ಉಗ್ರ ಹಫೀಜ್​ ಸಯೀದ್​ ಪಕ್ಷದ ಖಾತೆಯನ್ನು ಸ್ಥಗಿತಗೊಳಿಸಿದ ಫೇಸ್​ಬುಕ್​


Updated:July 15, 2018, 4:08 PM IST
ಉಗ್ರ ಹಫೀಜ್​ ಸಯೀದ್​ ಪಕ್ಷದ ಖಾತೆಯನ್ನು ಸ್ಥಗಿತಗೊಳಿಸಿದ ಫೇಸ್​ಬುಕ್​

Updated: July 15, 2018, 4:08 PM IST
ಇಸ್ಲಮಾಬಾದ್​: ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ಘೋಷಣೆಯಾಗುತ್ತಿದ್ದಂತಯೆ ಸಾಮಾಜಿಕ ಜಾಲತಾಣದ ಧಿಗ್ಗಜ ಫೇಸ್​ಬುಕ್​ ನಕಲಿ ಸುದ್ದಿಗಳ ಮೇಲೆ ನಿಗಾವಹಿಸಲು ತೀರ್ಮಾನಿಸಿದ್ದು, ಈ ಹಿನ್ನೆಲೆಯಲ್ಲಿ ಜಮಾತ್​ ಉದ್​ ದವಾ ನಾಯಕ ಹಾಗು ಮುಂಬೈ ಬ್ಲಾಸ್ಟ್​ ರುವಾರಿ ಹಫೀಜ್​ ಸಯೀದ್​ ಖಾತೆಯನ್ನು ಸ್ಥಗಿತಗೊಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ.

ಕೆಲ ದಿನಗಳ ಹಿಂದೆ ಪಾಕ್​ನ ಚುನಾವಣಾ ಪ್ರಾಧಿಕಾರ ಮತ್ತು ಸ್ಥಳೀಯ ಅಧಿಕಾರಿಗಹಳ ಸಹಾಯದಿಂದ ಫೇಸ್​ಬುಕ್​ ನಕಲಿ ಸುದ್ದಿ ಹರಡುವ ಫೇಸ್​ಬುಕ್​ ಖಾತೆಗಳನ್ನು ಮಟ್ಟಹಾಕಲು ತೀರ್ಮಾನಿಸಿತ್ತು. ಇದರ ಹಂತವಾಗಿ ಇಸ್ಲಾಮಿಸ್ಟ್​ ಮಿಲ್ಲಿ, ಮುಸ್ಲಿಂ ಲೀಗ್​, ಸೇರಿದಂತೆ ಹಲವಾರು ನಾಯಕರ ಖಾತೆಯನ್ನು ಸ್ಥಗಿತಗೊಳಿಸಿದೆ. ​

ಜುಲೈ 25ರಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಎಮ್​ಎಮ್​ಎಲ್​ ಪಾರ್ಟಿ ನಾಯಕರು ಸ್ಪರ್ಧಿಸಲು ತೀರ್ಮಾನಿಸಿದ್ದರು. ಆದರೆ ಪಾಕ್​ ಚುನಾವಣಾ ಆಯೋಗ ಈ ಪಕ್ಷವನ್ನು ಪರಿಗಣಿಸಿರಲಿಲ್ಲ. ಹೀಗಾಗಿ ಈ ಪಕ್ಷದ ವಕ್ತಾರ ತಬಿಷ್​ ಟ್ವಯ್ಯುಮ್​ ಸ್ಥಳೀಯ ಪಕ್ಷ ಅಲ್ಲಾ ಹು ಅಕ್ಬರ್​ ತೆಹ್ರೀಕ್​ ಪಕ್ಷದಿಂದ 200 ನಾಯಕರು ಸ್ಪರ್ಧಿಸುವುದಾಗಿ ಘೋಷಿಸಿದ್ದರು.

ಅಲ್ಲದೇ ಇವರು ಪಕ್ಷದ ಹಲವು ನಾಯಕರ ಫೇಸ್​ಬುಕ್​ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಆರೋಪಿಸಿರುವ ತಬಿಷ್​, ಫೇಸ್​ಬುಕ್ ವಾಕ್​ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮೂಲಕ ನಮ್ಮ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಭಾರತ, ಪಾಕಿಸ್ತಾನ, ಮೆಕ್ಸಿಕೋ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯಾಗಿ ಈ ರೀತಿ ಕ್ರಮ ಕೈಗೊಳ್ಳುವುದಾಗಿ ಫೇಸ್​ಬುಕ್​ ನಿರ್ಮಾತೃ ಮಾರ್ಕ್​ ಜುಕರ್​​ ಬರ್ಗ್​ ಹೇಳಿದ್ದರು.
First published:July 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...