• Home
 • »
 • News
 • »
 • national-international
 • »
 • Indian Navy: ನಾಲ್ಕು ತಿಂಗಳಾದರೂ 8 ನೌಕಾಪಡೆಯ ಅಧಿಕಾರಿಗಳಿಗಿಲ್ಲ ಕತಾರ್‌ ಜೈಲಿನಿಂದ ಮುಕ್ತಿ: ಸ್ವದೇಶಕ್ಕೆ ಕರೆತರುವಂತೆ ಕುಟುಂಬಸ್ಥರ ಮನವಿ

Indian Navy: ನಾಲ್ಕು ತಿಂಗಳಾದರೂ 8 ನೌಕಾಪಡೆಯ ಅಧಿಕಾರಿಗಳಿಗಿಲ್ಲ ಕತಾರ್‌ ಜೈಲಿನಿಂದ ಮುಕ್ತಿ: ಸ್ವದೇಶಕ್ಕೆ ಕರೆತರುವಂತೆ ಕುಟುಂಬಸ್ಥರ ಮನವಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೋಹಾದಲ್ಲಿ ಕಳೆದ ಏಳೆಂಟು ವರ್ಷಗಳಿಂದ ದಹ್ರಾ ಗ್ಲೋಬಲ್ ಟೆಕ್ನಾಲಜೀಸ್ & ಕನ್ಸಲ್ಟಿಂಗ್ ಸರ್ವಿಸಸ್‌ನಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ನೌಕಾಪಡೆಯ ಮಾಜಿ ಕ್ಯಾಪ್ಟನ್‌ಗಳಾದ ಸೌರಭ್ ವಶಿಷ್ಠ, ನವತೇಜ್ ಸಿಂಗ್ ಗಿಲ್, ಹಿರಿಯ ದರ್ಜೆಯ ಮಾಜಿ ಅಧಿಕಾರಿಗಳಾದ ಪೂರ್ಣೇಂದು ತಿವಾರಿ, ಬೀರೇಂದ್ರ ಕುಮಾರ್ ವರ್ಮಾ, ಸುಗ್ನಾಕರ್ ಪಕಲಾ, ಅಮಿತ್ ನಾಗ್ಪಾಲ್, ಸಂಜೀವ್ ಗುಪ್ತಾ ಮತ್ತು ಸೈಲರ್ ರಾಗೇಶ್ ಅವರು ಬಂಧನದಲ್ಲಿದ್ದಾರೆ.

ಮುಂದೆ ಓದಿ ...
 • Trending Desk
 • 4-MIN READ
 • Last Updated :
 • New Delhi, India
 • Share this:

  ನವದೆಹಲಿ(ಡಿ.31): ಕತಾರ್‌, ಈ ವರ್ಷ ಸಾಕಷ್ಟು ಸುದ್ದಿಗಳಿಂದ ಸದ್ದು ಮಾಡುತ್ತಿದೆ. ಅದರಲ್ಲೂ ವಿಶೇಷವಾಗಿ ವಿಶ್ವ ಫುಟ್ಬಾಲ್​ನಿಂದಾಗಿ ಈ ದೇಶ ವಿಶ್ವಾದ್ಯಂತ ಜನಪ್ರಿಯವಾಗಿದೆ. ಆದರೆ ಇದೇ ದೇಶದಲ್ಲಿ ನಮ್ಮ ಭಾರತೀಯ ನೌಕಾಪಡೆಯ ಎಂಟು ಯೋಧರು ಸೆರೆವಾಸ ಅನುಭವಿಸುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಕುಟುಂಬದವರ, ದೇಶದವರ ಸಂಪರ್ಕವಿಲ್ಲದೇ ಕತಾರ್‌ ಜೈಲಿನಲ್ಲಿ ನಿವೃತ್ತ ಅಧಿಕಾರಿಗಳು ಕಾಲ ಕಳೆಯುತ್ತಿದ್ದಾರೆ.


  ದೋಹಾದಲ್ಲಿ ಸೇವೆಸಲ್ಲಿಸುತ್ತಿದ್ದ ಅಧಿಕಾರಿಗಳು


  ದೋಹಾದಲ್ಲಿ ಕಳೆದ ಏಳೆಂಟು ವರ್ಷಗಳಿಂದ ದಹ್ರಾ ಗ್ಲೋಬಲ್ ಟೆಕ್ನಾಲಜೀಸ್ & ಕನ್ಸಲ್ಟಿಂಗ್ ಸರ್ವಿಸಸ್‌ನಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ನೌಕಾಪಡೆಯ ಮಾಜಿ ಕ್ಯಾಪ್ಟನ್‌ಗಳಾದ ಸೌರಭ್ ವಶಿಷ್ಠ, ನವತೇಜ್ ಸಿಂಗ್ ಗಿಲ್, ಹಿರಿಯ ದರ್ಜೆಯ ಮಾಜಿ ಅಧಿಕಾರಿಗಳಾದ ಪೂರ್ಣೇಂದು ತಿವಾರಿ, ಬೀರೇಂದ್ರ ಕುಮಾರ್ ವರ್ಮಾ, ಸುಗ್ನಾಕರ್ ಪಕಲಾ, ಅಮಿತ್ ನಾಗ್ಪಾಲ್, ಸಂಜೀವ್ ಗುಪ್ತಾ ಮತ್ತು ಸೈಲರ್ ರಾಗೇಶ್ ಅವರು ಬಂಧನದಲ್ಲಿದ್ದಾರೆ.


  ಇದನ್ನೂ ಓದಿ: Lionel Messi: ಚರ್ಚೆಗೆ ಕಾರಣವಾಯ್ತು ಮೆಸ್ಸಿ ಧರಿಸಿದ್ದ ಡ್ರೆಸ್​​, ಏನಿದು ಕತಾರ್​ ಬಿಷ್ಟ್​?


  ಆಗಸ್ಟ್‌ನಲ್ಲಿ ಬಂಧನ


  ಇದೇ ಕಳೆದ ಆಗಸ್ಟ್‌ನಲ್ಲಿ ಈ ಎಲ್ಲಾ ಭಾರತದ ಎಂಟು ನೌಕಾಪಡೆಯ ಯೋಧರನ್ನು ಕತಾರ್‌ ಸರ್ಕಾರ ಬಂಧಿಸಿ ಇಟ್ಟುಕೊಂಡಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕುಟುಂಬದ ಸದಸ್ಯರು ಮನವಿಗಳನ್ನು ಮಾಡುತ್ತಲೇ ಇದ್ದಾರೆ. ಸರ್ಕಾರವೂ ಕೂಡ ಈ ಬಗ್ಗೆ ಇನ್ನಿಲ್ಲದ ಕ್ರಮಗಳನ್ನು ಕೈಗೊಳ್ಳುತ್ತಲೇ ಇದೆ.


  ನೌಕಾಪಡೆಯ ಯೋಧರನ್ನು ಕರೆತರುವಂತೆ ಕುಟುಂಬಸ್ಥರ ಮನವಿ
  ನಿವೃತ್ತ ನೌಕಾ ಅಧಿಕಾರಿಗಳ ಕಮಾಂಡರ್ ನವದೀಪ್ ಗಿಲ್ ಅವರ ಸಹೋದರ ಡಾ. ಮೀಟೂ ಭಾರ್ಗವ ಈ ಬಗ್ಗೆ ಹಲವಾರು ಟ್ವೀಟ್, ಮನವಿಗಳನ್ನು ಮಾಡುತ್ತಲೇ ಬಂದಿದ್ದಾರೆ. ಇತ್ತೀಚೆಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿವೃತ್ತ ನೌಕಾ ಅಧಿಕಾರಿಗಳ ಕಮಾಂಡರ್ ಪೂರ್ಣೇಂದು ತಿವಾರಿ ಮತ್ತು ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್ ಕೈದಿಗಳಾಗಿದ್ದಾರೆ, ಅವರು ಹೊರಗೆ ಬರುವ ನಮ್ಮ ಭರವಸೆ ಸರ್ಕಾರದ ಮೇಲೆ ನಿಂತಿದೆ ಎಂದು ಹೇಳಿದ್ದಾರೆ. "ದೇಶಕ್ಕೆ ಸೇವೆ ಸಲ್ಲಿಸಿದ ಯೋಧರನ್ನು ಬಿಡಿಸಿಕೊಂಡ ಬರುವಂತೆ ನಾನು ಸರ್ಕಾರಕ್ಕೆ ಮತ್ತು ಮೋದಿಯವರಿಗೆ ಮನವಿ ಮಾಡುತ್ತೇನೆ" ಎಂದು ಭಾರ್ಗವ ಹೇಳಿದ್ದಾರೆ.


  ಬಂಧನಕ್ಕೆ ಇನ್ನೂ ತಿಳಿದು ಬಂದಿಲ್ಲ ಕಾರಣ


  ಆಗಸ್ಟ್ 30 ರಂದು, ತಿವಾರಿ, ಗಿಲ್ ಮತ್ತು ಇತರ ಆರು ಮಾಜಿ ನೌಕಾ ಅಧಿಕಾರಿಗಳನ್ನು ಕತಾರ್‌ನ ಆಂತರಿಕ ಸಚಿವಾಲಯದ ರಾಜ್ಯ ಭದ್ರತಾ ಬ್ಯೂರೋದವರು ತಮ್ಮ ಮನೆಗಳಿಂದ ಮಧ್ಯರಾತ್ರಿ ಕರೆದೊಯ್ದಿದ್ದಾರೆ ಎಂದು ದೋಹಾದಲ್ಲಿರುವ ಕಚೇರಿಯಿಂದ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ.


  ಯೋಧರ ಬಂಧನದ ಬಗ್ಗೆ ಇನ್ನೂ ಕತಾರ್‌ ಭದ್ರತಾ ಅಧಿಕಾರಿಗಳು ಯಾವುದೇ ಕಾರಣವನ್ನು ನೀಡಿಲ್ಲ ಮತ್ತು ಬಂಧಿತರಲ್ಲಿ ಯಾರೊಬ್ಬರ ಮೇಲೂ ಯಾವುದೇ ಅಪರಾಧದ ಆರೋಪ ಹೊರಿಸಲಾಗಿಲ್ಲ. ಹೀಗಾಗಿ ಕತಾರ್‌ನ ಈ ನಡೆ ದೇಶಕ್ಕೆ ದೊಡ್ಡ ತಲೆನೋವಾಗಿದೆ ಮತ್ತು ಕುಟುಂಬದವರಲ್ಲೂ ಆತಂಕ ಮನೆ ಮಾಡಿದೆ.


  ಇದನ್ನೂ ಓದಿ: Viral News: ಕತಾರ್‌ನ ರೆಸ್ಟ್‌ ರೂಮ್‌ನಲ್ಲಿ ಜೆಟ್ ಸ್ಪ್ರೇ ನೋಡಿ ಯೂಟ್ಯೂಬರ್ ಅಚ್ಚರಿಗೊಂಡಿದ್ದು ಯಾಕೆ?


  ಎಲ್ಲಾ ಎಂಟು ಮಂದಿ ದಹ್ರಾ ಗ್ಲೋಬಲ್ ಟೆಕ್ನಾಲಜೀಸ್ & ಕನ್ಸಲ್ಟಿಂಗ್ ಸರ್ವಿಸಸ್, ಕತಾರಿ ನೌಕಾಪಡೆಯ ಸಿಬ್ಬಂದಿಗೆ ತರಬೇತಿ ನೀಡುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, 2013 ರಿಂದ ಇವರೆಲ್ಲಾ ದೋಹಾದಲ್ಲಿಯೇ ನೆಲೆಸಿದ್ದಾರೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಮುಖ್ಯ ವಿಷಯವೆಂದರೆ ಎಂಟು ಭಾರತೀಯರು ಇನ್ನೂ ಬಂಧನದಲ್ಲಿರುವಾಗ, ಕಂಪನಿಯ ಸಿಇಒ, ಬಂಧನಕ್ಕೊಳಗಾದ ಒಮಾನಿ ಪ್ರಜೆಯನ್ನು ಫಿಫಾ ಫುಟ್‌ಬಾಲ್ ವಿಶ್ವಕಪ್ ಪ್ರಾರಂಭವಾಗುವ ಮೊದಲೇ ಕತಾರ್‌ ಸರ್ಕಾರವು ಅವರನ್ನು ಬಿಡುಗಡೆ ಮಾಡಿದೆ. ಕತಾರ್‌ನ ಈ ಎಲ್ಲಾ ನಡೆ ನಿಜಕ್ಕೂ ಅತಂಕವನ್ನು ಸೃಷ್ಟಿ ಮಾಡಿದೆ.


  ಸರ್ಕಾರ ಏನು ಹೇಳಿದೆ?


  ನವೆಂಬರ್ 3 ರಂದು, ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ದೋಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಬಂಧಿತ ಎಂಟು ಮಾಜಿ ನೌಕಾ ಸಿಬ್ಬಂದಿಯನ್ನು ಶೀಘ್ರ ಬಿಡುಗಡೆ ಮತ್ತು ವಾಪಸಾತಿಗೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿದರು. "ಕತಾರ್‌ನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂಟು ಭಾರತೀಯ ಪ್ರಜೆಗಳ ಬಂಧನದ ಬಗ್ಗೆ ನಮಗೆ ತಿಳಿದಿದೆ" ಎಂದು MEA ವಕ್ತಾರ ಅರಿಂದಮ್ ಬಾಗ್ಚಿ ಸುದ್ದಿಗಾರರಿಗೆ ತಿಳಿಸಿದರು. ಭಾರತೀಯ ರಾಯಭಾರ ಕಚೇರಿಯು ಕತಾರಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಮತ್ತು ಸಿಬ್ಬಂದಿಯ ಯೋಗಕ್ಷೇಮವನ್ನು ಪರಿಶೀಲಿಸಿದ್ದೇವೆ ಎಂದು ಹೇಳಿದ್ದರು.


  ದೇಶಕ್ಕೆ ಸೇವೆ ಸಲ್ಲಿಸಿದ ಯೋಧರು ಕಾಣದ ಊರಲ್ಲಿ ಕತ್ತಲೆ ಕೋಣೆಯಲ್ಲಿ ಕಾಲ ಕಳೆಯುವಂತಾಗಿರುವುದು ನಿಜಕ್ಕೂ ದುಃಖಕರ ಸಂಗತಿ. ಮುಂಬರುವ ಹೊಸ ವರ್ಷವಾದರೂ ಯೋಧರ ಮತ್ತು ಅವರ ಕುಟುಂಬಗಳಿಗೆ ಹರ್ಷಚಿತ್ತವಾಗಿರಲಿ ಎನ್ನುವುದೇ ದೇಶದ ಆಶಯ.

  Published by:Precilla Olivia Dias
  First published: