ಫೇಸ್​ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾ ಬಳಕೆ ನಿಷೇಧಿಸಿದ ನೌಕಾ ದಳ

ಸೋಷಿಯಲ್ ಮೀಡಿಯಾದ ಮೂಲಕ ಶತ್ರು ರಾಷ್ಟ್ರಗಳ ಜಾಲಕ್ಕೆ ಸಿಲುಕುವ ಅವಕಾಶ ಹೆಚ್ಚಿದೆ. ಪಾಕಿಸ್ತಾನದ ಐಎಸ್​ಐ ಬೆಂಬಲಿತ ಗೂಢಚಾರರು ಹನಿಟ್ರ್ಯಾಪ್ ಬಳಸಿ ಭಾರತೀಯ ಸೇನೆಯ ಸಿಬ್ಬಂದಿಯನ್ನು ಸೆಳೆಯುವ ಕೆಲಸ ಮಾಡುತ್ತಿರುವುದು ಇತ್ತೀಚಿನ ಅನೇಕ ಪ್ರಕರಣಗಳಿಂದ ತಿಳಿದುಬಂದಿದೆ.

news18
Updated:December 30, 2019, 10:57 AM IST
ಫೇಸ್​ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾ ಬಳಕೆ ನಿಷೇಧಿಸಿದ ನೌಕಾ ದಳ
ಪ್ರಾತಿನಿಧಿಕ ಚಿತ್ರ
  • News18
  • Last Updated: December 30, 2019, 10:57 AM IST
  • Share this:
ನವದೆಹಲಿ(ಡಿ. 30): ಬಹಳ ಸೂಕ್ಷ್ಮವೆನಿಸಿರುವ ಮಿಲಿಟರಿಯ ರಹಸ್ಯ ಮಾಹಿತಿ ಸೋರಿಕೆಯಾಗುವ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇವೆ. ಇತ್ತೀಚೆಗಷ್ಟೇ ನೌಕಾ ದಳದ ಏಳು ಮಂದಿ ಸಿಬ್ಬಂದಿಯಿಂದ ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ರವಾನೆಯಾಗಿರುವುದು ಬೆಳಕಿಗೆ ಬಂದಿತ್ತು. ಈ ಎಲ್ಲಾ ಬೆಳವಣಿಗೆಯಿಂದ ಎಚ್ಚೆತ್ತುಕೊಂಡಿರುವ ಭಾರತದ ನೌಕಾ ದಳ ಇದೀಗ ತನ್ನ ಸಿಬ್ಬಂದಿಗೆ ಸೋಷಿಯಲ್ ಮೀಡಿಯಾದ ಬಳಕೆಯನ್ನೇ ನಿಷೇಧಿಸುವ ನಿರ್ಧಾರಕ್ಕೆ ಬಂದಿದೆ.

ನೌಕಾ ದಳವು ಎಲ್ಲಾ ರೀತಿಯ ಸಾಮಾಜಿಕ ಜಾಲತಾಣಗಳು, ಹಾಗೂ ಸೋಷಿಯಲ್ ಮೀಡಿಯಾ ಆ್ಯಪ್​ಗಳಾದ ಫೇಸ್​ಬುಕ್, ಇನ್ಸ್​ಟಾಗ್ರಾಮ್, ವಾಟ್ಸಾಪ್ ಮೊದಲಾದವುಗಳ ಬಳಕೆಯನ್ನು ನಿಷೇಧಿಸಿದೆ. ಅಷ್ಟೇ ಅಲ್ಲ, ಎಲ್ಲಾ ನೌಕಾ ನೆಲೆಗಳಲ್ಲಿ, ಹಡಗು ಹಾಗೂ ಹಡಗುದಾಣಗಳಲ್ಲಿ ಸ್ಮಾರ್ಟ್​ಫೋನ್ ಬಳಸದಂತೆ ತನ್ನ ಸಿಬ್ಬಂದಿಗೆ ನಿರ್ಬಂಧ ವಿಧಿಸಿದೆ.

ಇದನ್ನೂ ಓದಿ: ದನದ ಮಾಂಸ ರಫ್ತಿನಲ್ಲಿ ಭಾರತಕ್ಕೆ ಎರಡನೇ ಸ್ಥಾನ!

ಸೋಷಿಯಲ್ ಮೀಡಿಯಾದ ಮೂಲಕ ಶತ್ರು ರಾಷ್ಟ್ರಗಳ ಜಾಲಕ್ಕೆ ಸಿಲುಕುವ ಅವಕಾಶ ಹೆಚ್ಚಿದೆ. ಪಾಕಿಸ್ತಾನದ ಐಎಸ್​ಐ ಬೆಂಬಲಿತ ಗೂಢಚಾರರು ಹನಿಟ್ರ್ಯಾಪ್ ಬಳಸಿ ಭಾರತೀಯ ಸೇನೆಯ ಸಿಬ್ಬಂದಿಯನ್ನು ಸೆಳೆಯುವ ಕೆಲಸ ಮಾಡುತ್ತಿರುವುದು ಇತ್ತೀಚಿನ ಅನೇಕ ಪ್ರಕರಣಗಳಿಂದ ತಿಳಿದುಬಂದಿದೆ.

ಹತ್ತು ದಿನಗಳ ಹಿಂದೆ ಆಂಧ್ರದ ಗುಪ್ತಚರರಿಂದ ಬೆಳಕಿಗೆ ಬಂದ ಪ್ರಕರಣದಲ್ಲೂ ಇಂಥದ್ದೇ ಹನಿಟ್ರ್ಯಾಪ್ ನಡೆದಿತ್ತು. 2017ರಲ್ಲಿ ನೌಕಾಪಡೆಗೆ ನೇಮಕಗೊಂಡಿದ್ದ ಏಳು ನಾವಿಕರು 2018ರ ಸೆಪ್ಟೆಂಬರ್​ನಲ್ಲಿ ಫೇಸ್​​ಬುಕ್ ಮೂಲಕ ಹನಿಟ್ರ್ಯಾಪ್​ಗೆ ಒಳಗಾಗಿದ್ದರು. ಮಹಿಳೆಯರೊಂದಿಗೆ ಲೈಂಗಿಕ ಸಂವಾದ ನಡೆಸುತ್ತಲೇ ಪಾಕಿಸ್ತಾನೀಯರ ಜಾಲಕ್ಕೆ ಇವರು ಸಿಲುಕಿದ್ದರು. ನೌಕಾ ಹಡಗುಗಳು ಹಾಗೂ ಸಬ್​ಮರೀನ್​ನ ಸ್ಥಳದ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಇವರು ಪಾಕಿಸ್ತಾನೀಯರಿಗೆ ನೀಡಿದ್ದರು. ಇದಕ್ಕಾಗಿ ಹವಾಲಾ ಆಪರೇಟರ್ ಮೂಲಕ ಇವರಿಗೆ ತಿಂಗಳಿಗೆ ಇಂತಿಷ್ಟು ಹಣವೂ ಸಂದಾಯವಾಗುತ್ತಿತ್ತು. ಇದರ ವಾಸನೆ ಹಿಡಿದ ಆಂಧ್ರ ಗುಪ್ತಚರರು ಪೊಲೀಸರನ್ನು ಎಚ್ಚರಿಸಿದ್ದಾರೆ. ವಿಶಾಖಪಟ್ಟಣದಿಂದ ಮೂವರು, ಕಾರವಾರ ಮತ್ತು ಮುಂಬೈ ನೌಕಾ ನೆಲೆಯಿಂದ ತಲಾ ಇಬ್ಬಿಬ್ಬರು ನೌಕಾಪಡೆ ನಾವಿಕರನ್ನು ಆಂಧ್ರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ಧಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: December 30, 2019, 10:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading