ಕಿಡ್ನಾಪ್ ಮಾಡಲು ಬಂದವರು ಯುವತಿಯ ಮೂಗು ಕತ್ತರಿಸಿ ಹೋದರು!

ಗುರುಗ್ರಾಮದಲ್ಲಿ ಘಟನೆ ನಡೆದಿದ್ದು, ತನ್ನ ಮನೆಯಲ್ಲಿದ್ದ ಪೂನಂ ಕುಮಾರಿ ಎಂಬ ಯುವತಿಯನ್ನು ಅಪಹರಿಸಲು ನೋಡಿದ ಗುಂಪಿನವರು ಅದು ಸಾಧ್ಯವಾಗದ ಕಾರಣ ಆಕೆಯ ಮೂಗು ಕತ್ತರಿಸಿ ಹೋಗಿದ್ದಾರೆ.

 ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಗುರುಗ್ರಾಮ (ಡಿ. 30): ಗುರುಗ್ರಾಮದ ಬಳಿ ಇರುವ ಚಕ್ಕರ್​ಪುರ ಎಂಬ ಹಳ್ಳಿಯ ದಲಿತ ಯುವತಿಯೊಬ್ಬಳನ್ನು ಅಪಹರಿಸಲು ನೋಡಿದ ಗುಂಪೊಂದು ವಿಫಲವಾಗಿದೆ. ಕಿಡ್ನಾಪ್ ಮಾಡುವ ಪ್ರಯತ್ನ ಕೈಕೊಟ್ಟಿದ್ದರಿಂದ ಕೋಪಗೊಂಡ ಅವರು ಆಕೆಯ ಮೂಗನ್ನು ಕತ್ತರಿಸಿ, ಮನೆಯವರನ್ನು ಹೊಡೆದು ಪರಾರಿಯಾಗಿದ್ದಾರೆ.

ಪೂನಂ ಕುಮಾರಿ ಎಂಬ ಯುವತಿ ತನ್ನ ಮನೆಯಲ್ಲಿದ್ದಳು. ಆಗ ಇದ್ದಕ್ಕಿದ್ದಂತೆ ಮನೆಯೊಳಗೆ ನುಗ್ಗಿದ ಗೌರವ್ ಯಾದವ್, ಆಕಾಶ್ ಯಾದವ್, ಸತೀಶ್ ಯಾದವ್, ಮೋನು ಯಾದವ್ ಮತ್ತು ಲೀಲು ಯಾದವ್ ಆಕೆಯನ್ನು ಮನೆಯಿಂದ ಹೊರಗೆ ಎಳೆದು ಕಿಡ್ನಾಪ್ ಮಾಡಲು ನೋಡಿದ್ದಾರೆ. ಅಷ್ಟರಲ್ಲಿ ಅಡ್ಡಬಂದ ಪೂನಂ ಕುಮಾರಿಯ ಅಣ್ಣಂದಿರು ತಮ್ಮ ತಂಗಿಯನ್ನು ಕಾಪಾಡಿದ್ದಾರೆ.

ಇದನ್ನೂ ಓದಿ: ವೃದ್ಧಾಶ್ರಮದಲ್ಲಿ ಅರಳಿತು ಪ್ರೀತಿ; ಇಳಿವಯಸ್ಸಿನಲ್ಲಿ ಮದುವೆಯಾದ ಅಜ್ಜ-ಅಜ್ಜಿಯ ಲವ್​ ಸ್ಟೋರಿ ಇಲ್ಲಿದೆ...

ಇದರಿಂದ ಕೋಪಗೊಂಡ ಆ ಗುಂಪಿನವರು ಮನೆಯವರಿಗೆಲ್ಲ ಥಳಿಸಿ, ಚಾಕುವಿನಿಂದ ಪೂನಂ ಕುಮಾರಿಯ ಮೂಗನ್ನು ಕತ್ತರಿಸಿದ್ದಾರೆ. ಊರಿನ ಪ್ರಭಾವಿ ಮನೆತನದವರಾದ ಆ ಗುಂಪಿನವರು ತಮ್ಮ ವಿರುದ್ಧ ಯಾರಾದರೂ ಪೊಲೀಸರಿಗೆ ದೂರು ನೀಡಿದರೆ ಅದನ್ನು ವಾಪಾಸ್ ಪಡೆಯಲು ಅಥವಾ ಜನರನ್ನು ಭಯದಲ್ಲಿಟ್ಟುಕೊಳ್ಳಲು ಈ ರೀತಿ ಕಿಡ್ನಾಪ್ ಮಾಡಿಸುತ್ತಿರುತ್ತಾರೆ ಎಂಬ ವಿಷಯ ಪೊಲೀಸ್ ತನಿಖೆ ವೇಳೆ ಗೊತ್ತಾಗಿದೆ.

ಪೂನಂ ಕುಮಾರಿಯ ಮನೆಯೊಳಗೆ ದಾಳಿ ಮಾಡಿದ ಐದಾರು ಜನರ ಜೊತೆಗೆ ಮನೆ ಹೊರಗೆ ಇನ್ನೂ 15 ಜನ ನಿಂತಿದ್ದರು. ಪೂನಂಳನ್ನು ಬಿಡಿಸಲು ಬಂದ ಅಕ್ಕಪಕ್ಕದ ಮನೆಯವರ ಮೇಲೂ ಅವರು ಹಲ್ಲೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಎಫ್​ಐಆರ್ ದಾಖಲಾಗಿದ್ದು, ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ.

 

 
Published by:Sushma Chakre
First published: