ಜೀವಕ್ಕೆ ಮುಳುವಾಯ್ತು ಫೇಸ್​ಬುಕ್; ಗೆಳೆಯನ ಬರ್ತಡೇ ಪಾರ್ಟಿ ಮಾಡಲು ಹೋದವಳು ಹೆಣವಾಗಿ ಬಿದ್ದಳು

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ವಿಕ್ಕಿ ಎಂಬ 21 ವರ್ಷದ ಯುವಕನ ಹುಟ್ಟುಹಬ್ಬವನ್ನು ಆಚರಿಸಲು ಆ ಮಹಿಳೆ ಓಯೋ ಆ್ಯಪ್​ನಲ್ಲಿ ಹೋಟೆಲ್ ರೂಂ ಬುಕ್ ಮಾಡಿದ್ದಳು.

news18-kannada
Updated:November 14, 2019, 10:06 AM IST
ಜೀವಕ್ಕೆ ಮುಳುವಾಯ್ತು ಫೇಸ್​ಬುಕ್; ಗೆಳೆಯನ ಬರ್ತಡೇ ಪಾರ್ಟಿ ಮಾಡಲು ಹೋದವಳು ಹೆಣವಾಗಿ ಬಿದ್ದಳು
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ನ. 14): ಸೋಷಿಯಲ್ ಮೀಡಿಯಾ ಇಂದಿನ ಪೀಳಿಗೆಯ ಜನರ ಪಾಲಿಗೆ ವರವೂ ಹೌದು, ಶಾಪವೂ ಹೌದು. ಜಾಲತಾಣಗಳಿಂದ ಹೊಸ ಹೊಸ ಗೆಳೆಯರು ಪರಿಚಯವಾಗುತ್ತಾರೆ ಎಂಬುದು ಎಷ್ಟು ಸತ್ಯವೋ, ಅವರೆಲ್ಲರೂ ಒಳ್ಳೆಯ ಉದ್ದೇಶದಿಂದಲೇ ಪರಿಚಯವಾಗುತ್ತಾರೆ ಎಂದು ನಂಬಲಾಗದು ಎಂಬುದು ಕೂಡ ಅಷ್ಟೇ ಸತ್ಯ.

ಸೋಷಿಯಲ್ ಮೀಡಿಯಾದಿಂದ ಪರಿಚಯವಾದ ಸ್ನೇಹಿತರನ್ನು ನಂಬಿ ಸಂಕಷ್ಟ, ಅಪಾಯಕ್ಕೆ ಸಿಲುಕಿದ ಎಷ್ಟೋ ಉದಾಹರಣೆಗಳು ನಮ್ಮ ಮುಂದಿವೆ. ಅದೇ ರೀತಿಯ ಒಂದು ಘಟನೆ ನವದೆಹಲಿಯಲ್ಇ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾದವನನ್ನು ನಂಬಿ ಹೋಟೆಲ್​ ರೂಮಿಗೆ ಹೋದ ಮಹಿಳೆ ಬರ್ಬರವಾಗಿ ಹತ್ಯೆಯಾಗಿದ್ದಾಳೆ.

ದೆಹಲಿಯ ಅಲಿಪುರದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಹೆಚ್ಚಿನ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ವಿಕ್ಕಿ ಎಂಬ 21 ವರ್ಷದ ಯುವಕನ ಹುಟ್ಟುಹಬ್ಬವನ್ನು ಆಚರಿಸಲು ಆ ಮಹಿಳೆ ಓಯೋ ಆ್ಯಪ್​ನಲ್ಲಿ ಹೋಟೆಲ್ ರೂಂ ಬುಕ್ ಮಾಡಿದ್ದಳು. ಇಬ್ಬರು ಮಕ್ಕಳ ತಾಯಿಯಾಗಿರುವ ಆ ಮಹಿಳೆ ಮತ್ತು ವಿಕ್ಕಿಯ ನಡುವೆ ಫೇಸ್​ಬುಕ್​ನಿಂದ ಗೆಳೆತನ ಬೆಳೆದಿತ್ತು. ಸೋಮವಾರ ವಿಕ್ಕಿಯ ಹುಟ್ಟುಹಬ್ಬವಿತ್ತು. ಹೀಗಾಗಿ ಆಕೆ ವಿಕ್ಕಿಯ ಹುಟ್ಟುಹಬ್ಬದ ಪಾರ್ಟಿ ಮಾಡಲು ರೂಮ್ ಬುಕ್ ಮಾಡಿದ್ದಳು. ರಾತ್ರಿ ಇಬ್ಬರೂ ರೂಮ್‍ನಲ್ಲಿ ಮದ್ಯ ಸೇವಿಸುತ್ತ ಪಾರ್ಟಿ ಮಾಡಿದ್ದರು. ಆಗ ಇಬ್ಬರ ನಡುವೆ ಜಗಳ ನಡೆದಿದೆ.

ಕೆರೆಯಲ್ಲಿ ಈಜಲು ಹೋದ ಬಾಲಕನಿಗೆ ಕಾದಿತ್ತು ಕಂಟಕ​; ಮೂಗಿನೊಳಗೆ ಜೀವಂತ ಮೀನು ನೋಡಿ ವೈದ್ಯರೇ ಶಾಕ್​..!

ಕುಡಿದ ಮತ್ತಿನಲ್ಲಿ ವಿಕ್ಕಿಯ ಕೆನ್ನೆಗೆ ಆ ಮಹಿಳೆ ಹೊಡೆದಿದ್ದಾಳೆ. ಇದರಿಂದ ಕೋಪಗೊಂಡ ವಿಕ್ಕಿಯೂ ಮಹಿಳೆಗೆ ಹೊಡೆದಿದ್ದಾನೆ. ಅದಕ್ಕೆ ಸುಮ್ಮನಾಗದ ಮಹಿಳೆ ಕೈಯಲ್ಲಿದ್ದ ವಿಸ್ಕಿಯನ್ನು ವಿಕ್ಕಿ ಮೈಮೇಲೆ ಎರಚಿದ್ದಾಳೆ. ಇಬ್ಬರ ನಡುವೆ ಈ ರೀತಿ ಜಗಳ ಮುಂದುವರೆದಿದ್ದು, ಕೋಪಗೊಂಡ ವಿಕ್ಕಿ ಆ ಮಹಿಳೆಯ ಕತ್ತು ಹಿಸುಕಿದ್ದಾನೆ. ಕೆಲ ನಿಮಿಷಗಳಾದರೂ ವಿಕ್ಕಿ ತನ್ನ ಹಿಡಿತ ಸಡಿಲಗೊಳಿಸದ ಕಾರಣ ಆಕೆ ಉಸಿರುಕಟ್ಟಿ ಸಾವನ್ನಪ್ಪಿದ್ದಾಳೆ. ವಿಕ್ಕಿ ಹೋಟೆಲ್‍ನಿಂದ ಹೊರಹೋಗುತ್ತಿದ್ದಾಗ ಸಿಬ್ಬಂದಿ ಆತನ ಬಳಿ ಎಲ್ಲಿಗೆ ಹೋಗುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ನಾನು ಮನೆಗೆ ಹೋಗುತ್ತಿದ್ದೇನೆ, ಮಹಿಳೆ ರೂಮ್‍ನಲ್ಲಿಯೇ ಇದ್ದಾಳೆ. ಆದಷ್ಟು ಬೇಗ ಹಿಂತಿರುಗುತ್ತೇನೆ ಎಂದು ಅಲ್ಲಿಂದ ಹೊರ ನಡೆದಿದ್ದಾನೆ.

ವಾಯುಸೇನೆಯಲ್ಲಿದ್ದ ಮಗನ ಸಾವಿನ ನೋವು ಮರೆಯಲು ಆ ತಂದೆ-ತಾಯಿ ಮಾಡಿದ್ದೇನು ಗೊತ್ತೇ?

ಮಂಗಳವಾರ ಬೆಳಗ್ಗೆ 10 ಗಂಟೆ ವೇಳೆಗೆ ಹೋಟೆಲ್ ಸಿಬ್ಬಂದಿ ತಿಂಡಿ ಕೊಡಲು ಹೋಟೆಲ್ ರೂಮಿಗೆ ಹೋದಾಗ ಬಾಗಿಲು ತಟ್ಟಿದರೂ ತೆಗೆಯದ್ದನ್ನು ನೋಡಿ ಬಾಗಿಲು ಒಡೆದಿದ್ದಾರೆ. ಈ ವೇಳೆ ಹಾಸಿಗೆ ಮೇಲೆ ಕಿವಿ, ಮೂಗಿನಿಂದ ರಕ್ತ ಸುರಿದ ಸ್ಥಿತಿಯಲ್ಲಿ ಮಹಿಳೆ ಬಿದ್ದಿರುವುದನ್ನು ಕಂಡು ಗಾಬರಿಗೊಂಡು ಹೋಟೆಲ್ ಮಾಲೀಕನಿಗೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಾಗಲೇ ಆ ಮಹಿಳೆ ಸಾವನ್ನಪ್ಪಿದ್ದಳು. ಬಳಿಕ ಈ ಕುರಿತು ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಕ್ಕಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.
First published:November 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ