FACT CHECK: ಪರೀಕ್ಷೆ ಮುಂದೂಡದ್ದಕ್ಕೆ ತೆಲಂಗಾಣ ಬಾಲಕಿ ಆತ್ಮಹತ್ಯೆ ಸುದ್ದಿ – ಇದರ ಅಸಲಿಯತ್ತೇನು?

ಪರೀಕ್ಷೆಗಳನ್ನ ಮುಂದೂಡದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಜುಲೈ 1ರಂದು ಸುನೀತಾ ಎಂಬಾಕೆ ಡೆತ್ ನೋಟ್ ಬರೆದಿರುವ ಸುದ್ದಿ ಇತ್ತು. ಆದರೆ, ಇದು ಸುಳ್ಳು ಎಂಬದು ಫ್ಯಾಕ್ಟ್ ಚೆಕ್ನಿಂದ ಸಾಬೀತಾಗಿದೆ.

ಸುಳ್ಳು ಮಾಹಿತಿಯ ಟ್ವೀಟ್

ಸುಳ್ಳು ಮಾಹಿತಿಯ ಟ್ವೀಟ್

  • Share this:
ಕೋವಿಡ್ -19 ಪರಿಸ್ಥಿತಿಯಿಂದ, ಸಾಂಕ್ರಾಮಿಕ ಮತ್ತು ಸೋಂಕಿನ ಅಪಾಯಗಳಿಂದಾಗಿ ಭಾವನಾತ್ಮಕ ಒತ್ತಡವನ್ನು ಹೊಂದಿರುವ ದೇಶಾದ್ಯಂತ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ. ಈ ವೇಳೆಯಲ್ಲಿ, ತೆಲಂಗಾಣ ವಿದ್ಯಾರ್ಥಿನಿ ಸುನೀತಾ ಬರೆದಿರುವ ಡೆತ್‌ ನೋಟ್‌ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರ ಜೊತೆಗೆ ಒಂದು ಸೈಡ್‌ನಲ್ಲಿ ಯುವತಿಯ ಚಿತ್ರಗಳನ್ನು ಕೊಲಾಜ್ ಮಾಡಲಾಗಿದೆ ಮತ್ತು ಇನ್ನೊಂದು ಸೈಡ್‌ನಲ್ಲಿ ಸೀಲಿಂಗ್ ಫ್ಯಾನ್‌ನಿಂದ ನೇಣು ಹಾಕಿಕೊಂಡಿರುವ ಮಹಿಳೆಯ ಮಸುಕಾದ ಫೋಟೋವನ್ನು ಟ್ಯಾಗ್‌ ಮಾಡಲಾಗಿದೆ.

ಜುಲೈ 1, 2021 ರ ಡೆತ್ ನೋಟ್ ಪ್ರಕಾರ, ತೆಲಂಗಾಣದಲ್ಲಿ ಕೋವಿಡ್ -19 ಬಿಕ್ಕಟ್ಟಿನ ಮಧ್ಯೆ “ಆಫ್‌ಲೈನ್ ಬಿ-ಟೆಕ್ ಪರೀಕ್ಷೆಗಳನ್ನು ಮುಂದೂಡದ ಕಾರಣ” ಸುನೀತಾ ತನ್ನ ಜೀವವನ್ನು ತೆಗೆದುಕೊಂಡಿರುವುದಾಗಿ ಹೇಳಲಾಗಿದೆ. @NehaCho78701538 ಎಂಬ ಹೆಸರಿನ ಟ್ವಿಟ್ಟರ್ ಬಳಕೆದಾರರಾದ ನೇಹಾ ಚೌಧರಿ ಅವರು ಸಾವಿನ ಕುರಿತು ಫೋಟೋಗಳನ್ನು ಹಾಗೂ ಡೆತ್‌ ನೋಟನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದರು. ಅವರ ಈ ಪೋಸ್ಟ್ ಅತಿ ಹೆಚ್ಚು ಪ್ರತಿಕ್ರಿಯೆಗಳನ್ನು ಪಡೆದಿದೆ. ಜುಲೈ 1 ರಂದು ಈ ಪೋಸ್ಟ್ ಮಾಡಿರುವುದಾಗಿ ತಿಳಿದುಬಂದಿದೆ.ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ಈ ಪೋಸ್ಟ್‌ನಲ್ಲಿರುವ ಹುಡುಗಿ ಕೆ. ಸಂಕೀರ್ತನಾ ಅವರು ಜೀವಂತವಾಗಿದ್ದಾರೆ ಎಂದು ದೃಡಪಡಿಸಿದೆ. ಈ ಪೋಸ್ಟ್ ನಕಲಿ ಮತ್ತು ನಾನು ಬಿ-ಟೆಕ್ ವಿದ್ಯಾರ್ಥಿಯಲ್ಲ. ಆದರೆ ದೆಹಲಿ ವಿಶ್ವವಿದ್ಯಾಲಯದಲ್ಲಿ ಬಿ.ಕಾಂ (ಹಾನರ್ಸ್‌) ವ್ಯಾಸಂಗ ಮಾಡುತ್ತಿರುವುದಾಗಿ ಸಂಕೀರ್ತನ ದೃಡಪಡಿಸಿದ್ದಾರೆ. ಪರೀಕ್ಷೆಗಳನ್ನು ಮುಂದೂಡದ ಕಾರಣ ಬಿ.ಟೆಕ್ ವಿದ್ಯಾರ್ಥಿಯ ಯಾವುದೇ ಆತ್ಮಹತ್ಯೆಯ ಪ್ರಕರಣವು ತೆಲಂಗಾಣದಲ್ಲಿ ವರದಿಯಾಗಿಲ್ಲ. ಪೋಸ್ಟ್‌ನಲ್ಲಿರುವ “ಸುನೀತಾ” ಯಾರು ಹಾಗೂ ಯಾವ ಕಾಲೇಜಿನಲ್ಲಿ ಓದುತ್ತಿದ್ದಾಳೆ ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಕಾಡುತ್ತಿದೆ.

ಇದನ್ನೂ ಓದಿ: Love and Crime - ವಿವಾಹಿತ ಮಹಿಳೆ ಸಹವಾಸಕ್ಕೆ ಸಿಲುಕಿ ಕೊಲೆಯಾದ ಬಾಡಿ ಬಿಲ್ಡರ್

ನಾವು ಗೂಗಲ್‌ನಲ್ಲಿ ಹುಡುಗಿಯ ಛಾಯಾಚಿತ್ರವನ್ನು ಹುಡುಕಿದಾಗ, 2021 ರ ಜನವರಿ 25 ರಂದು ಪ್ರಕಟವಾದ ‘ತೆಲಂಗಾಣ ಟುಡೆ’ ಲೇಖನದಲ್ಲಿ ಹುಡುಗಿಯ ಛಾಯಾಚಿತ್ರ ದೊರೆತಿದೆ. ಫೋಟೋದಲ್ಲಿರುವ ಹುಡುಗಿ ತೆಲಂಗಾಣದ ಕರೀಂನಗರ ಜಿಲ್ಲೆಯ 18 ವರ್ಷದ ಕೆ. ಸಂಕೀರ್ತನಾ. ಮಧ್ಯಂತರ ಪರೀಕ್ಷೆಯಲ್ಲಿ 1000 ರಲ್ಲಿ 942 ಅಂಕಗಳನ್ನು ಗಳಿಸಿದ್ದಾರೆ. ಸ್ಪಷ್ಟವಾಗಿ, ಅವಳು ಆಸ್ಟ್ರೇಲಿಯಾದಿಂದ ಪದವಿಪೂರ್ವ ಪದವಿ ಪಡೆಯಲು ತಯಾರಿ ನಡೆಸಿದ್ದಾಳೆ ಎಂದು ‘ತೆಲಂಗಾಣ ಟುಡೆ’ ಲೇಖನದಲ್ಲಿ ವರದಿ ಮಾಡಿದೆ.

ವೈರಲ್ ಪೋಸ್ಟ್ ಮಾಡಿದ ಕುರಿತು ಸಂಕೀರ್ತನಾ, “ನಾನು ಪ್ರಸ್ತುತ ದೆಹಲಿ ವಿಶ್ವವಿದ್ಯಾಲಯದಿಂದ ಬಿ.ಕಾಂ (ಹಾನರ್ಸ್‌) ಮೊದಲ ವರ್ಷವನ್ನು ಓದುತ್ತಿದ್ದೇನೆ. ಆ ಪೋಸ್ಟ್‌ನಲ್ಲಿ ಹೇಳಿಕೊಂಡಂತೆ ನಾನು ಬಿ.ಟೆಕ್ ವಿದ್ಯಾರ್ಥಿಯಲ್ಲ. ಅಲ್ಲದೆ, ನನ್ನ ಚಿತ್ರದೊಂದಿಗೆ ಹಂಚಿಕೊಂಡ ಡೆತ್ ನೋಟ್ ಅನ್ನು ನಾನು ಬರೆದಿಲ್ಲ. ಕೋವಿಡ್ -19 ಪರಿಸ್ಥಿತಿಯಿಂದಾಗಿ, ನಾನು ಆಸ್ಟ್ರೇಲಿಯಾಕ್ಕೆ ಯಾವಾಗ ಹೊರಡಬಹುದು ಎಂಬ ಬಗ್ಗೆ ಖಚಿತತೆ ಇಲ್ಲ. ಆದ್ದರಿಂದ, ನಾನು ದೆಹಲಿ ವಿಶ್ವವಿದ್ಯಾಲಯಕ್ಕೆ ಸೇರಲು ನಿರ್ಧರಿಸಿದೆ” ಎಂದು ಖಚಿತಪಡಿಸಿದ್ದಾರೆ. "ಸ್ನೇಹಿತರು ನನ್ನೊಂದಿಗೆ ಟ್ವಿಟರ್‌ನಲ್ಲಿ @ NehaCho78701538 ಅವರ ಪೋಸ್ಟ್ ಹಂಚಿಕೊಂಡ ನಂತರ, ನಾನು ಈ ನಕಲಿ ಪೋಸ್ಟ್ ಬಗ್ಗೆ ತಿಳಿದುಕೊಂಡೆ. ನಾನು ಕೂಡ ಪೋಸ್ಟ್ ನಕಲಿ ಎಂದು ಪೋಸ್ಟ್‌ ಮಾಡಿದೆ. ಆದರೆ ಯಾರು ನನ್ನ ಟ್ವೀಟ್‌ ಅನ್ನು ಗಂಭೀರವಾಗಿ ಪರಿಗಣಿಸಲಿಲ್ಲ” ಎಂದು ಸಂಕೀರ್ತನಾ ಹೇಳಿದರು. ಸಂಕೀರ್ತನಾ ಅವರ ಕುಟುಂಬ ಸ್ನೇಹಿತ ಗಿರೀಶ್ ಮಿಂಟು ಕೂಡ ಇದೇ ವಿಷಯದ ಬಗ್ಗೆ ಸ್ಪಷ್ಟೀಕರಣ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ ಎಂದು ತಿಳಿಸಿದರು.

ತೆಲಂಗಾಣ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಶರಣ್ ಕುಮಾರ್, ”ತೆಲಂಗಾಣದಲ್ಲಿ ಇಂತಹ ಯಾವುದೇ ಘಟನೆ ನಡೆದಿಲ್ಲ. ಈ ವೈರಲ್ ಪೋಸ್ಟ್‌ನಲ್ಲಿ ಮಾಡಿದ ಹಕ್ಕು ಸುಳ್ಳು. ನಾವು ಇದನ್ನು ರಾಜ್ಯಾದ್ಯಂತ ಅನೇಕ ವಿದ್ಯಾರ್ಥಿ ಸಂಘಗಳೊಂದಿಗೆ ದೃಡಪಡಿಸಿದ್ದೇವೆ. ” ಎಂದು ಹೇಳಿದ್ದಾರೆ.

ನೇಹಾ ಚೌಧರಿಯ ಟ್ವಿಟರ್ ಪ್ರೊಫೈಲ್ ಜೂನ್ 2021 ರಂದು ರಚಿಸಲ್ಪಟ್ಟಿದೆ ಮತ್ತು ಒಮ್ಮೆ ಮಾತ್ರ ಟ್ವೀಟ್ ಮಾಡಿದ್ದು - ಪ್ರಶ್ನಾರ್ಹ ಪೋಸ್ಟ್. ಈ ಖಾತೆಯಿಂದ ಮೊದಲು ಪೋಸ್ಟ್ ಅನ್ನು ಟ್ವೀಟ್ ಮಾಡಲಾಗಿದೆ ಎಂದು ನಿರೀಕ್ಷಿಸಲಾಗಿದೆ, ನಂತರ ಇದನ್ನು ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಸುದ್ದಿಯನ್ನು ಪ್ರಕಟಣಿ ಮಾಡಿದ್ದಾರೆ ಎಂದು ಹೇಳಲಾಗಿದೆ.

- ಅನುಷಾ, ಏಜೆನ್ಸಿ
Published by:Vijayasarthy SN
First published: