HOME » NEWS » National-international » EXPLOSIVE INFORMATION IN NIA INVESTIGATION BENGALURU YOUTH IN SYRIAN TERRORIST ORGANIZATION MAK

ಎನ್​ಐಎ ತನಿಖೆಯಲ್ಲಿ ಸ್ಪೋಟಕ ಮಾಹಿತಿ; ಸಿರಿಯಾದ ಉಗ್ರಗಾಮಿ ಸಂಘಟನೆಗಳಲ್ಲಿ ಬೆಂಗಳೂರಿನ ಯುವಕರು

ಇರ್ಫಾನ್ ನಾಸೀರ್ ಹಾಗೂ ಅಬ್ದುಲ್ ಆಹ್ಮದ್ ಖಾದರ್ ನಿಷೇಧಿತ ಹಿಜ್ಬುತ್ ತೆಹ್ರಿರ್ ಸಂಘಟನೆ ಸಕ್ರಿಯ ಕಾರ್ಯಕರ್ತರಾಗಿದ್ದು, ಶಂಕಿತ ಉಗ್ರ ವೈದ್ಯ ಅಬ್ದುರ್ ರೆಹಮಾನ್ ಮಾಹಿತಿ ಮೇರೆಗೆ ಇಬ್ಬರನ್ನು ಬಂಧಿಸಿದ್ದ ಎನ್​ಐಎ ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದರು.

news18-kannada
Updated:October 13, 2020, 7:46 AM IST
ಎನ್​ಐಎ ತನಿಖೆಯಲ್ಲಿ ಸ್ಪೋಟಕ ಮಾಹಿತಿ; ಸಿರಿಯಾದ ಉಗ್ರಗಾಮಿ ಸಂಘಟನೆಗಳಲ್ಲಿ ಬೆಂಗಳೂರಿನ ಯುವಕರು
ಪ್ರಾತಿನಿಧಿಕ ಚಿತ್ರ.
  • Share this:
ಬೆಂಗಳೂರು (ಅಕ್ಟೋಬರ್​ 13); ರಾಜ್ಯ ರಾಜಧಾನಿ ಬೆಂಗಳೂರಿನ ಯುವಕರು ಸಾಲು ಸಾಲಾಗಿ ಸಿರಿಯಾದ ಉಗ್ರ ಸಂಘಟನೆಯಾದ ಹಿಜ್ಬುಲ್ ತೆಹ್ರಿರ್​ ಸಂಘಟನೆಗೆ ಸೇರ್ಪಡೆಯಾಗುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಎನ್​ಐಎ ತನಿಖೆಯಿಂದ ಬಯಲು ಮಾಡಿದೆ. ಎನ್​ಐಎ ಇತ್ತೀಚೆಗೆ ಬೆಂಗಳೂರಲ್ಲಿ ಹಿಜ್ಬುತ್ ತೆಹ್ರಿರ್ ಉಗ್ರರನ್ನು ಬಂಧಿಸಿತ್ತು. ಈ ಪ್ರಕರಣದ ತನಿಖೆಯ ಬೆನ್ನುಹತ್ತಿದ ಅಧಿಕಾರಿಗಳು ಇದೀಗ ಅನೇಕ ಸ್ಫೋಟಕ ಮಾಹಿತಿಗಳನ್ನು ಹೊರಗೆಡಹುತ್ತಿದ್ದಾರೆ. ಎನ್ಐಎ ತನಿಖೆಯಂತೆ 2013-14 ರಲ್ಲಿ ಬೆಂಗಳೂರಿನಿಂದ 5 ಯುವಕರು ಸಿರಿಯಾಗೆ ತೆರಳಿದ್ದಾರೆ. ಈ 5 ಯುವಕರನ್ನು ನಗರದ ಇರ್ಫಾನ್ ನಾಸೀರ್ ಮತ್ತು ಅಬ್ದುಲ್ ಅಹ್ಮದ್ ಖಾದರ್ ಎಂಬವರೇ ಸಿರಿಯಾಗೆ ಕಳುಹಿಸಿದ್ದಾರೆ ಎಂಬ ಅಂಶವೂ ಇದೀಗ ಬಹಿರಂಗವಾಗಿದೆ.

ಇರ್ಫಾನ್ ನಾಸೀರ್ ಹಾಗೂ ಅಬ್ದುಲ್ ಆಹ್ಮದ್ ಖಾದರ್ ನಿಷೇಧಿತ ಹಿಜ್ಬುತ್ ತೆಹ್ರಿರ್ ಸಂಘಟನೆ ಸಕ್ರಿಯ ಕಾರ್ಯಕರ್ತರಾಗಿದ್ದು, ಶಂಕಿತ ಉಗ್ರ ವೈದ್ಯ ಅಬ್ದುರ್ ರೆಹಮಾನ್ ಮಾಹಿತಿ ಮೇರೆಗೆ ಇಬ್ಬರನ್ನು ಬಂಧಿಸಿದ್ದ ಎನ್​ಐಎ ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದರು. ಖುರಾನ್ ಸರ್ಕಲ್ ಎಂದು ಮಾಡಿಕೊಂಡು ಬೆಂಗಳೂರಿನಿಂದ ಸಿರಿಯಾಗೆ ಕಳುಹಿಸಿ ಐಸಿಸ್ ಪರ ಕೆಲಸ ಮಾಡಲು ಯುವಕರನ್ನು ಈ ಆರೋಪಿಗಳು ಪ್ರಚೋದಿಸುತ್ತಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಪಕ್ಷ ವಿರೋಧಿ ಚಟುವಟಿಕೆ; ಕೇರಳ ಜೆಡಿಎಸ್​ ಘಟಕ ವಿಸರ್ಜಿಸಿದ ದೇವೇಗೌಡ

ಈಗಾಗಲೇ ಇಬ್ಬರು ಯುವಕರು ಸಿರಿಯಾದಲ್ಲಿ ಹತ್ಯೆಯಾಗಿರುವುದು ಪತ್ತೆ ಹಚ್ಚಿರುವ ಎನ್​ಐಎ ಸಿರಿಯಾದಿಂದ ಮತ್ತೆ ಭಾರತಕ್ಕೆ ಬಂದಿದ್ದ ಓರ್ವನನ್ನೂ ಸಹ ಬಂಧಿಸಿದೆ. ಆದರೆ ಇದುವರೆಗೂ ಉಳಿದ ಇಬ್ಬರು ಇನ್ನೂ ಎಲ್ಲಿದ್ದಾರೆ ಎನ್ನುವುದು ಪತ್ತೆಯಾಗಿಲ್ಲ. ಅಲ್ಲದೆ 2014 ರ ನಂತರ ಇನ್ನೂ ಎಷ್ಟು ಮಂದಿಯನ್ನ ಸಿರಿಯಾಗೆ ಕಳುಹಿಸಿದ್ದಾರೆ ಎಂಬುದು ಪತ್ತೆಯಾಗಿಲ್ಲ ಎನ್ನಲಾಗುತ್ತಿದೆ.

ಆದರೆ, ಇನ್ನೂ ಸಾಕಷ್ಟು ಮಂದಿ ಸಿರಿಯಾಗೆ ತೆರಳಿರುವ ಸಾಧ್ಯತೆ ಇದೆ. ಈ ಹಿನ್ನೆಲೆ ತನಿಖೆಯನ್ನು ತೀವ್ರಗೊಳಿಸಿರುವ ಎನ್​ಐಎ ಅಧಿಕಾರಿಗಳು ಈ ಜಾಲವನ್ನು ಭೇದಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.
Published by: MAshok Kumar
First published: October 13, 2020, 7:46 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories