• Home
 • »
 • News
 • »
 • national-international
 • »
 • ಡಾಟಾ ರೀಚಾರ್ಜ್‌ ಬೆಲೆ ಹೆಚ್ಚಳ, ಭಾರತದಲ್ಲಿ ಕಮ್ಮಿಯಾಗ್ತಿದೆ Facebook ಬಳಕೆ

ಡಾಟಾ ರೀಚಾರ್ಜ್‌ ಬೆಲೆ ಹೆಚ್ಚಳ, ಭಾರತದಲ್ಲಿ ಕಮ್ಮಿಯಾಗ್ತಿದೆ Facebook ಬಳಕೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Facebook: ಮೆಟಾದ ಒಟ್ಟುಮೊತ್ತ ಅಭಿವೃದ್ಧಿ ಚೆನ್ನಾಗಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಮುಖ್ಯವಾಗಿ ಫೇಸ್‌ಬುಕ್ ಭಾರೀ ಇಳಿಕೆ ಅನುಭವಿಸಿದೆ. ನಿತ್ಯ ಬಳಕೆದಾರರ ಸಂಖ್ಯೆ ನೋಡಿದರೆ ಇಷ್ಟು ಇಳಿಮುಖವಾಗಿರುವುದು ಇದೇ ಮೊದಲು. ಮಾರ್ಕ್‌ ಝುಕರ್‌ಬರ್ಗ್ ಪ್ರಕಾರ ಟಿಕ್ ಟಾಕ್ ಹಾಗೂ ರೀಲ್ಸ್ ಮುಖ್ಯವಾಗಿ ಫೇಸ್‌ಬುಕ್ ಬಳಕೆಯ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.

ಮುಂದೆ ಓದಿ ...
 • Share this:

  ಭಾರತದಲ್ಲಿ(India) ಜನರು ಬಳಸುತ್ತಿರುವ ಪ್ರಮುಖ ಸೋಷಿಯಲ್ ಮಿಡಿಯಾಗಳಲ್ಲಿ ಫೇಸ್‌ಬುಕ್(Facebook) ಕೂಡಾ ಒಂದು. ಭಾರತದಲ್ಲಿ ಬಹುತೇಕ ಎಲ್ಲ ಜನರೂ ಫೇಸ್‌ಬುಕ್ ಬಳಕೆದಾರರೇ. ಸಾಧಾರಣ ಬಟನ್ ಫೋನ್‌ ಕಾಲದಿಂದಲೇ ಫೇಸ್‌ಬುಕ್ ಬಳಸುವವರು ಇದ್ದಾರೆ. ಈಗ ಸ್ಮಾರ್ಟ್‌ಫೋನ್(Smartphone) ಕಾಲ. ಹಾಗಾಗಿ ಫೇಸ್‌ಬುಕ್ ಬಳಕೆ ಈಗ ಇನ್ನಷ್ಟು ಫನ್ ವಿಚಾರ. ಟಿಕ್ ಪಡೆದ ಪಾಪ್ಯುಲಾರಿಟಿ ನೋಡಿ ಇನ್‌ಸ್ಟಾಗ್ರಾಮ್(Instagram), ಫೇಸ್‌ಬುಕ್‌ನಲ್ಲಿಯೂ ವಿಡಿಯೋ, ರೀಲ್ಸ್ (Reels) ಆಪ್ಶನ್‌ಗಳೂ ಬಂದವು. ಸೆಕ್ಯುರಿಟಿ ಸಿಸ್ಟಮ್‌ಗಳು ಕಟ್ಟುನಿಟ್ಟಾದವು. ಆದರೂ ಫೇಸ್‌ಬುಕ್ ಪಾಪ್ಯುಲಾರಿಟಿ ಇಳಿಯಲಿಲ್ಲ. ಬಹಳಷ್ಟು ಜನರಿಗೆ ಫೇಸ್‌ಬುಕ್ ನೋಡದೆ ಬೆಳಗಾಗುವುದೇ ಇಲ್ಲ. ಸುದ್ದಿಗಳು, ಬರ್ತ್‌ಡೇ, ವಿಡಿಯೋ, ಫೋಟೋ, ಲೈವ್ ಹೀಗೆ ಬಹಳಷ್ಟು ಆಸಕ್ತಿಕರ ವಿಷಯಗಳ ಮೂಲಕ ಫೇಸ್‌ಬುಕ್ ಜನರನ್ನು ಹಿಡಿದಿಟ್ಟುಕೊಂಡಿದೆ. ಆದರೆ ಈ ಬಾರಿ ಫೇಸ್‌ಬುಕ್‌ಗೆ ನೋ ಆಪ್ಶನ್. ಯಾಕೆ ಗೊತ್ತಾ ? ಭಾರತದಲ್ಲಿ ಫೇಸ್‌ ಬಳಕೆದಾರರ ಹೆಚ್ಚಳದಲ್ಲಿ ತೀವ್ರ ಇಳಿಮುಖ ಕಂಡುಬಂದಿದೆ.


  ಅಂದ ಹಾಗೆ ಈ ಎಲ್ಲ ಬೆಳವಣಿಗೆಗಳಿಗೆ ಕಾರಣವಾಗಿದ್ದು ಭಾರತದಲ್ಲಿರುವ ಡಾಟಾ ಬೆಲೆ(Data Price). ಭಾರತದಲ್ಲಿ ಹಲವು ಕಂಪನಿಗಳು ತಮ್ಮ ರೀಚಾರ್ಜ್‌ ಬೆಲೆಯನ್ನು ಹೆಚ್ಚಿಸಿಕೊಂಡಿದ್ದು ಕನಿಷ್ಠ 100 ರೂಪಾಯಿಗಳಷ್ಟು ಬದಲಾವಣೆ ಕಂಡುಬಂದಿದೆ. ಏರ್‌ಟೆಲ್, ವೊಡಾಫೋನ್, ಜಿಯೋ(Jio) ಸೇರಿಹಲವು ಸಿಮ್‌ಗಳದ್ದು ಇದೇ ಕಥೆ. ದಿಢೀರ್ ಆಗಿ ರೀಚಾರ್ಜ್ ಬೆಲೆ ಏರಿಸಿದ್ದು ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ದೊಡ್ಡ ಹೊಡೆತ. ಲಿಮಿಟ್ ಇರುವ ಡಾಟಾದಲ್ಲಿ ಅಗತ್ಯ ಕೆಲಸಗಳನ್ನು ಬಿಟ್ಟು ಫೇಸ್‌ಬುಕ್ ಯಾರು ನೋಡುತ್ತಾರೆ ಹೇಳಿ ? ಇಷ್ಟೇ ಆಗಿರೋದು. ಜನ ಫೇಸ್‌ಬುಕ್ ನೋಡುವುದನ್ನು ಕಡಿಮೆ ಮಾಡಿದ್ದಾರೆ.


  ಇದನ್ನೂ ಓದಿ: ಇವು ಒಂದಲ್ಲಾ, ಎರಡಲ್ಲಾ 99 ಮಿಲಿಯನ್ ವರ್ಷಗಳ ಹಿಂದಿನ ಹೂವು! ವಿಶೇಷ ಪುಷ್ಪದ ಬಗ್ಗೆ ಮಾಹಿತಿ


  ಸ್ಥಳೀಯವಾಗಿ ರೀಚಾರ್ಜ್ ಬೆಲೆ ಹೆಚ್ಚಳ
  ಸ್ಥಳೀಯ ಡಾಟಾ ರಿಚಾರ್ಜ್ ಬೆಲೆ ಹೆಚ್ಚಿದ್ದು ಡಿಸೆಂಬರ್ 2021 ತ್ರೈಮಾಸಿಕದಲ್ಲಿ ಭಾರತದಲ್ಲಿ ಮೆಟಾ ಬಳಕೆದಾರರಲ್ಲಿ ಇಳಿಮುಖ ಕಂಡುಬಂದಿದೆ. ಗುರುವಾರ ಷೇರುಗಳು 26 ಶೆಕಡಾ ಕುಸಿದ ಕಾರಣ ಸಾಮಾಜಿಕ ಮಾಧ್ಯಮದ ಇತಿಹಾಸದಲ್ಲಿಯೇ ಅತಿದೊಡ್ಡ ಏಕದಿನ ವೈಪೌಟ್‌ನಲ್ಲಿ ಸುಮಾರು 250 ಬಿಲಿಯನ್ ಡಾಲರ್ ಮಾರ್ಕೆಟ್ ವ್ಯಾಲ್ಯೂ(Market Value) ನಷ್ಟವಾಗಿದೆ. ಭಾರತದಲ್ಲಿ ಡಾಟಾ ಪ್ಯಾಕ್ ಬೆಲೆ ಹೆಚ್ಚಾಗಿರುವುದು ಫೇಸ್‌ಬುಕ್ ಬಳಕೆದಾರರ ಇಳಿಮುಖಕ್ಕೆ ಕಾರಣವಾಗಿರುವುದು ಒಂದು ಕಾರಣವಾದರೆ ಇದನ್ನು ಹೊರತುಪಡಿಸಿ ಯುವಜನರು ಬೇರೆ ಎಪ್ಲಿಕೇಷನ್‌ಗಳತ್ತ ಆಕರ್ಷಿತರಾಗುತ್ತಿರುವುದು ಒಂದು ಕಾರಣವಾಗಿದೆ. ಫೇಸ್‌ಬುಕ್‌ನಂತೆಯೇ ಇರುವ ಇತರ ಎಪ್ಲಿಕೇಷನ್‌ಗಳತ್ತ ಯುವ ಜನರು ಆಸಕ್ತಿ ತೋರಿಸುತ್ತಿದ್ದಾರೆ.


  ಟೆಲಿಕಾಂ ಸರ್ವೀಸ್‌ಗಳಾದ(Telecom Service) ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ, ರಿಲಯನ್ಸ್ ಜಿಯೋ ತಮ್ಮ ಡಾಟಾ ಪ್ಯಾಕ್ ಬೆಲೆ ಹೆಚ್ಚಿಸಿದೆ. ಡಿಸೆಂಬರ್ ಸಮಯದಲ್ಲಿ 18ರಿಂದ 25 ಶೇಕಡಾ ತನಕ ರೀಚಾರ್ಜ್‌ ಬೆಲೆ ಏರಿಸಲಾಗಿದ್ದು ಇದು ಹೆಚ್ಚು ಪರಿಣಾಮ ಬೀರಿದೆ. ಮುಖ್ಯವಾಗಿ ಆನ್ಲೈನ್ ಕ್ಲಾಸ್ಗಳೂ, ವರ್ಕ್ಫ್ರಂ ಹೋಂ ಆರಂಭವಾದ ಮೇಲೆ ಬಹಳಷ್ಟು ಜನ ಡಾಟಾವನ್ನು ಅದಕ್ಕಾಗಿಯೇ ಬಳಸುತ್ತಿದ್ದಾರೆ, ಡಾಟಾ ದುಬಾರಿಯಾಗಿರುವಾಗ ಫೇಸ್ಬುಕ್ ನೋಡುವುದಕ್ಕಾಗಿ ಡಾಟಾ ವಿನಿಯೋಗಿಸುವವರ ಸಂಖ್ಯೆ ಕಡಿಮೆಯಾಗಿದೆ.


  ಟಿಕ್‌ಟಾಕ್ ಕಾಂಪಿಟೇಷನ್:


  ಇದನ್ನೂ ಓದಿ: Gender Discrimination ವಿರುದ್ಧ ಗೆದ್ದ ಮಹಿಳೆ: ಪಡೆದಿದ್ದು 20 ಕೋಟಿ ಪರಿಹಾರ


  ಮೆಟಾದ ಒಟ್ಟುಮೊತ್ತ ಅಭಿವೃದ್ಧಿ ಚೆನ್ನಾಗಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಮುಖ್ಯವಾಗಿ ಫೇಸ್‌ಬುಕ್ ಭಾರೀ ಇಳಿಕೆ ಅನುಭವಿಸಿದೆ. ನಿತ್ಯ ಬಳಕೆದಾರರ ಸಂಖ್ಯೆ ನೋಡಿದರೆ ಇಷ್ಟು ಇಳಿಮುಖವಾಗಿರುವುದು ಇದೇ ಮೊದಲು. ಮಾರ್ಕ್‌ ಝುಕರ್‌ಬರ್ಗ್ ಪ್ರಕಾರ ಟಿಕ್ ಟಾಕ್ ಹಾಗೂ ರೀಲ್ಸ್ ಮುಖ್ಯವಾಗಿ ಫೇಸ್‌ಬುಕ್ ಬಳಕೆಯ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.

  Published by:Sandhya M
  First published: