• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Fact Check: ತಾಜ್​ ಹೋಟೆಲ್​ನಲ್ಲಿ ವ್ಯಾಲಂಟೈನ್ಸ್​​ ಡೇ ದಿನ ಫ್ರೀಂ ರೂಂ ಸಿಗುತ್ತಾ? ಇಲ್ಲಿದೆ ಅಸಲಿ ಸಂಗತಿ..!

Fact Check: ತಾಜ್​ ಹೋಟೆಲ್​ನಲ್ಲಿ ವ್ಯಾಲಂಟೈನ್ಸ್​​ ಡೇ ದಿನ ಫ್ರೀಂ ರೂಂ ಸಿಗುತ್ತಾ? ಇಲ್ಲಿದೆ ಅಸಲಿ ಸಂಗತಿ..!

ತಾಜ್ ಹೋಟೆಲ್

ತಾಜ್ ಹೋಟೆಲ್

ವ್ಯಾಲಂಟೈನ್ಸ್​ ಡೇ ಆಚರಿಸಲು ತಾಜ್ ಹೋಟೆಲ್ ನಿಮಗೆ 200 ಗಿಫ್ಟ್​ ಕಾರ್ಡ್​​ಗಳನ್ನು ಕಳುಹಿಸಿದೆ. ನೀವು ಈ ಕಾರ್ಡ್​​ ಬಳಸಿಕೊಂಡು ತಾಜ್ ಹೋಟೆಲ್​ನಲ್ಲಿ 7 ದಿನ ಫ್ರೀಯಾಗಿ ವಾಸ್ತವ್ಯ ಇರಬಹುದಾಗಿದೆ. ಸರಿಯಾದ ಗಿಫ್ಟ್​ ಬಾಕ್ಸ್​ ಓಪನ್ ಮಾಡಲು 3 ಚಾನ್ಸ್​​ಗಳನ್ನು ನೀಡಲಾಗುತ್ತದೆ. ಗುಡ್ ಲಕ್..!​ ಎಂಬ ಸಂದೇಶ ಎಲ್ಲೆಡೆ ವೈರಲ್ ಆಗಿದೆ.

ಮುಂದೆ ಓದಿ ...
  • Share this:

    ನವದೆಹಲಿ(ಫೆ.02): ಪ್ರೇಮಿಗಳ ದಿನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ವ್ಯಾಲಂಟೈನ್ಸ್​ ಡೇ ಆಚರಣೆ ಮಾಡಲು ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಫೆಬ್ರವರಿ 14 ಪ್ರೇಮಿಗಳ ಪಾಲಿಗೆ ತುಂಬಾ ವಿಶೇಷವಾದ ದಿನ. ವ್ಯಾಲಂಟೈನ್ಸ್​ ಡೇಗೆ ಇನ್ನು ಕೆಲವೇ ದಿನಗಳಿರುವಾಗ ಅನೇಕ ಸಂಸ್ಥೆಗಳು, ಹೋಟೇಲ್​ಗಳು ಪ್ರೇಮಿಗಳನ್ನು ಆಕರ್ಷಿಸಲು ಅನೇಕ ಆಫರ್​ಗಳನ್ನು ನೀಡುತ್ತಿವೆ. ಇದಕ್ಕೆ ಪೂರಕ ಎಂಬಂತೆ ವಾಟ್ಸಾಪ್​ನಲ್ಲಿ ಒಂದು ಮೆಸೇಜ್ ಸಾಕಷ್ಟು ವೈರಲ್ ಆಗುತ್ತಿದೆ. ಅದು ಮುಂಬೈ ತಾಜ್​ ಹೋಟೆಲ್​​ ಮ್ಯಾನೇಜ್ಮೆಂಟ್​ ಕಡೆಯಿಂದ ಬಂದಿರುವ ಆಫರ್ ಆಗಿದೆ. ವ್ಯಾಲಂಟೈನ್ಸ್​ ಡೇ ದಿನದ ಪ್ರಯುಕ್ತ ದಂಪತಿಗಳು ಅಥವಾ ಪ್ರೇಮಿಗಳು 7 ದಿನ ಅಂದರೆ ಒಂದು ವಾರ ತಾಜ್​​ ಹೋಟೆಲ್​​ನಲ್ಲಿ ಉಚಿತ ರೂಂ ಸಿಗುತ್ತದೆ. ಇದರಲ್ಲಿ ಭಾಗವಹಿಸಲು ಇಚ್ಛಿಸುವ ದಂಪತಿ ಕೂಪನ್ ಅಥವಾ ಗಿಫ್ಟ್​ ಕಾರ್ಡ್​ ಗೆಲ್ಲಬೇಕು ಎಂದೂ ಸಹ ಹೇಳಿದೆ.


    2-3 ದಿನಗಳಲ್ಲಿ ಸಾರಿಗೆ ನೌಕರರ ವೇತನ ನೀಡುತ್ತೇವೆ; ಡಿಸಿಎಂ ಲಕ್ಷ್ಮಣ ಸವದಿ ಭರವಸೆ


    ಸಂದೇಶದಲ್ಲಿ, ನಾನು ತಾಜ್​ ಹೋಟೆಲ್​​ನಿಂದ ಗಿಫ್ಟ್​ ಕಾರ್ಡ್​​​​ನ್ನು ಸ್ವೀಕರಿಸಿದೆ. 7 ದಿನ ತಾಜ್​ ಹೋಟೆಲ್​ನಲ್ಲಿ ಉಚಿತವಾಗಿ ಉಳಿದುಕೊಳ್ಳುವ ಅವಕಾಶ ಸಿಕ್ಕಿದೆ ಎಂದು ಇದೆ. ಇಲ್ಲಿ ಕೊಟ್ಟಿರುವ ಲಿಂಕ್​ ಮೇಲೆ ಕ್ಲಿಕ್ ಮಾಡಿ ಎಂದು ಹೇಳಲಾಗಿದೆ. ವ್ಯಾಲಂಟೈನ್ಸ್​ ಡೇ ಆಚರಿಸಲು ತಾಜ್ ಹೋಟೆಲ್ ನಿಮಗೆ 200 ಗಿಫ್ಟ್​ ಕಾರ್ಡ್​​ಗಳನ್ನು ಕಳುಹಿಸಿದೆ. ನೀವು ಈ ಕಾರ್ಡ್​​ ಬಳಸಿಕೊಂಡು ತಾಜ್ ಹೋಟೆಲ್​ನಲ್ಲಿ 7 ದಿನ ಫ್ರೀಯಾಗಿ ವಾಸ್ತವ್ಯ ಇರಬಹುದಾಗಿದೆ. ಸರಿಯಾದ ಗಿಫ್ಟ್​ ಬಾಕ್ಸ್​ ಓಪನ್ ಮಾಡಲು 3 ಚಾನ್ಸ್​​ಗಳನ್ನು ನೀಡಲಾಗುತ್ತದೆ. ಗುಡ್ ಲಕ್..!​ ಎಂಬ ಸಂದೇಶ ಎಲ್ಲೆಡೆ ವೈರಲ್ ಆಗಿದೆ.


    ಒಂದು ವೇಳೆ ಗಿಫ್ಟ್​ ಕಾರ್ಡ್​ ಗೆದ್ದರೆ, ಕಾರ್ಡ್​ ಪಡೆಯಲು ಮುಂದಿನ ಪುಟಕ್ಕೆ ಹೋಗಿ ಎಂದು ಹೇಳುತ್ತದೆ. ಬಳಿಕ ಈ ಸಂದೇಶವನ್ನು 5 ಗ್ರೂಪ್​ಗಳಿಗೆ ಅಥವಾ 20 ಜನರಿಗೆ ವಾಟ್ಸಾಪ್ ಮೂಲಕ ಫಾರ್ವರ್ಡ್​ ಮಾಡಿ ಎಂದು ಹೇಳುತ್ತದೆ.


    ಈ ಆಫರ್ ನಿಜವೇ?


    ಜನರು ಇದು ನಿಜ ಇರಬಹುದು ಎಂದು ತಾಜ್​ ಹೋಟೆಲ್​ನಲ್ಲಿ ಉಳಿದುಕೊಳ್ಳುವ ಆಸೆಯಿಂದ ಮೆಸೇಜ್ ಫಾರ್ವರ್ಡ್​ ಮಾಡಿದ್ದಾರೆ. ಆದರೆ ಇದು ಸುಳ್ಳು ಸಂದೇಶ ಎಂಬುದು ತಿಳಿದು ಬಂದಿದೆ. ತಾಜ್​ ಹೋಟೆಲ್​ನಿಂದ ಈ ರೀತಿ ಯಾವುದೇ ಸಂದೇಶ ಯಾರಿಗೂ ಹೋಗಿಲ್ಲ. ನಾವು ಯಾವ ಗಿಫ್ಟ್​ ಕಾರ್ಡ್​​ನ್ನು ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.

    Published by:Latha CG
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು