ಉತ್ತರಪ್ರದೇಶ 2022 ಚುನಾವಣೆ ಮೇಲೆ ಕಣ್ಣಿಟ್ಟಿರುವ ಯೋಗಿ ಆದಿತ್ಯನಾಥ್; ಮೊದಲ ಬಾರಿಗೆ ಸಂಪುಟ ವಿಸ್ತರಣೆ, ಎಲ್ಲಾ ಜಾತಿಗೂ ಮಣೆ!

2017ರಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸಿ ಯೋಗಿ ಆದಿತ್ಯನಾಥ್ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಅಂದಿನ ಸಂಪುಟದ ಕುರಿತು ಸಾಕಷ್ಟು ಅಸಮಾಧಾನ ಇತ್ತು. ಈ ಸಂಪುಟದಲ್ಲಿ ಕೆಲವು ಜಾತಿ ಹಾಗೂ ಧರ್ಮಗಳಿಗೆ ಸ್ಥಾನ ನೀಡದೆ ತಾರತಮ್ಯ ಮಾಡಲಾಗಿದೆ ಎಂಬ ಆರೋಪ ಬುಗಿಲೆದ್ದಿದ್ದು. ಈ ಎಲ್ಲಾ ಭಿನ್ನಮತಗಳಿಗೂ ಇಂದಿನ ಸಂಪುಟ ವಿಸ್ತರಣೆ ಮೂಲಕ ಸಿಎಂ ಯೋಗಿ ಆದಿತ್ಯನಾಥ್ ತೆರೆ ಎಳೆಯಲು ಮುಂದಾಗಿದ್ದಾರೆ.

MAshok Kumar | news18
Updated:August 21, 2019, 6:09 PM IST
ಉತ್ತರಪ್ರದೇಶ 2022 ಚುನಾವಣೆ ಮೇಲೆ ಕಣ್ಣಿಟ್ಟಿರುವ ಯೋಗಿ ಆದಿತ್ಯನಾಥ್; ಮೊದಲ ಬಾರಿಗೆ ಸಂಪುಟ ವಿಸ್ತರಣೆ, ಎಲ್ಲಾ ಜಾತಿಗೂ ಮಣೆ!
ನೂತನ ಸಂಪುಟ ಸಚಿವರ ಜೊತೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್
  • News18
  • Last Updated: August 21, 2019, 6:09 PM IST
  • Share this:
ಉತ್ತರಪ್ರದೇಶ (ಆಗಸ್ಟ್.21); ರಾಜ್ಯ ವಿಧಾನಸಭಾ ಚುನಾವಣೆ 2022 ಮೇಲೆ ಕಣ್ಣಿಟ್ಟಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ ಮೊದಲ ಬಾರಿಗೆ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ಅಲ್ಲದೆ 5 ಹೆಚ್ಚುವರಿ ಖಾತೆಯನ್ನು ಸೃಷ್ಟಿಸಿದ್ದು, ತನ್ನ ಸಂಪುಟದಲ್ಲಿ 17 ಹೊಸ ಮುಖಗಳಿಗೆ ಮಣೆ ಹಾಕಿದ್ದಾರೆ. ಆ ಮೂಲಕ ಈಗಿನಿಂದಲೇ ಚುನಾವಣೆ ಸಿದ್ಧತೆ ಆರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ.

2017ರಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸಿ ಯೋಗಿ ಆದಿತ್ಯನಾಥ್ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಅಂದಿನ ಸಂಪುಟದ ಕುರಿತು ಸಾಕಷ್ಟು ಅಸಮಾಧಾನ ಇತ್ತು. ಈ ಸಂಪುಟದಲ್ಲಿ ಕೆಲವು ಜಾತಿ ಹಾಗೂ ಧರ್ಮಗಳಿಗೆ ಸ್ಥಾನ ನೀಡದೆ ತಾರತಮ್ಯ ಮಾಡಲಾಗಿದೆ ಎಂಬ ಆರೋಪ ಬುಗಿಲೆದ್ದಿದ್ದು. ಈ ಎಲ್ಲಾ ಭಿನ್ನಮತಗಳಿಗೂ ಇಂದಿನ ಸಂಪುಟ ವಿಸ್ತರಣೆ ಮೂಲಕ ಸಿಎಂ ಯೋಗಿ ಆದಿತ್ಯನಾಥ್ ತೆರೆ ಎಳೆಯಲು ಮುಂದಾಗಿದ್ದು, ಮುಂದಿನ ಚುನಾವಣೆಗೆ ಪಕ್ಷವನ್ನು ಅಣಿಗೊಳಿಸಲು ಮುಂದಾಗಿದ್ದಾರೆ.

ಹೊಸದಾಗಿ ವಿಸ್ತರಣೆಯಾಗಿರುವ ಸಚಿವ ಸಂಪುಟದಲ್ಲಿ 6 ಜನ ಬ್ರಾಹ್ಮಣ, ತಲಾ 4 ಕ್ಷತ್ರಿಯ, ವೈಶ್ಯ, ಗುಜ್ಜರ್, ಜಾಟ್, ಕಶ್ಯಪ ಹಾಗೂ ಲೋದಿ ಸಮುದಾಯದ ಶಾಸಕರಿಗೆ ಅವಕಾಶ ಮಾಡಿಕೊಡಲಾಗಿದೆ. ಬ್ರಾಹ್ಮಣ ಸಮಾಜಕ್ಕೆ ಸೇರಿದ ನೀಲಕಠ್ ತಿವಾರಿ, ಸತೀಶ್ ದ್ವಿವೇದಿ, ಚಂದ್ರಿಕಾ ಪ್ರಸಾದ್ ಉಪಾಧ್ಯಾಯ, ಆನಂದ್ ಸ್ವರೂಪ್ ಶುಕ್ಲಾ, ಅನಿಲ್ ಶರ್ಮ, ರಾಮ್​ನರೇಶ್ ಅಗ್ನಿಹೊತ್ರಿ ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಲಾಗಿದೆ.

ಪರಿಶಿಷ್ಟ ಜಾತಿಗೆ ಸೇರಿದ ಶ್ರೀ ರಾಮ್ ಚೌಹಾಣ್, ಗಿರಿರಾಜ್ ಸಿಂಗ್ ಧರ್ಮೇಶ್ ಹಾಗೂ ಕಮಲ್ ರಾಣಿ ವರುಣ್ ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಸಮೀರ್ ಸಿಂಗ್, “ಪ್ರಸ್ತುತ ವಿಸ್ತರಣೆಯಾಗಿರುವ ಸಚಿವ ಸಂಪುಟದಲ್ಲಿ ಎಲ್ಲಾ ಸಮುದಾಯದವರಿಗೂ ಪ್ರಾಮುಖ್ಯತೆ ನೀಡಲಾಗಿದೆ. ಅಲ್ಲದೆ ಇದೊಂದು ಯುವ ಹಾಗೂ ಅನುಭವಿ ಶಾಸಕರಿಂದ ಕೂಡಿದ್ದು, ಸಮತೋಲನಗೊಂಡಿರುವ ಉತ್ತಮ ಸಂಪುಟ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ಆಸ್ಪತ್ರೆಯ ಕಾರಿಡಾರ್​ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ; ಉತ್ತರಪ್ರದೇಶದಲ್ಲಿ ದಾಖಲಾಯ್ತು ಮತ್ತೊಂದು ದಾರುಣ ಘಟನೆ!

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ
First published:August 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading