• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Fact Check: ತಿರುಪತಿಯ ಪುರೋಹಿತನ ಮನೆ ಮೇಲೆ ಐಟಿ ರೇಡ್ ದಾಳಿ ವೇಳೆ ಸಿಕ್ಕ ಚಿನ್ನದ ಅಸಲಿಯತ್ತು ಏನು? Details

Fact Check: ತಿರುಪತಿಯ ಪುರೋಹಿತನ ಮನೆ ಮೇಲೆ ಐಟಿ ರೇಡ್ ದಾಳಿ ವೇಳೆ ಸಿಕ್ಕ ಚಿನ್ನದ ಅಸಲಿಯತ್ತು ಏನು? Details

ತಿರುಪತಿಯ ಪುರೋಹಿತ

ತಿರುಪತಿಯ ಪುರೋಹಿತ

Viral Video: ವಾಸ್ತವದಲ್ಲಿ ಈ ವಿಡಿಯೊಗೂ, ತಿರುಪತಿ ದೇವಸ್ಥಾನಕ್ಕೂ ಯಾವುದೇ ಸಂಬಂಧವೇ ಇಲ್ಲ. ಈ ಬಗ್ಗೆ ನಾವು ರಿವರ್ಸ್ ಸರ್ಚ್ ಮೂಲಕ ಹುಡುಕಾಡಿದಾಗ, ಇದು ಇತ್ತೀಚೆಗೆ ತಮಿಳುನಾಡಿನಲ್ಲಿ ನಡೆದ ಚಿನ್ನಾಭರಣಗಳ ಅಂಗಡಿಯಿಂದ ನಡೆದ ದರೋಡೆ ಪ್ರಕರಣದಲ್ಲಿ ಪೊಲೀಸರು ಆರೋಪಿಗಳಿಂದ ಮರುವಶಪಡಿಸಿಕೊಂಡಿರುವ ವಿಡಿಯೊವಾಗಿದೆ.

ಮುಂದೆ ಓದಿ ...
  • Share this:

    ದೇಶದ (Country)ಹಾಗೂ ವಿಶ್ವದ(World) ಅತಿ ಹೆಚ್ಚು ಸಿರಿವಂತ ದೇವರುಗಳ(God) ಸಾಲಿನಲ್ಲಿ ಬರುವುದು ತಿರುಪತಿ ತಿರುಮಲ ವೆಂಕಟೇಶ್ವರ(Tirupati Tirumala Venkateshwara) ವರ್ಷಕ್ಕೆ ಏನಿಲ್ಲ ಎಂದರೂ ಸಾವಿರಾರು ಕೋಟಿ ರೂಪಾಯಿಗಳ ಆದಾಯ(Income) ಈ ದೇವಾಲಯಕ್ಕೆ(Temple) ಇದೆ.. ಪ್ರತಿ ನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ಹರಕೆಯ ರೂಪದಲ್ಲಿ ಚಿನ್ನ ಬೆಳ್ಳಿ ವಜ್ರ ವೈಢೂರ್ಯವನ್ನ ತಿಮ್ಮಪ್ಪನಿಗೆ ಸಲ್ಲಿಕೆ ಮಾಡುತ್ತಲೇ ಇರುತ್ತಾರೆ.ಹೀಗಿರುವಾಗಲೇ ತಿರುಪತಿ ತಿಮ್ಮಪ್ಪ ದೇವಾಲಯದ ಪುರೋಹಿತ ಎನಿಸಿಕೊಂಡ ವ್ಯಕ್ತಿಯೊಬ್ಬರ ಮನೆಯ ಮೇಲೆ ಐಟಿ ದಾಳಿ ನಡೆದಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.


    ತಿಮ್ಮಪ್ಪ ದೇಗುಲದ ಪುರೋಹಿತನ ಮನೆ ಮೇಲೆ ಐಟಿ ದಾಳಿ ನಡೆದಿದ್ದು ನಿಜವೇ..?


    ದೇಶದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದ ಇಲ್ಲಿರುವ 16 ಪುರೋಹಿತರಲ್ಲಿ ಒಬ್ಬ ಪುರೋಹಿತರ ಮನೆಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿ ಮಾಡಿದಾಗ ಸಿಕ್ಕಿರುವ ಹಣ, ಚಿನ್ನದ ಒಡವೆ ಹಾಗೂ ವಜ್ರದ ದೃಶ್ಯಗಳು ಎಂದು ಪ್ರತಿಪಾದಿಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊವೊಂದು ಹರಿದಾಡುತ್ತಿದೆ. ವಿಡಿಯೊದಲ್ಲಿ, ಚಿನ್ನಾಭರಣಗಳನ್ನು ಸಾಲಾಗಿ ಜೋಡಿಸಿಟ್ಟಿರುವುದು ಮತ್ತು ಒಂದಷ್ಟು ಜನರು ಪೊಲೀಸ್‌ ಯೂನಿಫಾರ್ಮ್‌ನಲ್ಲಿ ನಿಂತಿರುವುದು ಕಂಡುಬಂದಿದೆ. ಅಲ್ಲದೆ 128 ಕೆ.ಜಿ ಚಿನ್ನ, 150 ಕೋಟಿ ರೂಪಾಯಿ ನಗದು, 70 ಕೋಟಿ ರೂಪಾಯಿ ಬೆಲೆಯ ವಜ್ರ ಸಿಕ್ಕಿದೆ ಎಂದಿದೆ. ಅಲ್ಲದೆ ಇನ್ನುಮುಂದೆ ಯಾರೂ ತಿರುಪತಿಗೆ ಕಾಣಿಕೆ ಸಲ್ಲಿಸಬೇಡಿ ಎಂದೂ ಅದರಲ್ಲಿ ಬರೆಯಲಾಗಿದೆ.ಅಲ್ಲದೆ ಈ ವಿಡಿಯೋ ಸೋಶಿಯಲ್ ಮೀಡಿಯಾ ತುಂಬಾ ವೈರಲ್ ಕೂಡ ಆಗುತ್ತಿದೆ.


    ಇದನ್ನೂ ಓದಿ: Viral Video: ನಿಜವಾಯ್ತು ಬಬಲಾದಿ ಮಠದ ಮಾತು; 9 ತಿಂಗಳ ಹಿಂದೆಯೇ ತಿರುಪತಿ ಜಲಪ್ರಳದ ಭವಿಷ್ಯ ನುಡಿದಿದ್ದ ಸಿದ್ದು ಮುತ್ಯಾ!


    ತಿರುಪತಿಗೋ ವಿಡಿಯೋಗೂ ಯಾವುದೇ ಸಂಬಂಧ ಇಲ್ಲ


    ಇನ್ನು ವಾಸ್ತವದಲ್ಲಿ ಈ ವಿಡಿಯೊಗೂ, ತಿರುಪತಿ ದೇವಸ್ಥಾನಕ್ಕೂ ಯಾವುದೇ ಸಂಬಂಧವೇ ಇಲ್ಲ. ಈ ಬಗ್ಗೆ ನಾವು ರಿವರ್ಸ್ ಸರ್ಚ್ ಮೂಲಕ ಹುಡುಕಾಡಿದಾಗ, ಇದು ಇತ್ತೀಚೆಗೆ ತಮಿಳುನಾಡಿನಲ್ಲಿ ನಡೆದ ಚಿನ್ನಾಭರಣಗಳ ಅಂಗಡಿಯಿಂದ ನಡೆದ ದರೋಡೆ ಪ್ರಕರಣದಲ್ಲಿ ಪೊಲೀಸರು ಆರೋಪಿಗಳಿಂದ ಮರುವಶಪಡಿಸಿಕೊಂಡಿರುವ ವಿಡಿಯೊವಾಗಿದೆ. ತಮಿಳುನಾಡಿನ ವೆಲ್ಲೂರಿನಲ್ಲಿ ಇರುವ ಜೋಸ್‌ ಅಲುಕ್ಕಾಸ್‌ ಷೋರೂಂನಲ್ಲಿ ಡಿ.14ರಂದು ನಡೆದಿದ್ದ ದರೋಡೆಗೆ ಸಂಬಂಧಿಸಿದಂತೆ ಆರೋಪಿಗಳಿಂದ ಇದನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಇದರ ವರದಿಯನ್ನು ತಮಿಳುನಾಡಿನ ಟೀವಿ ಚಾನೆಲ್‌ ‌ಗಳಲ್ಲಿ ಇದೇ ಡಿಸೆಂಬರ್‌ 22ರಂದು ಪ್ರಸಾರವಾಗಿತ್ತು.


    ಅಲ್ಲದೆ ಜೋಸ್ ಅಲುಕ್ಕಾಸ್ ಶೋರೂಮ್‌ನಿಂದ 15 ಕೆಜಿ ಚಿನ್ನ ಮತ್ತು ಸುಮಾರು 500 ಗ್ರಾಂ ವಜ್ರಗಳನ್ನು ದರೋಡೆ ಮಾಡಲಾಗಿತ್ತು. ತನಿಖೆಯ ನಂತರ ವೆಲ್ಲೂರು ಪೊಲೀಸರು ವೆಲ್ಲೂರಿನ ಸ್ಮಶಾನದಲ್ಲಿ ಹೂತಿಟ್ಟಿದ್ದ ಎಲ್ಲಾ ಕದ್ದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಜೋಸ್ ಅಲುಕ್ಕಾಸ್ ಶೋರೂಂನಿಂದ ಚಿನ್ನ ಮತ್ತು ವಜ್ರಗಳನ್ನು ದರೋಡೆ ಮಾಡಿದ್ದ ಆರೋಪಿ ಡೀಕಾರಾಮನ್‌ನನ್ನು ಪೊಲೀಸರು ಬಂಧಿಸಿದ್ದಾರೆ.ಇದೇ ವಿಡಿಯೋ ಸೋಶಿಯಲ್ ಮೀಡಿಯಾ ತುಂಬಾ ವೈರಲ್ ಆಗುತ್ತಿರುವುದು. ಆದರೆ ಕಿಡಿಗೇಡಿಗಳು ಮಾತ್ರ ಇದು ತಿರುಪತಿ ತಿಮ್ಮಪ್ಪನ ದೇಗುಲದ ಪುರೋಹಿತರ ಮನೆ ಮೇಲೆ ದಾಳಿ ನಡೆದಾಗ ವರ್ಷಕ್ಕೆ ಪಡಿಸಿಕೊಂಡಿರುವ ವಜ್ರಾಭರಣ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.


    ಇದನ್ನೂ ಓದಿ: Tara at Tirupathi- ತೇಲುತ್ತಿದ್ದ ನಟಿ ತಾರಾ ಕಾರು; ತಿರುಪತಿ ಪ್ರವಾಹದ ಅನುಭವ ಬಿಚ್ಚಿಟ್ಟ ನಟಿ


    ಇನ್ನು ವಿಡಿಯೊಗೂ ತಿರುಪತಿ ದೇವಾಲಯಕ್ಕೂ ಯಾವುದೆ ಸಂಬಂಧವಿಲ್ಲ. ಆದರೆ 2016ರಲ್ಲಿ ತಿರುಪತಿ ದೇವಾಲಯದ ಆಡಳಿತ ಮಂಡಳಿ ಸದಸ್ಯರಾಗಿದ್ದ ಜೆ. ಶೇಕರ್ ರೆಡ್ಡಿ ಅವರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ₹100 ಕೋಟಿ ನಗದು ಹಾಗೂ 120 ಕೆಜಿ ಚಿನ್ನಾಭರಣ ವಶಪಡಿಸಿಕೊಂಡಿದ್ದರು. ಈ ಐಟಿ ದಾಳಿಗಳ ನಂತರ ಆಂಧ್ರಪ್ರದೇಶ ಸರ್ಕಾರ ಸೇಕರ್ ರೆಡ್ಡಿ ಅವರನ್ನು ಟಿಟಿಡಿ ಸದಸ್ಯತ್ವದಿಂದ ತೆಗೆದುಹಾಕಿತ್ತು. ಸಾಕ್ಷ್ಯಾಧಾರಗಳ ಕೊರತೆಯ ಆಧಾರದ ಮೇಲೆ 2020 ರ ಸೆಪ್ಟೆಂಬರ್‌ನಲ್ಲಿ ಶೇಕರ್ ರೆಡ್ಡಿ ವಿರುದ್ಧ ಸಿಬಿಐ ದಾಖಲಿಸಿದ ಪ್ರಕರಣವನ್ನು ವಿಶೇಷ ನ್ಯಾಯಾಲಯವು ವಜಾಗೊಳಿಸಿತ್ತು.

    Published by:ranjumbkgowda1 ranjumbkgowda1
    First published: