HOME » NEWS » National-international » FAKENEWS SOUTH AFRICAN WOMAN STORY CLAIMING SHE GAVE BIRTH TO 10 BABIES FAKENEWS STG HG

Fake News: ಆಫ್ರಿಕಾದ ಮಹಿಳೆ ಏಕಕಾಲಕ್ಕೆ 10 ಮಕ್ಕಳಿಗೆ ಜನ್ಮ ನೀಡಿದ್ದು ಸುಳ್ಳು ಸುದ್ದಿ: ತನಿಖೆಯಿಂದ ಬಯಲು

ಹತ್ತು ಮಕ್ಕಳಿಗೆ ಜನ್ಮ ನೀಡಿದ ವಿಚಾರ ಸೋಶಿಯಲ್ ಮೀಡಿಯಾದಲ್ಲೂ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಗಿನ್ನೆಸ್ ದಾಖಲೆಯ ತಂಡವೂ ಈ ಕುರಿತು ಪರಿಶೀಲನೆ ನಡೆಸುವುದಾಗಿಯೂ ಹೇಳಿತ್ತು. ಆದರೆ ವಿಚಾರಣೆಯ ಬಳಿಕ ಸತ್ಯ ಹೊರಬಿದ್ದಿದ್ದು, ಈ ಸುದ್ದಿ ಶುದ್ಧ ಸುಳ್ಳು ಎಂದು ತಿಳಿದು ಬಂದಿದ್ದು, ಸುಳ್ಳು ಹೇಳಿದ ಮಹಿಳೆಯನ್ನು ಮನೋವೈದ್ಯಕೀಯ ವಾರ್ಡಿನಲ್ಲಿ ದಾಖಲಿಸಲಾಗಿದೆ.

news18-kannada
Updated:June 24, 2021, 3:15 PM IST
Fake News: ಆಫ್ರಿಕಾದ ಮಹಿಳೆ ಏಕಕಾಲಕ್ಕೆ 10 ಮಕ್ಕಳಿಗೆ ಜನ್ಮ ನೀಡಿದ್ದು ಸುಳ್ಳು ಸುದ್ದಿ: ತನಿಖೆಯಿಂದ ಬಯಲು
ಗೋಸಿಯಮ್ ತಮಾರಾ ಸಿಥೋಲ್
  • Share this:

ಕೆಲವು ದಿನಗಳ ಹಿಂದೆ 10 ಮಕ್ಕಳಿಗೆ ಜನ್ಮ ನೀಡಿದ ತಾಯಿ, ಗಿನ್ನೆಸ್ ದಾಖಲೆ ನಿರ್ಮಿಸಿದ ಮಹಾತಾಯಿ ಎಂಬ ಸುದ್ದಿ ವರದಿಯಾಗಿತ್ತು. ಈ ಹಿಂದೆ ತಾಯಂದಿರು 8 ಅಥವಾ 10 ಮಕ್ಕಳನ್ನು ಹೆರುತ್ತಿದ್ದರು. ಆಧುನಿಕ ಸಮಾಜದಲ್ಲಿ ಒಂದು ಅಥವಾ ಎರಡಕ್ಕೆ ಸೀಮಿತವಾಗಿದೆ. ಇಂತಹದರ ನಡುವೆ ಅವಳಿ, ತ್ರಿವಳಿ ಮಕ್ಕಳು ಜನಿಸಿರುವ ಬಗ್ಗೆ ತಿಳಿದಿದ್ದೆವು. ಆದರೆ ಇಲ್ಲೊಬ್ಬ ಮಹಿಳೆ ಏಕಕಾಲಕ್ಕೆ 10 ಮಕ್ಕಳಿಗೆ ಜನ್ಮ ನೀಡಿದ್ದಾಳೆ ಎಂದು ಕೇಳಿ ಅಚ್ಚರಿಗೊಂಡಿದ್ದರು.


ಹತ್ತು ಮಕ್ಕಳಿಗೆ ಜನ್ಮ ನೀಡಿದ ವಿಚಾರ ಸೋಶಿಯಲ್ ಮೀಡಿಯಾದಲ್ಲೂ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಗಿನ್ನೆಸ್ ದಾಖಲೆಯ ತಂಡವೂ ಈ ಕುರಿತು ಪರಿಶೀಲನೆ ನಡೆಸುವುದಾಗಿಯೂ ಹೇಳಿತ್ತು. ಆದರೆ ವಿಚಾರಣೆಯ ಬಳಿಕ ಸತ್ಯ ಹೊರಬಿದ್ದಿದ್ದು, ಈ ಸುದ್ದಿ ಶುದ್ಧ ಸುಳ್ಳು ಎಂದು ತಿಳಿದು ಬಂದಿದ್ದು, ಸುಳ್ಳು ಹೇಳಿದ ಮಹಿಳೆಯನ್ನು ಮನೋವೈದ್ಯಕೀಯ ವಾರ್ಡಿನಲ್ಲಿ ದಾಖಲಿಸಲಾಗಿದೆ.



ಗೌತೆಂಗ್ ಪ್ರಾಂತ್ಯದ ಯಾವುದೇ ಆಸ್ಪತ್ರೆಯಲ್ಲಿ 10 ಮಕ್ಕಳು ಜನಿಸಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದು ಬಿಬಿಸಿ ವರದಿ ಮಾಡಿದೆ. ವಾಸ್ತವವಾಗಿ, ವೈದ್ಯಕೀಯ ಪರೀಕ್ಷೆಗಳ ಪ್ರಕಾರ ಸಿಥೋಲ್ ಇತ್ತೀಚೆಗೆ ಗರ್ಭಿಣಿಯಾಗಿಲ್ಲ ಎಂದು ಗೊತ್ತಾಗಿದೆ. ಅಧಿಕೃತ ವಿಚಾರಣೆಯಲ್ಲೂ ಸಹ ಸತ್ಯಾಂಶ ಗೊತ್ತಾಗಿದೆ. ಆದ್ದರಿಂದ ಆಕೆಯನ್ನು ಮಾನಸಿಕ ಆರೋಗ್ಯ ಕಾಯ್ದೆಯಡಿ ವೀಕ್ಷಣೆಗಾಗಿ ಇರಿಸಲಾಗಿದೆ. ಆದರೆ ಅಧಿಕೃತ ವಿಚಾರಣೆಯ ಬಳಿಕ ಮಹಿಳೆ ಈ ರೀತಿ ಸುಳ್ಳು ಹೇಳಲು ಕಾರಣ ಏನು ಎಂಬುದು ಅಧಿಕಾರಿಗಳು ತಿಳಿಸಿಲ್ಲ.


ಏನಿದು ಘಟನೆ?


ಗೋಸಿಯಮ್ ತಮಾರಾ ಸಿಥೋಲ್ ಅವರ ವಯಸ್ಸು 37. ಇವರು ದಕ್ಷಿಣ ಆಫ್ರಿಕಾದ ಜೋಹಾನ್ಸ್‍ಬರ್ಗ್‍ನ ಗೌತೆಂಗ್ ಪ್ರಾಂತ್ಯದವರು. ಇವರು `ನಾನು ಎಂಟು ಮಕ್ಕಳಿಗೆ ಜನ್ಮ ನೀಡುತ್ತೇನೆ ಎಂದುಕೊಂಡಿದ್ದೆ. ಆದರೆ, ನನಗೆ 10 ಮಕ್ಕಳು ಜನಿಸಿದ್ದು, ಅಚ್ಚರಿಗೊಂಡಿದ್ದೇನೆ. ಏಳು ಗಂಡು ಮತ್ತು ಮೂವರು ಹೆಣ್ಣು ಮಕ್ಕಳಿಗೆ ಇವರು ಜನ್ಮ ನೀಡಿದ್ದಾರೆ ಎಂದು ಹೇಳಿರುವುದಾಗಿ ವರದಿಯಾಗಿತ್ತು. ಜೂನ್ 8ರಂದು ಇಂಡಿಪೆಂಡೆಂಟ್ ಆನ್‍ಲೈನ್ ಸಂಸ್ಥೆ ವರದಿ ಮಾಡಿದ ಬಳಿಕ ಎಲ್ಲಾ ಮಾಧ್ಯಮಗಳು ಈ ಸುದ್ದಿಯನ್ನು ಬಿತ್ತರಿಸಿದ್ದವು.


ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಸಿಥೋಲ್ ಹಾಗೂ ಆಕೆಯ ಪತಿ ಟೆಬೊಹೊ ತ್ಸೊಟೆಟ್ಸಿ ಅವರಿಗೆ ಮಕ್ಕಳ ಆರೈಕೆಗಾಗಿ ದೇಣಿಗೆಯ ಪ್ರವಾಹವೇ ಹರಿದು ಬಂದಿತು.


ಆದರೆ ಈಕೆ ಹೆರಿಗೆಯಾಗಿರುವ ಬಗ್ಗೆ, ಮಕ್ಕಳ ಬಗ್ಗೆ ಫೋಟೋ ಮತ್ತು ವಿಡಿಯೋಗಳು ಮಾತ್ರ ಎಲ್ಲೂ ಸಿಗದ ಕಾರಣ ಅನುಮಾನ ಕಾಣಿಸಿಕೊಂಡಿತು. ಇದರ ಬೆನ್ನಲ್ಲೇ ಹಲವು ದಿನಗಳ ಬಳಿಕ ಸಿಥೋಲ್ ಕಾಣೆಯಾಗಿದ್ದು, ಜನರು ದೇಣಿಗೆ ನೀಡುವುದನ್ನು ನಿಲ್ಲಿಸಬೇಕೆಂದು ಟೆಬೊಹೊ ತ್ಸೊಟೆಟ್ಸಿ ಅವರು ಜನರಲ್ಲಿ ಮನವಿ ಮಾಡಿದ್ದರು.

ಸಾಮಾಜಿಕ ಕಾರ್ಯಕರ್ತರು ಸಿಥೋಲ್ ಇರುವ ಸ್ಥಳವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು, ನಂತರ ಅವರನ್ನು ಶುಕ್ರವಾರ ಪರೀಕ್ಷೆಗೆ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಗೌಟೆಂಗ್ ಪ್ರಾಂತೀಯ ಅಧಿಕಾರಿಗಳು ತಿಳಿಸಿದ್ದಾರೆ.



Youtube Video

ಈ ಮೊದಲು ಮಲಿಯಾನ್ ಹಲೀಮಾ ಎಂಬ ಮೊರಕ್ಕೋದ ತಾಯಿ, 9 ಮಕ್ಕಳಿಗೆ ಜನ್ಮ ನೀಡಿ ವಿಶ್ವ ದಾಖಲೆ ನಿರ್ಮಿಸಿದ್ದಳು. ಇದು ಗಿನ್ನೆಸ್ ದಾಖಲೆಯ ಪುಟಕ್ಕೆ ಸೇರಿತ್ತು. ಮೇ ತಿಂಗಳಲ್ಲಿ, ಏಳು ಶಿಶುಗಳನ್ನು ನಿರೀಕ್ಷಿಸುತ್ತಿದ್ದ ಮಾಲಿ ಮಹಿಳೆಯೊಬ್ಬರು ಮೊರಾಕೊದಲ್ಲಿ 9 ಜನರಿಗೆ ಜನ್ಮ ನೀಡಿದರು.

First published: June 24, 2021, 3:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories