FACT CHECK: ಸಿಎಎ ವಿರೋಧಿ ಹೋರಾಟಕ್ಕೆ ಮಸಿ ಬಳಿಯುವ ಸಲುವಾಗಿ ಬಿಜೆಪಿ ಐಟಿ ಸೆಲ್ ಹೀಗಾ ಮಾಡೋದು?

ಈ ನಕಲಿ ಪೋಟೋ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದ್ದಂತೆ ಸಿಎಎ ಹೋರಾಟಗಾರರು ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ. ಹಣ ನೀಡಿ ಯಾರನ್ನೂ ನಾವು ಸಿಎಎ ವಿರೋಧಿ ಚಳುವಳಿಗೆ ಕರೆ ತಂದಿಲ್ಲ ಎಂದು ಸ್ಪಷ್ಟಪಡಿಸಿರುವ ಹೋರಾಟಗಾರರು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲ್ವಿಯಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

MAshok Kumar | news18-kannada
Updated:January 24, 2020, 5:33 PM IST
FACT CHECK: ಸಿಎಎ ವಿರೋಧಿ ಹೋರಾಟಕ್ಕೆ ಮಸಿ ಬಳಿಯುವ ಸಲುವಾಗಿ ಬಿಜೆಪಿ ಐಟಿ ಸೆಲ್ ಹೀಗಾ ಮಾಡೋದು?
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಚಿತ್ರ.
  • Share this:
ಕಳೆದ ಹಲವು ದಿನಗಳಿಂದ ಕೇಂದ್ರ ಸರ್ಕಾರದ ವಿವಾದಾತ್ಮಕ ಸಿಎಎ ಕಾಯ್ದೆಯ ವಿರುದ್ಧ ರಾಷ್ಟ್ರವ್ಯಾಪಿ ದೊಡ್ಡ ಮಟ್ಟದಲ್ಲಿ ಹೋರಾಟಗಳು ನಡೆಯುತ್ತಿದೆ. ದೆಹಲಿಯ ಶಾಹಿನ್​ ಭಾಗ್​ನಲ್ಲಿನ ಪ್ರತಿಭಟನೆ ಇಡೀ ದೇಶದ ಗಮನ ಸೆಳೆದಿತ್ತು. ಆದರೆ, ಇದೊಂದು ಪ್ರಾಯೋಜಿt ಹೋರಾಟ, ಜನರನ್ನು ಹಣ ನೀಡಿ ಪ್ರತಿಭಟನೆಗೆ ಕರೆತರಲಾಗುತ್ತಿದೆ ಎಂದು ಕೆಲವರು ಆರೋಪಿಸಿದ್ದರು. ಅಲ್ಲದೆ, ಹಲವರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತ ಪೋಟೋ ಒಂದನ್ನು ಹಂಚಿಕೊಳ್ಳುವ ಮೂಲಕ ಸಿಎಎ ವಿರೋಧಿ ಹೋರಾಟಕ್ಕೆ ಮಸಿ ಬಳಿಯುವ ಕೆಲಸಕ್ಕೆ ಮುಂದಾಗಿದ್ದರು.

ಆ ಪೋಟೋದಲ್ಲಿ “ಒಂದು ಅಂಗಡಿಯ ಎದುರು ಮಹಿಳೆಯರು ನಿಂತಿದ್ದು, ಅದರ ಹಿಂದೆ ಫಿಕ್ಸ್ ರೇಟ್ ಒಂದು ದಿನಕ್ಕೆ 500 ರೂ. ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಶಹೀನ್ ಭಾಗ್” ಎಂದು ಬರೆಯಲಾಗಿತ್ತು. ರೋಹಿತ್ ಸರ್ದಾನ ಫ್ಯಾನ್ಸ್ ಕ್ಲಬ್ ತನ್ನ ಫೇಸ್​ಬುಕ್ ಖಾತೆಯಲ್ಲಿ ಕಳೆದ ಜನವರಿ 18 ರಂದು ಈ ಚಿತ್ರವನ್ನು ಹಂಚಿಕೊಂಡಿತ್ತು. ಆ ಮೂಲಕ ಜನ ಹಣಕ್ಕಾಗಿ ಸಿಎಎ ಮತ್ತು ಎನ್ಆರ್​ಸಿ ವಿರೋಧಿ ಚಳುವಳಿಯಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಸಾಮಾಜಿಕ ಅಭಿಪ್ರಾಯವನ್ನು ಸೃಷ್ಟಿಸುವ ಕೆಲಸಕ್ಕೆ ಮುಂದಾಗಿತ್ತು.

ಫೇಸ್​ಬುಕ್​ನಲ್ಲಿ ಹಂಚಿಕೊಳ್ಳಲಾಗಿರುವ ಚಿತ್ರ.


ಅದೇ ಜನವರಿ 18 ರಂದು ಮೇಘಾ ಅಗರ್ವಾಲ್ ಎಂಬುವವರು ಸಹ ತಮ್ಮ ಫೇಸ್​ಬುಕ್ ಖಾತೆಯಲ್ಲಿ "ಮಾರಿಕೊಂಡ ಮಹಿಳೆಯರು" ಎಂಬ ಆ್ಯಶ್​ಟ್ಯಾಗ್​ ಜೊತೆಗೆ ಎರಡು ಪೊಟೋಗಳಿರುವ ಕೊಲಾಜ್ ಚಿತ್ರವನ್ನು ಹಂಚಿಕೊಂಡಿದ್ದರು. ಈ ಪೈಕಿ ಎರಡನೇ ಪೋಟೋದಲ್ಲಿದ್ದ ಹಿಂದಿ ಪತ್ರಿಕೆಯ ಲೇಖನ ಇತ್ತು. ಈ ಲೇಖನದ ಶೀರ್ಷಿಕೆಯಲ್ಲಿ "ಶಾಹಿನ್ ಭಾಗ್​ಗೆ ತೆರಳಿದರೆ 500 ರೂ ಜೊತೆಗೆ ಬಿರಿಯಾನಿ" ಎಂದು ಬರೆಯಲಾಗಿತ್ತು.



ಕಳೆದ ಜನವರಿ 15 ರಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲ್ವಿಯಾ ಸಹ ತಮ್ಮ ಖಾಸಗಿ ಟ್ವಿಟರ್​ನಲ್ಲಿ ವೀಡಿಯೊ ಒಂದನ್ನು ಹಂಚಿಕೊಳ್ಳುವ ಮೂಲಕ ಶಾಹೀನ್ ಭಾಗ್​ನಲ್ಲಿ ಜನ ದಿನಕ್ಕೆ 500 ರೂ ಹಣಕ್ಕಾಗಿ ಒಟ್ಟುಗೂಡುತ್ತಿದ್ದಾರೆ” ಎಂದು ಸಿಎಎ ವಿರೋಧಿ ಹೋರಾಟಗಾರರ ವಿರುದ್ಧ ಆರೋಪಿಸಿದ್ದರು.



ಈ ಪೋಟೋ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ವೈರಲ್ ಆಗಿತ್ತು. ಆದರೆ, ಇದರ ಅಸಲಿಯತ್ತನ್ನು ಹುಡುಕಲು ಮುಂದಾದಾಗ ಕೆಲವರು ಪೋಟೋವನ್ನು ಮಾರ್ಫಿಂಗ್ ಮಾಡಿ ಹೇಗೆ ಒಂದು ಜನ ಚಳುವಳಿಗೆ ಸಾಮಾಜಿಕ ಜಾಲತಾಣದಲ್ಲಿ ಮಸಿ ಬಳಿಯಲು ಮುಂದಾಗಿದ್ದಾರೆ? ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಅಸಲಿಗೆ  ಮಹಿಳೆಯರು ನಿಂತಿರುವ ಮೊದಲ ಪೋಟೋದಲ್ಲಿ ಅವರ ಹಿಂದೆ ಅಂಗಡಿಯ ಬಾಗಿಲಿನಲ್ಲಿ “ಸಿಎಎ ಮತ್ತು ಎನ್ಆರ್​ಸಿ ಅನ್ನು ವಾಪಾಸ್ ಪಡೆಯಿರಿ" ಎಂದು ಬರೆಯಲಾಗಿದೆ. ಈ ಪೋಟೋವನ್ನು ತೆಗೆದ ದಿನಾಂಕ ಜನವರಿ 7. ಆದರೆ, ಈ ಬರಹವನ್ನು ಮಾರ್ಫಿಂಗ್ ಮೂಲಕ ತಿದ್ದಿ ಜನವರಿ 16ರಂದು ಬೇರೆ ವಿಚಾರಕ್ಕೆ ಸಂಬಂಧಿಸಿದಂತೆ ಸ್ಟೇಟ್ಸ್​ಮನ್ ಪತ್ರಿಕೆಯಲ್ಲಿ ಬಂದ ವರದಿಯ ಜೊತೆಗೆ ಕೊಲಾಜ್ ಮಾಡಲಾಗಿದೆ.

ಮಾರ್ಫ್​ ಮಾಡಲಾಗಿರುವ ಚಿತ್ರ.


ಈ ನಕಲಿ ಪೋಟೋ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದ್ದಂತೆ ಸಿಎಎ ಹೋರಾಟಗಾರರು ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ. ಹಣ ನೀಡಿ ಯಾರನ್ನೂ ನಾವು ಸಿಎಎ ವಿರೋಧಿ ಚಳುವಳಿಗೆ ಕರೆ ತಂದಿಲ್ಲ ಎಂದು ಸ್ಪಷ್ಟಪಡಿಸಿರುವ ಹೋರಾಟಗಾರರು ನಕಲಿ ವಿಡಿಯೋ ಮೂಲಕ ಜನರಿಗೆ ಸುಳ್ಳು ಮಾಹಿತಿ ತಲುಪಿಸಿದ ಕಾರಣಕ್ಕೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲ್ವಿಯಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಇದನ್ನೂ ಓದಿ : ದಲಿತರ ಪರ ದ್ವನಿ ಎತ್ತಿದರೆ ನನ್ನ ವಿರುದ್ಧವೇ ಮೊಕದ್ದಮೆ ದಾಖಲು ಮಾಡ್ತೀರ?; ಕೇರಳ ಸರ್ಕಾರದ ವಿರುದ್ಧ ಶೋಭಾ ಕಿಡಿ
First published:January 24, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ