ಮುಂಬೈ (ಏಪ್ರಿಲ್ 22); ಕೊರೋನಾ ವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಫೇಸ್ಬುಕ್ ಮತ್ತು ಜಿಯೋ ಟೆಲಿಕಾಂ ಒಪ್ಪಂದ ಮಾಡಿಕೊಂಡಿದ್ದರುವುದು ಭಾರತೀಯ ಆರ್ಥಿಕೆಯ ಬಲವಾದ ಸಂಕೇತ ಎಂದು ಮಹೀಂದ್ರಾ ಸಮೂಹ ಸಂಸ್ಥೆಯ ಮುಖ್ಯಸ್ಥ ಆನಂದ್ ಮಹೀಂದ್ರಾ ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ಟೆಲಿಕಾಂನಲ್ಲಿ ಹೊಸ ಅಲೆ ಸೃಷ್ಟಿಸಿದ್ದ ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ಜಿಯೋ ತನ್ನ ಶೇ.9.99 ಷೇರನ್ನು ಅಮೆರಿಕದ ಟೆಕ್ ಸಂಸ್ಥೆ ಫೇಸ್ಬುಕ್ಗೆ ಮಾರಾಟ ಮಾಡಿದೆ. ಈ ಷೇರಿನ ಮೌಲ್ಯ 43,574 ಕೋಟಿ ರೂಪಾಯಿ ಆಗಿದ್ದು, ಎರಡೂ ಸಂಸ್ಥೆಗಳು ಈ ಕುರಿತು ಇಂದು ಅಧಿಕೃತ ಮಾಹಿತಿಯನ್ನು ಹೊರಹಾಕಿದ್ದವು.
ಅಲ್ಲದೆ, ಈ ಬೆಳವಣಿಗೆ ಬಗ್ಗೆ ಅಂಬಾನಿ ಒಡೆತನದ ರಿಲಾಯನ್ಸ್ ಇಂಡಸ್ಟ್ರೀಸ್ ಸಂತಸ ವ್ಯಕ್ತಪಡಿಸಿತ್ತು. ಅಷ್ಟೇ ಅಲ್ಲ, ಟೆಲಿಕಾಂ ಸಂಸ್ಥೆಯಲ್ಲಿ ಇಂಥದ್ದೊಂದು ಅಭೂತಪೂರ್ವ ಬೆಳವಣಿಗೆ ಹಿಂದೆಂದು ನಡೆದಿರಲಿಲ್ಲ ಎಂದು ಹೇಳಿಕೆ ನೀಡಿತ್ತು.
ಇದರ ಬೆನ್ನಿಗೆ ಟ್ವೀಟ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿರುವ ಅನಂದ್ ಮಹೀಂದ್ರಾ, "ಫೇಸ್ಬುಕ್ ಮತ್ತು ಜಿಯೋ ನಡುವಿನ ಒಪ್ಪಂದದಿಂದಾಗಿ ಕೇವಲ ಈ ಎರಡು ಕಂಪೆನಿಗಳಿಗೆ ಮಾತ್ರ ಲಾಭವಲ್ಲ. ಬದಲಾಗಿ ಕೊರೋನಾದಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ ಆರ್ಥಿಕತೆಯ ಕುರಿತು ವಿಶ್ವಕ್ಕೆ ನೀಡುತ್ತಿರುವ ಬಲವಾದ ಸಂಕೇತವಾಗಿದೆ. ಈ ಹೊಸ ಬೆಳವಣಿಗೆ ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತಾಗಿದೆ. ಅಲ್ಲದೆ, ಭಾರತ ಮತ್ತಷ್ಟು ಬಲಗೊಂಡಿದೆ" ಎಂದು ಪ್ರಶಂಶಿಸಿದ್ದಾರೆ.
ಇದನ್ನೂ ಓದಿ : Reliance Jio-Facebook deal: ದಿನೇದಿನೆ ಜಿಯೋ ಬಳಕೆದಾರರ ಸಂಖ್ಯೆ ಹೆಚ್ಚಳ; ದೇಶದ ಜನರ ಸಂಪರ್ಕಕ್ಕೆ ದಾರಿ ತೋರಿದ ನೆಟ್ವರ್ಕ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ