HOME » NEWS » National-international » EXPLOSIVES TO BUILD IED USED IN PULWAMA ATTACK ORDERED ONLINE RMD

ಆನ್​ಲೈನ್ ಮೂಲಕವೇ ಡೆಲಿವರಿ ಆಗಿತ್ತು ಪುಲ್ವಾಮ ದಾಳಿಗೆ ಬಳಸಿದ್ದ ಸ್ಫೋಟಕ; ಹೊರಬಿತ್ತು ಶಾಕಿಂಗ್ ವಿಚಾರ

ಪಾಕಿಸ್ತಾನ ಮೂಲದ ಜೈಷ್​-ಎ-ಮೊಹ್ಮದ್​ ಸಂಘಟನೆಯ ಶಕೀರ್​ ಬಶೀರ್​ ಎಂಬಾತನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿ ವಿಚಾರಣೆ ನಡೆಸಿತ್ತು. ಈ ವೇಳೆ ಆತ ಶಾಕಿಂಗ್​ ವಿಚಾರ ಬಿಚ್ಚಿಟ್ಟಿದ್ದಾನೆ.

news18-kannada
Updated:February 29, 2020, 8:04 AM IST
ಆನ್​ಲೈನ್ ಮೂಲಕವೇ ಡೆಲಿವರಿ ಆಗಿತ್ತು ಪುಲ್ವಾಮ ದಾಳಿಗೆ ಬಳಸಿದ್ದ ಸ್ಫೋಟಕ; ಹೊರಬಿತ್ತು ಶಾಕಿಂಗ್ ವಿಚಾರ
ಉಗ್ರ ಬಶೀರ್​
  • Share this:
ನವದೆಹಲಿ (ಫೆ.29): 40 ಯೋಧರು ಹುತಾತ್ಮರಾದ ಪುಲ್ವಾಮ ಘಟನೆಗೆ ಇತ್ತೀಚೆಗಷ್ಟೇ ಒಂದು ವರ್ಷ ತುಂಬಿತ್ತು. ಈಗ ಈ ದಾಳಿ ಬಗ್ಗೆ ಶಾಕಿಂಗ್​ ವಿಚಾರ ಒಂದು ಹೊರ ಬಿದ್ದಿದೆ. ಈ ದಾಳಿಗೆ ಬಳಕೆ ಆಗಿದ್ದ ಸ್ಫೋಟಕಗಳನ್ನು ಉಗ್ರರು ಆನ್​ಲೈನ್​ ಮೂಲಕವೇ ಆರ್ಡರ್​ ಮಾಡಿದ್ದರಂತೆ!

ಪಾಕಿಸ್ತಾನ ಮೂಲದ ಜೈಷ್​-ಎ-ಮೊಹ್ಮದ್​ ಸಂಘಟನೆಯ ಶಕೀರ್​ ಬಶೀರ್​ ಎಂಬಾತನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿ ವಿಚಾರಣೆ ನಡೆಸಿತ್ತು. ಈ ವೇಳೆ ಆತ ಶಾಕಿಂಗ್​ ವಿಚಾರ ಬಿಚ್ಚಿಟ್ಟಿದ್ದಾನೆ. ಬಾಂಬ್​ ತಯಾರಿಸಲು ಬೇಕಾದ ಬಹುತೇಕ ವಸ್ತುಗಳನ್ನು ಆನ್​ಲೈನ್​ ಮೂಲಕವೇ ಆರ್ಡರ್​ ಮಾಡಲಾಗಿತ್ತು ಎಂದು ಒಪ್ಪಿಕೊಂಡಿದ್ದಾನೆ.

ಬಶೀರ್​ಗೆ 22 ವರ್ಷ ವಯಸ್ಸು. ಈತ ಅತ್ಯಾಧುನಿಕ ಬಾಂಬ್​ ತಯಾರಿಸಲು ಅಗತ್ಯವಿದ್ದ  ಬ್ಯಾಟರಿ ಹಾಗೂ ಅಮೋನಿಯಂ ನೈಟ್ರೇಟ್​ಅನ್ನು ಆನ್​ಲೈನ್​ ಮೂಲಕ ಆರ್ಡರ್​ ಮಾಡಿದ್ದ. ಬಾಂಬ್​ ತಯಾರಿಸಿ ಅದನ್ನು ಕಾರಿನಲ್ಲಿ ಇರಿಸಿ, ಡ್ರೈವರ್​ ಪಕ್ಕದ ಸೀಟ್​ನಲ್ಲಿ ಕೂತಿದ್ದ. ಆದಿಲ್​ ಅಹ್ಮದ್​ ಕಾರು ಚಲಾಯಿಸುತ್ತಿದ್ದ. ಕಾರು ಸ್ಫೋಟಗೊಳ್ಳುವುದಕ್ಕೂ 500 ಮೀಟರ್​ ದೂರದಲ್ಲೇ ಬಶೀರ್​ ಇಳಿದುಕೊಂಡಿದ್ದ. ಈ ದಾಳಿಯಲ್ಲಿ ಪಾಕಿಸ್ತಾನ ಮೂಲದ ಕಮ್ರಾನ್​ ಹೆಸರಿನ ಉಗ್ರನೂ ಭಾಗಿಯಾಗಿದ್ದ ಎಂದು ಎನ್​ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ದೆಹಲಿ ಹಿಂಸಾಚಾರ: ಇಲ್ಲಿಯವರೆಗೂ 630 ಮಂದಿ ಬಂಧನ; 123 ವಿರುದ್ಧ ಎಫ್​​​ಐಆರ್​​

ಶುಕ್ರವಾರ ಈತನನ್ನು ಎನ್​ಐಎ ವಿಶೇಷ ನ್ಯಾಯಾಲಯದ ಎದುರು ಹಾಜರು ಪಡಿಸಲಾಗಿದ್ದು, ಇನ್ನೂ 15 ದಿನಗಳ ಕಾಲ ಎನ್​ಐಎ ಕಸ್ಟಡಿಯಲ್ಲಿ ಆತ ಮುಂದುವರಿಯಲಿದ್ದಾನೆ. ಈ ದಾಳಿಗೆ ಸುಮಾರು 80 ಕೆಜಿ ತೂಕದ ಆರ್​ಡಿಎಕ್ಸ್​ ಬಳಕೆ ಮಾಡಲಾಗಿತ್ತು ಎಂದು ಪೊಲೀಸರು ಅಂದಾಜಿಸಿದ್ದಾರೆ.
Youtube Video
First published: February 29, 2020, 8:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories