ಫೇಸ್​​ಬುಕ್​ನಲ್ಲಿ ಇನ್ಮುಂದೆ ಸಿಗಲಿದೆ ಸುದ್ದಿ ಸೇವೆ; ಹೊಸ ಪ್ರಯೋಗಕ್ಕೆ ಮುಂದಾದ ಮಾರ್ಕ್ ಜುಕರ್ ಬರ್ಗ್

ನ್ಯೂಸ್​ ಟ್ಯಾಬ್​ನಲ್ಲಿ ವರದಿಯಾಗುವ ‘ಟಾಪ್​​ ನ್ಯೂಸ್​‘ಗಳಿಗೆ ಸಂಪಾದಕರೆ ಹೊಣೆ. ಸಂಪಾದಕರು ಲೇಖನವನ್ನು ಪ್ರಕಟಿಸುವ ಸುದ್ದಿಯ ಮೂಲವನ್ನು ಗಮನಿಸಿ ಆನಂತರ ಪ್ರಕಟಿಸಬೇಕು ಎಂಬಿತ್ಯಾದಿ ನಿಯಮಗಳು ಇದು ಒಳಗೊಂಡಿದೆ. 

Harshith AS | news18-kannada
Updated:September 13, 2019, 7:42 AM IST
ಫೇಸ್​​ಬುಕ್​ನಲ್ಲಿ ಇನ್ಮುಂದೆ ಸಿಗಲಿದೆ ಸುದ್ದಿ ಸೇವೆ; ಹೊಸ ಪ್ರಯೋಗಕ್ಕೆ ಮುಂದಾದ ಮಾರ್ಕ್ ಜುಕರ್ ಬರ್ಗ್
ಫೇಸ್​ಬುಕ್ ಸಾಂದರ್ಭಿಕ ಚಿತ್ರ
  • Share this:
ಫೇಸ್​ಬುಕ್​ ತನ್ನ ಬಳಕೆದಾರರಿಗೆ ಹೊಸ ಹೊಸ ಸೇವೆಗಳನ್ನು ನೀಡುತ್ತಲೇ ಬರುತ್ತಿದೆ. ಅಂತೆಯೇ ಮತ್ತೇ ತನ್ನ ಬಳಕೆದಾರರಿಗಾಗಿ ಫೇಸ್​ಬುಕ್​​ ‘ನ್ಯೂಸ್​ ಟ್ಯಾಬ್​‘ ಹೆಸರಿನ ಹೊಸ ಫೀಚರ್​ ಪರಿಚಯಿಸಲು ಮುಂದಾಗಿದೆ. ಜಗತ್ತಿನಾದ್ಯಂತ ಅನೇಕ ಬಳಕೆದಾರನ್ನು ಹೊಂದಿರುವ ಫೇಸ್​ಬುಕ್​ನಲ್ಲಿ​ ನಿಯಮಿತವಾಗಿ ಸುದ್ದಿಯನ್ನು ಒದಗಿಸಲು ಈ ನೂತನ ಫೀಚರ್​ ಸಹಕಾರಿಯಾಗಲಿದೆ. ಸುದ್ದಿಯನ್ನು ‘ನ್ಯೂಸ್​ ಟ್ಯಾಬ್​‘ ಒದಗಿಸಲಿದೆ. ಈ ಫೀಚರ್​ ಸದ್ಯದಲ್ಲೇ ಲಭ್ಯವಾಗಲಿದೆ ಎಂದು ಸಂಸ್ಥೆ ಹೇಳಿದೆ.

ಸುದ್ದಿ ವಾಹಿನಿಗಳು ಪ್ರಕಟಿಸುವ ಸುದ್ದಿ ಮತ್ತು ಅದರ ಶಿರ್ಷಿಕೆಯನ್ನು ಫೇಸ್​ಬುಕ್​ ತನ್ನ ನ್ಯೂಸ್​ ಟ್ಯಾಬ್​ನಲ್ಲಿ ಪ್ರಕಟಿಸಲಿದೆ. ಅದನ್ನು ಕ್ಲಿಕ್ಕಿಸುವ ಮೂಲಕ ಬಳಕೆ ದಾರ ಸುದ್ದಿಯನ್ನು ವಿವರವನ್ನು ಪಡೆಯಬಹುದು. ಈ ಕುರಿತಾಗಿ ಫೇಸ್​​ಬುಕ್​ ಸುದ್ದಿ ಪ್ರಕಣೆಯ ಬಗೆಗೆ ನಿಯಮ ಮತ್ತು ಮಾರ್ಗ ಸೂಚಿಯನ್ನು ಕೂಡ ನೀಡಿದೆ.

ನ್ಯೂಸ್​ ಟ್ಯಾಬ್​ನಲ್ಲಿ ವರದಿಯಾಗುವ ‘ಟಾಪ್​​ ನ್ಯೂಸ್​‘ಗಳಿಗೆ ಸಂಪಾದಕರೆ ಹೊಣೆ. ಸಂಪಾದಕರು ಲೇಖನವನ್ನು ಪ್ರಕಟಿಸುವ ಸುದ್ದಿಯ ಮೂಲವನ್ನು ಗಮನಿಸಿ ಆನಂತರ ಪ್ರಕಟಿಸಬೇಕು ಎಂಬಿತ್ಯಾದಿ ನಿಯಮಗಳು ಇದು ಒಳಗೊಂಡಿದೆ.

ನ್ಯೂಸ್​ ಟ್ಯಾಬ್​ನಲ್ಲಿ ಲೇಖನವನ್ನು ಪ್ರಕಟಿಸುವ ಸುದ್ದಿ ವಾಹಿನಿಗಳಿಗೆ ಫೇಸ್​ಬುಕ್​ ಸಂಸ್ಥೆ 3 ವರ್ಷದ ಪರವಾನಿಗೆ ನೀಡುತ್ತದೆ. ಜೊತೆಗೆ ಪ್ರತಿ ಸುದ್ದಿ ಸಂಸ್ಥೆಗೆ ವರ್ಷಕ್ಕೆ 21 ಕೋಟಿ ರೂ ಸಂದಾಯವಾಗಲಿದೆ! ಅಂದಹಾಗೆ ಫೇಸ್​ಬುಕ್ ಜೊತೆ ಯಾವ ಯಾವ ಸುದ್ದಿ ಸಂಸ್ಥೆಗಳು ಒಪ್ಪಂದ ಮಾಡಿಕೊಂಡಿವೆ ಎಂಬುದರ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ.

First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading