Allahu Akbar slogan: ಕಿಸಾನ್ ರ‍್ಯಾಲಿಯಲ್ಲಿ ರಾಕೇಶ್ ಟಿಕಾಯತ್​​ರಿಂದ ಅಲ್ಲಾಹು ಅಕ್ಬರ್ ಘೋಷಣೆ; ಘಟನೆಯ ಅಸಲಿಯತ್ತೇನು?

ಮುಜಫರ್ ನಗರದಲ್ಲಿ ನಡೆದ ಕಿಸಾನ್ ಮಹಾ ಪಂಚಾಯತ್‍ನಲ್ಲಿ ರೈತ ನಾಯಕ ರಾಕೇಶ್ ಟಿಕಾಯತ್ ಅವರು “ಅಲ್ಲಾಹು ಅಕ್ಬರ್ “ ಘೋಷಣೆ ಕೂಗುತ್ತಿರುವ ವಿಡಿಯೋವೊಂದನ್ನು ಟ್ವಿಟ್ಟರ್ ಬಳಕೆದಾರರು ಶೇರ್ ಮಾಡಿದ್ದು, ಅವರನ್ನು ಮುಸ್ಲಿಂ ಬೆಂಬಲಿಗ ಎಂದು ಆರೋಪಿಸಿದ್ದಾರೆ. ಆದರೆ ಆ ವೈರಲ್ ವಿಡಿಯೋ ಎಡಿಟ್ ಮಾಡಿರುವಂತದ್ದು ಎಂಬುದನ್ನು ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ ಪತ್ತೆ ಹಚ್ಚಿದೆ.

ರಾಕೇಶ್ ಟಿಕಾಯತ್.

ರಾಕೇಶ್ ಟಿಕಾಯತ್.

  • Share this:
    ರೈತ ಮುಖಂಡ ರಾಕೇಶ್ ಟಿಕಾಯತ್ (Rakesh Tikait) ಮತ್ತೆ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಅವರು ಭಾನುವಾರ ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ ನಡೆದ ಕಿಸಾನ್ ಮಹಾ ಪಂಚಾಯತ್‍ನಲ್ಲಿ “ಅಲ್ಲಾಹು ಅಕ್ಬರ್” ಘೋಷಣೆಗಳನ್ನು ಕೂಗಿದ್ದಕ್ಕಾಗಿ, ಮುಸ್ಲಿಮರನ್ನು ಓಲೈಸುತ್ತಿದ್ದಾರೆ ಎಂದು ನೆಟ್ಟಿಗರು ಆರೋಪ ಮಾಡಿದ್ದಾರೆ. ಟ್ವಿಟ್ಟರ್ ಬಳಕೆದಾರರಾದ ಪ್ರೀತಿ ಗಾಂಧಿ ಮತ್ತು ಶೆಫಾಲಿ ವೈದ್ಯ ಎಂಬವರು ಸಣ್ಣ ವಿಡಿಯೋ ದೃಶ್ಯದ ತುಣುಕೊಂದನ್ನು ಟ್ವೀಟ್ ಮಾಡಿದ್ದು, ಅದರಲ್ಲಿ ಟಿಕಾಯತ್ ಅವರು “ ಈ ಸರಕಾರ ದಂಗೆಗಳನ್ನು ಮಾಡಿಸಲು ಪ್ರಯತ್ನಿಸುತ್ತದೆ. ಮೊದಲು ಕೂಡ, ಮೊದಲು ಕೂಡ ಟಿಕಾಯತ್ ಸಾಹೆಬ್ ಇದ್ದಾಗ ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್ ಘೋಷಣೆ ಕೂಗಲಾಗಿತ್ತು” ಎಂದು ಹೇಳುವ ದೃಶ್ಯವಿದೆ. ಆ ವಿಡಿಯೋದಲ್ಲಿ “ಪಂಜಾಬ್ ತಕ್” ಲೋಗೋವನ್ನು ಕೂಡ ಕಾಣಬಹುದು.

    “ಸುಂದರ. ಟಿಕಾಯತ್ ಮತ್ತು ತಾಲಿಬಾನ್‍ನವರು ಒಂದೇ ರೀತಿಯ ಭಾಷೆಯನ್ನು ಮಾತನಾಡುತ್ತಾರೆ” ಎಂದು ಶೇಫಾಲಿ ವೈದ್ಯ ಟ್ವೀಟ್‍ನಲ್ಲಿ ಬರೆದುಕೊಂಡಿದ್ದರೆ, ಪ್ರೀತಿ ಗಾಂಧಿ, “ಆದರೆ ಗಂಭೀರವಾಗಿ, ಅಲ್ಲಾಹು ಅಕ್ಬರ್‍ಗೂ #ರೈತರ ಕಾನೂನಿಗೂ ಏನು ಸಂಬಂಧ ? ? ?” ಎಂದು ತಮ್ಮ ಟ್ವೀಟ್‍ಗೆ ಅಡಿಬರಹ ನೀಡಿದ್ದಾರೆ.
    ಆದರೆ ಅದು ತಿರುಚಲಾದ ವಿಡಿಯೋ ದೃಶ್ಯ ಎಂಬುದನ್ನು ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ ಪತ್ತೆ ಹಚ್ಚಿದೆ. ಟಿಕಾಯತ್ ಅವರು ರೈತರ ರ್ಯಾಲಿಯಲ್ಲಿ “ಅಲ್ಲಾಹು ಅಕ್ಬರ್ “ ಘೋಷಣೆಯನ್ನು ಕೂಗಿದ್ದು ನಿಜ, ಆದರೆ ಅದೇ ಸಮಯದಲ್ಲಿ ಅವರು ರ್ಯಾಲಿಯಲ್ಲಿ ಭಾಗವಹಿಸಿದ್ದವರಿಗೆ ಒಗ್ಗಟ್ಟನ್ನು ತೋರಿಸಲು “ಅಲ್ಲಾಹು ಅಕ್ಬರ್ “ ಮತ್ತು “ಹರ್ ಹರ್ ಮಹಾದೇವ್” ಅನ್ನು ಒಟ್ಟಿಗೆ ಕೂಗಬೇಕೆಂದು ಹೇಳಿದ್ದರು.

    ವೈರಲ್ ವಿಡಿಯೋದ ಅಸಲಿಯತ್ತು
    ಸೆಪ್ಟೆಂಬರ್ 5 ರಂದು ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಆಯೋಜಿಸಿದ್ದ ಕಿಸಾನ್ ಮಹಾ ಪಂಚಾಯತ್‍ಗೆ ಟಿಕಾಯತ್ ಮತ್ತು ಇತರ ರೈತ ನಾಯಕರು ಜೊತೆಯಾಗಿದ್ದರು. ವಿಡಿಯೋದಲ್ಲಿ “ಪಂಜಾಬ್ ತಕ್ “ ಲೋಗೋ ಕಾಣಿಸುತ್ತಿದ್ದರಿಂದ, ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ ಅದರ ಮೂಲ ಆವೃತ್ತಿಯನ್ನು ಫೇಸ್‍ಬುಕ್ ಪುಟದಿಂದ ತೆಗೆದು ಪರಿಶೀಲಿಸಿದೆ. ಮತ್ತೊಬ್ಬ ಜನಪ್ರಿಯ ರೈತ ನಾಯಕ, ತನ್ನ ತಂದೆ ಮಹೇಂದ್ರ ಸಿಂಗ್ ಟಿಕಾಯತ್ ಅವರನ್ನು ನೆನಪಿಸಿಕೊಳ್ಳುತ್ತಾ, ಅವರ ಕಾಲದಲ್ಲಿ ಕೂಗಲಾಗಿದ್ದ ಘೋಷಣೆಗಳನ್ನು ನೆನೆಸಿಕೊಂಡರು.

    ಇದನ್ನೂ ಓದಿ: political cuckoo: ರಾಹುಲ್​ ಗಾಂಧಿ ಭಾರತ ರಾಜಕೀಯದ ಕೋಗಿಲೆ; ಬಿಜೆಪಿ ವಕ್ತಾರ ಸಂಬೀತ್​ ಪಾತ್ರಾ ಟೀಕೆ

    ವಿಡಿಯೋದಲ್ಲಿ 11 ನಿಮಿಷ 17 ಸೆಕೆಂಡುಗಳಲ್ಲಿ, ಟಿಕಾಯತ್ ಹಿಂದಿ ಭಾಷೆಯಲ್ಲಿ “ ಈ ಸರಕಾರ ದಂಗೆಗಳನ್ನು ಮಾಡಿಸಲು ಪ್ರಯತ್ನಿಸುತ್ತದೆ. ಮೊದಲು ಕೂಡ, ಮೊದಲು ಕೂಡ ಟಿಕಾಯತ್ ಸಾಹೆಬ್ ಇದ್ದಾಗ ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್ ಘೋಷಣೆ ಕೂಗಲಾಗಿತ್ತು” ಎನ್ನುತ್ತಾರೆ, ಆ ಬಳಿಕ ಕೂಡಲೇ , “ಅಲ್ಲಾಹು ಅಕ್ಬರ್ ಮತ್ತು ಹರ ಹರ ಮಹಾದೇವ ಇಲ್ಲಿಂದ ಯಾವಾಗಲೂ ಒಟ್ಟಿಗೆ ಮೊಳಗಬೇಕು. ಈ ಘೋಷಣೆಗಳುನ್ನು ಭವಿಷ್ಯದಲ್ಲೂ ಒಟ್ಟಿಗೆ ಕೂಗಬೇಕು. ಈ ಜನರು ನಮ್ಮನ್ನು ಬೇರೆ ಮಾಡಲು ನೋಡುತ್ತಾರೆ, ಆದರೆ ನಾವು ಯಾವಾಗಲೂ ಒಗ್ಗಟ್ಟಾಗಿರಲು ಪ್ರಯತ್ನಿಸಬೇಕು” ಎಂದು ಹೇಳಿದ್ದಾರೆ. ನೇರ ಪ್ರಸಾರಗೊಂಡ ಈ ಭಾಷಣದ ವಿಡಿಯೋವನ್ನು ರಾಕೇಶ್ ಟಿಕಾಯತ್ ಅವರ ಫೇಸ್‍ಬುಕ್ ಪುಟದಲ್ಲೂ ಕಾಣಬಹುದು.

    ಟಿಕಾಯತ್ ಅವರು “ ಅಲ್ಲಾಹು ಅಕ್ಬರ್ “ ಮತ್ತು “ಹರ ಹರ ಮಹಾದೇವ” ಎಂದು ಏಕ ಕಾಲಕ್ಕೆ ಕೂಗಲಿಲ್ಲ ಎಂಬುವುದು ಸತ್ಯ. ಆದರೆ ಅವರು ರೈತರು ಒಗಟ್ಟನ್ನು ತೋರಿಸಲು ಈ ಎರಡೂ ಘೋಷಣೆಗಳನ್ನು ಒಟ್ಟಿಗೆ ಕೂಗಬೇಕು ಎಂದು ಹೇಳಿದರು. ಅಲ್ಲದೇ, ಟಿಕಾಯತ್ ಅವರು ವೇದಿಕೆಯಲ್ಲಿ “ಅಲ್ಲಾಹು ಅಕ್ಬರ್ “ ಎಂದಾಗ, ನೆರೆದ ಗುಂಪಿನ ಕಡೆಯಿಂದ “ ಅಲ್ಲಾಹು ಅಕ್ಬರ್ “ ಮತ್ತು “ಹರ ಹರ ಮಹಾದೇವ” ಎರಡೂ ಘೋಷಣೆಗಳು ಕೇಳಿ ಬಂದವು.
    First published: