ನನ್ನ ಮಗಳ ಬಲಿತೆಗೆದುಕೊಂಡವರನ್ನೂ ಬೇಗ ನೇಣಿಗೇರಿಸಿ: ನಿರ್ಭಯ ತಾಯಿ ಒತ್ತಾಯ

“ಕಳೆದ ಏಳು ವರ್ಷಗಳಿಂದಲೂ ನಾನು ಪರಿತಪಿಸುತ್ತಲೇ ಇದ್ದೇನೆ. ನನ್ನ ಮಗಳನ್ನು ಕೊಂದವರನ್ನು ಆದಷ್ಟೂ ಬೇಗ ನೇಣಿಗೇರಿಸಬೇಕು ಎಂದು ಈ ದೇಶದ ನ್ಯಾಯಾಂಗ ವ್ಯವಸ್ಥೆ ಹಾಗೂ ಸರ್ಕಾರಕ್ಕೆ ಮನವಿ ಮಾಡುತ್ತೇನೆ” ಎಂದು ನಿರ್ಭಯಾ ತಾಯಿ ಹೇಳಿದ್ಧಾರೆ.

Vijayasarthy SN | news18
Updated:December 6, 2019, 10:33 AM IST
ನನ್ನ ಮಗಳ ಬಲಿತೆಗೆದುಕೊಂಡವರನ್ನೂ ಬೇಗ ನೇಣಿಗೇರಿಸಿ: ನಿರ್ಭಯ ತಾಯಿ ಒತ್ತಾಯ
2012ರಲ್ಲಿ ಬಲಿಯಾಗಿದ್ದ ನಿರ್ಭಯಾ ಅವರ ತಾಯಿ ಆಶಾ ದೇವಿ
  • News18
  • Last Updated: December 6, 2019, 10:33 AM IST
  • Share this:
ಬೆಂಗಳೂರು: ಹೈದರಾಬಾದ್​ನಲ್ಲಿ ಪಶುವೈದ್ಯೆ ಮೇಲೆ ಅತ್ಯಾಚಾರ ಎಸಗಿದ ನಾಲ್ವರು ಆರೋಪಿಗಳನ್ನು ಸೈಬಾರಾಬಾದ್ ಪೊಲೀಸರು ಎನ್​ಕೌಂಟರ್ ಮಾಡಿರುವ ಕ್ರಮವನ್ನು ಅನೇಕರು ಸ್ವಾಗತಿಸಿದ್ದಾರೆ. ಪಶುವೈದ್ಯೆಯ ಕುಟುಂಬದವರು ಪೊಲೀಸರ ನಡೆಗೆ ಸಮಾಧಾನ ವ್ಯಕ್ತಪಡಿಸಿದ್ದಾರೆ. 2012ರಲ್ಲಿ ದೆಹಲಿಯ ರೇಪ್ ಕೇಸ್​ನಲ್ಲಿ ಕಾಮುಕರಿಗೆ ಬಲಿಯಾಗಿದ್ದ ನಿರ್ಭಯಾ ಅವರ ತಾಯಿ ಆಶಾ ದೇವಿ ಕೂಡ ಹೈದರಾಬಾದ್ ಎನ್​ಕೌಂಟರನ್ನು ಸ್ವಾಗತಿಸಿದ್ದಾರೆ.

“ತೆಲಂಗಾಣ ಪೊಲೀಸರು ಬಹಳ ಒಳ್ಳೆಯ ಕೆಲಸ ಮಾಡಿದ್ಧಾರೆ. ಈ ಪೊಲೀಸ್ ಸಿಬ್ಬಂದಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು” ಎಂದು ಆಶಾ ದೇವಿ ಒತ್ತಾಯಿಸಿದ್ದಾರೆ.

“ಕಳೆದ ಏಳು ವರ್ಷಗಳಿಂದಲೂ ನಾನು ಪರಿತಪಿಸುತ್ತಲೇ ಇದ್ದೇನೆ. ನನ್ನ ಮಗಳನ್ನು ಕೊಂದವರನ್ನು ಆದಷ್ಟೂ ಬೇಗ ನೇಣಿಗೇರಿಸಬೇಕು ಎಂದು ಈ ದೇಶದ ನ್ಯಾಯಾಂಗ ವ್ಯವಸ್ಥೆ ಹಾಗೂ ಸರ್ಕಾರಕ್ಕೆ ಮನವಿ ಮಾಡುತ್ತೇನೆ” ಎಂದು ನಿರ್ಭಯಾ ತಾಯಿ ಹೇಳಿದ್ಧಾರೆ.

ಇದನ್ನೂ ಓದಿ: ಹೈದರಾಬಾದ್​ ಪಶುವೈದ್ಯೆ ಅತ್ಯಾಚಾರ ಪ್ರಕರಣದ ಎಲ್ಲ ಆರೋಪಿಗಳನ್ನು ಎನ್​ಕೌಂಟರ್​ ಮಾಡಿದ ಪೊಲೀಸರು

ಆಶಾ ದೇವಿ ಅವರ 23 ವರ್ಷದ ಮಗಳನ್ನು (ಜ್ಯೋತಿ ಸಿಂಗ್) 2012ರ ಡಿಸೆಂಬರ್ 16ರಂದು ದೆಹಲಿಯಲ್ಲಿ ಬಸ್​ವೊಂದರಲ್ಲಿ ಸಾಮೂಹಿಕ ಅತ್ಯಾಚಾರ ಮಾಡಲಾಯಿತು. ಆರು ಮಂದಿಯಿಂದ ಈಕೆಯ ಮೇಲೆ ಭೀಕರವಾಗಿ ಅತ್ಯಾಚಾರವಾಗಿತ್ತೆನ್ನಲಾಗಿದೆ. ನಂತರ ಈಕೆಯನ್ನು ಬಸ್ಸಿನಿಂದ ಹೊರ ಎಸೆಯಲಾಗಿತ್ತು. ಎರಡು ವಾರಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ್ದ ಈ ಅರೆವೈದ್ಯಕೀಯ ವಿದ್ಯಾರ್ಥಿನಿ ಕೊನೆಗೆ ಸಾವನ್ನಪ್ಪಿದ್ದರು. ಎಲ್ಲಾ ಆರೋಪಿಗಳನ್ನ ಬಂಧಿಸಲಾಯಿತು. ರಾಮ್ ಸಿಂಗ್ ಎಂಬ ಒಬ್ಬ ಆರೋಪಿ ಜೈಲಿನಲ್ಲಿ ನೇಣುಹಾಕಿಕೊಂಡು ಸತ್ತಿದ್ದ. ಒಬ್ಬಾತ ಬಾಲಾಪರಾಧಿಯಾಗಿದ್ದ. ಎಲ್ಲರೂ ತಪ್ಪಿತಸ್ಥರೆಂದು ಕೋರ್ಟ್ ತೀರ್ಪು ಕೊಟ್ಟಿದೆ. ಬಾಲಾಪರಾಧಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಉಳಿದ ನಾಲ್ವರು ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ಇದೆ. 2017ರಲ್ಲೇ ಕೋರ್ಟ್ ತೀರ್ಪು ನೀಡಿದರೂ ಅತ್ಯಾಚಾರಿಗಳಿಗೆ ಇನ್ನೂ ಗಲ್ಲು ಶಿಕ್ಷೆ ಜಾರಿಯಾಗಿಲ್ಲ. ಜ್ಯೋತಿ ಸಿಂಗ್ ತಾಯಿ ಆಶಾ ದೇವಿ ಅವರು ಇದೇ ವಿಚಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವುದು. ತಮ್ಮ ಕಣ್ಮುಂದೆಯೇ ಕೊಲೆಗಡುಕರು ಇನ್ನೂ ಬದುಕಿರುವುದು ಇವರ ಮನಸ್ಸಿಗೆ ಘಾಸಿ ತಂದಿದೆ. ಆದಷ್ಟೂ ಬೇಗ ಇವರನ್ನು ನೇಣಿಗೆ ಏರಿಸಿ ಎಂಬುದು ಇವರ ಒತ್ತಾಯ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:December 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ