HOME » NEWS » National-international » FACEBOOK TWITTER BLOCK TRUMPS ACCOUNT AFTER US CAPITOL ATTACK MAK

ಅಮೆರಿಕ ಸಂಸತ್​ ಮೇಲೆ ಟ್ರಂಪ್ ಬೆಂಬಲಿಗರಿಂದ ದಾಳಿ, ಓರ್ವ ಸಾವು; ಮಾಜಿ ಅಧ್ಯಕ್ಷರ ಖಾತೆ ನಿರ್ಬಂಧಿಸಿದ ಟ್ವಿಟರ್​ ಫೇಸ್​ಬುಕ್

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಡೊನಾಲ್ಡ್ ಟ್ರಂಪ್ ವಿರುದ್ಧ 306-232ರಿಂದ ಅಂತರದಿಂದ ಜಯಗಳಿಸಿದ್ದಾರೆ. ಆದರೆ ಇದನ್ನು ಟ್ರಂಪ್ ಒಪ್ಪುತ್ತಿಲ್ಲ. ಹಾಗಾಗಿ ಟ್ರಂಪ್ ಬೆಂಬಲಿಗರು ಇಂದು ಸಂಸತ್ ಮೇಲೆ ದಾಳಿ ನಡೆಸಿದ್ದಾರೆ.

news18-kannada
Updated:January 7, 2021, 8:40 AM IST
ಅಮೆರಿಕ ಸಂಸತ್​ ಮೇಲೆ ಟ್ರಂಪ್ ಬೆಂಬಲಿಗರಿಂದ ದಾಳಿ, ಓರ್ವ ಸಾವು; ಮಾಜಿ ಅಧ್ಯಕ್ಷರ ಖಾತೆ ನಿರ್ಬಂಧಿಸಿದ ಟ್ವಿಟರ್​ ಫೇಸ್​ಬುಕ್
ಅಮೆರಿಕ ಸಂಸತ್​ ಮೇಲೆ ಟ್ರಂಪ್​ ಬೆಂಬಲಿಗರು ದಾಳಿ ನಡೆಸಿರುವುದು.
  • Share this:
ಸ್ಯಾನ್ ಫ್ರಾನ್ಸಿಸ್ಕೋ: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಬೆನ್ನಿಗೆ ಸಾಕಷ್ಟು ಘಟನೆಗಳು ಸಂಬಂವಿಸುತ್ತಿವೆ. ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಈವರೆಗೆ ತಮ್ಮ ಸೋಲನ್ನು ಒಪ್ಪಿಕೊಂಡಿಲ್ಲ. ಅಲ್ಲದೆ, ಚುನಾವಣಾ ಅಧಿಕಾರಿಗಳು ಫಲಿತಾಂಶವನ್ನು ತಿರುಚಿದ್ದಾರೆ ಎಂದು ನಿರಂತರವಾಗಿ ಆರೋಪಿಸುತ್ತಲೇ ಇದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲೂ ಹೇಳಿಕೆಗಳನ್ನು ಬಿಡುಗಡೆ ಮಾಡುತ್ತಲೇ ಇದ್ದಾರೆ. ಇದರ ಪರಿಣಾಮವಾಗಿ ವಾಷಿಂಗ್ಟನ್‌ನ ಅಮೆರಿಕ ಸಂಸತ್ (ಕ್ಯಾಪಿಟಲ್) ಮೇಲೆ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಅನಿರೀಕ್ಷಿತ ದಾಳಿ ನಡೆಸಿದ್ದು ಗಲಭೆ ಏರ್ಪಟ್ಟಿದೆ. ಈ ವೇಳೆ ಗುಂಡಿನ ದಾಳಿಯಲ್ಲಿ ಒಬ್ಬ ಮೃತಮಟ್ಟಿದ್ದು ಹಲವರು ಗಾಯಗೊಂಡಿದ್ದಾರೆ. ಅಲ್ಲದೆ ಒಬ್ಬ ಮಹಿಳೆಯ ಭುಜಕ್ಕೆ ಗುಂಡು ತಗುಲಿದ್ದು, ರಕ್ತಸಿಕ್ತ ಸ್ಥಿತಿಯಲ್ಲಿ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಅಧಿಕಾರಿಯೊಬ್ಬರ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಿಗೆ ಡೊನಾಲ್ಡ್​ ಟ್ರಂಪ್ ಅವರ ಅಸಂಬದ್ಧ ಹೇಳಿಕೆಗಳೇ ಗಲಭೆಗೆ ಕಾರಣ ಎಂದು ಫೇಸ್​ಬುಕ್​ ಮತ್ತು ಟ್ವಟರ್​ ಅಮೆರಿಕ ಮಾಜಿ ಅಧ್ಯಕ್ಷ ಖಾತೆಯನ್ನೇ ನಿರ್ಬಂಧಿಸಿದೆ. ಅಲ್ಲದೆ, ಕೆಲವು ಆಕ್ಷೇಪಾರ್ಹ ಹೇಳಿಕೆಗಳನ್ನು ತೆಗೆದುಹಾಕಿದೆ ಎಂದು ತಿಳಿದುಬಂದಿದೆ.

ನವೆಂಬರ್ 03 ರಂದು ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾಗಿರುವ ಜೋ ಬೈಡನ್ ಅವರನ್ನು ಪ್ರಾಮಾಣೀಕರಿಸುವ ಕಾರ್ಯಕ್ರಮ ಇಂದು ನಿಗಧಿಯಾಗಿತ್ತು. ಅದಕ್ಕಾಗಿ ಹಲವಾರು ಶಾಸಕರು ಸೇರಿದ್ದರು. ಈ ವೇಳೆ ಸಂಸತ್ ಹೊರಗಿದ್ದ ಟ್ರಂಪ್ ಬೆಂಬಲಿಗರು ಬಲವಂತವಾಗಿ ಬ್ಯಾರಿಕೇಡ್ ಮುರಿದು ಒಳ ಪ್ರವೇಶಿಸಿದ್ದಾರೆ. ಇದರಂದ ಗೊಂದಲ ಉಂಟಾಗಿದ್ದು ಪೊಲೀಸರು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ. ಈ ವೇಳೆ ಗುಂಡಿನ ದಾಳಿಯಲ್ಲಿ ಒಬ್ಬ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ಲವ್ ಜಿಹಾದ್ ಕಾಯ್ದೆ ಅಸಂವಿಧಾನಿಕವಾ? ಸುಪ್ರೀಂನಿಂದ ಪರಿಶೀಲನೆ; 4 ವಾರದಲ್ಲಿ ವಿಚಾರಣೆ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಡೊನಾಲ್ಡ್ ಟ್ರಂಪ್ ವಿರುದ್ಧ 306-232ರಿಂದ ಅಂತರದಿಂದ ಜಯಗಳಿಸಿದ್ದಾರೆ. ಆದರೆ ಇದನ್ನು ಟ್ರಂಪ್ ಒಪ್ಪುತ್ತಿಲ್ಲ. ಹಾಗಾಗಿ ಟ್ರಂಪ್ ಬೆಂಬಲಿಗರು ಇಂದು ಸಂಸತ್ ಮೇಲೆ ದಾಳಿ ನಡೆಸಿದ್ದಾರೆ.

ಅಲ್ಲದೆ ಟ್ರಂಪ್ ಉಪಾಧ್ಯಕ್ಷ ಮೈಕ್ ಪೆನ್ಸ್ ಫಲಿತಾಂಶಗಳನ್ನು ಬದಲಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಯುಎಸ್ ಸಂವಿಧಾನವು ಚುನಾವಣೆಯ ಫಲಿತಾಂಶಗಳನ್ನು ಏಕಪಕ್ಷೀಯವಾಗಿ ರದ್ದುಗೊಳಿಸುವ ಅಧಿಕಾರವನ್ನು ಪೆನ್ಸ್‌ಗೆ ನೀಡುವುದಿಲ್ಲ, ಆದರೆ ಟ್ರಂಪ್‌ನಿಂದ ಅದನ್ನು ಮಾಡುವಂತೆ ಒತ್ತಡ ಹಾಕುತ್ತಿದ್ದಾರೆ.
Published by: MAshok Kumar
First published: January 7, 2021, 8:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories