್ಲಿಟ್ಟುಕೊಂಡ ಕುಟುಂಬ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Kanpur News: ಉತ್ತರ ಪ್ರದೇಶದ ಕಾನ್ಪುರದಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ರಾವತ್‌ಪುರದಲ್ಲಿ ಕುಟುಂಬವೊಂದು ಕೊರೋನಾದಿಂದ ಸಾವನ್ನಪ್ಪಿದ 18 ತಿಂಗಳ ನಂತರವೂ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಲಿಲ್ಲ. ರಾವತ್‌ಪುರದ ಆರೋಗ್ಯ ಇಲಾಖೆಯ ತಂಡ ವಿಮಲ್ ದೀಕ್ಷಿತ್ ಅವರ ಮನೆಗೆ ತಲುಪಿದಾಗ, ಕುಟುಂಬ ಸದಸ್ಯರು ಅವರನ್ನು ಸಭಾಂಗಣಕ್ಕೆ ಕರೆದೊಯ್ದು ಪರೀಕ್ಷಿಸುವಂತೆ ಹಠ ಹಿಡಿದಿದ್ದಾರೆ.

ಮುಂದೆ ಓದಿ ...
  • Share this:

ಕಾನ್ಪುರ(ಸೆ.24): ಉತ್ತರ ಪ್ರದೇಶದ ಕಾನ್ಪುರದ (Kanpur, Uttar Pradesh) ರಾವತ್‌ಪುರದಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಮೃತದೇಹದೊಂದಿಗೆ (Dead Body) ಕುಟುಂಬವೊಂದು ವಾಸವಾಗಿತ್ತು. ಅಚ್ಚರಿಯ ವಿಚಾರವೆಂದರೆ ಈ ಕುಟುಂಬ ಸದಸ್ಯರಿಗೆ ವ್ಯಕ್ತಿ ಮೃತಪಟ್ಟಿರುವ ವಿಚಾರ ತಿಳಿದಿರಲೇ ಇಲ್ಲ, ಆತ ಬದುಕಿದ್ದಾನೆಂದೇ ಅವರೆಲ್ಲಾ ಭಾವಿಸಿದ್ದರು. ವಾಸ್ತವವಾಗಿ, ಏಪ್ರಿಲ್ 2021 ರಲ್ಲಿ, ಗುಜರಾತ್‌ನ ಆದಾಯ ತೆರಿಗೆ ಇಲಾಖೆಯಲ್ಲಿ (Gujarat Income Tax Department) ಅಧಿಕಾರಿಯಾಗಿ ನೇಮಕಗೊಂಡ ಕಾನ್ಪುರದ ವಿಮಲೇಶ್ ದೀಕ್ಷಿತ್ ಅವರು ರಾವತ್‌ಪುರದ ಅವರ ನಿವಾಸದಲ್ಲಿ ನಿಧನರಾದರು. ಮೋತಿ ಆಸ್ಪತ್ರೆಯಿಂದ ಮರಣ ಪ್ರಮಾಣ ಪತ್ರವನ್ನೂ ನೀಡಲಾಗಿದೆ. ಇದಾಗಿ 18 ತಿಂಗಳು ಕಳೆದರೂ ಸಂಬಂಧಿಕರು ಮೃತದೇಹದ ಅಂತಿಮ ಸಂಸ್ಕಾರ ನಡೆಸಿಲ್ಲ. ಮೃತದೇಹವನ್ನು ಮನೆಯಲ್ಲಿಟ್ಟು ವಿಮಲೇಶ್‌ಗೆ ಮನೆಯಲ್ಲಿ ಚಿಕಿತ್ಸೆ ನೀಡುತ್ತಿದ್ದರು.


ಇದನ್ನು ಓದಿ:  ಯುದ್ಧ ಭೂಮಿಯಲ್ಲಿ ಮಕ್ಕಳ ಜೀವ ಉಳಿಸಲು Ukraine ತಾಯಂದಿರ ಈ ಕೆಲಸ ಕಣ್ಣಲ್ಲಿ ನೀರು ತರಿಸತ್ತೆ


ಆದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿ


ವಿಮಲೇಶ್ ದೀಕ್ಷಿತ್ ಗುಜರಾತ್‌ನ ಆದಾಯ ತೆರಿಗೆ ಇಲಾಖೆಯಲ್ಲಿ ನೇಮಕಗೊಂಡಿದ್ದರು. ಒಂದೂವರೆ ವರ್ಷಗಳ ಕಾಲ ಅವರು ನಿರಂತರವಾಗಿ ಕರ್ತವ್ಯಕ್ಕೆ ಸೇರದೇ ಇದ್ದಾಗ, ಈ ಬಗ್ಗೆ ತನಿಖೆ ನಡೆಸುವಂತೆ ಕಾನ್ಪುರ ಸಿಎಂಒಗೆ ಲಿಖಿತವಾಗಿ ಕೇಳಲಾಗಿತ್ತು. ರಾವತ್‌ಪುರದ ಆರೋಗ್ಯ ಇಲಾಖೆಯ ತಂಡ ವಿಮಲ್ ದೀಕ್ಷಿತ್ ಅವರ ಮನೆಗೆ ತಲುಪಿದಾಗ, ಕುಟುಂಬ ಸದಸ್ಯರು ಮೃತದೇಹವನ್ನು ಪರೀಕ್ಷಿಸಲು ಹಠ ಹಿಡಿದರು. ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.


ಒಂದೂವರೆ ವರ್ಷದಿಂದ ಕೆಲಸಕ್ಕೆ ಗೈರಾದ ಹಿನ್ನೆಲೆ ಪರಿಶೀಲನೆ


ವಾಸ್ತವವಾಗಿ, ವಿಮಲೇಶ್ ದೀಕ್ಷಿತ್ ಅವರ ಕುಟುಂಬ ಸದಸ್ಯರು ಕಳೆದ ಒಂದೂವರೆ ವರ್ಷಗಳಿಂದ ಅವರ ಮೃತ ದೇಹವನ್ನು ಮನೆಯಲ್ಲಿಯೇ ಇರಿಸಿದ್ದರು. ವಿಮಲೇಶ್ ಅನಾರೋಗ್ಯಕ್ಕೀಡಾಗಿ, ಕೋಮಾದಲ್ಲಿದ್ದಾರೆ ಎಂದು ಜನರಿಗೆ ಹೇಳುತ್ತಿದ್ದರು. ಇಂದು ಆರೋಗ್ಯ ಇಲಾಖೆ ತಂಡ ತಲುಪಿದಾಗ ವಿಮಲೇಶ್ ದೀಕ್ಷಿತ್ ಅವರ ದೇಹ ಪೂರ್ತಿ ಕಪ್ಪು ಬಣ್ಣಕ್ಕೆ ತಿರುಗಿತ್ತು. ಗುಜರಾತ್‌ನಲ್ಲಿ ಆದಾಯ ತೆರಿಗೆ ಇಲಾಖೆಯ ಪರವಾಗಿ, ವಿಮಲೇಶ್ ದೀಕ್ಷಿತ್ ಅವರ ನಿರಂತರ ಗೈರುಹಾಜರಿಯ ದೂರಿನ ಮೇಲೆ ಇಡೀ ವಿಷಯವು ಬೆಳಕಿಗೆ ಬಂದಿದೆ.


ವಿಮಲೇಶ್‌ಗೆ ನಿರಂತರವಾಗಿ ಸಂಬಳ ನೀಡಲಾಗುತ್ತಿದ್ದರೂ ಅವರನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇಲಾಖೆಯಿಂದ ತನಿಖೆ ನಡೆಸಲಾಯಿತು. ಆದಾಯ ತೆರಿಗೆ ಇಲಾಖೆಯು ಕಾನ್ಪುರದ ವೈದ್ಯಕೀಯ ಅಧಿಕಾರಿಯನ್ನು ಸಂಪರ್ಕಿಸಿ ಲಿಖಿತವಾಗಿ ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಕೋರಿತ್ತು.


ಇದನ್ನೂ ಓದಿ: IIT ಕಾನ್ಪುರಕ್ಕೆ 100 ಕೋಟಿ ರೂ. ದೇಣಿಗೆ ನೀಡಿದ IndiGo co-founder ರಾಕೇಶ್ ಗಂಗ್ವಾಲ್


ಆಸ್ಪತ್ರೆ ಕೊಟ್ಟ ಮರಣ ಪ್ರಮಾಣಪತ್ರ ಕೊಟ್ಟ ಕುಟುಂಬ ಸದಸ್ಯರು


ಎಸಿಎಂಒ ಒಪಿ ಈ ಬಗ್ಗೆ ಮಾತನಾಡುತ್ತಾ, 'ಆರೋಗ್ಯ ಅಧಿಕಾರಿಗಳ ತಂಡ ಇಲ್ಲಿಗೆ ಬಂದಾಗ, ನಮ್ಮನ್ನು ಮನೆಯೊಳಗೆ ಪ್ರವೇಶಿಸಲು ಅನುಮತಿಸಲಿಲ್ಲ. ವಿಮಲೇಶ್ ದೀಕ್ಷಿತ್ ಜೀವಂತವಾಗಿದ್ದು, ಕೋಮಾದಲ್ಲಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ದೇಹವನ್ನು ಹಲಗೆಯ ಮೇಲೆ ಇಡಲಾಗಿತ್ತು. ಮೇಲಿನಿಂದ ಬಟ್ಟೆಯನ್ನು ಮುಚ್ಚಲಾಗಿತ್ತು. ನಾವು ಪೊಲೀಸರನ್ನು ಕರೆಯಬೇಕಾಯಿತು. ನಮ್ಮ ತಂಡ ತನಿಖೆ ನಡೆಸಿದೆ. ಇದಾದ ಬಳಿಕ ಅವರು 22 ಏಪ್ರಿಲ್ 2021 ರಂದು ಮೋತಿ ಆಸ್ಪತ್ರೆ ನೀಡಿದ ಮರಣ ಪ್ರಮಾಣಪತ್ರವನ್ನು ನಮಗೆ ನೀಡಿದರು ಎಂದಿದ್ದಾರೆ.

Published by:Precilla Olivia Dias
First published: