Facebook Down: ಫೇಸ್​ಬುಕ್, ಇನ್​ಸ್ಟಾಗ್ರಾಂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲವೇ? ಇಲ್ಲಿದೆ ಕಾರಣ

ಈ ಮೊದಲು ಜಿ-ಮೇಲ್ ಮತ್ತು ಗೂಗಲ್​ನ ಇತರೆ ಅಪ್ಲಿಕೇಷನ್​ಗಳು ಇದೇರೀತಿ ತಾಂತ್ರಿಕ ತೊಂದರೆಯನ್ನು ಎದುರಿಸಿತ್ತು. ಇದರಿಂದಾಗಿ ಜಿ-ಮೇಲ್ ಬಳಕೆದಾರರು ಈ ಬಗ್ಗೆ ದೂರನ್ನೂ ನೀಡಿದ್ದರು.

Sushma Chakre | news18
Updated:March 14, 2019, 9:20 AM IST
Facebook Down: ಫೇಸ್​ಬುಕ್, ಇನ್​ಸ್ಟಾಗ್ರಾಂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲವೇ? ಇಲ್ಲಿದೆ ಕಾರಣ
ಫೇಸ್​ಬುಕ್ ಸಾಂದರ್ಭಿಕ ಚಿತ್ರ
  • News18
  • Last Updated: March 14, 2019, 9:20 AM IST
  • Share this:
ನವದೆಹಲಿ (ಮಾ.14): ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಂಗಳ ಬಳಕೆದಾರರು ಪರದಾಡುವಂತಾಗಿದ್ದು, ಇಡೀ ಜಗತ್ತಿನೆಲ್ಲೆಡೆ ಈ ಎರಡೂ ಜಾಲತಾಣಗಳ ಕಾರ್ಯ ನಿಧಾನಗೊಂಡಿದೆ.

ಫೇಸ್​ಬುಕ್​ನ ಡೆವಲಪರ್​ ಪೇಜ್ ಈ ಬಗ್ಗೆ ಎಲ್ಲೂ ಏನು ಸಮಸ್ಯೆಯಾಗಿದೆ ಎಂಬ ಬಗ್ಗೆ ಹೇಳಿಕೊಂಡಿಲ್ಲ, ಸ್ಪಷ್ಟನೆಯನ್ನೂ ನೀಡಿಲ್ಲ. ಬಳಕೆದಾರರಿಗೆ 'ಫೇಸ್​ಬುಕ್ ವಿಲ್ ಬಿ ಬ್ಯಾಕ್​ ಸೂನ್​' ಎಂಬ ಮೆಸೇಜ್ ಮೊಬೈಲ್ ಅಥವಾ ಕಂಪ್ಯೂಟರ್​ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿದೆ.

ಈ ಮೊದಲು ಜಿ-ಮೇಲ್ ಮತ್ತು ಗೂಗಲ್​ನ ಇತರೆ ಅಪ್ಲಿಕೇಷನ್​ಗಳು ಇದೇರೀತಿ ತಾಂತ್ರಿಕ ತೊಂದರೆಯನ್ನು ಎದುರಿಸಿತ್ತು. ಇದರಿಂದಾಗಿ ಜಿ-ಮೇಲ್ ಬಳಕೆದಾರರು ಈ ಬಗ್ಗೆ ದೂರನ್ನೂ ನೀಡಿದ್ದರು. ಲಾಗಿನ್, ಲಾಗೌಟ್​ನಂತಹ ಸಮಸ್ಯೆ ಜಗತ್ತಿನ ಅತಿಹೆಚ್ಚು ಬಳಕೆದಾರರಿರುವ ಜಿ-ಮೇಲ್​ನಲ್ಲಿ ಕಾಣಿಸಿಕೊಂಡಿತ್ತು.

ಸ್ಮಾರ್ಟ್​ಫೋನ್​ ಬಳಕೆದಾರರೇ ಎಚ್ಚರ: ಈ ಆ್ಯಪ್​ಗಳಿಂದ ದೂರವಿರಿ

ಇನ್​ಸ್ಟಾಗ್ರಾಂ ಕೂಡ ಇದೇ ರೀತಿಯ ಸಮಸ್ಯೆಯನ್ನು ಎದುರಿಸಿದ್ದ ಬೆನ್ನಲ್ಲೇ ಫೇಸ್​ಬುಕ್​ನಲ್ಲೂ ಸಮಸ್ಯೆ ಕಾಣಿಸಿಕೊಂಡಿದೆ. ಫೇಸ್​ಬುಕ್ ತನ್ನ ಅಪ್ಲಿಕೇಷನ್​ ನಿರ್ವಹಣೆಗೋಸ್ಕರ ತನ್ನ ಕಾರ್ಯವನ್ನು ನಿಧಾನಗೊಳಿಸಿದೆ. ಆದರೆ, ಕೆಲವೇ ಕ್ಷಣಗಳಲ್ಲಿ ಫೇಸ್​ಬುಕ್ ತಾಣದಲ್ಲಿನ ಸಮಸ್ಯೆಯನ್ನು ಬಗೆಹರಿಸಲಾಗುವುದು. ನಿಮ್ಮ ತಾಳ್ಮೆಗೆ ಧನ್ಯವಾದ ಎಂದು ವೆಬ್​ಸೈಟ್​ನ ಸಂದೇಶದಲ್ಲಿ ತಿಳಿಸಲಾಗಿದೆ.

ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಂ ಪೇಜ್​ ಓಪನ್​ ಆಗುತ್ತಿದೆ. ಆದರೆ, ಫೋಟೋ ಅಪ್​ಲೋಡ್​ ಮಾಡಲು, ಸ್ಟೇಟಸ್ ಹಾಕಲು ಸಾಧ್ಯವಾಗುತ್ತಿಲ್ಲ ಎಂದು ಕೆಲವು ಬಳಕೆದಾರರು ದೂರು ನೀಡಿದ್ದಾರೆ.

First published: March 14, 2019, 9:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading