HOME » NEWS » National-international » FACEBOOK INDIA MOVES SC AGAINST NOTICE ISSUED BY ASSEMBLY PANEL OVER ROLE IN DELHI RIOTS SESR

Facebook: ದೆಹಲಿ ಗಲಭೆ ಪ್ರಕರಣ: ಸಮನ್ಸ್​ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಫೇಸ್​ಬುಕ್​ ಇಂಡಿಯಾ ಉಪಾಧ್ಯಕ್ಷ; ನಾಳೆ ಅರ್ಜಿ ವಿಚಾರಣೆ

Delhi Riots: ನ್ಯಾಯಾಮೂರ್ತಿಗಳಾದ ಎಸ್​ಕೆ ಕೌಲ್​, ಅನಿರುದ್ಧ ಬೋಸ್​ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ತ್ರಿ ಸದಸ್ಯ ಪೀಠ ನಾಳೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಈ ಅರ್ಜಿ ಆಲಿಸಲಿದೆ.

news18-kannada
Updated:September 22, 2020, 10:18 PM IST
Facebook: ದೆಹಲಿ ಗಲಭೆ ಪ್ರಕರಣ: ಸಮನ್ಸ್​ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಫೇಸ್​ಬುಕ್​ ಇಂಡಿಯಾ ಉಪಾಧ್ಯಕ್ಷ; ನಾಳೆ ಅರ್ಜಿ ವಿಚಾರಣೆ
ಸಾಂದರ್ಭಿಕ ಚಿತ್ರ
  • Share this:
ದೆಹಲಿ (ಸೆ.22): ದೆಹಲಿ ಕೋಮು ಗಲಭೆಯಲ್ಲಿ ಹಿಂಸಾಚಾರಕ್ಕೆ ಸಾಮಾಜಿಕ ಜಾಲತಾಣದ ವೇದಿಕೆ ಸಹಭಾಗಿತ್ವ ನೀಡಿದ ಆರೋಪದ ಕುರಿತು ದೆಹಲಿ ವಿಧಾನಸಭೆ ಸಮಿತಿ ಮುಂದೆ ಹಾಜರಾಗಿ ವಿವರಣೆ ನೀಡುವಂತೆ ಫೇಸ್​ಬುಕ್​ ಇಂಡಿಯಾ ಉಪಾಧ್ಯಕ್ಷರಿಗೆ ಸಮನ್ಸ್​ ಜಾರಿ ಮಾಡಲಾಗಿತ್ತು. ಈ ಸಮನ್ಸ್​ ವಿರುದ್ಧ ಉಪಾಧ್ಯಕ್ಷ ಅಜಿತ್​ ಮೋಹನ್​ ಸುಪ್ರೀಂ ಕೋರ್ಟ್​ನಲ್ಲಿ ಇಂದು ಅರ್ಜಿ ಸಲ್ಲಿಸಿದ್ದು, ನಾಳೆ ಸರ್ವೋಚ್ಛ ನ್ಯಾಯಾಲಯ ಈ ಅರ್ಜಿ ಕೈಗೆತ್ತಿಕೊಳ್ಳಲಿದೆ.  ನ್ಯಾಯಾಮೂರ್ತಿಗಳಾದ ಎಸ್​ಕೆ ಕೌಲ್​, ಅನಿರುದ್ಧ ಬೋಸ್​ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ತ್ರಿ ಸದಸ್ಯ ಪೀಠ ನಾಳೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಈ ಅರ್ಜಿ ಆಲಿಸಲಿದೆ.

ಈ ಪ್ರಕರಣ ಈಗಾಗಲೇ ಸಂಸದೀಯ ಸಮಿತಿ ಮುಂದೆ ಇರುವುದರಿಂದ ದೆಹಲಿ ವಿಧಾನ ಸಭೆ ಮುಂದೆ ಹಾಜರಾಗುವಂತೆ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಫೇಸ್​ಬುಕ್​ ಇಂಡಿಯಾ ಮುಖ್ಯಸ್ಥರು ಅರ್ಜಿ ಸಲ್ಲಿಸಿದ್ದಾರೆ.

Youtube Video

ನಿಯಮವನ್ನು ಗಾಳಿಗೆ ತೂರಿ ಫೇಸ್​ಬುಕ್​ ದ್ವೇಷ ಭಾವನೆಗೆ ಸಾಮಾಜಿಕ ಜಾಲತಾಣವನ್ನು ಬಳಕೆ ಮಾಡಿದ ಆರೋಪದ ಮೇಲೆ ಅವರಿಗೆ ಸಮನ್ಸ್​ ಜಾರಿ ಮಾಡಲಾಗಿತ್ತು. ಹಲವು ಬಾರಿ ಸಮನ್ಸ್​ ನೀಡಿದರೂ ಹಾಜರಾಗಲೂ ವಿಫಲರಾದ ಹಿನ್ನಲೆ ಭಾನುವಾರ ಸಮಿತಿ ಹೊಸ ಮತ್ತು ಅಂತಿಮಬಾರಿಗೆ ಸಮನ್ಸ್​ ಜಾರಿ ಮಾಡಿತ್ತು.  ಈ ಕುರಿತು ಸೋಮವಾರ ಹಾಜರಾಗಿ ವಿವರಣೆ ನೀಡುವಂತೆ ಸೂಚಿಸಿತ್ತು. ಇದರ ಸಮನ್ಸ್​ ವಿರುದ್ಧ ಅಜಿತ್​ ಮೋಹನ್​ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದಾರೆ.
Published by: Seema R
First published: September 22, 2020, 9:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories