• Home
 • »
 • News
 • »
 • national-international
 • »
 • Conjunctivitis: ಮುಂಬೈಯಲ್ಲಿ ಹೆಚ್ಚುತ್ತಿರುವ ಕಂಜಂಕ್ಟಿವೈಟಿಸ್ ಪ್ರಕರಣ! ರೋಗಲಕ್ಷಣಗಳ ಬಗ್ಗೆ ಇಲ್ಲಿದೆ ವಿವರ

Conjunctivitis: ಮುಂಬೈಯಲ್ಲಿ ಹೆಚ್ಚುತ್ತಿರುವ ಕಂಜಂಕ್ಟಿವೈಟಿಸ್ ಪ್ರಕರಣ! ರೋಗಲಕ್ಷಣಗಳ ಬಗ್ಗೆ ಇಲ್ಲಿದೆ ವಿವರ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಮುಂಬೈಯಲ್ಲಿ ಮಳೆ ಹೆಚ್ಚಾಗಿದ್ದರಿಂದ ಕಂಜಂಕ್ಟಿವೈಟಿಸ್ ಪ್ರಕರಣಗಳಲ್ಲಿ ಹಠಾತ್ ಹೆಚ್ಚಳವನ್ನು ನಾವು ನೋಡುತ್ತಿದ್ದೇವೆ ಅಂತ ವೈದ್ಯರು ಹೇಳುತ್ತಿದ್ದಾರೆ. ಇಂತಹ ಹವಾಮಾನದಲ್ಲಿ ಗಾಳಿಯಲ್ಲಿನ ತೇವಾಂಶವು ಹೆಚ್ಚಾಗುತ್ತದೆ ಮತ್ತು ಈ ವಾತಾವರಣವು ಸಾಂಕ್ರಾಮಿಕ ರೋಗಗಳಿಗೆ ಅನುಕೂಲಕರವಾಗಿರುತ್ತದೆ ಎಂದು ಮುರಳಿ ದಿಯೋರಾ ಕಣ್ಣಿನ ಆಸ್ಪತ್ರೆಯ ಮುಖ್ಯ ಆರೋಗ್ಯ ಅಧಿಕಾರಿ ಡಾ.ವರ್ಷಾ ರೋಕ್ಡೆ ಅವರು ಸುದ್ದಿ ಮಾಧ್ಯಮಕ್ಕೆ ತಿಳಿಸಿದರು.

ಮುಂದೆ ಓದಿ ...
 • Share this:

ಹೆಚ್ಚಾಗಿ ಜನರಿಗೆ ಕಂಜಂಕ್ಟಿವೈಟಿಸ್ (Conjunctivitis) ಅಂತ ಹೇಳಿದರೆನೆ ಬೇಗ ಅರ್ಥವಾಗುವ ಈ ಕಣ್ಣಿನ ಬೇನೆಯನ್ನು ಕನ್ನಡದಲ್ಲಿ ಕೆಂಗೆಣ್ಣು ಬೇನೆ ಅಥವಾ ನೋವು ಅಂತ ಸಹ ಕರೆಯುತ್ತಾರೆ. ಇದರ ಬಗ್ಗೆ ಈಗೇಕೆ ಮಾತು ಅಂತೀರಾ? ಈ ಪ್ರಕರಣಗಳು ಮುಂಬೈ (Mumbai) ನಗರದಲ್ಲಿ ತುಂಬಾನೇ ವರದಿಯಾಗುತ್ತಿವೆ. ಅಕ್ಟೋಬರ್ ಮೊದಲ ಎರಡು ವಾರಗಳಲ್ಲಿ ಮುಂಬೈನಲ್ಲಿ ವರದಿಯಾದ ಕಂಜಂಕ್ಟಿವೈಟಿಸ್ ಪ್ರಕರಣಗಳಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಹೇಳಿಕೆಯ ಪ್ರಕಾರ, ಸುಮಾರು 250 ರಿಂದ 300 ಕಂಜಂಕ್ಟಿವೈಟಿಸ್ ರೋಗಿಗಳಿಗೆ ಮುರಳಿ ದಿಯೋರಾ ಕಣ್ಣಿನ ಆಸ್ಪತ್ರೆಯಲ್ಲಿ (Eye Hospital) ಕಡಿಮೆ ಅವಧಿಯಲ್ಲಿ ಈಗಾಗಲೇ ಚಿಕಿತ್ಸೆ ನೀಡಲಾಗಿದೆ ಮತ್ತು ನಗರದಾದ್ಯಂತ ಈ ಪ್ರಕರಣಗಳು (Cases) ದಿನೇ ದಿನೇ ಹೆಚ್ಚುತ್ತಿವೆ.


ಕಂಜಂಕ್ಟಿವೈಟಿಸ್ ಪ್ರಕರಣಗಳು ಹೆಚ್ಚಾಗಲು ಕಾರಣಗಳೇನು?
ಮುಂಬೈಯಲ್ಲಿ ಮಳೆ ಹೆಚ್ಚಾಗಿದ್ದರಿಂದ ಕಂಜಂಕ್ಟಿವೈಟಿಸ್ ಪ್ರಕರಣಗಳಲ್ಲಿ ಹಠಾತ್ ಹೆಚ್ಚಳವನ್ನು ನಾವು ನೋಡುತ್ತಿದ್ದೇವೆ ಅಂತ ವೈದ್ಯರು ಹೇಳುತ್ತಿದ್ದಾರೆ. ಇಂತಹ ಹವಾಮಾನದಲ್ಲಿ ಗಾಳಿಯಲ್ಲಿನ ತೇವಾಂಶವು ಹೆಚ್ಚಾಗುತ್ತದೆ ಮತ್ತು ಈ ವಾತಾವರಣವು ಸಾಂಕ್ರಾಮಿಕ ರೋಗಗಳಿಗೆ ಅನುಕೂಲಕರವಾಗಿರುತ್ತದೆ ಎಂದು ಮುರಳಿ ದಿಯೋರಾ ಕಣ್ಣಿನ ಆಸ್ಪತ್ರೆಯ ಮುಖ್ಯ ಆರೋಗ್ಯ ಅಧಿಕಾರಿ ಡಾ.ವರ್ಷಾ ರೋಕ್ಡೆ ಅವರು ಸುದ್ದಿ ಮಾಧ್ಯಮಕ್ಕೆ ತಿಳಿಸಿದರು.


ಬಹುತೇಕರಿಗೆ ಈ ಕಂಜಂಕ್ಟಿವೈಟಿಸ್ ಎಂದರೇನು? ಅದು ಹೇಗೆ ಹರಡುತ್ತದೆ? ಅದನ್ನು ಹೇಗೆ ತಡೆಗಟ್ಟುವುದು ಅಂತ ತಿಳಿದಿರುವುದಿಲ್ಲ. ಇದೆಲ್ಲವನ್ನು ನೀವು ವಿವರವಾಗಿ ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ತಿಯಾಗಿ ಓದಿ.


ಕಂಜಂಕ್ಟಿವೈಟಿಸ್ ಎಂದರೇನು ಮತ್ತು ಅದಕ್ಕೆ ಕಾರಣವೇನು?
'ಪಿಂಕ್ ಐ' ಎಂದೂ ಸಹ ಕರೆಯಲ್ಪಡುವ ಕಂಜಂಕ್ಟಿವೈಟಿಸ್ ಎಂಬುದು ಬ್ಯಾಕ್ಟೀರಿಯಾ, ವೈರಲ್ ಸೋಂಕುಗಳು ಅಥವಾ ಅಲರ್ಜಿಯ ಪ್ರತಿಕ್ರಿಯೆಗಳಿಂದ ಉಂಟಾಗುವ ಸಾಂಕ್ರಾಮಿಕ ಕಣ್ಣಿನ ಉರಿಯೂತವಾಗಿದೆ.


ಇದನ್ನೂ ಓದಿ:  Breast Cancer: ಸ್ತನ ಕ್ಯಾನ್ಸರ್ ನಂತರವೂ ಆರೋಗ್ಯವಾಗಿರಲು ಈ ಬದಲಾವಣೆಗಳನ್ನು ಮಾಡಿಕೊಳ್ಳಿ!


ಈ ಕಣ್ಣಿನ ಸೋಂಕಿಗೆ ಕಾರಣವಾಗುವ ಕೆಲವು ಬ್ಯಾಕ್ಟೀರಿಯಾಗಳಲ್ಲಿ ಸ್ಟಾಫಿಲೋಕಾಕಸ್ ಆರಿಯಸ್, ಹಿಮೋಫಿಲಸ್ ಇನ್ಫ್ಲುಯೆನ್ಸಾ, ಸ್ಟ್ರೆಪ್ಟೋಕಾಕಸ್ ನ್ಯುಮೋನಿಯಾ ಮತ್ತು ಸ್ಯೂಡೋಮೊನಾಸ್ ಎರುಗಿನೋಸಾ ಸೇರಿವೆ ಅಂತ ಹೇಳಲಾಗುತ್ತಿದೆ.


ಇದಲ್ಲದೆ, ಇದನ್ನು ಪ್ರಚೋದಿಸುವ ಕೆಲವು ಅಲರ್ಜಿಕಾರಕಗಳೆಂದರೆ ಪರಾಗ, ಕೊಳಕು, ಹೊಗೆ, ಈಜುಕೊಳದಲ್ಲಿ ಹಾಕಿರುವ ಕ್ಲೋರಿನ್, ಕಾಂಟ್ಯಾಕ್ಟ್ ಲೆನ್ಸ್ ಗಳು ಮತ್ತು ಶಾಂಪೂಗಳು ಮತ್ತು ಸೌಂದರ್ಯವರ್ಧಕಗಳಂತಹ ಕೆಲವು ರಾಸಾಯನಿಕ ವಸ್ತುಗಳು ಅಂತ ಹೇಳಲಾಗುತ್ತಿದೆ.


ಕಂಜಂಕ್ಟಿವೈಟಿಸ್ ನ ರೋಗಲಕ್ಷಣಗಳು ಯಾವುವು?
ನಿಮಗೆ ಕಂಜಂಕ್ಟಿವೈಟಿಸ್ ಇದೆ ಎಂದು ಸೂಚಿಸುವ ಕೆಲವು ರೋಗಲಕ್ಷಣಗಳಲ್ಲಿ ನಿಮ್ಮ ಕಣ್ಣಿನ ಬಿಳಿ ಅಥವಾ ಒಳಗಿನ ರೆಪ್ಪೆಗಳಲ್ಲಿ ಕೆಂಪಾಗುವುದು, ಕಣ್ಣಿನಿಂದ ನೀರು ಸುರಿಯುವುದು ಮತ್ತು ನೋವಾಗುವುದು, ರೆಪ್ಪೆಗಳ ಮೇಲೆ ದಪ್ಪವಾಗಿ ಬರುವ ಹಳದಿ ಬಣ್ಣದ ಪಿಸುರು ಮತ್ತು ಒಂದು ಅಥವಾ ಎರಡೂ ಕಣ್ಣುಗಳಲ್ಲಿನ ಕಠೋರವಾದ ಅನುಭವವಾಗುವುದು ಸೇರಿವೆ. ಬೆಳಕನ್ನು ನೋಡಲು ಆಗದೆ ಕಣ್ಣುಗಳು ತುರಿಕೆ ಮತ್ತು ಭಾರವನ್ನು ಅನುಭವಿಸಬಹುದು.


ಈ ಕಂಜಂಕ್ಟಿವೈಟಿಸ್ ರೋಗಲಕ್ಷಣಗಳು ನಿಮ್ಮ ಅನುಭವಕ್ಕೆ ಬಂದರೆ ಏನು ಮಾಡಬೇಕು?


 • ನಿಮ್ಮ ಕಣ್ಣುಗಳಲ್ಲಿ ನೋವು ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು.

 • ನಿಮ್ಮ ವೈದ್ಯರು ಸಾಮಾನ್ಯವಾಗಿ ನೀಡುವ ಡ್ರಾಪ್ಸ್ ಗಳು ಅಥವಾ ಮುಲಾಮು ಬ್ಯಾಕ್ಟೀರಿಯಾದ ಕಂಜಂಕ್ಟಿವೈಟಿಸ್ ಗಾಗಿ ಪ್ರತಿಜೀವಕವನ್ನು ಸೂಚಿಸುವ ಸಾಧ್ಯತೆಯಿದೆ. ಪ್ರತಿಜೀವಕಗಳು ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡಲು, ತೊಡಕುಗಳನ್ನು ಕಡಿಮೆ ಮಾಡಲು ಮತ್ತು ಇತರರಿಗೆ ಹರಡುವುದನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.

 • ವೈರಲ್ ಆಗಿರಲಿ ಅಥವಾ ಬ್ಯಾಕ್ಟೀರಿಯಾವಾಗಿರಲಿ, ಈ ಸೋಂಕು ಸಾಮಾನ್ಯವಾಗಿ 5 ರಿಂದ 6 ದಿನಗಳಲ್ಲಿ ನಿವಾರಣೆಯಾಗುತ್ತದೆ ಮತ್ತು ಯಾವುದೇ ದೀರ್ಘಕಾಲೀನ ಪರಿಣಾಮ ಬೀರುವುದಿಲ್ಲ. ಏತನ್ಮಧ್ಯೆ, ರೋಗಿಗಳು ತಮ್ಮ ಕಣ್ಣುಗಳನ್ನು ಮುಟ್ಟಿಕೊಳ್ಳಬಾರದು. ದಿನಕ್ಕೆ ಹಲವಾರು ಬಾರಿ ಶುದ್ಧ ನೀರಿನಿಂದ ಕಣ್ಣುಗಳನ್ನು ತೊಳೆಯಬೇಕು ಮತ್ತು ಅವರು ಬೇರೆ ಯಾರಿಗೂ ಆ ಸೋಂಕು ತಗುಲದಂತೆ ನೋಡಿಕೊಳ್ಳಬೇಕು.


ಕಂಜಂಕ್ಟಿವೈಟಿಸ್ ಬರದಂತೆ ನೋಡಿಕೊಳ್ಳುವುದು ಹೇಗೆ?
ಕಂಜಂಕ್ಟಿವೈಟಿಸ್ ಗಂಭೀರವಾದ ಕಾಯಿಲೆಯಲ್ಲದಿದ್ದರೂ ಸಹ ತುಂಬಾ ನೋವಿನಿಂದ ಕೂಡಿರಬಹುದು. ಆದ್ದರಿಂದ, ಅದರ ಹರಡುವಿಕೆಯನ್ನು ತಡೆಗಟ್ಟಲು, ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.


ಇದನ್ನೂ ಓದಿ:  Health: ತಂಪು ಪಾನೀಯಗಳ ಅತಿಯಾದ ಸೇವನೆ, ಹಲ್ಲುಗಳನ್ನೇ ಕಳೆದುಕೊಂಡ ಹರೆಯದ ಯುವತಿ!


 • ನಿಮ್ಮ ಕಣ್ಣುಗಳನ್ನು ಮುಟ್ಟಿಕೊಳ್ಳಬೇಡಿ

 • ನಿಮ್ಮ ಕೈಗಳನ್ನು ಆಗಾಗ್ಗೆ ತೊಳೆದುಕೊಳ್ಳಿರಿ

 • ಪ್ರತಿದಿನ ಸ್ವಚ್ಛವಾದ ಟವೆಲ್ ಮತ್ತು ವಾಶ್ ಕ್ಲಾತ್ ಬಳಸಿ

 • ಟವೆಲ್ ಗಳು ಅಥವಾ ಬಟ್ಟೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ

 • ನಿಮ್ಮ ದಿಂಬಿನ ಕವರ್ ಗಳನ್ನು ಆಗಾಗ್ಗೆ ಬದಲಿಸಿ

 • ಕಣ್ಣಿನ ಸೌಂದರ್ಯವರ್ಧಕಗಳು ಅಥವಾ ವೈಯಕ್ತಿಕ ಕಣ್ಣಿನ ಆರೈಕೆ ವಸ್ತುಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

Published by:Ashwini Prabhu
First published: