ಇನ್ಮುಂದೆ ನಕಲಿ ಪೋಸ್ಟ್​ ಅಳಿಸಿ ಹಾಕುತ್ತೆ ಫೇಸ್​ಬುಕ್!: 10 ಸಾವಿರ ಎಫ್​ಬಿ ಕ್ಲೀನರ್ಸ್​ ನೇಮಕ!


Updated:September 6, 2018, 10:00 AM IST
ಇನ್ಮುಂದೆ ನಕಲಿ ಪೋಸ್ಟ್​ ಅಳಿಸಿ ಹಾಕುತ್ತೆ ಫೇಸ್​ಬುಕ್!: 10 ಸಾವಿರ ಎಫ್​ಬಿ ಕ್ಲೀನರ್ಸ್​ ನೇಮಕ!

Updated: September 6, 2018, 10:00 AM IST
ನ್ಯೂಸ್​ 18 ಕನ್ನಡ

ಇತ್ತೀಚಿನ ದಿನಗಳಲ್ಲಿ ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಫೇಸ್​ಬುಕ್ ಎಂಬ ಸಾಮಾಜಿಕ ಜಾಲಾತಾಣ ಅಧಿಕ ಪ್ರಮಾಣದಲ್ಲಿ ದುರ್ಬಳಕೆಯಾಗುತ್ತಿದೆ. ಫೇಸ್​ಬುಕ್​ ಮೂಲಕ ಸುಳ್ಳು ಸುದ್ದಿಗಳು, ಮಾನಹಾನಿಯಾಗುವ ಸಂದೇಶಗಳು ಹಾಗೂ ಸಮಾಜದ ಶಾಂತಿ ಕದಡಿಸುವ ಹಾಗೂ ಕೋಮು ಗಲಭೆಗೆ ಕಾರಣವಾಗುವ ಪೋಸ್ಟ್​ಗಳ ಸಂಖ್ಯೆ ಜಾಸ್ತಿಯಾಗಿವೆ. ಈ ಮೂಲಕ ಗಲಭೆಯಾಗಿ ಹಿಂಸಾಚಾರಕ್ಕೂ ತಿರುಗಿದೆ. ಆದರೀಗ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಫೇಸ್​ಬುಕ್​, ಈ ವೇದಿಕೆಯನ್ನು ದುರ್ಬಳಕೆ ಮಾಡಿಕೊಳ್ಳದಿರುವಂತೆ ಇದೇ ಮೊದಲ ಬಾರಿ ಗುಣಮಟ್ಟ ನಿರ್ವಹಣೆ ಹಾಗೂ ಆಕ್ಷೇಪಾರ್ಹ ಪೋಸ್ಟ್​ಗಳನ್ನು ಅಳಿಸಿ ಹಾಕಲು 10 ಸಾವಿರ ನೌಕರರನ್ನು ನೇಮಿಸಲು ಮುಂದಾಗಿದೆ.

"ಫೇಸ್​ಬುಕ್​ನಲ್ಲಿ ಸುಳ್ಳು ಸದ್ದಿಗಳು ಪೋಸ್ಟ್​ ಆಗಬಹುದು, ಅದಕ್ಕೆ ಯಾವುದೇ ರೀತಿಯ ಸೆನ್ಸಾರ್​ ಇಲ್ಲ. ಆದರೂ ಅವಹೆಲನಕಾರಿ ಹೇಳಿಕೆಗಳು, ಮಾನಹಾನಿ ಪೋಸ್ಟ್​ಗಳು ಹರಡುವುದು ಸಹಿಸಲಸಾಧ್ಯವಾದ ವಿಚಾರ. ಇಂತಹ ನಕಲಿ ಸುದ್ದಿಗಳು ಹಾಗೂ ಜವದಂತಿಗಳನ್ನು ಹಬ್ಬಿಸುವುದು ಕಾನೂನುಬಾಹಿರ" ಎಂದು ಫೇಸ್​ಬುಕ್​ನ ಗ್ಲೋಬಲ್​ ಪಾಲಿಸಿ ಮ್ಯಾನೇಜ್ಮೆಂಟ್​ ಮುಖ್ಯಸ್ಥೆ ಮೋನಿಕಾ ಬಿಕರ್ಟ್​ ತಿಳಿಸಿದ್ದಾರೆ.

ಇದು ಹೆಗೆ ಸಾಧ್ಯ?

ಜೆನ್​ಪ್ಯಾಕ್ಟ್​ ಹೆಸರಿನ ಕಂಪೆನಿಯು ಈ ವರ್ಷ ಫೇಸ್​ಬುಕ್​ಗೆ ಕಂಟೆಂಟ್​ ಮ್ಯಾನೇಜ್ಮೇಂಟ್​ ಒದಗಿಸುವ ಗುತ್ತಿಗೆ ಪಡೆದಿದೆ. ಈಗಾಗಲೇ ಇದು ಕಂಟೆಂಟ್​ ಮಾಡರೇಟರ್​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಪ್ರಾದೇಶಿಕ ಭಾಷೆ ಬಲ್ಲವರಿಗೂ ಉದ್ಯೋಗಾವಕಾಶ ಸೃಷ್ಟಿಯಾಗಿದೆ. ಯಾವುದೇ ರೀತಿಯ ಅಶ್ಲೀಲ, ಭಯೋತ್ಪಾದನೆ, ಮಕ್ಕಳ ಮೇಲಿನ ದೌರ್ಜನ್ಯ, ರಕ್ತಪಾತ, ಆತ್ಮಹತ್ಯೆಯ ಲೈವ್​ ವಿಡಿಯೋ ಮೊಲಾದವುಗಳನ್ನು ಪ್ರಕಟವಾಗದಂತೆ ತಡೆಯುವುದೇ ಇದರ ಗುರಿ.

50ಕ್ಕೂ ಹೆಚ್ಚು ಭಾಷೆಗಳಲ್ಲಿ ತಪಾಸಣೆ:
Loading...

ಫೇಸ್​ಬುಕ್​ ಕಂಟೆಂಟ್​ ಮಾಡರೇಟರ್​ಗಳನ್ನು ನೇರವಾಗಿ ಹಾಗೂ ಹೊರಗುತ್ತಿಗೆ ನೀಡುವ ಮೂಲಕ ನೇಮಿಸಿಕೊಳ್ಳುತ್ತಿದೆ. ಈ ಮೂಲಕ 50ಕ್ಕೂ ಹೆಚ್ಚು ಭಾಷೆಗಳಲ್ಲಿ ಪೋಸ್ಟ್​ಗಳ ತಪಾಸಣೆ ನಡೆಯಲಿದೆ.

ಏಪ್ರಿಲ್​ನಲ್ಲಷ್ಟೇ ಫೇಸ್​ಬುಕ್​ ಪೋಸ್ಟ್​ ಮಾಡುವ ವಿಷಯ ಹಾಗೂ ವಿಡಿಯೋಗಳು ಹೇಗೆ ಸುರಕ್ಷಿತವಾಗಿರಬೇಕು ಎಂಬ ಮಾರ್ಗದರ್ಶಿಯನ್ನು ಬಿಡುಗಡೆಗೊಳಿಸಿತ್ತು. ಕಾನೂನು ಪ್ರಕಾರ ನಿಷೇಧಾತ್ಮಕ ಸಂಗತಿಗಳ ಸಂಪೂರ್ಣ ವಿವರಗಳನ್ನು ಉದಾಹರಣೆಯೊಂದಿಗೆ ನೀಡಿತ್ತು.

ಫೇಸ್​ಬುಕ್​ ಸ್ವಚ್ಛತಾ ಕಾರ್ಯ ಚುರುಕು: 

ಫೇಸ್​ಬುಕ್​ ಈಗಾಗಲೇ 108 ಕೋಟಿಗೂ ಅಧಿಕ ಪೋಸ್ಟ್​ಗಳ ವಿರುದ್ಧ ಕ್ರಮ ಕೈಗೊಂಡಿದೆ. ಅವುಗಳನ್ನು ಬಹುತೇಕ ಅಳಿಸಿ ಹಾಕಿದೆ. ಇದರಲ್ಲಿ ಬರೋಬ್ಬರಿ 58 ಕೋಟಿ ನಕಲಿ ಖಅತೆಗಳೂ ಇವೆ ಎನ್ನಲಾಗಿದೆ.
First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...