ಶಬರಿಮಲೆ ದೇಗುಲಕ್ಕೆ ತೆರಳುತ್ತಿದ್ದ 12 ವರ್ಷದ ಬಾಲಕಿಯನ್ನು ತಡೆದ ಪೊಲೀಸರು

12 ವರ್ಷದ ಬಾಲಕಿ ತಮಿಳುನಾಡಿನ ಬೇಲೂರಿನವಳು ಎಂದು ತಿಳಿದು ಬಂದಿದೆ. ಆಕೆ ತನ್ನ ಪೋಷಕರು ಹಾಗೂ ಸಂಬಂಧಿಕರೊಂದಿಗೆ ಶಬರಿಮಲೆಗೆ ತೆರಳುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

Latha CG | news18-kannada
Updated:November 19, 2019, 3:05 PM IST
ಶಬರಿಮಲೆ ದೇಗುಲಕ್ಕೆ ತೆರಳುತ್ತಿದ್ದ 12 ವರ್ಷದ ಬಾಲಕಿಯನ್ನು ತಡೆದ ಪೊಲೀಸರು
ಶಬರಿಮಲೆ
  • Share this:
ನವದೆಹಲಿ(ನ.19): ಬಾರೀ ಪೊಲೀಸ್​ ಬಿಗಿ ಭದ್ರತೆ ನಡುವೆಯೇ ವರ್ಷಕ್ಕೆ ಎರಡು ತಿಂಗಳ ತೀರ್ಥಯಾತ್ರೆಗಾಗಿ ಶಬರಿಮಲೆ ದೇಗುಲದ ಬಾಗಿಲನ್ನು ಶನಿವಾರ ತೆರೆಯಲಾಗಿದೆ. ಈ ಬೆನ್ನಲ್ಲೇ ಇಂದು ಶಬರಿಮಲೆ ದೇಗುಲಕ್ಕೆ ತೆರಳುತ್ತಿದ್ದ 12 ವರ್ಷದ ಬಾಲಕಿಯನ್ನು ಪೊಲೀಸರು ತಡೆದಿದ್ದಾರೆ.

ಬಾಲಕಿಯ ವಯಸ್ಸು ಕ್ಯೂ ಬುಕ್ಕಿಂಗ್​ನಲ್ಲಿ 10 ಎಂದು ತೋರಿಸುತ್ತಿದೆ. ಪೊಲೀಸರು ಪಂಬಾದಲ್ಲಿ ಹುಡುಗಿಯ ಗುರುತಿನ ಚೀಟಿ​​ ಪರಿಶೀಲಿಸಿದ ಬಳಿಕ ಆಕೆ ಶಬರಿಮಲೆಗೆ ತೆರಳುವುದನ್ನು ತಡೆದಿದ್ದಾರೆ. ಕಳೆದ ವರ್ಷ ಸುಪ್ರೀಂ ಕೋರ್ಟ್​​ ಎಲ್ಲಾ ವಯಸ್ಸಿನ ಮಹಿಳೆಯರು ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ತೆರಳಬಹುದು ಎಂದು ತೀರ್ಪು ನೀಡಿದ ಬಳಿಕ ಶಬರಿಮಲೆ ಪ್ರತಿಭಟನೆಯ ಕೇಂದ್ರವಾಗಿತ್ತು.

12 ವರ್ಷದ ಬಾಲಕಿ ತಮಿಳುನಾಡಿನ ಬೇಲೂರಿನವಳು ಎಂದು ತಿಳಿದು ಬಂದಿದೆ. ಆಕೆ ತನ್ನ ಪೋಷಕರು ಹಾಗೂ ಸಂಬಂಧಿಕರೊಂದಿಗೆ ಶಬರಿಮಲೆಗೆ ತೆರಳುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ತಾರಕಕ್ಕೇರಿದ ಜೆಎನ್​​ಯು ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ಪೊಲೀಸ್​ ಲಾಠಿ ಪ್ರಹಾರ: ಕೇಂದ್ರದ ವಿರುದ್ಧ ವಿಪಕ್ಷಗಳ ಕಿಡಿ

ಶಬರಿಮಲೆ ದೇಗುಲದ ಸಂಪ್ರದಾಯವನ್ನು ಬೆಂಬಲಿಸಲು 9 ವರ್ಷದ ಕರ್ನಾಟಕ ಮೂಲದ ಬಾಲಕಿ ಸೋಮವಾರ ಅಯ್ಯಪ್ಪ ಸ್ವಾಮಿ ದೇಗುಲದ ಕಾಂಪ್ಲೆಕ್ಸ್​​​ಗೆ ಭೇಟಿ ನೀಡಿದ್ದಳು. "ಕಾಯಲು ಸಿದ್ದ. 50 ವರ್ಷ ಪೂರೈಸಿದ ಬಳಿಕ ನಾನು ಶಬರಿಮಲೆ ದೇಗುಲಕ್ಕೆ ಭೇಟಿ ನೀಡಲಿದ್ದೇನೆ," ಎಂದು ಬರೆದಿರುವ ಫಲಕವನ್ನು ತನ್ನ ಕೊರಳಲ್ಲಿ ಧರಿಸಿದ್ದಳು.

"ಆ ಬಾಲಕಿ ಅಯ್ಯಪ್ಪಸ್ವಾಮಿಯ ದರ್ಶನ ಪಡೆಯಲು ಮೂರು ಬಾರಿ ಶಬರಿಮಲೆಗೆ ಭೇಟಿ ನೀಡಿದ್ದಾಳೆ. ಆದರೆ ಆಕೆ 50 ವರ್ಷ ಆದ ಬಳಿಕ ದೇವರ ದರ್ಶನ ಪಡೆಯುವುದಾಗಿ ಹೇಳಿದ್ದಾಳೆ. ಕೆಲವು ಭಕ್ತರು ಈಗಲೂ ದೇವಾಲಯದ ಸಂಪ್ರದಾಯ ಮತ್ತು ನಂಬಿಕೆಗಳನ್ನು ರಕ್ಷಿಸಿ ಬೆಂಬಲಿಸುತ್ತಿದ್ದಾರೆ," ಎಂದು ತ್ರಿಶ್ಯೂರ್​​​​ನ ಹೃದಯಕೃಷ್ಣನ್​​ ಹೇಳಿದ್ದಾರೆ.

ಶಬರಿಮಲೆ ದೇಗುಲಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರು ಪ್ರವೇಶಿಸಬಹುದು ಎಂಬ ಸುಪ್ರೀಂ ಕೋರ್ಟ್​​ ತೀರ್ಪಿನ ಮಧ್ಯೆಯೂ, ಕೇರಳ ಸರ್ಕಾರ ಯು-ಟರ್ನ್​ ಹೊಡೆದಿದೆ. ಅಪ್ರಾಪ್ತ ಮಹಿಳೆಯರು(ಬಾಲಕಿಯರು) ದೇವಾಲಯ ಪ್ರವೇಶಿಸುವಂತಿಲ್ಲ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.ರೋಷನ್ ಬೇಗ್-ಬಿಎಸ್​ವೈ ಭೇಟಿ; ಶಿವಾಜಿನಗರದಲ್ಲಿ ಬಿಜೆಪಿ ಅಭ್ಯರ್ಥಿಗೆ ಅನರ್ಹ ಶಾಸಕನ ಬೆಂಬಲ?

ಹೀಗಾಗಿ ದೇವಾಲಯಕ್ಕೆ ಬಾಲಕಿಯರ ಪ್ರವೇಶವನ್ನು ತಡೆಯಲು ಪೊಲೀಸರು ನಿಲಕ್ಕಲ್​ ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾರೆ. ಪಂಬಾಗೆ ಹೋಗುವ ಮುನ್ನ ನಿಲಕ್ಕಲ್​​ನಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಾರೆ. ಇದಕ್ಕಾಗಿ ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿದೆ.

First published:November 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ