HOME » NEWS » National-international » EXPLOSION HEARD IN SRI LANKAS PUGODA 40KM EAST OF COLOMBO NO DAMAGE REPORTED POLICE

ಕೊಲೊಂಬೋ ಸಮೀಪದ ನಗರದಲ್ಲಿ ಮತ್ತೊಂದು ಬಾಂಬ್​ ಸ್ಪೋಟ; ಯಾವುದೇ ಹಾನಿಯಾಗಿಲ್ಲ ಎಂದ ಪೊಲೀಸರು

ಈಗಾಗಲೇ ಸರಣಿ ಬಾಂಬ್​ ದಾಳಿಯಿಂದ ತತ್ತರಿಸಿರುವ ದ್ವೀಪರಾಷ್ಟ್ರದಲ್ಲಿ ಆತಂಕದ ಜೊತೆ ಹೈ ಆಲರ್ಟ್ ಇದೆ. ಈ ನಡುವೆಯೇ ಮತ್ತೊಂದು ಬಾಂಬ್​ ಸ್ಪೋಟಿಸಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Seema.R | news18
Updated:April 25, 2019, 11:05 AM IST
ಕೊಲೊಂಬೋ ಸಮೀಪದ ನಗರದಲ್ಲಿ ಮತ್ತೊಂದು ಬಾಂಬ್​ ಸ್ಪೋಟ; ಯಾವುದೇ ಹಾನಿಯಾಗಿಲ್ಲ ಎಂದ ಪೊಲೀಸರು
ಬಾಂಬ್​ ಸ್ಪೋಟದ ಸ್ಥಳ
  • News18
  • Last Updated: April 25, 2019, 11:05 AM IST
  • Share this:
ಕೊಲೊಂಬೋ (ಏ.25): ಮೂರು ದಿನಗಳ ಹಿಂದೆ ಈಸ್ಟರ್​ ಭಾನುವಾರದಂದು ನಡೆದ ಸರಣಿ ಬಾಂಬ್​ ಸ್ಫೋಟದ ಬಳಿಕ ಇಂದು ಮತ್ತೆ ದ್ವೀಪರಾಷ್ಟ್ರದಲ್ಲಿ ಮತ್ತೊಂದು ಬಾಂಬ್​ ಸ್ಪೋಟ ಸಂಭವಿಸಿದೆ. ಕೊಲೊಂಬೋದಿಂದ 40 ಕಿ.ಮೀ ದೂರವಿರುವ ಪುಗೊಡಾ ನಗರದ ಮ್ಯಾಜಿಸ್ಟ್ರೇಟ್​ ನ್ಯಾಯಾಲಯದ ಹಿಂದೆ ಇರುವ ಬಯಲು ಪ್ರದೇಶದಲ್ಲಿ ಬಾಂಬ್​ ಸ್ಫೋಟಗೊಂಡಿದೆ ಎಂದು ಪೊಲೀಸರು ಹಾಗೂ ಸ್ಥಳೀಯರು ತಿಳಿಸಿದ್ದಾರೆ.

ಈಗಾಗಲೇ ಸರಣಿ ಬಾಂಬ್​ ದಾಳಿಯಿಂದ ತತ್ತರಿಸಿರುವ ದ್ವೀಪರಾಷ್ಟ್ರದಲ್ಲಿ ಆತಂಕದ ಜೊತೆ ಹೈ ಆಲರ್ಟ್ ಇದೆ. ಈ ನಡುವೆಯೇ ಮತ್ತೊಂದು ಬಾಂಬ್​ ಸ್ಪೋಟಿಸಿರುವ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಈ ದಾಳಿಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಅಲ್ಲಿನ ಸ್ಥಳೀಯ ಸುದ್ದಿವಾಹಿನಿ ವರದಿ ಮಾಡಿದೆ.

ಈಸ್ಟರ್​ ಭಾನುವಾರದಂದು ಮೂರು ಚರ್ಚ್​ ಹಾಗೂ ಮೂರು ಐಷಾರಾಮಿ ಹೋಟೆಲ್​ ಮೇಲೆ ನ್ಯಾಷನಲ್​ ತವ್​ಹಿದ್​ ಜಮಾತ್ (ಎನ್​ಟಿಜೆ)​ ಸಂಘಟನೆಯ ಒಂಭತ್ತು ಆತ್ಮಾಹುತಿ ದಾಳಿಕೋರರು ಸರಣಿ ಬಾಂಬ್​ ಸ್ಪೋಟಿಸಿದ್ದಾರೆ ಎಂದು ನಂಬಲಾಗಿದೆ. ಈ ದಾಳಿಯಿಂದಾಗಿ ದ್ವೀಪ ರಾಷ್ಟ್ರ ಅಕ್ಷರಶಃ ನಲುಗಿದೆ. ಘಟನೆಯಲ್ಲಿ 359 ಜನ ಸಾವನ್ನಪ್ಪಿದ್ದು, 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಇದನ್ನು ಓದಿ: ಕೊಲಂಬೋದಲ್ಲಿ ಸರಣಿ ಬಾಂಬ್​ ಸ್ಫೋಟಿಸಿದ 9 ಆತ್ಮಾಹುತಿ ದಾಳಿಕೋರರಲ್ಲಿ ಓರ್ವ ಮಹಿಳೆಯೂ ಇದ್ದಳು; ರಕ್ಷಣಾ ಸಚಿವ

ಗುಪ್ತಚರ ಇಲಾಖೆ ನೀಡಿದ ಮಾಹಿತಿಯನ್ನು ನಿರ್ಲಕ್ಷ್ಯಿಸಿದ್ದೆ ಘಟನೆಗೆ ಕಾರಣ ಎಂದು ಶ್ರೀಲಂಕಾ ಸರ್ಕಾರ ಒಪ್ಪಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಅಧಿಕಾರಿಗಳ ರಾಜೀನಾಮೆಯನ್ನು ಕೇಳಲಾಗಿದೆ. ಘಟನೆ ಜವಾಬ್ದಾರಿಯನ್ನು ಇಸ್ಲಾಮಿಕ್​ ಸ್ಟೇಟ್​ ಸಂಘಟನೆ ಹೊತ್ತುಕೊಂಡಿದೆ.

ಈ ದಾಳಿಯಲ್ಲಿ ಶ್ರೀಮಂತ ಉದ್ಯಮಿಯ ಇಬ್ಬರು ಮಕ್ಕಳು ಕೂಡ ಭಾಗಿಯಾಗಿದ್ದಾರೆ. ಇಬ್ಬರು ಸಹೋದರರು ಐಷಾರಾಮಿ ಹೋಟೆಲ್​ಗಳಾದ ಸಿನ್ನಮೊನ್​ ಮತ್ತು ಶಾಂಗ್ರಿಲಾ ಹೋಟೆಲ್​ನಲ್ಲಿ ದಾಳಿ ನಡೆಸಿದರು. ಘಟನೆಗೆ ಸಂಬಧಿಸಿದಂತೆ ಪೊಲೀಸರು ಈಗಾಗಲೇ 60 ಶಂಕಿತರನ್ನು ಬಂಧಿಸಿದ್ದಾರೆ.

First published: April 25, 2019, 11:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories