Fact Check: ಸೀರೆ ಉಟ್ಟಿದ್ದಕ್ಕೆ ರೆಸ್ಟೊರೆಂಟ್ ಒಳಗೆ ಬಿಡ್ಲಿಲ್ಲ ಎಂದು ಮಹಿಳೆ ರಂಪಾಟ, CCTV ದೃಶ್ಯ ಬೇರೆಯೇ ಕತೆ ಹೇಳಿದೆ..ಆಗಿದ್ದೇನು?

Viral Video Reality Check: ಆ ಮಹಿಳೆ ನಮ್ಮ ರೆಸ್ಟೋರೆಂಟ್ ಗೆ ಬಂದಾಗ ಅವರ ಹೆಸರಿನಲ್ಲಿ ರಿಸರ್ವೇಶನ್ ಆಗಿರಲಿಲ್ಲ. ಹಾಗಾಗಿ ಕೊಂಚ ಸಮಯ ಕಾಯುವಂತೆ ನಾವು ಸೂಚಿಸಿದ್ದೆವು. ಆದರೆ ಮಹಿಳೆ ಏಕಾಏಕಿ ರೆಸ್ಟೋರೆಂಟ್ ಗೆ ನುಗ್ಗಿ ನಮ್ಮ ಮ್ಯಾನೇಜರ್ ಕಪಾಳಕ್ಕೆ ಬಾರಿಸಿದ್ದಾರೆ. ಗಲಾಟೆ ಮತ್ತೊಂದು ಹಂತಕ್ಕೆ ತಿರುಗಿತ್ತು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ದೆಹಲಿ: ಸಾಮಾನ್ಯವಾಗಿ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಆರ್ಡರ್ ತಡವಾಗುತ್ತೆ. ಊಟ ಬೇಗ ತಂದುಕೊಡುವಂತೆ ಗ್ರಾಹಕ ಸಿಬ್ಬಂದಿಯನ್ನು ಕೇಳುವುದು ಸರ್ವೇ ಸಾಮಾನ್ಯ. ಆದರೆ ದೆಹಲಿಯಲ್ಲಿ ಒಬ್ಬಳು ಮಹಿಳೆ ರೆಸ್ಟೋರೆಂಟ್ ವೊಂದಕ್ಕೆ ತೆರಳಿ, ಮ್ಯಾನೇಜರ್ ಕಪಾಳಕ್ಕೆ ಬಾರಿಸಿ ಕಲರ್ ಕಲರ್ ಕಾಗೆ ಹಾರಿಸಿ ಬಂದಿದ್ದಳು. ತಾನು ಸೀರೆ ಟ್ಟಿದ್ದೇನೆ ಎಂದು ಹೋಟೆಲ್ ನವರು ನನಗೆ ಒಳಗೆ ಪ್ರವೇಶ ನೀಡಲಿಲ್ಲ ಹೀಗಾಗಿ ಗಲಾಟೆ ಆಯ್ತು ಅಂತ ಸಮಜಾಯಿಶಿ ಉತ್ತರವನ್ನು ಸಹ ನೀಡಿದ್ದಳು. ಆದರೆ ಇದೀಗ ಹೋಟೆಲ್ ಮ್ಯಾನೇಜ್ಮೆಂಟ್ ಈ ಲೇಡಿಯ ಅಸಲಿ ಮುಖವನ್ನು ಬಯಲಿಗೆಳೆದಿದ್ದಾರೆ. ತಾನೇ ತಪ್ಪು ಮಾಡಿ, ಅದನ್ನ ಮುಚ್ಚಿಹಾಕಲು ಹೊಸದೊಂದು ಕಥೆ ಕಟ್ಟಿ ಸೋಶಿಯಲ್ ಮೀಡಿಯಾದಲ್ಲಿ, ಪ್ರತಿಷ್ಠಿತ ಹೋಟೆಲ್ ವಿರುದ್ಧ ಆರೋಪ ಮಾಡಿದ್ದಳು ಅಂತ ಹೇಳಲಾಗಿದೆ. 

    ಸೀರೆ ರಾಮಾಯಣ

    ಕಳೆದ ಎರಡು ಮೂರು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ಹರಿದಾಡ್ತಾ ಇತ್ತು. ದೆಹಲಿಯ ಹೆಸರಾಂತ ಅಕ್ವಿಲಾ (Aquila) ರೆಸ್ಟೋರೆಂಟ್ ನಲ್ಲಿ ಸೀರೆ ಹಾಕಿಕೊಂಡ ಬಂದ ಮಹಿಳೆಗೆ ಎಂಟ್ರಿ ನೀಡದ ವಿಡಿಯೋ ಸಖತ್ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಹೋಟೆಲ್ ನ ಮ್ಯಾನೇಜರ್ ಒಬ್ಬರು ಸೀರೆ ಧರಿಸಿ ಬಂದವರಿಗೆ ಇಲ್ಲಿ ಪ್ರವೇಶವಿಲ್ಲ ಎಂಬ ಮಾತನ್ನು ಹೇಳಿದ್ದರು. ಅನಿತಾ ಚೌಧರಿ (Anita Choudaary) ಎಂಬ ಮಹಿಳೆ ವಿಡಿಯೋವನ್ನ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು. ನಾನು ಇಂದು ಅಕ್ವಿಲಾ (Aquila) ರೆಸ್ಟೋರೆಂಟ್ ಗೆ ತೆರಳಿದ್ದೆ ಈ ವೇಳೆ ಹೋಟೆಲ್ ಸಿಬ್ಬಂದಿ ನಾನು ಸೀರೆ ಉಟ್ಟಿದ್ದೇನೆ ಎಂಬ ಒಂದೇ ಕಾರಣಕ್ಕೆ ನನಗೆ ಒಳಗೆ ಪ್ರವೇಶ ನೀಡಲಿಲ್ಲ. ನಮ್ಮ ಸಂಸ್ಕೃತಿಯನ್ನೇ ಮರೆಯುತ್ತಿರುವ ಈ ರೆಸ್ಟೋರೆಂಟ್ ಗೆ ಏನಾಗಿದೆ ಎಂದು ಪೋಸ್ಟ್ ವೂಂದನ್ನು ಹಂಚಿಕೊಂಡಿದ್ದರು.





    ಈ ಪೋಸ್ಟ್ ಹಾಗು ವಿಡಿಯೋ ವೈರಲ್ ಬಳಿಕ ಅಕ್ವಿಲಾ (Aquila) ರೆಸ್ಟೋರೆಂಟ್ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ರೀತಿ ಸೀರೆ ಉಟ್ಟುಕೊಂಡು ಬಂದಿದ್ದ ಮಹಿಳೆ ಮೇಲೆ ದಬ್ಬಾಳಿಕೆ ಮಾಡಿದ್ದೀರಾ, ಚಿಕ್ಕ ಚಿಕ್ಕ ಚಡ್ಡಿ ಹಾಕಿಕೊಂಡು ಬಂದವರಿಗೆ ಒಳಗೆ ಎಂಟ್ರಿ ಇದೆ, ಲಕ್ಷಣವಾಗಿ ಸೀರೆ ಹುಟ್ಟಿಕೊಂಡು ಬಂದ ಮಹಿಳೆಗೆ ಎಂಟ್ರಿ ಯಾಕಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದರು. ಕೆಲವರು ಹೋಲ್ಡಿಂಗ್ಸ್ ಬೋರ್ಡ್ ಕೈಯಲ್ಲಿ ಹಿಡಿದು ಹೋಟೆಲ್ ವಿರುದ್ಧ ಪ್ರತಿಭಟನೆ ಕೂಡ ನಡೆಸಿದರು. ಇಷ್ಟೆಲ್ಲಾ ಆಗುತ್ತಿದ್ದರೂ ಅಕ್ವಿಲಾ ರೆಸ್ಟೋರೆಂಟ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಿತ್ತು.

    ಇದನ್ನೂ ಓದಿ: Viral video: ಸೀರೆ ಉಟ್ಟವರಿಗೆ ರೆಸ್ಟೋರೆಂಟ್​ಗೆ​ ಪ್ರವೇಶ ಇಲ್ಲ ಎಂದ ಮಹಿಳೆಯನ್ನು ಹೊರಗೆ ಕಳುಹಿಸಿದ ಸಿಬ್ಬಂದಿ

    ರೊಚ್ಚಿಗೆದ್ದ ಜನ, ಪ್ರತಿಭಟನೆ

    ಘಟನೆ ಬಳಿಕ ಇದೀಗ ಪ್ರತಿಕ್ರಿಯೆ ನೀಡಿರುವ ಅಕ್ವಿಲಾ ರೆಸ್ಟೋರೆಂಟ್ ವಿಡಿಯೋವೊಂದನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಈ ವಿಡಿಯೋದಲ್ಲಿ ಅನಿತಾ ಚೌಧರಿ ರೆಸ್ಟೋರೆಂಟ್ ನ ಒಳಗೆ ಮ್ಯಾನೇಜರ್ ಕಪಾಳಕ್ಕೆ ಬಾರಿಸುವ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ಅಕ್ವಿಲಾ ರೆಸ್ಟೋರೆಂಟ್, ನಾವು ಎಂದಿಗೂ ಭಾರತೀಯ ಸಂಸ್ಕೃತಿಯನ್ನು ತಿರಸ್ಕರಿಸುವುದಿಲ್ಲ. ನಾವು ಕೂಡ ಭಾರತೀಯರೇ, ಸೆಪ್ಟೆಂಬರ್ 19ರಂದು ಈ ಘಟನೆ ನಡೆದಿದ್ದು, ನಾವು ಈಗ ಪ್ರತಿಕ್ರಿಯೆ ನೀಡುತ್ತಿದ್ದೇವೆ.

    ಅಂದು ಆಗಿದ್ದೇನು?

    ಆ ಮಹಿಳೆ ನಮ್ಮ ರೆಸ್ಟೋರೆಂಟ್ ಗೆ ಬಂದಾಗ ಅವರ ಹೆಸರಿನಲ್ಲಿ ರಿಸರ್ವೇಶನ್ ಆಗಿರಲಿಲ್ಲ. ಹಾಗಾಗಿ ಕೊಂಚ ಸಮಯ ಕಾಯುವಂತೆ ನಾವು ಸೂಚಿಸಿದ್ದೆವು. ಆದರೆ ಮಹಿಳೆ ಏಕಾಏಕಿ ರೆಸ್ಟೋರೆಂಟ್ ಗೆ ನುಗ್ಗಿ ನಮ್ಮ ಮ್ಯಾನೇಜರ್ ಕಪಾಳಕ್ಕೆ ಬಾರಿಸಿದ್ದಾರೆ. ಗಲಾಟೆ ಮತ್ತೊಂದು ಹಂತಕ್ಕೆ ತಿರುಗಿತ್ತು. ಆಗ ನಮ್ಮಗೇಟ್ ಮ್ಯಾನೇಜರ್ ಸೀರೆ ಬಗ್ಗೆ ಮಾತನಾಡಿದ್ದಾರೆ. ಅದಕ್ಕೆ ನಾವು ಕ್ಷಮೆ ಕೇಳುತ್ತೇವೆ. ನಾವು ಇದನ್ನು ದೊಡ್ಡ ವಿಷಯನ್ನಾಗಿ ಮಾಡಬಹುದಿತ್ತು. ಆದರೆ ನಾವು ಶಾಂತಿಯಿಂದ ಇರಲು ನಿರ್ಧರಿಸಿದ್ದೇವೆ ಎಂದು ಸಿಸಿಟಿವಿ ವಿಡಿಯೋ ಸಮೇತ ಪೋಸ್ಟ್ ಮಾಡಿದೆ.

    ಹೋಟೆಲ್ ಪ್ರತಿಕ್ರಿಯೆನ್ನ ಕಂಡ ನೆಟ್ಟಿಗರು ಲೇಡಿ ವಿರುದ್ಧವೇ ತಿರುಗಿಬಿದ್ದಿದ್ದಾರೆ. ನೀವೇ ತಪ್ಪು ಮಾಡಿ ಹೀಗೆ ಕಥೆ ಕಟ್ಟಿರುವುದು ಸರಿಯಲ್ಲ ಅಂತ ಕ್ಲಾಸ್ ತೆಗೆದುಕೊಂಡಿದ್ದಾರೆ. ಮತ್ತೊಂದು ವರ್ಗ ಅದೇನೇ ಇರಲಿ ಸೀರೆಯ ಬಗ್ಗೆ ನೀವು ಕಮೆಂಟ್ ಮಾಡಿದ್ದು ತಪ್ಪು ಎಂದು ರೆಸ್ಟೋರೆಂಟ್ ವಿರುದ್ಧವೇ ಕಿಡಿಕಾರಿದ್ದಾರೆ.

    (ವಾಸುದೇವ್ ಎಂ)
    Published by:Soumya KN
    First published: