Fact Check: ನೀರಿನಲ್ಲಿ ಮುಳುಗಿ ಮೃತಪಟ್ಟವರನ್ನು ಉಪ್ಪಿನಿಂದ ಬದುಕಿಸಲು ಸಾಧ್ಯವೇ?

ಇದು ಮೊದಲ ಬಾರಿಯಲ್ಲ. ಈ ಹಿಂದೆಯೂ ಜನರು ಮೃತಪಟ್ಟ ವ್ಯಕ್ತಿಯ ದೇಹವನ್ನು ಉಪ್ಪಿನಲ್ಲಿ ಮುಚ್ಚಿ ಬದುಕಿಸಲು ಪ್ರಯತ್ನಿಸಿದ ಘಟನೆಗಳು ಸಹ ವರದಿಯಾಗಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸೋಷಿಯಲ್ ಮೀಡಿಯಾಗಳಲ್ಲಿ ಹಲವು ಸಂದೇಶಗಳು ವೈರಲ್ ಆಗುತ್ತಲೆ ಇರುತ್ತದೆ. ಇವುಗಳ ಪೈಕಿ ಯಾವುದು ಸತ್ಯ? ಯಾವುದು ಸುಳ್ಳು ಅಥವಾ ಫೇಕ್ (Fake News) ಎಂಬುದು ಮೇಲ್ನೋಟಕ್ಕೆ ಅರಿವಿಗೆ ಬರುವುದಿಲ್ಲ. ಕೆಲವೊಮ್ಮೆ ಇದು ನಿಜ ಅಲ್ಲ ಅನಿಸಿದರೂ ಹಾಗೆ ಆಗಿದ್ದರೆ ಒಳ್ಳೆಯದಿತ್ತು ಅನಿಸುತ್ತದೆ. ಇಂತಹುದೇ ಒಂದು ಸಂದೇಶವೊಂದು ಇದೀಗಿ ಫೇಸ್​ಬುಕ್, ವಾಟ್ಸ್​ಆ್ಯಪ್ ತುಂಬ ಹರಿದಾಡುತ್ತಿದೆ. ಫುಲ್ ವೈರಲ್ ಆಗುತ್ತಿದೆ. ಉಪ್ಪಿನ ಮೂಲಕ ನೀರಿನಲ್ಲಿ ಮುಳುಗಿ ಮೃತಪಟ್ಟವರನ್ನು ಮತ್ತೆ ಬದುಕಿಸಬಹುದು (Can Salt Raise The Dead? ) ಎಂಬುದೇ ಈ ವೈರಲ್ ಮೆಸೇಜ್​ನ ಸಾರಾಂಶ. ಹಾಗಾದರೆ ಉಪ್ಪಿನಲ್ಲಿ ಮಲಗಿಸಿ ನೀರಿನಲ್ಲಿ ಮುಳುಗಿ ಮೃತಪಟ್ಟವರನ್ನು ಬದುಕಿಸಬಹುದೇ? ಇದು ನಿಜವೇ ಅಥವಾ ಫೇಕ್ ಸುದ್ದಿಯೇ? ಇಲ್ಲಿದೆ ನೋಡಿ ಸತ್ಯಾಂಶ (Fact Check) ವಿವರ

ಒಂದು ದೊಡ್ಡ ಉಪ್ಪಿನ ರಾಶಿಯಲ್ಲಿ ಮಲಗಿಸಿದ ಮಗುವಿನ ಚಿತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇದರ ಜೊತೆ ಒಂದು ದೀರ್ಘ ಬರಹವೂ ಇದೆ. ನೀರಿನಲ್ಲಿ ಮುಳುಗಿ ಮೃತಪಟ್ಟ ವ್ಯಕ್ತಿಯನ್ನು ನಾಲ್ಕು ಗಂಟೆಗಳವರೆಗೆ ಉಪ್ಪಿನಲ್ಲಿ ಮುಚ್ಚಿದರೆ ಮತ್ತೆ ಬದುಕಿಸಬಹುದು ಎಂದು ವೈರಲ್ ಬರಹದಲ್ಲಿ ಹೇಳಳಾಗಿದೆ. ದಯವಿಟ್ಟು ಈ ಸಂದೇಶವನ್ನು ಹಂಚಿಕೊಳ್ಳಿ, ನೀರಲ್ಲಿ ಮುಳುಗಿ ಮೃತಪಟ್ಟವರ ಜೀವವನ್ನು ಉಳಿಸಬಹುದು ಎಂದು ಸಹ ಸಂದೇಶದಲ್ಲಿ ವಿನಂತಿ ಮಾಡಲಾಗಿದೆ. ಹಾಗಾದರೆ ಇದು ಸತ್ಯವೇ? ಅಥವಾ ಸುಳ್ಳೇ?

ಮೊದಲು ಪೋಸ್ಟ್ ಮಾಡಿದವರಾರು?
ಈ ವೈರಲ್ ಸಂದೇಶ ಮೊದಲು ಆಗಸ್ಟ್ 12, 2022 ರಂದು 'ಶ್ರೀ ಮಜೀಸಾ ಜಸೋಲ್ ಧಾಮ್' ಎಂಬ ಫೇಸ್‌ಬುಕ್ ಪೇಜ್​ನಲ್ಲಿ ಪೋಸ್ಟ್ ಆಗಿದೆ. ಪೋಸ್ಟ್‌ನಲ್ಲಿ ಮಗುವಿನ ದೇಹವನ್ನು ಹಸಿ ಉಪ್ಪಿನಲ್ಲಿ ಕುತ್ತಿಗೆಯವರೆಗೆ ಮುಚ್ಚಲಾಗಿದೆ. ಪೋಸ್ಟ್‌ನೊಂದಿಗೆ ಇರುವ ಬರಹದಲ್ಲಿ ಆ ಬಾಲಕನ ಮಾಹಿತಿ ಇಲ್ಲ.

ಸಂಪೂರ್ಣ ಸುಳ್ಳು ಸಂದೇಶ
ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (AFWA) ಈ ಹೇಳಿಕೆಯನ್ನು ಸಂಪೂರ್ಣವಾಗಿ ಸುಳ್ಳು ಎಂದು ಖಚಿತಪಡಿಸಿದೆ. ಅಲ್ಲದೇ ಇದು ಮೊದಲ ಬಾರಿಯಲ್ಲ. ಈ ಹಿಂದೆಯೂ ಜನರು ಮೃತಪಟ್ಟ ವ್ಯಕ್ತಿಯ ದೇಹವನ್ನು ಉಪ್ಪಿನಲ್ಲಿ ಮುಚ್ಚಿ ಬದುಕಿಸಲು ಪ್ರಯತ್ನಿಸಿದ ಘಟನೆಗಳು ಸಹ ವರದಿಯಾಗಿವೆ. ಆದರೆ ಈ ಚಿತ್ರದ ಮೂಲ ಯಾರು ಎಂಬುದು ಮಾತ್ರ ಇನ್ನೂ ಪತ್ತೆಯಾಗಿಲ್ಲ.

ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಕೇವಲ ನಾಲ್ಕು ದಿನಗಳಲ್ಲಿ ಚಿತ್ರವು 15,000 ಕ್ಕೂ ಹೆಚ್ಚು ಶೇರ್‌ಗಳನ್ನು ಪಡೆದುಕೊಂಡಿದೆ. ಹಲವು ಭಾಷೆಗಳಿಗೆ ಅನುವಾದಗೊಂಡಿದೆ.

ಮೃತಪಟ್ಟ ಬಾಲಕನನ್ನು ಉಪ್ಪಿನಲ್ಲಿ ಇರಿಸಲಾದ ಚಿತ್ರದ ಜೊತೆಗೆ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ ಹೀಗಿದೆ:

ಒಂದೂವರೆ ಕ್ವಿಂಟಾಲ್ ಉಪ್ಪನ್ನು ಹಾಸಿಗೆಯಂತೆ ಹಾಕಿ, ರೋಗಿಯನ್ನು ಅದರ ಮೇಲೆ ಬಟ್ಟೆಯೊಂದಿಗೆ ಮಲಗಿಸಿ. ಉಪ್ಪು ನಿಧಾನವಾಗಿ ದೇಹದಿಂದ ನೀರನ್ನು ಹೀರಿಕೊಳ್ಳುತ್ತದೆ. ವ್ಯಕ್ತಿಗೆ ನಿಧಾನವಾಗಿ ಪ್ರಜ್ಞೆ ಬರುತ್ತದೆ. ವ್ಯಕ್ತಿಯು ಪ್ರಜ್ಞೆಯನ್ನು ಮರಳಿ ಪಡೆದಾಗ, ಅವನನ್ನು ಆಸ್ಪತ್ರೆಗೆ ಕರೆದೊಯ್ಯಿರಿ.

ಇದಕ್ಕೂ ಮುನ್ನ ಆಸ್ಪತ್ರೆಗೆ ಕರೆದೊಯ್ದು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದ ವ್ಯಕ್ತಿಯನ್ನು ಉಪ್ಪಿನ ಚಿಕಿತ್ಸೆ ಮಾಡಿ ಬದುಕಿಸಿದ್ದೇವೆ. ದೇವರ ದಯೆ ಇದ್ದರೆ ಸತ್ತವನೂ ಕೂಡ ಬದುಕುತ್ತಾನೆ. ಪ್ರಯತ್ನ ಮಾಡುವುದರಲ್ಲಿ ತಪ್ಪೇನಿಲ್ಲ . ವೈದ್ಯರು ಸತ್ತರು ಎಂದು ಘೋಷಿಸಿದ ನಂತರ ಸಂಸ್ಕಾರ ಮಾಡಲು ಆತುರಪಡಬೇಡಿ. ಸಾಧ್ಯವಾದಷ್ಟು ಬೇಗ ಉಪ್ಪಿನ ಚಿಕಿತ್ಸೆ ಮಾಡಿ.

ಇದಕ್ಕೂ ಮುನ್ನ ಆಸ್ಪತ್ರೆಗೆ ಕರೆದೊಯ್ದು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದ ವ್ಯಕ್ತಿಯನ್ನು ಉಪ್ಪಿನ ಚಿಕಿತ್ಸೆ ಮಾಡಿ ಬದುಕಿಸಿದ್ದೇವೆ.  ದೇವರ ದಯೆ ಇದ್ದರೆ ಸತ್ತವನೂ ಕೂಡ ಬದುಕುತ್ತಾನೆ. ಪ್ರಯತ್ನ ಮಾಡುವುದರಲ್ಲಿ ತಪ್ಪೇನಿಲ್ಲ .

- ಹೀಗಿದೆ ವೈರಲ್ ಮೆಸೇಜ್.

ಡಾಕ್ಟರ್ ಏನಂತಾರೆ?
ದೆಹಲಿಯ ಏಮ್ಸ್‌ನ ಫೋರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ವೈದ್ಯ ಅಭಿಷೇಕ್ ಯಾದವ್ ಅವರ ಪ್ರಕಾರ, "ಒಮ್ಮೆ ಹೃದಯ ಮತ್ತು ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿದರೆ, ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗುತ್ತದೆ. ದೇಹವನ್ನು ಉಪ್ಪು, ಮೆದುಳು ಮತ್ತು ಹೃದಯದ ರಾಶಿಯ ಅಡಿಯಲ್ಲಿ ಇರಿಸುವ ಮೂಲಕ ದೇಹದ ಚಟುವಟಿಕೆಯನ್ನು ಮರುಪ್ರಾರಂಭಿಸಲು ಸಾಧ್ಯವಿಲ್ಲ."

ಇದನ್ನೂ ಓದಿ: Sanikatta Salt: ತಿನ್ನೋಕೆ ಉಪ್ಪೇ ಸಿಗಲ್ಲ ಜೋಕೆ! ಉಪ್ಪು ತಯಾರಾಗುವುದು ಹೇಗೆ? ಬೆಳೆಗಾರರ ಜೀವನ ಉಪ್ಪಾಗಿದ್ದೇಕೆ?

ಆದರೆ ಇಂತಹ ಸುಳ್ಳುಗಳನ್ನು ನಂಬಿಕೆಯ ಹಿಂದೆ ಹುಸಿ ವಿಜ್ಞಾನವಿದೆ ಎಂದು ಏಮ್ಸ್‌ನ ಶವಾಗಾರದ ಉಸ್ತುವಾರಿ ಮತ್ತು ಹಿಸ್ಟೋಪಾಥಾಲಜಿ ಮುಖ್ಯಸ್ಥ ಡಾಕ್ಟರ್ ಯಾದವ್ ಹೇಳುತ್ತಾರೆ.

ಮೂಢನಂಬಿಕೆಯ ಭಾವನೆ ಅಷ್ಟೇ
"ಮೇಲೆ ಹೇಳಿದ ಉಪ್ಪು ಚಿಕಿತ್ಸೆಗೆ ಯಾವುದೇ ವೈಜ್ಞಾನಿಕ ಸಮರ್ಥನೆ ಇಲ್ಲ. ಮೃತಪಟ್ಟವರ ಸಂಬಂಧಿಕರು ಮೂಢನಂಬಿಕೆಗಳ ಮೂಲಕವಾದರೂ ಮೃತಪಟ್ಟವರನ್ನು ಮತ್ತೆ ಜೀವಂತವಾಗಿಸುವ ಭಾವನೆ ಹೊಂದಿರುತ್ತಾರೆ. ಹೀಗಾಗಿ ಇಂತಹ ಆಚರಣೆ ನಡೆಸಬಹುದು. ಉಪ್ಪು ಶತಮಾನಗಳಿಂದಲೂ ನೈಸರ್ಗಿಕ ಸಂರಕ್ಷಕವಾಗಿದೆ. ಆದರೆ ಉಪ್ಪಿನಿಂದ ಮೃತಪಟ್ಟವರನ್ನು ಮತ್ತೆ ಜೀವಂತವಾಗಿಸಲು ಸಾಧ್ಯವಿಲ್ಲ ಎಂದು ಡಾ.ಯಾದವ್ ಖಚಿತಪಡಿಸಿದ್ದಾರೆ.

ನೀರಿನಲ್ಲಿ ಮುಳುಗಿದಾಗ ಏನಾಗುತ್ತದೆ?
ಫ್ಲೋರಿಡಾ ಇಂಟರ್ನ್ಯಾಷನಲ್ ಯೂನಿವರ್ಸಿಟಿಯ ಕರಾವಳಿ ಸಂಶೋಧನೆಯ ಪ್ರಯೋಗಾಲಯದ ಸಂಶೋಧನಾ ಪ್ರಾಧ್ಯಾಪಕ ಡಾ. ಜಾನ್ ಆರ್. ಫ್ಲೆಟ್ಮೆಯರ್ ಅವರು ಅಕ್ವಾಟಿಕ್ ಇಂಟರ್ನ್ಯಾಷನಲ್ ನಿಯತಕಾಲಿಕದಲ್ಲಿ ಮುಳುಗುವಿಕೆ ಕುರಿತು ವಿವರಿಸಿದ್ದಾರೆ.

ಮನುಷ್ಯರು ಮುಳುಗುತ್ತಿರುವಾಗ ಒಮ್ಮೆ ಪ್ರಜ್ಞೆಯನ್ನು ಕಳೆದುಕೊಂಡರೆ, ನೀರು ಶ್ವಾಸಕೋಶಕ್ಕೆ ಪ್ರವೇಶಿಸುತ್ತದೆ. ನಂತರ ಪ್ರಮುಖ ಅಂಗಗಳಿಗೆ ಜೀವ ನೀಡುವ ಆಮ್ಲಜನಕದ ಪೂರೈಕೆ ನಿಲ್ಲುತ್ತದೆ ಎಂದು ವಿವರಿಸುತ್ತಾರೆ.

ಇದನ್ನೂ ಓದಿ: Ghatiana Dwivarna: ಬಿಳಿ ಮೈ, ಕಾಲು ಚಾಕ್ಲೇಟ್ ಬಣ್ಣ! ಅಪರೂಪದ ಘಾಟಿಯಾನ ದ್ವಿವರ್ಣ ಏಡಿಯ ವಿಡಿಯೋ ನೋಡಿ

ಉಸಿರಾಟವು ಸ್ಥಗಿತಗೊಂಡಾಗ ಹೃದಯದ ಬಡಿತ ನಿಲ್ಲುತ್ತದೆ. ಒಮ್ಮೆ ಉಸಿರಾಟ ಮತ್ತು ಹೃದಯದ ಬಡಿತ ನಿಂತರೆ ವ್ಯಕ್ತಿಯು ಜೈವಿಕವಾಗಿ ಮೃತಪಟ್ಟಂತೆ ಎಂದು ಅವರು ತಿಳಿಸಿದ್ದಾರೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಪ್ರಕಾರ, 2015 ರಲ್ಲಿ, ಭಾರತದಲ್ಲಿ ಒಟ್ಟು 29,822 ಜನರು ಮುಳುಗಿ ಸಾವನ್ನಪ್ಪಿದ್ದಾರೆ.
Published by:guruganesh bhat
First published: