Kareena Kapoor: ಕೇರಳದ ನಕಲಿ ವ್ಯಾಪಾರಿ ಹತ್ರ ಕರೀನಾ ಕಪೂರ್ ಕಾರ್! ಕಾರು ಅವನ ಬಳಿ ಬಂದಿದ್ದೇ ರೋಚಕ ಕತೆ!

ದಾಖಲೆಗಳಲ್ಲಿ ಕರೀನಾ ಕಪೂರ್ ಅವರ ಮುಂಬೈಯ ವಿಳಾಸದ ಜೊತೆಗೆ ಇತರೆ ವಿವರಗಳನ್ನು ನೀಡಲಾಗಿತ್ತು. ರಿಜಿಸ್ಟ್ರೇಷನ್ ಬದಲಾಯಿಸಿದೆ ಮಾನ್ಸನ್​ ಕಾರಿನ ಉಸ್ತುವಾರಿಯನ್ನು ವಹಿಸಿಕೊಳ್ಳಲು ಹೇಗೆ ಸಾಧ್ಯವಾಯಿತು ಎಂಬುದು ಇನ್ನೂ ಸಹ ಸ್ಪಷ್ಟವಾಗಿಲ್ಲ.

ಕರೀನಾ ಕಪೂರ್

ಕರೀನಾ ಕಪೂರ್

  • Share this:
    ಕೇರಳ(ಸೆ.30): ಬಾಲಿವುಡ್​ ನಟಿ ಕರೀನಾ ಕಪೂರ್(Kareena Kapoor)​ ಕಾರು ವರ್ಷದ ಹಿಂದೆ ಕೇರಳದ ವ್ಯಾಪಾರಿಯೊಬ್ಬನ ಬಳಿ ಪತ್ತೆಯಾಗಿತ್ತು. ಆತ ಕೇರಳದ ನಕಲಿ ಪುರಾತನ ವಸ್ತುಗಳ ವ್ಯಾಪಾರಿ( antique dealer) ಮಾನ್ಸನ್ ಮಾವುಂಕಲ್. ನಟಿ ಕರೀನಾ ಕಪೂರ್ ಹೆಸರಿನಲ್ಲಿ ರಿಜಿಸ್ಟ್ರೇಷನ್ ಆಗಿರುವ ಕಾರು ಈತನ ಬಳಿ ಇತ್ತು. 2007ರ ಮಾಡೆಲ್ ಪೋರ್ಷೆ ಬಾಕ್ಸ್‌ಟರ್ (Porsche Boxster ) ಕಾರನ್ನು ಕಳೆದ ವರ್ಷ ಪೊಲೀಸರು ವಶಪಡಿಸಿಕೊಂಡಿದ್ದರು. ಈಗ ಕಾರು ಏನಾಗಿದೆ? ಯಾರ ಬಳಿ ಇದೆ ಅಂತ ಗೊತ್ತಾ? ಸದ್ಯ ಕರೀನಾ ಕಪೂರ್ ಹೆಸರಿನಲ್ಲಿ ನೊಂದಣಿ ಆಗಿರುವ ಕಾರನ್ನು ಕೇರಳದ ಅಳಪ್ಪುಜ್ಹ ಜಿಲ್ಲೆಯ ಚೆರ್ತಲಾ ಪೊಲೀಸ್ ಠಾಣೆಯ ಆವರಣದಲ್ಲಿ ಇರಿಸಲಾಗಿದೆ.

    ಪೊಲೀಸರು ಆರೋಪಿಯಿಂದ ಸುಮಾರು 20 ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದರು. ಮಾವುಂಕಲ್​ ಮತ್ತು ಪ್ರಮುಖ ಬ್ಯುಸಿನೆಸ್​ ಟೀಂ ಶ್ರೀವಲ್ಸಂ ಗ್ರೂಪ್​ ನಡುವೆ ಕಾನೂನು ಸಮರ ನಡೆದ ಬಳಿಕ ಪೊಲೀಸರು ಮಾವುಂಕಲ್​​ ಬಳಿ ಇದ್ದ ಸುಮಾರು 20 ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಿಕೊಂಡಿದ್ದರು.

    ಪೊಲೀಸರು ಆರೋಪಿಯಿಂದ ಸುಮಾರು 20 ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದರು. ಮಾವುಂಕಲ್​ ಮತ್ತು ಪ್ರಮುಖ ಬ್ಯುಸಿನೆಸ್​ ಟೀಂ ಶ್ರೀವಲ್ಸಂ ಗ್ರೂಪ್​ ನಡುವೆ ಕಾನೂನು ಸಮರ ನಡೆದ ಬಳಿಕ ಪೊಲೀಸರು ಮಾವುಂಕಲ್​​ ಬಳಿ ಇದ್ದ ಸುಮಾರು 20 ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಿಕೊಂಡಿದ್ದರು.


    ಅಂತೆಯೇ ಪೊಲೀಸರು ವಶಪಡಿಸಿಕೊಂಡ ಕಾರುಗಳಲ್ಲಿ 2007ರ ಮಾಡೆಲ್ ಪೋರ್ಷೆ ಬಾಕ್ಸ್‌ಟರ್ ಕಾರು ಸಹ ಇತ್ತು. ಈ ಐಷಾರಾಮಿ ಕಾರು ಯಾರ ಹೆಸರಿನಲ್ಲಿದೆ ಎಂದು ಪೊಲೀಸರು ತನಿಖೆ ನಡೆಸಿದಾಗ ಶಾಕಿಂಗ್ ಮಾಹಿತಿ ಹೊರಬಿದ್ದಿತ್ತು.

    ಈ ಕಾರನ್ನು ಕರೀನಾ ಕಪೂರ್ ತಂದೆ ರಣಧೀರ್ ಕಪೂರ್ ಹೆಸರಲ್ಲಿ ರಿಜಿಸ್ಟ್ರೇಷನ್ ಮಾಡಿರುವುದು ಪೊಲೀಸರ ಗಮನಕ್ಕೆ ಬಂದಿತ್ತು. ದಾಖಲೆಗಳಲ್ಲಿ ಕರೀನಾ ಕಪೂರ್ ಅವರ ಮುಂಬೈಯ ವಿಳಾಸದ ಜೊತೆಗೆ ಇತರೆ ವಿವರಗಳನ್ನು ನೀಡಲಾಗಿತ್ತು.


    ಈ ಕಾರನ್ನು ಕರೀನಾ ಕಪೂರ್ ತಂದೆ ರಣಧೀರ್ ಕಪೂರ್ ಹೆಸರಲ್ಲಿ ರಿಜಿಸ್ಟ್ರೇಷನ್ ಮಾಡಿರುವುದು ಪೊಲೀಸರ ಗಮನಕ್ಕೆ ಬಂದಿತ್ತು. ದಾಖಲೆಗಳಲ್ಲಿ ಕರೀನಾ ಕಪೂರ್ ಅವರ ಮುಂಬೈಯ ವಿಳಾಸದ ಜೊತೆಗೆ ಇತರೆ ವಿವರಗಳನ್ನು ನೀಡಲಾಗಿತ್ತು. ರಿಜಿಸ್ಟ್ರೇಷನ್ ಬದಲಾಯಿಸಿದೆ ಮಾನ್ಸನ್​ ಕಾರಿನ ಉಸ್ತುವಾರಿಯನ್ನು ವಹಿಸಿಕೊಳ್ಳಲು ಹೇಗೆ ಸಾಧ್ಯವಾಯಿತು ಎಂಬುದು ಇನ್ನೂ ಸಹ ಸ್ಪಷ್ಟವಾಗಿಲ್ಲ.

    ಕರೀನಾ ಕಪೂರ್ ಹೆಸರಿನಲ್ಲಿದ್ದ ಪೋರ್ಷೆ ಬಾಕ್ಸ್‌ಟರ್ ಕಾರು


    ಕೇರಳ ರಾಜ್ಯದ ಚೆರ್ತಲಾದ ಮಾನ್ಸನ್ ಮಾವುಂಕಲ್ ಅನೇಕ ವಂಚನೆಗಳನ್ನು ಮಾಡಿರುವುದು ಪೊಲೀಸ್ ತನಿಖೆಯಿಂದ ಬಹಿರಂಗಗೊಂಡಿದೆ. ಸೆಲೆಬ್ರಿಟಿಗಳು, ರಾಜಕಾರಣಿಗಳು ಹಾಗೂ ಉನ್ನತ ಪೊಲೀಸರು ಸೇರಿದಂತೆ ಹಲವಾರು ವ್ಯಕ್ತಿಗಳನ್ನೇ ಈತ ಟಾರ್ಗೆಟ್​ ಮಾಡುತ್ತಿದ್ದ. ಅವರನ್ನು ವಂಚಿಸಲು ಮಾಸ್ಟರ್​ ಪ್ಲಾನ್ ಕೂಡ ಮಾಡಿದ್ದ. ಸ್ಥಳೀಯವಾಗಿ ತಯಾರಿಸಿದ ವಸ್ತುಗಳನ್ನು ಪುರಾತನ ವಸ್ತುಗಳನ್ನು ನಂಬಿಸುತ್ತಿದ್ದ ಎಂದು ತಿಳಿದು ಬಂದಿದೆ.

    ಇದನ್ನೂ ಓದಿ:Electric Bus in Bengaluru: ಬೆಂಗಳೂರಿನಲ್ಲಿ ಇಂದಿನಿಂದ Electric Bus ಓಡಾಟ, ಟಿಕೆಟ್ ದರ ಎಷ್ಟು? ಎಲ್ಲೆಲ್ಲಿ ಪ್ರಯಾಣ?

    ಟಿಪ್ಪು ಸುಲ್ತಾನ್ ಹಾಗೂ ಇತರೆ ರಾಜರುಗಳಿಗೆ ಸೇರಿದ ರಾಜ ಸಿಂಹಾಸನ ಜುದಾಸ್, ರಾಯಲ್ ಕಿರೀಟ ಸೇರಿ ಸುಮಾರು 30 ಬೆಳ್ಳಿಯ ವಸ್ತುಗಳನ್ನು ತಾನೇ ಮಾಡಿರುವುದಾಗಿ ಹೇಳಿಕೊಂಡಿದ್ದ.

    ಭಾರರತೀಯ ರಿಸರ್ವ್​ ಬ್ಯಾಂಕ್​​ನ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(FEMA)ಯ ನಿಯಮಗಳಿಂದ ತಾನು ಸುಮಾರು 2.6 ಲಕ್ಷ ಕೋಟಿ ಹಣ ಹೊಂದಿದ್ದೇನೆ ಎಂದು ಜನರನ್ನು ನಂಬಿಸಿದ್ದ. ಪುರಾತನ ವಸ್ತುಗಳ ವಿನಿಮಯದಿಂದಾಗಿ ತನಗೆ ಕೋಟ್ಯಂತರ ಹಣ ಹರಿದು ಬಂದಿತು ಎಂದು ಹೇಳಿ ಜನರನ್ನು ವಂಚಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    52 ವರ್ಷದ ಮಾವುಂಕಲ್ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಯಾಕೂಬ್ ಪುರಯಿಲ್, ಅನೂಪ್ ವಿ.ಅಹಮದ್, ಸಲೀಂ ಎಡತಿಲ್, ಎಂಟಿ ಶಮೀರ್, ಸಿದ್ದೀಕ್ ಪುರಯಿಲ್ ಮತ್ತು ಶನಿಮೋನ್ ಅವರು ಜಂಟಿ ಪೊಲೀಸ್ ದೂರು ನೀಡಿದ್ದರು. ಆರೋಪಿ ಮಾವುಂಕಲ್ 2017ರಿಂದ ತಮಗೆ ಸುಮಾರು 10 ಕೋಟಿ ರೂ ವಂಚಿಸಿದ್ದಾನೆ ಎಂದು ದೂರುದಾರರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
    Published by:Latha CG
    First published: