Election 2024 India| 2024ರ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿದ ಪ್ರಶಾಂತ್ ಕಿಶೋರ್; ಗಾಂಧಿ ಕುಟುಂಬದ ಜೊತೆ ಚರ್ಚೆ

ಈ ಬೆಳವಣಿಗೆಗಳ ಬಗ್ಗೆ ತಿಳಿದಿರುವ ಕಾಂಗ್ರೆಸ್​ ಮೂಲಗಳು ಇಡೀ ಗಾಂಧಿ ಕುಟುಂಬವು ಪ್ರಶಾಂತ್ ಕಿಶೋರ್ ಸಭೆಗೆ ಹಾಜರಾಗಿದ್ದರಿಂದ, ಕಾರ್ಯಸೂಚಿ ರಾಷ್ಟ್ರೀಯ ರಾಜಕಾರಣವಾಗಿತ್ತು. ಅಲ್ಲದೆ, ಈ ಸಭೆಯಲ್ಲಿ ನಿರ್ದಿಷ್ಟವಾಗಿ 2024 ರ ಚುನಾವಣೆಗೆ ನೀಲನಕ್ಷೆಯನ್ನು ರೂಪಿಸಲಾಗಿದೆ ಎಂದು ತಿಳಿಸಿವೆ.

ಸೋನಿಯಾ ಗಾಂಧಿ-ಪ್ರಿಯಾಂಕ ಗಾಂಧಿ-ರಾಹುಲ್ ಗಾಂಧಿ.

ಸೋನಿಯಾ ಗಾಂಧಿ-ಪ್ರಿಯಾಂಕ ಗಾಂಧಿ-ರಾಹುಲ್ ಗಾಂಧಿ.

 • Share this:
  ನವ ದೆಹಲಿ; 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಪರವಾಗಿ ಕೆಲಸ ಮಾಡುವ ಮೂಲಕ ರಾಜಕೀಯ ಅಲೆ ಬದಲಾವಣೆಗೆ ಕಾರಣರಾಗಿದ್ದ ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ಇದೀಗ ಬಿಜೆಪಿ ವಿರುದ್ಧವೇ ತಿರುಗಿ ಬಿದ್ದಿರುವುದು ಎಲ್ಲರಿಗೂ ತಿಳಿದೇ ಇದೆ. ಮೋದಿ ವಿರುದ್ಧ ಹೊಸ ಯೋಚಿತ ಪ್ರಚಾರಕ್ಕೆ ಮುಂದಾಗಿರುವ ಪ್ರಶಾಂತ್ ಕಿಶೋರ್​ ಯೋಜನೆಗಳು ದೆಹಲಿಯಿಂದ ತಮಿಳುನಾಡಿನ ವರೆಗೆ ಅನೇಕ ವಿಧಾನ ಸಭಾ ಚುನಾವಣೆಗಳಲ್ಲಿ ಫಲ ನೀಡಿದೆ. ಇದಲ್ಲದೆ, 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲೂ ಪ್ರಶಾಂತ್ ಕಿಶೋರ್ ಕಾಂಗ್ರೆಸ್​ ಪರ ಕೆಲಸ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಮಂಗಳವಾರ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಮಾತ್ರವಲ್ಲದೆ, ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನೂ ಭೇಟಿ ಮಾಡಿ 2024 ರ ಚುನಾವಣಾ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

  ಕಾಂಗ್ರೆಸ್ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿಯವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಮುಂಬರುವ ಪಂಜಾಬ್ ಮತ್ತು ಉತ್ತರ ಪ್ರದೇಶದ ಚುನಾವಣೆಗಳಿಗೆ ಸಂಬಂಧಿಸಿದ ಚರ್ಚೆ ನಡೆಯಲಿದೆ ಎಂದು ಊಹಿಸಲಾಗಿತ್ತು. ಏಕೆಂದರೆ ಈ ಸಭೆಯಲ್ಲಿ ರಾಹುಲ್ ಗಾಂಧಿ ಮಾತ್ರವಲ್ಲದೆ, ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸಹ ಭಾಗವಹಿಸಿದ್ದರು.

  ಆದರೆ, ಸಭೆ ನಡೆಯುತ್ತಿದ್ದಂತೆ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಸಹ ಆಗಮಿಸಿದ್ದು, ಈ ಸಭೆಯ ಭಾಗವಾಗಿದ್ದರು. ಹೀಗಾಗಿ ಈ ಬೆಳವಣಿಗೆಗಳ ಬಗ್ಗೆ ತಿಳಿದಿರುವ ಕಾಂಗ್ರೆಸ್​ ಮೂಲಗಳು ಇಡೀ ಗಾಂಧಿ ಕುಟುಂಬವು ಪ್ರಶಾಂತ್ ಕಿಶೋರ್ ಸಭೆಗೆ ಹಾಜರಾಗಿದ್ದರಿಂದ, ಕಾರ್ಯಸೂಚಿ ರಾಷ್ಟ್ರೀಯ ರಾಜಕಾರಣವಾಗಿತ್ತು. ಅಲ್ಲದೆ, ಈ ಸಭೆಯಲ್ಲಿ ನಿರ್ದಿಷ್ಟವಾಗಿ 2024 ರ ಚುನಾವಣೆಗೆ ನೀಲನಕ್ಷೆಯನ್ನು ರೂಪಿಸಲಾಗಿದೆ ಎಂದು ತಿಳಿಸಿವೆ.

  ಇದನ್ನೂ ಓದಿ: Mekedatu Project| ಕರ್ನಾಟಕಕ್ಕೆ ಮೇಕೆದಾಟು ಡ್ಯಾಂ ಕಟ್ಟುವ ಹಕ್ಕಿದ್ದರೆ, ಅದನ್ನು ನಿಲ್ಲಿಸುವ ಹಕ್ಕು ನಮಗೂ ಇದೆ; ತಮಿಳುನಾಡು

  ಚುನಾವಣಾ ತಜ್ಞ ಪ್ರಶಾಂತ್ ಕಿಕಿಶೋರ್ ಮತ್ತು ರಾಹುಲ್ ಗಾಂಧಿ ಅವರು ಸುಮಾರು ಐದು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಭೇಟಿಯಾಗಿದ್ದಾರೆ. ಈ ಹಿಂದೆ 2017ರಲ್ಲಿ ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಸಹ ಪ್ರಶಾಂತ್ ಕಿಶೋರ್ ಕಾಂಗ್ರೆಸ್​ ಪರ ಕೆಲಸ ಮಾಡಿದ್ದರು. ಈ ವೇಳೆ ಪ್ರಿಯಾಂಕಾ ಗಾಂಧಿ ಉತ್ತರಪ್ರದೇಶ ಚುನಾವಣಾ ಕಣ ಪ್ರವೇಶಿಸಿದ್ದರು. ಹೀಗಾಗಿ ಪ್ರಿಯಾಂಕಾ ಗಾಂಧಿಗಾಗಿ ‘ಯುಪಿ ಕಿ ಲಡ್ಕಿ’ ಎಂಬ ಘೋಷಣೆಯನ್ನು ಈ-ಪ್ಯಾಕ್ ತಂಡ ಮತದಾರರ ಮುಂದಿಟ್ಟಿತ್ತು. ಆದರೆ, ಈ ತಂತ್ರ ವಿಫಲವಾಯಿತು.

  ಇದನ್ನೂ ಓದಿ: ಜೈಲ್ ಬ್ರೇಕ್ ಪ್ರಕರಣದಲ್ಲಿ ಜೈಲು ಪಾಲಾಗಿ ಜೈಲಿಂದಲೇ ನಕಲಿ ಸರ್ಕಾರಿ ವೆಬ್‌ಸೈಟ್ ನಡೆಸಿದ ಆರೋಪಿಗಳು!

  ಚುನಾವಣೆಯಲ್ಲಿ ಕಾಂಗ್ರೆಸ್​ ಹೀನಾಯ ಸೋಲನುಭವಿಸಿತ್ತು. ಈ ವೇಳೆಗೆ ಕಾಂಗ್ರೆಸ್​ ಮತ್ತು ಪ್ರಶಾಂತ್ ಕಿಶೋರ್ ಸಂಬಂಧ ಹಳಸಿತ್ತು. ಕಾಂಗ್ರೆಸ್​ ವಿರುದ್ಧ ಆಗ ಸ್ವತಃ ಕಿಡಿಕಾರಿದ್ದ ಪ್ರಶಾಂತ್ ಕಿಶೋರ್, "ಕಾಂಕಾಂಗ್ರೆಸ್ ಹಠಮಾರಿ ಮತ್ತು ಸೊಕ್ಕಿನ ಕಾರಣದಿಂದಾಗಿ ಸೋಲನುಭವಿಸಿದೆ. ಭವಿಷ್ಯದಲ್ಲಿ ಮತ್ತೆ ಈ ಪಕ್ಷದೊಂದಿಗೆ ಕೆಲಸ ಮಾಡುವ ಪ್ರಶ್ನೆಯೇ ಇಲ್ಲ" ಎಂದು ಆಕ್ರೋಶ ಹೊರಹಾಕಿದ್ದರು. ಆದರೂ, ಆಗಾಗ್ಗೆ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಸಂಪರ್ಕದಲ್ಲಿದ್ದರು.

  ಪ್ರಶಾಂತ್ ಕಿಶೋರ್ ನಿರ್ಣಾಯಕ ಪಾತ್ರ ವಹಿಸಿದ್ದ ಇತ್ತೀಚಿನ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅದ್ಭುತ ಗೆಲುವಿನಿಂದ ಕಿಶೋರ್ ಸಾಮರ್ಥ್ಯ ಸಾಬೀತಾಗಿತ್ತು. ತಮಿಳುನಾಡಿನಲ್ಲೂ ಸ್ಟಾಲಿನ್ ಅವರನ್ನು ಅಧಿಕಾರದ ಗದ್ದುಗೆಗೆ ಏರಿಸುವಲ್ಲಿ ಪ್ರಶಾಂತ್ ಕಿಶೋರ್ ಪಾತ್ರ ಪ್ರಮುಖವಾದದ್ದು. ಇದೇ ಕಾರಣಕ್ಕೆ ಮಹಾರಾಷ್ಟ್ರದ ಎನ್​ಸಿಪಿ ನಾಯಕ ಶರದ್ ಪವಾರ್ ಕಳೆದ ಒಂದು ತಿಂಗಳ ಅವಧಿಯಲ್ಲಿ 3 ಬಾರಿ ಪ್ರಶಾಂತ್ ಕಿಶೋರ್ ಭೇಟಿ ಮಾಡಿದ್ದಾರೆ. ಈ ನಡುವೆ ಗಾಂಧಿ ಕುಟುಂಬ ಸಹ ಪ್ರಶಾಂತ್ ಕಿಶೋರ್ ಭೇಟಿ ಮಾಡಿರುವುದು ರಾಷ್ಟ್ರ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
  Published by:MAshok Kumar
  First published: