ಪ್ರಧಾನಿ ನರೇಂದ್ರ ಮೋದಿ(PM Narendra Modi) ಅಮೆರಿಕ ಪ್ರವಾಸಕ್ಕೆ ತೆರಳುವ ಮುನ್ನವೇ ಸಂಗೀತ ಲೋಕದ ದಂತಕಥೆ, ಗಾನಕೋಗಿಲೆ ಲತಾ ಮಂಗೇಶ್ಕರ್(Lata Mangeshkar) ಹುಟ್ಟುಹಬ್ಬಕ್ಕೆ ಮುಂಚಿತವಾಗಿಯೇ ಹುಟ್ಟುಹಬ್ಬದ ಶುಭಾಶಯ(Birthday wishes) ಕೋರಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಟ್ವಿಟ್ಟರ್ನಲ್ಲಿ ಅಮೆರಿಕಕ್ಕೆ(America) ತೆರಳುವ ಮುನ್ನ ಲತಾ ಮಂಗೇಶ್ಕರ್ಗೆ ಜನ್ಮದಿನ ಶುಭಾಶಯ ಕೋರಿದ ಮೋದಿಜೀ ಎಂಬ ಶೀರ್ಷಿಕೆಯಡಿ ಶೇರ್ ಆಗಿದೆ. ಈ 45-ಸೆಕೆಂಡ್ ಸಂಭಾಷಣೆಯಲ್ಲಿ, ಪಿಎಂ ಮೋದಿ ಲತಾ ಮಂಗೇಶ್ಕರ್ ಹುಟ್ಟುಹಬ್ಬಕ್ಕೆ ಶುಭ ಹಾರೈಸುವುದನ್ನು ನಾವು ಕೇಳಬಹುದು.ನಾನು ಅಮೆರಿಕಾದಿಂದ 28ರ ತಡರಾತ್ರಿ 29ರ ಬೆಳಗ್ಗೆ ಹಿಂದಿರುಗುತ್ತೇನೆ. ಅಷ್ಟರಲ್ಲಿ ನಿಮ್ಮ ಹುಟ್ಟುಹಬ್ಬ ಮುಗಿದಿರುತ್ತದೆ ಎಂಬ ಮೋದಿ ಸಂಭಾಷಣೆಯ ವಿಡಿಯೋ ವೈರಲ್ ಆಗಿದೆ.
ದ ವಾಯ್ಸ್ ಆಫ್ ಸಿಟಿಜನ್ಸ್ ಎಂಬ ಟ್ವಿಟ್ಟರ್ ಬಳಕೆದಾರರು, ಪ್ರಧಾನಿ ಮೋದಿ ಮುಂಬರುವ ಲತಾ ಮಂಗೇಶ್ಕರ್ ಹುಟ್ಟುಹಬ್ಬಕ್ಕೆ ಮುಂಚಿತವಾಗಿ ಕರೆ ಮಾಡಿ ತಾವು ಅಮೆರಿಕಕ್ಕೆ ಪ್ರಯಾಣಿಸುತ್ತಿರುವುದರಿಂದ ಶುಭಾಶಯ ತಿಳಿಸಲು ಸಾಧ್ಯವಾಗುವುದಿಲ್ಲ. ಭಾರತದ ಎರಡು ಐಕಾನ್ಗಳು ಪರಸ್ಪರ ಮಾತನಾಡುತ್ತಿದ್ದಾರೆ. #narendramodi #latamangeshkar ಎಂಬ ಹ್ಯಾಶ್ಟ್ಯಾಗ್ಗಳಡಿ ಹಂಚಿಕೊಂಡಿದ್ದಾರೆ.
ಇಂಡಿಯಾ ಟುಡೇ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ (AFWA) ಪ್ರಧಾನಿ ಮೋದಿ ಮತ್ತು ಲತಾ ಮಂಗೇಶ್ಕರ್ ನಡುವಿನ ಸಂಭಾಷಣೆಯು ಎರಡು ವರ್ಷ ಹಳೆಯದು ಎಂದು ಕಂಡುಕೊಂಡಿದೆ. 2019 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 74ನೇ ಅಧಿವೇಶನಕ್ಕಾಗಿ ಪ್ರಧಾನಿ ಮೋದಿ ಅಮೆರಿಕಕ್ಕೆ ಹೋಗುವ ಮೊದಲು ಮಾತನಾಡಿರುವ ವಿಡಿಯೋ ಎಂದು ಹೇಳಿದೆ.
ಇದನ್ನೂ ಓದಿ:PM Cares ಭಾರತ ಸರ್ಕಾರದ ನಿಧಿಯಲ್ಲ, RTI ಅಡಿಯಲ್ಲಿ ತರಲು ಸಾಧ್ಯವೇ ಇಲ್ಲ; ಕೇಂದ್ರ ಸರ್ಕಾರ
ಎಡಬ್ಲ್ಯೂಎಫ್ಎ ತನಿಖೆ
ಕೆಲವು ಕೀವರ್ಡ್ಗಳ ಸಹಾಯದಿಂದ ಈ ಆಡಿಯೋದ ಅಸಲಿತನವನ್ನು ಪತ್ತೆ ಹಚ್ಚಲಾಗಿದೆ. ಪ್ರಧಾನ ಮಂತ್ರಿ ಮತ್ತು ಲತಾ ಮಂಗೇಶ್ಕರ್ ನಡುವಿನ ವೈರಲ್ ಆಡಿಯೋ ಸಂಭಾಷಣೆಯ ದೀರ್ಘ ಆವೃತ್ತಿಯನ್ನು ನಾವು ಮೋದಿಯ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಕಂಡುಕೊಂಡೆವು. ಇದನ್ನು ಸೆಪ್ಟೆಂಬರ್ 29, 2019 ರಂದು ಅಪ್ಲೋಡ್ ಮಾಡಲಾಗಿದೆ. ಈ ಆಡಿಯೋ ಕ್ಲಿಪ್ನಲ್ಲಿ, ಪಿಎಂ ಮೋದಿಯವರು, ಲತಾ ಮಂಗೇಶ್ಕರ್ ಅವರ 90ನೇ ಹುಟ್ಟುಹಬ್ಬಕ್ಕೆ ಮುಂಚಿತವಾಗಿ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ಮೂಲಕ ಶುಭ ಹಾರೈಸುವುದನ್ನು ಕೇಳಬಹುದು ಎಂದು ತನಿಖೆ ವೇಳೆ ಹೇಳಿದೆ.
ದಿ ಹಿಂದೂ ಪತ್ರಿಕೆ ಹೇಳುವುದೇನು?
ಈ ಪತ್ರಿಕೆ ಪ್ರಕಾರ, 2019ರಲ್ಲಿ ಪಿಎಂ ಮೋದಿ ಯುಎಸ್ಗೆ ಭೇಟಿ ನೀಡಿ ಯುಎನ್ ಜನರಲ್ ಅಸೆಂಬ್ಲಿಯ 74ನೇ ಅಧಿವೇಶನದಲ್ಲಿ ಭಾಷಣ ಮಾಡಿದರು ಮತ್ತು ಹೂಸ್ಟನ್ನಲ್ಲಿ ನಡೆದ ಭಾರತೀಯ ಸಮುದಾಯ ಕಾರ್ಯಕ್ರಮ 'ಹೌಡಿ ಮೋದಿ'ಯಲ್ಲೂ ಹಾಜರಾಗಿದ್ದರು. ಇನ್ನು, ಸೆಪ್ಟೆಂಬರ್ 22, 2021ರಂದು, ಪಿಎಂ ಮೋದಿ ಮೂರು ದಿನಗಳ ಅಮೆರಿಕ ಪ್ರವಾಸಕ್ಕೆ ತೆರಳಿದರು ಮತ್ತು ಮೊದಲ ಅಧ್ಯಕ್ಷ ಕ್ವಾಡ್ ಶೃಂಗಸಭೆಯಲ್ಲಿ ಇತರ ವಿದೇಶಿ ನಾಯಕರನ್ನು ಭೇಟಿ ಮಾಡುವ ಮೊದಲು ಯುಎಸ್ ಅಧ್ಯಕ್ಷ ಜೋ ಬಿಡೆನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ರನ್ನು ಭೇಟಿ ಮಾಡಿದರು.
ಸೆಪ್ಟೆಂಬರ್ 28, 2019ರಲ್ಲಿ ಲತಾ ಮಂಗೇಶ್ಕರ್ ಅವರ 92ನೇ ಹುಟ್ಟುಹಬ್ಬಕ್ಕೆ ಪ್ರಧಾನಿ ಮೋದಿ ಲತಾ ಮಂಗೇಶ್ಕರ್ ಅವರಿಗೆ ಶುಭ ಹಾರೈಸಿದ ಬಗ್ಗೆ ನಮಗೆ ಯಾವುದೇ ಸುದ್ದಿ ದೊರೆತಿಲ್ಲ ಎಂದು ಹೇಳಿದೆ.
ಅಂದರೆ ಇದೀಗ ವೈರಲ್ ಆಗುತ್ತಿರುವ ಆಡಿಯೋ ಎರಡು ವರ್ಷದ ಹಳೆಯ ವಿಡಿಯೋ ಎಂಬುದು ಮಾತ್ರ ಸತ್ಯ. ಅಂದರೆ 2019ರಲ್ಲಿ ಮೋದಿ ಅಮೆರಿಕಕ್ಕೆ ತೆರಳುವ ಮುನ್ನ ಮೋದಿ ಲತಾ ಮಂಗೇಶ್ಕರ್ಗೆ ಶುಭ ಹಾರೈಸಿದ್ದರು. ಇದೀಗ 2021 ಸೆಪ್ಟೆಂಬರ್ 28 ಬರುವುದಕ್ಕೆ ಇನ್ನು ಮೂರು ದಿನಗಳು ಬಾಕಿ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ