Jio-Silver Lake: ಜಿಯೋದ ಮಹಾ ಯೋಜನೆಯ ಭಾಗವಾಗಿ ಫೇಸ್​ಬುಕ್, ಸಿಲ್ವರ್ ಲೇಕ್ ಒಪ್ಪಂದ: ಜಲ್ ಇರಾನಿ ಅನಿಸಿಕೆ

Reliance Jio - Silver Lake Deal - ಅಮೆರಿಕದ ಹೂಡಿಕೆ ನಿರ್ವಹಣೆ ಸಂಸ್ಥೆ ಸಿಲ್ವರ್ ಲೇಕ್ ರಿಲಾಯನ್ಸ್ ಜಿಯೋದಲ್ಲಿ 5,655.75 ಕೋಟಿ ರೂ ಹೂಡಿಕೆ ಮಾಡುತ್ತಿದೆ ಎಂದು ಆರ್​ಐಎಲ್ ಸಂಸ್ಥೆ ಇವತ್ತು ಪ್ರಕಟಿಸಿತು. ಈ ಒಪ್ಪಂದದ ಬಳಿಕ ಜಿಯೋದ ಮಾರುಕಟ್ಟೆಯ ಈಕ್ವಿಟಿ ಮೌಲ್ಯ 4.9 ಲಕ್ಷ ಕೋಟಿ ಆಗಲಿದೆ.

ಎಡೆಲ್​ವೇಸ್ ಸಂಸ್ಥೆಯ ಜಲ್ ಇರಾನಿ

ಎಡೆಲ್​ವೇಸ್ ಸಂಸ್ಥೆಯ ಜಲ್ ಇರಾನಿ

  • News18
  • Last Updated :
  • Share this:
    ಫೇಸ್​ಬುಕ್ ಮತ್ತು ಸಿಲ್ವರ್ ಲೇಕ್ ಸಂಸ್ಥೆಗಳು ರಿಲಾಯನ್ಸ್ ಜಿಯೋದಲ್ಲಿ ಹೂಡಿಕೆ ಮಾಡಿರುವ ಬೆಳವಣಿಗೆಗಳನ್ನು ಬಹಳ ಗಮನಾರ್ಹವಾದುದು ಎಂದು ಹಣಕಾಸು ಸೇವಾ ಸಂಸ್ಥೆಯೊಂದರ ಹಿರಿಯ ಅಧಿಕಾರಿ ಜಲ್ ಇರಾನಿ ಅಭಿಪ್ರಾಯಪಟ್ಟಿದ್ಧಾರೆ. ರಿಲಾಯನ್ಸ್ ಇಂಡಸ್ಟ್ರೀಸ್ (ಆರ್​ಐಎಲ್) ತನ್ನ ವ್ಯವಹಾರದಲ್ಲಷ್ಟೇ ಅಲ್ಲ, ಹಣಬಲ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲೂ ರಚನಾತ್ಮಕವಾಗಿ ಮುನ್ನಡೆಯುತ್ತಿದೆ ಎಂದು ಎಡೆಲ್​ವೇಸ್ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆಯ ಸೀನಿಯರ್ ವೈಸ್ ಪ್ರೆಸಿಡೆಂಟ್ ಜಲ್ ಇರಾನಿ ಹೇಳಿದ್ದಾರೆ.

    ಸಿಎನ್​ಬಿಸಿ-ಟಿವಿ18 ಜೊತೆಗಿನ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಜಲ್ ಇರಾನಿ, ರಿಲಾಯನ್ಸ್ ಸಂಸ್ಥೆ ಬಹಳ ವ್ಯವಸ್ಥಿತ ರೀತಿಯಲ್ಲಿ ತನ್ನ ಸಾಲವನ್ನು ಕಡಿಮೆಗೊಳಿಸುತ್ತಿದೆ ಎಂದು ತಿಳಿಸಿದ್ಧಾರೆ.

    ಅಮೆರಿಕದ ಹೂಡಿಕೆ ನಿರ್ವಹಣೆ ಸಂಸ್ಥೆ ಸಿಲ್ವರ್ ಲೇಕ್ ರಿಲಾಯನ್ಸ್ ಜಿಯೋದಲ್ಲಿ 5,655.75 ಕೋಟಿ ರೂ ಹೂಡಿಕೆ ಮಾಡುತ್ತಿದೆ ಎಂದು ಆರ್​ಐಎಲ್ ಸಂಸ್ಥೆ ಇವತ್ತು ಪ್ರಕಟಿಸಿತು. ಈ ಒಪ್ಪಂದದ ಬಳಿಕ ಜಿಯೋದ ಮಾರುಕಟ್ಟೆಯ ಈಕ್ವಿಟಿ ಮೌಲ್ಯ 4.9 ಲಕ್ಷ ಕೋಟಿ ಆಗಲಿದೆ.

    ಇದನ್ನೂ ಓದಿ: Reliance Jio-Silver Lake Deal: ಅಮೆರಿಕದ ಸಿಲ್ವರ್ ಲೇಕ್​ನಿಂದ Jioದಲ್ಲಿ Rs 5,655.75 ಕೋಟಿ ಹೂಡಿಕೆ

    ಒಂದು ವಾರದ ಹಿಂದಷ್ಟೇ ಫೇಸ್​ಬುಕ್ ಸಂಸ್ಥೆ ಜಿಯೋದಲ್ಲಿ ಶೇ. 9.99ರಷ್ಟು ಪಾಲನ್ನು ಖರೀದಿಸಿತ್ತು. ಸುಮಾರು 43,574 ಕೋಟಿ ರೂ ಬಂಡವಾಳ ಹೂಡಿಕೆ ಮಾಡಿತ್ತು. ಫೇಸ್​ಬುಕ್ ಮತ್ತು ಜಿಯೋದ ಆ ಒಪ್ಪಂದವು ಭಾರತೀಯ ಡಿಜಿಟಲ್ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ನಿರೀಕ್ಷೆಗಳಿವೆ. ತೀರಾ ಸ್ಥಳೀಯ ಮಟ್ಟದಲ್ಲಿ ಡಿಜಿಟಲ್ ವ್ಯವಹಾರಗಳಿಗೆ ಪುಷ್ಟಿ ಸಿಗುವ ಸಾಧ್ಯತೆ ಇದೆ.

    “ರಿಲಾಯನ್ಸ್ ಸಂಸ್ಥೆ ತನ್ನ ಪ್ರಮುಖ ವ್ಯವಹಾರಗಳಲ್ಲಿ ಸಮರ್ಥ ಪಾಲುದಾರರನ್ನು ಸೆಳೆಯುತ್ತಿದೆ. ಜಿಯೋದಲ್ಲಿ ನೋಡಿದ್ದಾಯ್ತು. ಹಾಗೆಯೇ, ತೈಲ ಕ್ಷೇತ್ರದಲ್ಲಿ ಸೌದಿ ಅರೇಬಿಯಾದ ಅರಾಮ್ಕೋ ಕಂಪನಿ ಜೊತೆಗಿನ ಒಪ್ಪಂದ ಮತ್ತೊಂದು ಉದಾಹರಣೆಯಾಗಿದೆ. ಇದೆಲ್ಲವೂ ಆರ್​ಐಎಲ್​ನ ದೊಡ್ಡ ರಚನಾತ್ಮಕ ಯೋಜನೆಯ ಭಾಗಗಳಾಗಿವೆ” ಎಂದು ಜಲ್ ಇರಾನಿ ತಿಳಿಸಿದ್ದಾರೆ.

    ರಿಲಾಯನ್ಸ್ ಜಿಯೋವನ್ನು ಸ್ಥಾಪಿಸಿ ಮಾರುಕಟ್ಟೆಯ ಮುಂಚೂಣಿ ನಾಯಕನಾಗಿ ಬೆಳೆಸಲು ಆರ್​ಐಎಲ್ ಸಾಕಷ್ಟು ಸಾಲ ಮಾಡಿದೆ. ಡಿಸೆಂಬರ್​ನಷ್ಟರಲ್ಲಿ ಸಾಲಗಳಿಂದ ಮುಕ್ತಗೊಳ್ಳುವುದು ತನ್ನ ಗುರಿ ಎಂದು RIL ಹೇಳಿದೆ.

    First published: