ನಕಲಿ ಅತ್ಯಾಚಾರ ಆರೋಪ ಮಾಡಿದಾಕೆಗೆ ಶಾಕ್​ ಕೊಟ್ಟ ಹೈಕೋರ್ಟ್​, ಸಿಕ್ತು ಮರೆಯಲಾಗದ ಶಿಕ್ಷೆ!

ಮಹಿಳೆಯ ನಡವಳಿಕೆಯನ್ನು ತಪ್ಪು ಎಂದು ಬಣ್ಣಿಸಿದ ನ್ಯಾಯಾಲಯ, ಇಂತಹ ಪ್ರವೃತ್ತಿಯನ್ನು ನಿಲ್ಲಿಸಬೇಕಾಗಿದೆ ಎಂದು ಹೇಳಿದೆ. ಅಲ್ಲದೇ ಈ ವಿಚಿತ್ರ ಪ್ರಕರಣವನ್ನು ರದ್ದುಗೊಳಿಸಿದ ನ್ಯಾಯಾಲಯ, ಸಂತ್ರಸ್ತ ಮಹಿಳೆಯ ನಡವಳಿಕೆ ಅತ್ಯಂತ ಅನುಚಿತವಾಗಿದೆ ಎಂದು ಹೇಳಿದೆ. ತಾನು ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ ಎಂದು ಸ್ವತಃ ಮಹಿಳೆಯೇ ಒಪ್ಪಿಕೊಂಡಿದ್ದು, ಹೀಗಾಗಿ ತಪ್ಪಿತಸ್ಥ ಮತ್ತು ತಪ್ಪು ಸಲಹೆಯ ಆಧಾರದ ಮೇಲೆ ಆರೋಪಿಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನವದೆಹಲಿ(ಆ.02): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳಿಗೆ ನಕಲಿ ಅತ್ಯಾಚಾರ (Fake Rape Case) ಆರೋಪ ಬುದ್ಧಿ ಕಲಿಸಿದೆ. ಆರೋಪ ಮಾಡಿದಾಕೆಯೇ ಈಗ ಶಿಕ್ಷೆಗೆ ಗುರಿಯಾಗಿದ್ದಾಳೆ. ಮಹಿಳೆಯ ಪ್ರಕರಣವನ್ನು ದೆಹಲಿ ಹೈಕೋರ್ಟ್ (Delhi High Court) ಅನ್ಯಾಯವೆಂದು ವಜಾಗೊಳಿಸಿದೆ. ಇದರೊಂದಿಗೆ 50 ಗಿಡಗಳನ್ನು ನೆಟ್ಟು ಐದು ವರ್ಷ ಆರೈಕೆ ಮಾಡಿ ಎರಡು ತಿಂಗಳು ಅಂಧ ಮಕ್ಕಳ ಶಾಲೆಯಲ್ಲಿ ಸೇವೆ ಸಲ್ಲಿಸುವಂತೆಯೂ ಸೂಚನೆ ನೀಡಿದರು.

ಲಭ್ಯವಾದ ಮಾಹಿತಿಯ ಪ್ರಕಾರ, ಈ ಮಹಿಳೆ ಹಣದ ವಿಚಾರವಾಗಿ ನಡೆದ ಜಗಳದ ಬಳಿಕ ವ್ಯಕ್ತಿಯ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದಾರೆ, ಆದರೆ ವಿಚಾರಣೆ ವೇಳೆ ಇದು ನಕಲಿ ಆರೋಪ ಎಂಬುವುದು ಸಾಬೀತಾಗಿದೆ. ಈ ಪ್ರಕರಣದಲ್ಲಿ ದೂರುದಾರರು ಮತ್ತು ಆರೋಪಿಗಳ ನಡುವಿನ ಒಪ್ಪಂದದ ಆಧಾರದ ಮೇಲೆ ಹೈಕೋರ್ಟ್ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸಿದೆ. ಆದರೆ, ಇದರೊಂದಿಗೆ ಮಹಿಳೆಯ ನಡತೆ ತಪ್ಪು ಎಂದಿರುವ ನ್ಯಾಯಾಲಯ ಇಂತಹ ಪ್ರವೃತ್ತಿಗಡೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ಹೇಳಿದೆ.

ಇದನ್ನೂ ಓದಿ: Kerala High Court: ಅತ್ಯಾಚಾರ ಸಂತ್ರಸ್ತೆಗೆ ಗರ್ಭಪಾತಕ್ಕೆ ಒಪ್ಪಿಗೆ - ಕೇರಳ ಹೈಕೋರ್ಟ್ ಮಹತ್ವದ ತೀರ್ಪು

ಪ್ರಕರಣವನ್ನು ರದ್ದುಗೊಳಿಸಿದ ನ್ಯಾಯಾಲಯ, ಸಂತ್ರಸ್ತ ಮಹಿಳೆಯ ನಡವಳಿಕೆ ಅತ್ಯಂತ ಅನುಚಿತವಾಗಿದೆ ಎಂದು ಹೇಳಿದೆ. ತಾನು ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ ಎಂದು ಸ್ವತಃ ಮಹಿಳೆಯೇ ಒಪ್ಪಿಕೊಂಡಿದ್ದು, ತಪ್ಪಿತಸ್ಥ ಮತ್ತು ತಪ್ಪು ಸಲಹೆಯ ಆಧಾರದ ಮೇಲೆ ಆರೋಪಿಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದೆ ಎಂದೂ ಒಪ್ಪಿಕೊಂಡಿದ್ದಾರೆ.

ಅನ್ಯಾಯ ಎಸಗುವ ಮತ್ತು ಕಾನೂನು ದುರುಪಯೋಗದ ಅಪರಾಧಕ್ಕಾಗಿ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಈ ಮಹಿಳೆಯನ್ನು ದಿನಕ್ಕೆ 3 ಗಂಟೆಗಳ ಕಾಲ, ವಾರದಲ್ಲಿ 5 ದಿನ ಅಂಧ ಮಕ್ಕಳ ಶಾಲೆಯಲ್ಲಿ ಎರಡು ತಿಂಗಳ ಕಾಲ ಸೇವೆ ಸಲ್ಲಿಸಲು ಆದೇಶಿಸಿದ್ದಾರೆ. ಇದರೊಂದಿಗೆ 50 ಗಿಡಗಳನ್ನು ನೆಟ್ಟು ಅವುಗಳನ್ನು ಐದು ವರ್ಷಗಳ ಕಾಲ ಆರೈಕೆ ಮಾಡುವಂತೆಯೂ ಆದೇಶಿಸಿದ್ದಾರೆ.

ಇದನ್ನೂ ಓದಿ:  ಅನಾರೋಗ್ಯ ಮುಚ್ಚಿಟ್ಟು ಮದುವೆಯಾಗುವುದು ಅಪರಾಧ: High Court ಮಹತ್ವದ ತೀರ್ಪು

ಮಹಿಳೆ ಮಾಡಿದ ಆರೋಪವೇನು?

ಅತ್ಯಾಚಾಋ ಆರೋಪ ಮಾಡಿದ್ದ ಮಹಿಳೆ ತನ್ನ ದೂರಿನಲ್ಲಿ ತನಗೆ ತಂಪು ಪಾನೀಯವನ್ನು ನೀಡಿದ್ದು, ನಂತರ ತಾನು ಪ್ರಜ್ಞೆ ತಪ್ಪಿ ಬಿದ್ದಿದ್ದೆ. ಇದಾದ ಬಳಿಕ ಅರ್ಜಿದಾರರು ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ಎಫ್‌ಐಆರ್‌ನಲ್ಲಿ ಹೇಳಿಕೊಂಡಿದ್ದರು.
Published by:Precilla Olivia Dias
First published: