Lockdown: ಸೆ.25ರಿಂದ ದೇಶದಲ್ಲಿ ಮತ್ತೊಂದು ಸುತ್ತಿನ ಲಾಕ್​ಡೌನ್​​? ಇಲ್ಲಿದೆ ಸತ್ಯಾಸತ್ಯತೆ

Fact Check: ಕೇಂದ್ರ ವಿಪತ್ತು ಮತ್ತು ನಿರ್ವಹಣಾ ಪ್ರಾಧಿಕಾರ ಸೆ. 25ರಿಂದ ದೇಶದಲ್ಲಿ ಲಾಕ್​ಡೌನ್​ ಜಾರಿ ಮಾಡಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆದರೆ, ಇದು ಸುಳ್ಳು ಎಂದು ಪಿಐಬಿ ಫ್ಯಾಕ್ಟ್​ಚೆಕ್​ನಲ್ಲಿ ತಿಳಿಸಿದೆ.

news18-kannada
Updated:September 16, 2020, 9:32 PM IST
Lockdown: ಸೆ.25ರಿಂದ ದೇಶದಲ್ಲಿ ಮತ್ತೊಂದು ಸುತ್ತಿನ ಲಾಕ್​ಡೌನ್​​? ಇಲ್ಲಿದೆ ಸತ್ಯಾಸತ್ಯತೆ
ಸಾಂಧರ್ಭಿಕ ಚಿತ್ರ
  • Share this:
ದೇಶದಲ್ಲಿ ಕೊರೋನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸೋಂಕಿಗೆ ತುತ್ತಾದವರ ಸಂಖ್ಯೆ  ಅರ್ಧಕೋಟಿ ಗಡಿ ತಲುಪಿದೆ. ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆ ಮತ್ತೊಮ್ಮೆ ದೇಶದಲ್ಲಿ ಲಾಕ್​ಡೌನ್​ ಘೋಷಣೆಯಾಗಲಿದೆ ಎಂಬ ಸುದ್ದಿಗಳು ದಟ್ಟವಾಗಿದ್ದವು. ಸೋಂಕಿನ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ  ಸೆ.25ರಿಂದ ಮತ್ತೊಂದು ಸುತ್ತಿನ ಲಾಕ್​ಡೌನ್ ಜಾರಿಗೆ ತರಲು ಮುಂದಾಗಿದೆ  ಎನ್ನಲಾಗಿತ್ತು. ಅಲ್ಲದೇ ಇದರಿಂದ  ಜನ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ ಎಂಬ ಆತಂಕ ಕೂಡ ಜನರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಈ ವರದಿ ತಿರಸ್ಕರಿಸಿರುವ ಕೇಂದ್ರ ಸರ್ಕಾರ, ದೇಶದಲ್ಲಿ ಮತ್ತೆ ಲಾಕ್​ ಡೌನ್​ ಮಾಡುವ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟೀಕರಣ ನೀಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಪಿಐಬಿ ಫ್ಯಾಕ್ಟ್​ ಚೆಕ್​, ಸೆ. 25ರಿಂದ ಮತ್ತೆ ಲಾಕ್​ಡೌನ್​ ಮಾಡುವ  ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ. ಇದೊಂದು ಸುಳ್ಳು ವರದಿ ಎಂದಿದೆ. 

ಕೇಂದ್ರ ವಿಪತ್ತು ಮತ್ತು ನಿರ್ವಹಣಾ ಪ್ರಾಧಿಕಾರ ಸೆ. 25ರಿಂದ ದೇಶದಲ್ಲಿ ಲಾಕ್​ಡೌನ್​ ಜಾರಿ ಮಾಡಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆದರೆ, ಇದು ಸುಳ್ಳು ಎಂದು ಪಿಐಬಿ ತಿಳಿಸಿದೆ.

ಕೋವಿಡ್​-19 ಹರಡುವಿಕೆಯನ್ನು ನಿಯಂತ್ರಿಸಲು ಮತ್ತು ದೇಶದಲ್ಲಿ ಆಗುತ್ತಿರುವ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ  ನಿರ್ಧರಿಸಿದೆ. ಇದಕ್ಕಾಗಿ ಯೋಜನಾ ಆಯೋಗದೊಂದಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಕೇಂದ್ರ ಸರ್ಕಾರದ ಮುಂದೆ ಈ ಕುರಿತು ವರದಿ ಸಲ್ಲಿಸಿದೆ. ಸೆ. 25ರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಲಾಕ್​ಡೌನ್​ ಜಾರಿಗೆ ತರಲು ಗೃಹ ಇಲಾಖೆ ಮತ್ತು ಪ್ರಧಾನ ಮಂತ್ರಿ ಕಚೇರಿಗೆ ಒತ್ತಾಯಿಸಿದೆ. ಇದರಿಂದ ಮುಂಜಾಗೃತಾ ಕ್ರಮವಾಗಿ ದೇಶಾದ್ಯಂತ ಅಗತ್ಯ ವಸ್ತುಗಳ ಪೂರೈಕೆಗೆ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಚಿವಾಲಯಕ್ಕೆ ಸೂಚನೆ ನೀಡಿದೆ ಎಂಬ  ಸುತ್ತೊಲೆ ಎಲ್ಲೆಡೆ ಹರಿದಾಡಿದ್ದವು.

ಈ ಸುತ್ತೋಲೆಯ ಸ್ಕ್ರೀನ್​ ಶಾಟ್​ ಪ್ರದರ್ಶಿಸಿ ಮಾತನಾಡಿದ ಅಧಿಕಾರಿಗಳು, ಈ ಆದೇಶ ಸುಳ್ಳು ಎಂದಿದ್ದಾರೆ. ಈ ರೀತಿಯ ಯಾವುದೇ ಸುತ್ತೋಲೆ ಯಾವುದೇ ಇಲಾಖೆ, ಪ್ರಾಧಿಕಾರದಿಂದ ರವಾನೆಯಾಗಿಲ್ಲ. ಮತ್ತೊಮ್ಮೆ ಲಾಕ್​​ಡೌನ್​ ಮಾಡುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಟ್ವೀಟ್​ ಮೂಲಕ ತಿಳಿಸಿದ್ದಾರೆ

ಕೊರೋನಾ ವೈರಸ್​ ಸೋಂಕ್​ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಳೆದ ಮಾರ್ಚ್​ನಲ್ಲಿ ದೇಶಾದಾದ್ಯಂತ ಲಾಕ್​ಡೌನ್​ ನೀತಿ ಜಾರಿಗೆ ತಂದಿತ್ತು. ಒಂದು ತಿಂಗಳ ಸಮಯ ಇಡೀ ದೇಶದ ಸಂಚಾರ ವ್ಯವಸ್ಥೆ , ವ್ಯವಹಾರ ಸೇರಿದಂತೆ ಬಹುತೇಕ ಎಲ್ಲವೂ ಸ್ಥಗಿತಗೊಂಡಿದ್ದವು. ಬಳಿಕ ಹಂತ ಹಂತವಾಗಿ ಈ ವ್ಯವಸ್ಥೆಯನ್ನು ಸಡಿಲಿಕೆ ಮಾಡಲಾಯಿತು.

ಲಾಕ್​ಡೌನ್​ ಸಡಿಲಿಕೆ ಬಳಿಕ ಕೊರೋನಾ ಸೋಂಕು ಹರಡುತ್ತಿರುವ ಸಂಖ್ಯೆ ಕೂಡ ಏರುಗತಿ ಕಾಣುತ್ತಿದೆ. ರಾಜಕೀಯ ನಾಯಕರು ಸೇರಿದಂತೆ ಅನೇಕ ಜನಸಾಮಾನ್ಯರು ಈ ಸೋಂಕಿಗೆ ತುತ್ತಾಗಿರುವ ಕುರಿತು ವರದಿ ಕೂಡ ಆಗುತ್ತಿದೆ.

ಇದನ್ನು ಓದಿ:  ಕೊರೋನಾ ಪ್ರಕರಣಗಳ ಪೈಕಿ 50 ಕೋಟಿ ದಾಟಿದ ಜಗತ್ತಿನ 2ನೇ ರಾಷ್ಟ್ರ ಭಾರತಕೋವಿಡ್-19​ ಸೋಂಕಿಗೆ ಪ್ರಪಂಚದಲ್ಲಿ ಅತಿ ಹೆಚ್ಚು ಜನರು ತುತ್ತಾಗುತ್ತಿರುವ ಎರಡನೇ ರಾಷ್ಟ್ರ ಭಾರತವಾಗಿದೆ. ಅಲ್ಲದೇ ದಿನ ಒಂದಕ್ಕೆ ದೇಶದಲ್ಲಿ 90,000 ಪ್ರಕರಣ ದಾಖಲಾಗುತ್ತಿದೆ. ಈ ಹಿನ್ನೆಲೆ ಯಲ್ಲಿ ಈ ರೀತಿಯ ಊಹಾಪೋಹಾಗಳಿಗೆ ಕಾರಣವಾಗಿತ್ತು.

ಇನ್ನು ದೇಶದಲ್ಲಿ ಅನ್​ಲಾಕ್​ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಆರ್ಥಿಕತೆ, ಜನ ಜೀವನ ಗಮನದಲ್ಲಿರಿಸಿ ಈ ಲಾಕ್​ಡೌನ್​ ತೆರವುಗೊಳಿಸಲಾಗಿದೆ. ಜನರು ಸ್ವತಃ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಲಸಿಕೆ ಬರುವವರೆಗೂ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಮಾಸ್ಕ್​ ಧರಿಸುವುದು ಸೇರಿದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದಿದ್ದರು
Published by: Seema R
First published: September 16, 2020, 6:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading