• Home
 • »
 • News
 • »
 • national-international
 • »
 • Fact Check: ಮಿಯಾ ಖಲೀಫಾ ಪೋಸ್ಟರ್​ಗೆ ಕಾಂಗ್ರೆಸ್ ಕಾರ್ಯಕರ್ತರು ಕೇಕ್ ತಿನ್ನಿಸುತ್ತಿರುವ ಫೋಟೋದ ಅಸಲಿ ಸತ್ಯ ಏನು?

Fact Check: ಮಿಯಾ ಖಲೀಫಾ ಪೋಸ್ಟರ್​ಗೆ ಕಾಂಗ್ರೆಸ್ ಕಾರ್ಯಕರ್ತರು ಕೇಕ್ ತಿನ್ನಿಸುತ್ತಿರುವ ಫೋಟೋದ ಅಸಲಿ ಸತ್ಯ ಏನು?

ಮಿಯಾ ಕಲೀಫಾ ಫೋಟೋಗೆ ಕೇಕ್ ತಿನ್ನಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು

ಮಿಯಾ ಕಲೀಫಾ ಫೋಟೋಗೆ ಕೇಕ್ ತಿನ್ನಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು

ಮಾಜಿ ನೀಲಿ ತಾರೆ ಮಿಯಾ ಖಲೀಫಾ ಅವರ ಭಾವಚಿತ್ರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಕೇಕ್ ತಿನ್ನಿಸುತ್ತಿರುವ ಫೋಟೋವೊಂದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿವೆ.

 • Share this:

  ನವದೆಹಲಿ (ಫೆ. 8): ರಾಷ್ಟ್ರ ರಾಜಧಾನಿ ದೆಹಲಿ ಗಡಿಯಲ್ಲಿ ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ದೇಶದ ರೈತರ ಪ್ರತಿಭಟನೆಗೆ ಹಲವು ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳೂ ಬೆಂಬಲಿಸುತ್ತಿದ್ದಾರೆ. ಆದರೆ, ಪ್ರತಿಭಟನೆಗೆ ಬೆಂಬಲಿಸುತ್ತಿರುವ ಖ್ಯಾತ ವಿದೇಶಿ ವ್ಯಕ್ತಿಗಳ ನಕಲಿ ಪೊಟೋಗಳನ್ನು ಕೆಲ ಕಿಡಿಗೇಡಿಗಳು ಎಡಿಟ್ ಮಾಡಿ ಸಾಮಾಜಿಕ ತಾಣಗಳಲ್ಲಿ ಹರಿಬಿಡುತ್ತಿದ್ದಾರೆ.


  ಹೌದು, ಖ್ಯಾತ ಪಾಪ್ ಗಾಯಕಿ ರಿಹಾನ್ನಾ ಅವರು ಪಾಕಿಸ್ತಾನ ಧ್ವಜ ಹಿಡಿದಂತೆ ಎಡಿಟ್ ಮಾಡಲಾಗಿತ್ತು. ಇದೀಗ ಮಾಜಿ ನೀಲಿ ತಾರೆ ಮಿಯಾ ಖಲೀಫಾ ಅವರ ಭಾವಚಿತ್ರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಕೇಕ್ ತಿನ್ನಿಸುತ್ತಿರುವ ಫೋಟೋವೊಂದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿವೆ.


  ಟ್ಟಿಟ್ಟರ್ ಬಳಕೆದಾರರೊಬ್ಬರು ಹಂಚಿಕೊಂಡ ಫೋಟೋದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಿಯಾ ಖಲೀಫಾ ಫೋಟೋಗೆ ಕೇಕ್ ನೀಡುತ್ತಿರುವ ಚಿತ್ರಣವಿದೆ. ಇದಕ್ಕೆ ಎಷ್ಟರಮಟ್ಟಿಗೆ ಗುಲಾಮರ ಮನಸ್ಥಿತಿಯಿದೆ? ಕಾಂಗ್ರೆಸ್ ಭಾರತ ವಿರೋಧಿ ಸಿದ್ಧಾಂತ ಪರವಾಗಿರುತ್ತೆ ಎಂದು ಪ್ರಶ್ನಿಸಿದ್ದಾರೆ.


  2007ರಲ್ಲಿ ತೆಗೆದ ಫೋಟೋ:
  ಇನ್ನು, ಈ ಫೋಟೋವನ್ನು ಹಂಚಿಕೊಂಡು ಬಿಜೆಪಿಯ ಸುರೇಂದ್ರ ಪೂಣಿಯ ಅವರು ಕೂಡ ಟ್ವೀಟ್ ಮಾಡಿದ್ದಾರೆ. ಇನ್ನು, ಮಾರ್ಫಿಂಗ್ ಮಾಡಲಾದ ಫೋಟೋವನ್ನು ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್, ವೈರಲ್ ಆಗಿರುವ ಮಿಯಾ ಖಲೀಫಾ ಅವರ ಫೋಟೋ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಕೇಕ್ ನೀಡುತ್ತಿರುವ ಫೋಟೋ ಮಾರ್ಫ್‌ ಮಾಡಲಾಗಿದೆ. ಮೂಲ ಫೋಟೋವು 2007ರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಜನ್ಮದಿನ ಪ್ರಯುಕ್ತ ಅವರ ಬೆಂಬಲಿಗರು ಕೇಕ್ ತಿನ್ನಿಸುತ್ತಿರುವ ದೃಶ್ಯವಾಗಿದೆ ಎಂದು ದೃಢಪಡಿಸಿದೆ.  ಫೋಟೋದ ಮೂಲ ಹುಡುಕಲು ರಿವರ್ಸ್ ಇಮೇಜ್ ಹುಡುಕಾಟದ ಸಹಾಯ ಪಡೆಯಲಾಗಿದ್ದು, ಸ್ಟಾಕ್ ಇಮೇಜ್ ಸೈಟ್ ಆಗಿರುವ Getty Images ನಲ್ಲಿ ಮೂಲ ಫೋಟೋ ದೊರೆತಿದ್ದು, ಈ ಪೋಟೋದಲ್ಲಿ ರಾಹುಲ್ ಗಾಂಧಿ ಫೋಟೋಗೆ ಕೈ ಕಾರ್ಯಕರ್ತರು ಕೇಕ್ ನೀಡುತ್ತಿದ್ದಾರೆ.


  ಸೋನಿಯಾ ನಿವಾಸದ ಮುಂದೆ ತೆಗೆದ ಫೋಟೋ:
  Getty Imagesನಲ್ಲಿ ದೊರೆತಿರುವ ಮಾಹಿತಿ ಮೂಲಗಳ ಪ್ರಕಾರ, ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಅವರ 37ನೇ ಜನ್ಮದಿನ ಪ್ರಯುಕ್ತ ಅವರ ಬೆಂಬಲಿಗರು ರಾಹುಲ್ ಗಾಂಧಿ ಭಾವಚಿತ್ರದ ಮುಂದೆ ಕೇಕ್ ಕತ್ತರಿಸಿ ರಾಹುಲ್ ಗಾಂಧಿಗೆ ನೀಡುತ್ತಿದ್ದರು. ಇದು ಜೂನ್ 19, 2007ರಂದು ನವದೆಹಲಿಯ ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಿವಾಸದ ಮುಂದೆ ತೆಗೆದ ಫೋಟೋವಾಗಿದೆ.


  ‘37 ವರ್ಷಕ್ಕೆ ಕಾಲಿಟ್ಟ ರಾಹುಲ್ ಗಾಂಧಿ’ ಶೀರ್ಷಿಕೆ ಅಡಿಯಲ್ಲಿ ಟೈಮ್ಸ್ ಆಫ್ ಇಂಡಿಯಾ ಇದೇ ರಾಹುಲ್ ಗಾಂಧಿಗೆ ಅವರ ಬೆಂಬಲಿಗರು ಕೇಕ್ ನೀಡುತ್ತಿರುವ ಫೋಟೋವನ್ನು ಕೂಡ ಪ್ರಕಟ ಮಾಡಿತ್ತು. ಇದರಿಂದಾಗಿ ನಕಲು ಮಾಡಲಾದ ಫೋಟೋ ಒಂದು ದಶಕಕ್ಕಿಂತ ಹಳೆಯದು ಎಂದು ಮೂಲ ಫೋಟೋದಿಂದ ತಿಳಿದುಬರುತ್ತದೆ.

  Published by:Sushma Chakre
  First published: