Facebook Cheating: ಫೇಸ್​ಬುಕ್​ನಲ್ಲಿ ನಗ್ನ ಕರೆ ಮಾಡಿದ ಮಾಯಾಂಗನೆ, ವಿಡಿಯೋ ಕಾಲ್​ ರೆಕಾರ್ಡ್ ಮಾಡಿ ಬ್ಲ್ಯಾಕ್​ಮೇಲ್

ಅರೆ ನಗ್ನವಾಗಿ ವಿಡಿಯೋ ಕರೆ ಮಾಡಿ ಈತನಿಗೂ ಬಟ್ಟೆ ಬಿಚ್ಚುವಂತೆ ಹೇಳಿದ್ದಳು. ಆಕೆಯ ಮಾತನ್ನು ನಂಬಿ ಅವಳು ಹೇಳಿದಂತೆ ಮಾಡಿದ್ದಾನೆ. ಇದನ್ನ ಸ್ಕ್ರೀನ್​ ರೆಕಾರ್ಡ್​ ಮಾಡಿ ಯುವತಿ ಬ್ಲ್ಯಾಕ್​ಮೇಲ್​ ಮಾಡಿದ್ದಾಳೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ​​ ಫೇಸ್​ಬುಕ್​(Facebook) ಮೂಲಕ ಮುಖ ಪರಿಚಯ ಇಲ್ಲದವರು ಕೂಡ ಸ್ನೇಹಿತರಾಗಿ ಬಿಡುತ್ತಾರೆ. ಗುರುತು, ಪರಿಚಯ ಇಲ್ಲದಿದ್ದವರ ಜತೆಯಲ್ಲೂ ಮೆಸೇಜ್​, ಕಾಲ್​ ಮಾಡಿ ಮಾತನಾಡಬಹುದು. ಈ ಫೇಸ್​ಬುಕ್​ನಿಂದ ಪರಿಚಯವಾಗಿ ಸ್ನೇಹ(Friendship) ಬೆಳೆದು, ಸ್ನೇಹ ಪ್ರೀತಿ(Love)ಗೆ ತಿರುಗಿ ಮದುವೆಯಾಗಿರುವವರು ಇದ್ದಾರೆ. ಇದೇ ಫೇಸ್​​ಬುಕ್​ನಿಂದ ಪರಿಚಯಾವಾಗಿ ಸ್ನೇಹ ಬೆಳೆದು, ಆ ಸ್ನೇಹ ಬ್ಲ್ಯಾಕ್​ಮೇಲ್​(Blackmail)ಗೆ ತಿರುಗಿ ಮೋಸ ಹೋದವರು ಇದ್ದಾರೆ. ಆದರೆ ಈ ಫೇಸ್​ಬುಕ್​ನಿಂದ ಮೋಸ ಹೋದವರೆ ಹೆಚ್ಚು. ಯಾವುದಾದರೂ ಹುಡುಗಿ ಹೆಸರಿನಲ್ಲಿ ರಿಕ್ವೆಸ್ಟ್​(Request) ಬಂದರೆ ಹಿಂದೆ ಮುಂದೆ ನೋಡದೆ ಹುಡುಗರು ಆಕ್ಸೆಪ್ಟ್(Accept)​ ಮಾಡಿಬಿಡುತ್ತಾರೆ. ಇಲ್ಲೇ ಪ್ರಾಬ್ಲಂ ಇರೋದು, ಕೆಲ ಖತರ್ನಾಕ್​ ಲೇಡಿಗಳು ಇದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಸಿಕ್ಕ, ಸಿಕ್ಕವರಿಗೆ ರಿಕ್ವೆಸ್ಟ್​ ಕಳುಹಿಸಿ, ನಂತರ ಅವರ ಜತೆ ಸ್ನೇಹ ಬಳಸಿ ವಂಚಿಸುತ್ತಾರೆ. ಕೆಲವರು ಫೇಕ್​ ಅಕೌಂಟ್​ (Fake Account) ಕ್ರಿಯೆಟ್​ ಮಾಡಿ ಮೋಸ ಮಾಡುತ್ತಾರೆ . ಇನ್ನೂ ಕೆಲವರು ಹೆಸರಾಂತ ವ್ಯಕ್ತಿಗಳ ಅಕೌಂಟ್​ ಹ್ಯಾಕ್​ ಮಾಡಿ ಬೇರೆಯವರ ಬಳಿ ಹಣ ಕೇಳಿ ವಂಚಿಸುತ್ತಾರೆ. ಆದರೆ ತೆಲಂಗಾಣ(Telangana)ದಲ್ಲಿ ವ್ಯಕ್ತಿಯೊಬ್ಬನಿಗೆ, ಮಹಿಳೆ ಫೇಸ್​​ಬುಕ್​​ನಲ್ಲಿ ವಿಡಿಯೋ ಕಾಲ್(Video Call)​ ಮಾಡಿ ಅದನ್ನ ರೆಕಾರ್ಡ್ (Record) ಮಾಡಿ ಬ್ಲ್ಯಾಕ್​ಮೇಲ್​ ಮಾಡಿದ್ದಾಳೆ. ಹಣ ನೀಡದಿದ್ದರೆ ಈ ವಿಡಿಯೋವನ್ನ ವೈರಲ್​ ಮಾಡುವುದಾಗಿ ಬೆದರಿಸಿದ್ದಾಳೆ. 

    ಮಾಯಾಂಗನೆ ಬಲೆಯಲ್ಲಿ ಬಿದ್ದಿದ್ದು ಹೇಗೆ?

    ತೆಲಂಗಾಣ ಬಂಜಾರ ಹಿಲ್​ ರಸ್ತೆಯ ನಿವಾಸಿ 32 ವರ್ಷದ ವ್ಯಕ್ತಿಯೊಬ್ಬ ಎಲೆಕ್ಟ್ರಿಷಿಯನ್​ ಆಗಿ ಜೀವನ ನಡೆಸುತ್ತಿದ್ದ. ಈತನ ಫೇಸ್​​ಬಕ್​ ಅಕೌಂಟ್​​ಗೆ ಸಾಕ್ಷಿ ವರ್ಮಾ(Sakshi Varma) ಎಂಬ ಹೆಸರಿನಲ್ಲಿ ರಿಕ್ವೆಸ್ಟ್​ ಬಂದಿತ್ತು. ಆಕೆಯ ಪ್ರೊಫೈಲ್​ ತೆರದು ಪರಿಶೀಲಿಸದೆ ವ್ಯಕ್ತಿ ಫ್ರೆಂಡ್​ ರಿಕ್ವೆಸ್ಟ್​ ಆಕ್ಸೆಪ್ಟ್​ ಮಾಡಿದ್ದ.  ಬಳಿಕ ಆ ಪ್ರೊಫೈಲ್​ನಿಂದ ಮೆಸೇಜ್​ ಬರಲು ಶುರುವಾಗಿತ್ತು. ಇಬ್ಬರ ನಡುವೆ ಸ್ನೇಹ ಬೆಳೆಯಿತು. ಸ್ನೇಹ ಸಲುಗೆಗೆ ತಿರುಗಿತ್ತು. ಇದಾದ ಬಳಿಕ ವಿಡಿಯೋ ಕರೆಗಳನ್ನ ಆಕೆ ಮಾಡುತ್ತಿದ್ದಳು. ಅರೆ ನಗ್ನವಾಗಿ ವಿಡಿಯೋ ಕರೆ ಮಾಡಿ ಈತನಿಗೂ ಬಟ್ಟೆ ಬಿಚ್ಚುವಂತೆ ಹೇಳಿದ್ದಳು. ಆಕೆಯ ಮಾತನ್ನು ನಂಬಿ ಅವಳು ಹೇಳಿದಂತೆ ಮಾಡಿದ್ದಾನೆ. ಇದನ್ನ ಸ್ಕ್ರೀನ್​ ರೆಕಾರ್ಡ್​ ಮಾಡಿ ಯುವತಿ ಬ್ಲ್ಯಾಕ್​ಮೇಲ್​ ಮಾಡಿದ್ದಾಳೆ.

    ಇದನ್ನೂ ಓದಿ:Murder: ಗಂಡನನ್ನು ಕೊಂದು ದೇಹ ತುಂಡರಿಸಿ ಸೂಟ್​ಕೇಸ್​ನಲ್ಲಿರಿಸಿ ಸಾಗಿಸಿದಳು.. ಸಿಸಿಟಿವಿ ಕ್ಯಾಮೆರಾದಿಂದಾಗಿ ಕೊನೆಗೆ ಸಿಕ್ಕಿಬಿದ್ದಳು!

    ವಿಡಿಯೋ ರಿಲೀಸ್​ ಮಾಡುವುದಾಗಿ ಬೆದರಿಕೆ

    ಇದಾದ ಕೆಲ ದಿನಗಳ ಬಳಿಕ ಈತನಿಗೆ ಯುವತಿ ಬ್ಲ್ಯಾಕ್​ಮೇಲ್​ ಮಾಡಲು ಶುರುಮಾಡಿದ್ದಳು. ಆಕೆಯ ಜತೆ ವ್ಯಕ್ತಿ ನಗ್ನವಾಗಿ ವಿಡಿಯೋ ಮಾಡಿರುವದನ್ನ ಕಳುಹಿಸಿ ರಿಲೀಸ್​ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಈ ವೇಳೆ ಫೇಸ್​ಬುಕ್​ ಮಾಯಾಂಗನೆ ಬಂಡವಾಳ ಈತನಿಗೆ ತಿಳಿದಿದೆ. ಯುವತಿ ಬಳಿ ಪರಿ ಪರಿಯಾಗಿ ಬೇಡಿಕೊಂಡಿದ್ದಾನೆ. ಆದರೂ ಆಕೆ ಕ್ರಿಪ್ಟೋ  ಕರೆನ್ಸಿ ಮೂಲಕ ಹಣ ನೀಡುವಂತೆ ಬೆದರಿಸಿದ್ದಾಳೆ. ಸ್ವಲ್ಪ ದಿನ ಹೀಗೆ ನಡೆದಿದೆ. ದಿನ ಕಳೆದಂತೆ ಆಕೆಯ ಕಾಟ ಹೆಚ್ಚಾಗಿ ಈತನೇ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದಾನೆ.

    ಫೇಸ್​ಬುಕ್​ ಮಾಯಾಂಗನೆಗಾಗಿ ಖಾಕಿ ಬಲೆ

    ಇನ್ನೂ ಈತನ ದೂರು ದಾಖಲಿಸಿಕೊಂಡ ಪೊಲೀಸರು, ಯುವತಿಗಾಗಿ ಬಲೆ ಬೀಸಿದ್ದಾರೆ. ಈಕೆ ಒಬ್ಬಳೆ ಈ ರೀತಿಯ ಕೃತ್ಯವನ್ನು ಮಾಡಲು ಸಾಧ್ಯವಿಲ್ಲ, ಆಕೆಯ ಹಿಂದೆ ದೊಡ್ಡದೊಂದು ತಂಡ ಕೆಲಸ ಮಾಡುತ್ತಿದೆ ಅಂತ ಪೊಲೀಸರು ಹೇಳಿದ್ದಾರೆ.  ಈ ಯುವತಿ & ಟೀಂ ಈ ಹಿಂದಯೂ ಇದೇ ರೀತಿ ಹಲವರಿಗೆ ಮೋಸ ಮಾಡಿರುವ ಶಂಕೆ ಕೂಡ ವ್ಯಕ್ತವಾಗಿದೆ.

    ವರದಿ - ವಾಸುದೇವ್​​.ಎಂ
    Published by:Latha CG
    First published: