ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದು, ಅಧಿಕೃತವಾಗಿ ಷರಿಯಾ ಕಾನೂನಿನಡಿ ಆಡಳಿತ ನಡೆಸಲು ಸಜ್ಜಾಗಿದೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಫೋಟೋಗಳು, ವಿಡಿಯೋಗಳು ಹರಿದಾಡುತ್ತಿದ್ದು, ಇವುಗಳು ಎಷ್ಟು ಸತ್ಯ ಹಾಗೂ ಎಷ್ಟು ಸುಳ್ಳು ಎಂಬುದನ್ನು ನಂಬುವುದೇ ಕಷ್ಟವಾಗುತ್ತಿದೆ. ಇದೇ ರೀತಿ, ತಾಲಿಬಾನ್ ಹೋರಾಟಗಾರರು ತಮ್ಮ ಪ್ರಾಬಲ್ಯದ ಪ್ರದೇಶಗಳಲ್ಲಿ 12 ವರ್ಷ ವಯಸ್ಸಿನ ಹುಡುಗಿಯರನ್ನು ಬಲವಂತವಾಗಿ ಮದುವೆಯಾದ ವರದಿಗಳು ಬರುತ್ತಿದ್ದು, ಅಂತಾರಾಷ್ಟ್ರೀಯ ಸುದ್ದಿ ಮಾಧ್ಯಮ ಅಲ್ ಜಜೀರಾ ಈ ಸುದ್ದಿ ಮಾಡಿದೆ ಎಂದು ಹೇಳುವ ಟ್ವೀಟ್ನ ಸ್ಕ್ರೀನ್ಶಾಟ್ವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
“ಹಿಂದೂಗಳು ಈಗಲೂ ಉಚಿತ ವಿದ್ಯುತ್ಗಾಗಿ ಮತ ಚಲಾಯಿಸುತ್ತಾರೆ. ಬ್ರಿಟಿಷರಿಗೆ ಮತ್ತು ಮೊಘಲರಿಗೆ ನಮ್ಮ ಜನರನ್ನೇ ಮೋಸ ಮಾಡಿದ ಅದೇ ಜನರು ನಾವು'' ಎಂದು ಆ ಸ್ಕ್ರೀನ್ಶಾಟ್ ಜತೆಗೆ ಕ್ಯಾಪ್ಷನ್ ಅನ್ನೂ ಬರೆಯಲಾಗಿದೆ.
ನಂತರ ಕೀ ವರ್ಡ್ ಮೂಲಕ ಹುಡುಕಾಟ ನಡೆಸಿದ್ದು, "ಅಲ್ ಜಜೀರಾ ಇಂಗ್ಲೀಷ್" ಅಥವಾ "ಅಲ್ ಜಜೀರಾ ಬ್ರೇಕಿಂಗ್ ನ್ಯೂಸ್" ಈ ಸುದ್ದಿಯನ್ನು ಉಲ್ಲೇಖಿಸಿರುವ ಯಾವುದೇ ಟ್ವೀಟ್ ಅನ್ನು ಪೋಸ್ಟ್ ಮಾಡಿಲ್ಲ ಎಂದು ತಿಳಿದುಬಂದಿದೆ.
2016ರ ನಾಟಕದಿಂದ ಚಿತ್ರ ತೆಗೆಯಲಾಗಿದೆ
ವೈರಲ್ ಟ್ವೀಟ್ನಲ್ಲಿ ಬಳಸಿದ ಚಿತ್ರವನ್ನು ರಿವರ್ಸ್ ಸರ್ಚ್ ಮಾಡಿದಾಗ, ಇಂಡಿಯಾ ಟುಡೇ ಅದನ್ನು "ಲಾಸ್ ಏಂಜಲೀಸ್ ಟೈಮ್ಸ್" ಪ್ರಕಟಿಸಿದ 2016 ರ ವರದಿಯಲ್ಲಿ ಕಂಡುಕೊಂಡಿದೆ. ಇಲ್ಲಿ, ಈ ಚಿತ್ರವನ್ನು ''ಅಫ್ಘಾನ್ ಕಲಾವಿದರು ಕಾಬೂಲ್ನಲ್ಲಿ ಕುರಾನ್ನ ನಕಲನ್ನು ಸುಟ್ಟ ಆರೋಪದ ಮೇಲೆ ಮಾರ್ಚ್ 19, 2015 ರಂದು ಹೊಡೆದು ಸಾಯಿಸಿದ ಅಫ್ಘಾನ್ ಮಹಿಳೆ ಫರ್ಖುಂಡಾ ಮಲಿಕ್ಜಾಡಾ, 27ರ ಮಹಿಳೆಯ ಗುಂಪು ಹತ್ಯೆಯನ್ನು ಮರುಸೃಷ್ಟಿಸುತ್ತಾರೆ'' ಎಂದು ಈ ಚಿತ್ರವನ್ನು ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾಗಿದೆ. ಅಸೋಸಿಯೇಟೆಡ್ ಪ್ರೆಸ್ ಛಾಯಾಗ್ರಾಹಕ ರಹಮತ್ ಗುಲ್ ಈ ಚಿತ್ರವನ್ನು ತೆಗೆದಿದ್ದಾರೆ.
ಎಪಿ ಆರ್ಕೈವ್ಸ್ನಲ್ಲೂ ಅದೇ ಘಟನೆಯ ವೈರಲ್ ಚಿತ್ರ ಮತ್ತು ಹಲವಾರು ಇತರ ಚಿತ್ರಗಳನ್ನು ಕಂಡುಕೊಳ್ಳಲಾಗಿದೆ.
ಆದರೂ, ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್ ಈ ಆರೋಪಗಳನ್ನು ಆಧಾರರಹಿತ ಮತ್ತು "ವಿಷಪೂರಿತ ಪ್ರಚಾರ" ಎಂದು ತಳ್ಳಿಹಾಕಿದ್ದಾರೆ.
ಆದ್ದರಿಂದ, ತಾಲಿಬಾನ್ ಆಳ್ವಿಕೆಯಲ್ಲಿ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದ್ದರೂ, ಅಪ್ರಾಪ್ತ ಬಾಲಕಿಯರ ಅಪಹರಣ ಕುರಿತು ಅಲ್ ಜಜೀರಾ ಟ್ವೀಟ್ ಅನ್ನು ಮಾರ್ಫ್ ಮಾಡಲಾಗಿದೆ ಎಂಬುದನ್ನು ಕಂಡುಕೊಳ್ಳಲಾಗಿದೆ.
Key Words:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ