• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Fact Check: ‘ಮದ್ಯ ಖರೀದಿಸುವವರಿಗೆ ಪಡಿತರ ನಿಲ್ಲಿಸಬೇಕು‘; ರತನ್ ಟಾಟಾ ಹೆಸರಲ್ಲಿ ಹರಿದಾಡಿದ ಈ ಸುದ್ದಿ ಎಷ್ಟು ಸತ್ಯ?

Fact Check: ‘ಮದ್ಯ ಖರೀದಿಸುವವರಿಗೆ ಪಡಿತರ ನಿಲ್ಲಿಸಬೇಕು‘; ರತನ್ ಟಾಟಾ ಹೆಸರಲ್ಲಿ ಹರಿದಾಡಿದ ಈ ಸುದ್ದಿ ಎಷ್ಟು ಸತ್ಯ?

ರತನ್ ಟಾಟಾ.

ರತನ್ ಟಾಟಾ.

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಈ ಪೋಸ್ಟ್​ನ್ನು 83 ವರ್ಷದ ಟಾಟಾ ಸನ್ಸ್​​ನ ಗೌರವಾಧ್ಯಕ್ಷರಾದ ರತನ್ ಟಾಟಾ ಅವರೇ ತಮ್ಮ ಇನ್​ಸ್ಟಾಗ್ರಾಂ ಹ್ಯಾಂಡಲ್​​ನಲ್ಲಿ ಹಂಚಿಕೊಂಡಿದ್ದಾರೆ. ಸರಳವಾಗಿ ಶೀರ್ಷಿಕೆ ನೀಡಿದ್ದು, ‘‘ಇದನ್ನು ನಾನು ಹೇಳಿಲ್ಲ. ಧನ್ಯವಾದ‘‘ ಎಂದಿದ್ದಾರೆ.

  • Share this:

ಇಂಟರ್​ನೆಟ್​​ನಲ್ಲಿ(Internet) ಎಲ್ಲದರ ಬಗ್ಗೆಯೂ ಮಾಹಿತಿ ಲಭ್ಯವಾಗುತ್ತದೆ. ಆದರೆ ಕೆಲವು ವೇಳೆ ಅಲ್ಲಿ ಸಿಗುವುದೆಲ್ಲಾ ಸತ್ಯ ಎಂದು ನಂಬುವುದಕ್ಕೆ ಆಗುವುದಿಲ್ಲ. ಕೆಲವು ವದಂತಿಗಳು-ಊಹಾಪೋಹಗಳು ಇಂಟರ್​ನೆಟ್​​ನಲ್ಲಿ ಹರಿದಾಡುತ್ತಿರುತ್ತವೆ. ಹೀಗಾಗಿ ನೀವು ನೋಡುವ ಅಥವಾ ಓದುವ ಎಲ್ಲವನ್ನೂ ನಂಬಬೇಡಿ. ಬದಲಾಗಿ ವಿಶ್ವಾಸಾರ್ಹ ಮೂಲಗಳೊಂದಿಗೆ ಸತ್ಯವನ್ನು ಪರೀಕ್ಷಿಸಲು ಪ್ರಯತ್ನಿಸಿ. ಆಗ ನಿಜ ಏನು ಎಂಬುದು ತಿಳಿಯುತ್ತದೆ. ಹೀಗೆ ಖ್ಯಾತ ಉದ್ಯಮಿ ರತನ್ ಟಾಟಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಊಹಾಪೋಹಗಳು ಹರಿದಾಡಿದ್ದವು. ಆ ಸುಳ್ಳು ಸುದ್ದಿಯನ್ನು ರತನ್ ಟಾಟಾ(Ratan Tata) ಅವರೇ ತಮ್ಮ ಇನ್​​ಸ್ಟಾಗ್ರಾಂ(Instagram) ಹ್ಯಾಂಡಲ್​ನಲ್ಲಿ ಹಂಚಿಕೊಂಡು, ಸ್ಪಷ್ಟನೆ ನೀಡಿದ್ದಾರೆ.‘‘ ದೇಶದಲ್ಲಿ ಮದ್ಯ ಮಾರಾಟಕ್ಕೆ(Liquor Sale) ಆಧಾರ್​ ಕಾರ್ಡ್(Aadhar Card)​​ ಬಳಕೆ ಮಾಡಬೇಕು ಮತ್ತು ಮದ್ಯ ಕೊಳ್ಳುವವರಿಗೆ ಸರ್ಕಾರದ ಆಹಾರ, ಸಬ್ಸಿಡಿ ರದ್ದುಪಡಿಸಬೇಕು ಎಂಬ ಹೇಳಿಕೆಯನ್ನು ನಾನು ಯಾವತ್ತೂ ನೀಡಿಲ್ಲ, ಇದು ನಿಜಕ್ಕೂ ನಕಲಿ ಸುದ್ದಿಯಾಗಿದೆ‘‘ ಎಂದು ರತನ್ ಟಾಟಾ ಹೇಳಿದ್ದಾರೆ.


ಆ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಎಲ್ಲಾ ವದಂತಿಗಳಿಗೆ ತೆರೆ ಎಳೆಯುವ ಕೆಲಸ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದ ಪೋಸ್ಟ್​ ಹೀಗಿದೆ ‘‘ಮದ್ಯವನ್ನು ಆಧಾರ್​ ಕಾರ್ಡ್​​ ಮೂಲಕ ಮಾರಾಟ ಮಾಡಬೇಕು. ಮದಯ ಖರೀದಿಸುವವರಿಗೆ ಸರ್ಕಾರ ಆಹಾರ ಮತ್ತು ಸಬ್ಸಿಡಿಗಳನ್ನು ನಿಲ್ಲಿಸಬೇಕು. ಯಾರಿಗೆ ಮದ್ಯವನ್ನು ಕೊಳ್ಳಲು ಸಾಮರ್ಥ್ಯ ಇದೆಯೋ ಅವರು ಖಂಡಿತವಾಗಿಯೂ ಆಹಾರವನ್ನು ಖರೀದಿಸುತ್ತಾರೆ. ನಾವು ಅವರಿಗೆ ಉಚಿತವಾಗಿ ಆಹಾರ ನೀಡಿದಾಗ, ಹಣ ಕೊಟ್ಟು ಮದ್ಯವನ್ನು ಖರೀದಿಸುತ್ತಾರೆ‘‘ ಎಂದಿದೆ. ಈ ಹೇಳಿಕೆಯನ್ನು ರತನ್ ಟಾಟಾ ಹೇಳಿದ್ದಾರೆ ಎಂದು ಬಿಂಬಿಸಲಾಗಿದೆ.
ಇದನ್ನೂ ಓದಿ:Schools Reopen: ಶೀಘ್ರದಲ್ಲೇ 1-5ನೇ ತರಗತಿ ಆರಂಭವಾಗುತ್ತಾ? ಈ ಬಗ್ಗೆ ಸಿಎಂ ಬೊಮ್ಮಾಯಿ ಹೇಳಿದ್ದೇನು?


ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಈ ಪೋಸ್ಟ್​ನ್ನು 83 ವರ್ಷದ ಟಾಟಾ ಸನ್ಸ್​​ನ ಗೌರವಾಧ್ಯಕ್ಷರಾದ ರತನ್ ಟಾಟಾ ಅವರೇ ತಮ್ಮ ಇನ್​ಸ್ಟಾಗ್ರಾಂ ಹ್ಯಾಂಡಲ್​​ನಲ್ಲಿ ಹಂಚಿಕೊಂಡಿದ್ದಾರೆ. ಸರಳವಾಗಿ ಶೀರ್ಷಿಕೆ ನೀಡಿದ್ದು, ‘‘ಇದನ್ನು ನಾನು ಹೇಳಿಲ್ಲ. ಧನ್ಯವಾದ‘‘ ಎಂದಿದ್ದಾರೆ.


ರತನ್ ಟಾಟಾ ಅವರು ಹೇಳಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಈ ರೀತಿಯ ಸುಳ್ಳು ಸುದ್ದಿಗಳು ಹರಿದಾಡಿರುವುದು ಇದೇ ಮೊದಲೇನಲ್ಲ.  ಕಳೆದ ವರ್ಷ ಕೊರೋನಾ ಲಾಕ್​ಡೌನ್​ ಸಮಯದಲ್ಲಿ ಆರ್ಥಿಕತೆಯು ಕುಸಿತ ಕಂಡಿದೆ ಎಂಬ ಪೋಸ್ಟ್ ಹಾಕಿ, ಇದನ್ನು​ ರತನ್ ಟಾಟಾ ಅವರು ಹೇಳಿದ್ದಾರೆ ಎಂದು ಬಿಂಬಿಸಲಾಗಿತ್ತು. ಈ ವದಂತಿಗೆ ತೆರೆ ಎಳೆದಿದ್ದ ರತನ್ ಟಾಟಾ, ‘‘ನಾನು ಏನಾದರೂ ಹೇಳುವುದಿದ್ದರೆ, ಅದನ್ನು ನನ್ನ ಅಧಿಕೃತ ಚಾನೆಲ್​ಗಳಲ್ಲಿ ಹೇಳುತ್ತೇನೆ‘‘ ಎಂದಿದ್ದರು.


ಇದನ್ನೂ ಓದಿ:Crime News: 60 ರೂಪಾಯಿ ವಿಷಯಕ್ಕೆ ಗೆಳೆಯನನ್ನು ಕೊಂದ 13 ವರ್ಷದ ಬಾಲಕ


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.

First published: