Hiroshima Nagasaki: ದಶಕಗಳೇ ಕಳೆದರು ಕರಗಿಲ್ಲ ನೋವು, ಪರಮಾಣು ಬಾಂಬ್​ನಿಂದ ನರಳುತ್ತಲೇ ಇದ್ದಾರೆ ಜನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Nuclear Bomb: ಹಿರೋಷಿಮಾ ಬಾಂಬ್ ಸ್ಫೋಟದ ಐದು ಪ್ರತ್ಯಕ್ಷದರ್ಶಿಗಳು ನೀಡಿರುವ ಈ  ವಿವರಗಳು  ಆ ಬಾಂಬ್ ಸ್ಫೋಟ ಜಾಗತಿಕವಾಗಿ ಹಾನಿಯುಂಟು ಮಾಡುವುದರ ಜೊತೆಗೆ ಹೇಗೆ ಜನರ ವೈಯಕ್ತಿಕ ಬದುಕನ್ನು ಬದಲಾಯಿಸಿತು ಎಂಬ ಮನಕಲಕುವ ಕತೆಯನ್ನು ಬಿಚ್ಚಿಡುತ್ತವೆ

  • Share this:

76 ವರ್ಷಗಳ ಹಿಂದೆ, ಆಗಸ್ಟ್ 6, 1945 ರಂದು, ಜಗತ್ತು ಯೋಚಿಸಲು ಮತ್ತು ಊಹಿಸಲಾಗದ  ಒಂದು ಘಟನೆ ನಡೆಯುತ್ತದೆ.  ಅದನ್ನ ಇಂದಿಗೂ ಜನರು ಮರೆತಿಲ್ಲ. ಅದು ಮರೆಯಲು ಅಸಾಧ್ಯವಾದ ದಿನ. 1945 ರಲ್ಲಿ ಈ ದಿನ, ಯುನೈಟೆಡ್ ಸ್ಟೇಟ್ಸ್(US), ಬ್ರಿಟನ್ ಮತ್ತು ಕೆನಡಾದ ಜೊತೆ ಚರ್ಚಿಸಿ, ಜಪಾನಿನ ನಗರವಾದ ಹಿರೋಶಿಮಾದಲ್ಲಿ(Hiroshima) ಪರಮಾಣು ಬಾಂಬ್ ಎಸೆಯುವ ಮೂಲಕ ಸುಮಾರು 80,000 ಜನರನ್ನು ಕ್ಷಣಾರ್ಧದಲ್ಲಿ  ಬಲಿ ಪಡೆದಿತ್ತು. ಬಾಂಬ್ ಸ್ಫೋಟದ ಸ್ಥಳದ ಹತ್ತಿರವಿರುವ ಹೆಚ್ಚಿನ ಜನರು ಬದುಕುಳಿಯಲಿಲ್ಲ. ಬದುಕುಳಿದವರು ವಿಕಿರಣದಿಂದ ಉಂಟಾಗುವ ರೋಗಗಳನ್ನು ಅನುಭವಿಸುತ್ತಿದ್ದಾರೆ. ಅಲ್ಲದೇ ಅದೇ ರೋಗಗಳು ಇಂದಿನ ಪೀಳಿಗೆಯನ್ನು ಸಹ ಕಾಡುತ್ತಿದ್ದು, ಅವರು ನರಕ ಅನುಭವಿಸುತ್ತಿದ್ದಾರೆ.


ಹಿರೋಷಿಮಾ ಬಾಂಬ್ ಸ್ಫೋಟದ ಐದು ಪ್ರತ್ಯಕ್ಷದರ್ಶಿಗಳು ನೀಡಿರುವ ಈ  ವಿವರಗಳು  ಆ ಬಾಂಬ್ ಸ್ಫೋಟ ಜಾಗತಿಕವಾಗಿ ಹಾನಿಯುಂಟು ಮಾಡುವುದರ ಜೊತೆಗೆ ಹೇಗೆ ಜನರ ವೈಯಕ್ತಿಕ ಬದುಕನ್ನು ಬದಲಾಯಿಸಿತು ಎಂಬ  ಕತೆಯನ್ನು ಬಿಚ್ಚಿಡುತ್ತವೆ


1. ಫ್ಯೂಜಿಯೊ ತರಿಕೋಶಿ,: 2017 ರಲ್ಲಿ ಡಾಕ್ಯುಮೆಂಟರಿ ಪ್ರಾಜೆಕ್ಟ್ 1945 ಗಾಗಿ ಫ್ಯೂಜಿಯೊ ತನ್ನ ಅನುಭವವನ್ನು ಹಂಚಿಕೊಂಡಾಗ ಅವರಿಗೆ  86 ವರ್ಷ ವಯಸ್ಸಾಗಿತ್ತು. ಅವರ ಪ್ರಕಾರ  ಆಕಾಶದಲ್ಲಿ ಎಂಜಿನ್‌ಗಳ  ದೊಡ್ಡ ಶಬ್ಧ ಕೇಳಿತು. ಆ ಸಮಯದಲ್ಲಿ ಅವರು ತಮ್ಮ ತಾಯಿ ಜೊತೆ ಉಪಹಾರ ಮಾಡುತ್ತಿದ್ದರು. ಆ ಘಟನೆ ನಡೆದಾಗ ತರಿಕೋಶಿ ಅವರಿಗೆ 14 ವರ್ಷ. ಅವರು ಆ ಶಬ್ಧ ಕೇಳಿ ಹೊರಬಂದಾಗ, ಅವರಿಗೆ ಯಾವುದೇ ವಿಮಾನಗಳು ಕಾಣಲಿಲ್ಲ.   ಕೇವಲ ಆಕಾಶದಲ್ಲಿ ಒಂದು ಕಪ್ಪು ಚುಕ್ಕೆ ಮಾತ್ರ ಕಾಣಿಸಿತು. ಅದು ಅವರನ್ನು ದಿಗ್ಭ್ರಮೆಗೊಳಿಸಿತು. ಇದ್ದಕ್ಕಿದ್ದಂತೆ, ತರಿಕೋಶಿಯ ಸುತ್ತಮುತ್ತಲಿನ ಪ್ರದೇಶ ಕಾಣದಂತೆ ಆ ಕಪ್ಪು ಚುಕ್ಕಿ ಸಿಡಿಯಿತು.  ಅವರ ಮುಖಕ್ಕೆ ಬಿಸಿಗಾಳಿ ಬೀಸಿತು.ಅವರು ಕಣ್ಣುಮುಚ್ಚಿ ನೆಲಕ್ಕೆ ಬಿದ್ದಿದ್ದರು. ನಾನು ಹೆಜ್ಜೆಯಿಡಲು ಪ್ರಯತ್ನಿಸಿದಾಗ, ಮತ್ತೊಂದು ಗಾಳಿಯು ನನ್ನನ್ನು  ಮೇಲಕ್ಕೆತ್ತಿದಂತ ಅನುಭವವಾಗುತಿತ್ತು. ಅದರ ನಂತರ ಏನಾಯಿತು ಎಂದು ನನಗೆ ನೆನಪಿಲ್ಲ, ಎಂದು ತರಿಕೋಶಿ ಹೇಳಿದ್ದಾರೆ.


ಇದನ್ನೂ ಓದಿ: ವಿಶ್ವದ ಅತೀ ಎತ್ತರದ ರಸ್ತೆ ನಿರ್ಮಿಸಿದೆ ಭಾರತ, ಅಲ್ಲಿಗೆ ಹೋಗೋದು ಹೇಗೆ? ಟ್ರಿಪ್ ಹೋಗ್ಬಹುದಾ? ಫುಲ್ ಡೀಟೆಲ್ಸ್


2. ಎಮಿಕೊ ಒಕಾಡಾ: ಬಾಂಬ್ ಬಿದ್ದಾಗ ಎಮಿಕೊ ಒಕಾಡಾಗೆ ಎಂಟು ವರ್ಷ. ಆಕೆಯ 12 ವರ್ಷದ ಸಹೋದರಿ ಕಟ್ಟಡವನ್ನು ಕೆಡವುವ ಕೆಲಸಕ್ಕೆ ಬೇಗ ಹೋಗಿದ್ದಳು. ಆದರೆ ಮತ್ತೆ ಹಿಂತಿರುಗಿ ಬರಲಿಲ್ಲ. ಬಾಂಬ್ ಸ್ಫೋಟದ ಹೈಪೋಸೆಂಟರ್‌ನಿಂದ 2.8 ಕಿಲೋಮೀಟರ್‌ಗಳಷ್ಟು ದೂರದಲ್ಲಿದ್ದರೂ ಸಹ ಅದು  ಒಕಾಡಾಗೆ ಸಹಾಯವಾಗಲಿಲ್ಲ. ಆ ವಿಕಿರಣವು ಅವಳನ್ನು  ತಲುಪಿದಾಗ ಅದೇನೋ ವಿಚಿತ್ರ ಅನುಭವವಾಯಿತು. ಅವಳಿಗೆ ವಿಪರೀತವಾಗಿ ವಾಂತಿ ಆರಂಭವಾಯಿತು.  ನಂತರ ದಿನಗಳು ನಿಜಕ್ಕೂ ನರಕ ಎನ್ನುತ್ತಾಳೆ ಒಕಾಡಾ. ನನ್ನ ಕೂದಲು ಉದುರಲು ಆರಂಭಿಸಿತು, ನನ್ನ ಒಸಡುಗಳಲ್ಲಿ ರಕ್ತಸ್ರಾವವಾಯಿತು, ಮತ್ತು ನಾನು ಶಾಲೆಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೆ ಎಂದು ಒಕಾಡಾ ತಮ್ಮ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.


3. ರಿಯೋಗ ಸುವ : 2017 ರ ಈ ಸಾಕ್ಷ್ಯ ಚಿತ್ರದ ಸಮಯದಲ್ಲಿ ರಿಯೋಗ ಸುವಗೆ 84 ವರ್ಷ. ರಿಯೋ ತನ್ನನ್ನ ನಾನು ಪರಮಾಣು ಬಾಂಬ್ ಅನಾಥ ಎಂದು ಕರೆದುಕೊಳ್ಳುತ್ತಾರೆ. ಅವರ ಸಹೋದರಿ ಬಾಂಬ್ ದಾಳಿಯಲ್ಲಿ ಮೃತಪಟ್ಟಿದ್ದರೆ, ಅವರ ಪೋಷಕರು ಕಾಣೆಯಾಗಿದ್ದರು. ಆದರೆ, ಬಾಂಬ್ ಸ್ಫೋಟದ ದಿನ, ಸುವ ಈ ಪ್ರದೇಶದಲ್ಲಿ ಇರಲಿಲ್ಲ. ಅವರು ಒಂದು ತಿಂಗಳು ಮತ್ತು 10 ದಿನಗಳ ನಂತರ ಹಿಂದಿರುಗಿದಾಗ, ಆಸ್ತಿಯಲ್ಲಿ ಉಳಿದಿರುವುದು ದೇವಾಲಯದ ಸ್ಮಶಾನದ ಸಮಾಧಿ ಶಿಲೆಗಳಿಂದ ಉರುಳಿದ  ಕಲ್ಲುಗಳ ರಾಶಿ ಮಾತ್ರ. ಅಂದು ಹಿರೋಷಿಮಾ ಸಮತಟ್ಟಾದ ಪಾಳುಭೂಮಿಯಾಗಿತ್ತು ಎಂದು ಸುವ  ಆ ಕರಾಳ ದಿನಗಳನ್ನು ನೆನಪಿಸಿಕೊಂಡಿದ್ದಾರೆ.


4. ಟೇಕೊ ಟೆರಾಮೇ : ಆ ಬಾಂಬ್ ದಾಳಿ ನಡೆದಾಗ ಈಕೆಗೆ ಕೇವಲ16 ವರ್ಷ. ಆ ದಿನ ಬೆಳಿಗ್ಗೆ ಕೆಲಸದ ಸ್ಥಳದಲ್ಲಿ ಕಾಯುತ್ತಾ, ಕಿಟಕಿಯ ಹೊರಗೆ ನೋಡಿದಾಗ, ಅವಳಿಗೆ ಸ್ಪಷ್ಟವಾದ ನೀಲಿ ಆಕಾಶದಲ್ಲಿ ಹೊಳೆಯುವ ವಸ್ತುವು ಬೀಳುತ್ತಿರುವುದು ಕಾಣಿಸಿತು. ಅದು ಏನೆಂದು ಕೇಳಲು ಸ್ನೇಹಿತೆಯ ಕಡೆಗೆ ತಿರುಗಿದಾಗ, ನಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಪ್ರಕಾಶಮಾನವಾದ ಶಕ್ತಿಯೊಂದು ಆವರಿಸಿತು. ಏನಾಗುತ್ತಿದೆ ಎಂಬುದು ತಿಳಿಯಲಿಲ್ಲ ಎಂದು ಆಕೆ ಹೇಳಿದ್ದಾರೆ.  ಅಲ್ಲದೇ ಟೆರಾಮೇ ತನ್ನ ಬಾಯಿ ಮತ್ತು ಕಣ್ಣುಗಳಲ್ಲಿ ಧೂಳು ಆವರಿಸಿತು ಮತ್ತು ಎಲ್ಲವೂ ಕತ್ತಲೆಯಾಯಿತು ಎಂದು ನೆನಪಿಸಿ ಕೊಂಡಿದ್ದಾರೆ.  ಟೆರಾಮೇಗೆ ಆ  ವಿಷಕಾರಿ ಹೊಗೆ ಉಸಿರುಗಟ್ಟಿಸಿತ್ತು ಎಂದು ಡೊಕ್ಯೂಮೆಂಟರಿಯಲ್ಲಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: ಪ್ರಶಸ್ತಿಗೆ ಹೊಸಾ ಹೆಸರು, ಇನ್ಮುಂದೆ ಇದು Major Dhyan Chand Khel Ratna ಪ್ರಶಸ್ತಿ: ಮೋದಿ


5. ಜೊಂಗ್‌ಕೆನ್ ಲೀ : 13 ವರ್ಷದ ಜೊಂಗ್‌ಕೆನ್ ಲೀ ಆ ದಿನ ಕೆಲಸಕ್ಕೆ ಹೋಗುತ್ತಿದ್ದಾಗ ಬಾಂಬ್ ಸ್ಫೋಟಗೊಂಡಿತು. ಆ ಸ್ಫೋಟದಿಂದ ಸುಟ್ಟಗಾಯಗಳಾದವು. ಲೀ ಅವರ ಹೆತ್ತವರಿಗೆ ಅವನು ಎಲ್ಲಿ ಕೆಲಸ ಮಾಡುತ್ತಿದ್ದನೆಂದು ತಿಳಿದಿರಲಿಲ್ಲ ಮತ್ತು ಅವನನ್ನು ಹುಡುಕಲು ಅವರಿಗೆ ಒಂದು ವರ್ಷ ಬೇಕಾಯಿತು. ಕೆಲಸಕ್ಕೆ ಹೊರಟಿದ್ದ ಲೀ ಸಹೋದರಿ ಸಹ ನಾಪತ್ತೆಯಾಗಿದ್ದಳು.


ಹಿರೋಷಿಮಾದಲ್ಲಿನ ವಿನಾಶ ಅಮೆರಿಕಕ್ಕೆ ಸಾಕಾಗಲಿಲ್ಲ. ಅದು ಮತ್ತೊಂದು ಪರಮಾಣು ಬಾಂಬ್ ಅನ್ನು ಜಪಾನಿನ  ಇನ್ನೊಂದು ನಗರ ನಾಗಸಾಕಿಯ ಮೇಲೆ ಹಾಕಿತು. ಅದು ಸುಮಾರು 40,000 ಜನರನ್ನು ಬಲಿ ಪಡೆಯಿತು. ಮಾನವ ನಿರ್ಮಿತ  ಈ ಭಯೋತ್ಪಾದನಕ ಕೃತ್ಯ ಒಟ್ಟು ಎರಡು ಲಕ್ಷಕ್ಕೂ ಹೆಚ್ಚು ಜನರ ಸಾವುನೋವಿಗೆ ಕಾರಣವಾಗಿದೆ.

First published: