ಕೇವಲ ಲೈಕ್ಸ್​ಗಾಗಿ ಯುವ ಪ್ರೇಮಿಗಳ ಹುಚ್ಚಾಟ: ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಭಾರೀ ವೈರಲ್

ಇನ್​ಸ್ಟಾಗ್ರಾಂನಲ್ಲಿ @explorerssaurus_ ಖಾತೆಯಲ್ಲಿ ಹಾಕಿರುವ ಈ ಫೋಟೋಗೆ ಈಗಾಗಲೇ 38,103 ಲೈಕ್ಸ್​​​ಗಳು ಬಂದಿವೆ. ಅದೇ ರೀತಿ ಸಾಕಷ್ಟು ಟೀಕೆಗಳು ಕೂಡ ವ್ಯಕ್ತವಾಗಿವೆ.

Latha CG | news18
Updated:March 1, 2019, 3:56 PM IST
ಕೇವಲ ಲೈಕ್ಸ್​ಗಾಗಿ ಯುವ ಪ್ರೇಮಿಗಳ ಹುಚ್ಚಾಟ: ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಭಾರೀ ವೈರಲ್
ಚಲಿಸುತ್ತಿರುವ ರೈಲಿನ ಬಾಗಿಲಲ್ಲಿ ನೇತಾಡುತ್ತಿರುವ ಪ್ರೇಮಿಗಳು
  • News18
  • Last Updated: March 1, 2019, 3:56 PM IST
  • Share this:
ಸಾಮಾಜಿಕ ಜಾಲತಾಣದ ಕ್ರೇಜ್​ನಲ್ಲಿ ಲೈಕ್ಸ್​ ಗಿಟ್ಟಿಸಿಕೊಳ್ಳಲು ಎಂಥ ಅಪಾಯಕ್ಕೂ ಮೈಯೊಡ್ಡಲು ಯುವ ಸಮೂಹವೊಂದು ತಯಾರಿದೆ ಎಂಬುದಕ್ಕೆ ಈ ಫೋಟೋನೇ ಸಾಕ್ಷಿ. ಪೋರ್ಚುಗೀಸ್​ ಪ್ರೇಮಿಗಳಿಬ್ಬರು ಚಲಿಸುತ್ತಿದ್ದ ರೈಲಿನ ಬಾಗಿಲಲ್ಲಿ ನಿಂತು ನೇತಾಡುವ ಭಂಗಿಯಲ್ಲಿ ಫೋಟೋಗೆ ಪೋಸ್​ ನೀಡಿದ್ದಾರೆ. ಕೇವಲ ಲೈಕ್ಸ್​​​ ಗಿಟ್ಟಿಸಿಕೊಳ್ಳಲು ಇಂತಹ ಸಾಹಸಕ್ಕೆ ಮುಂದಾಗಿರುವ ಈ ಜೋಡಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಶ್ರೀಲಂಕಾದ 'ಎಲ್ಲ' ಎಂಬಲ್ಲಿ ಈ ಘಟನೆ ನಡೆದಿದೆ. ಚಲಿಸುತ್ತಿದ್ದ ರೈಲಿನ ಬಾಗಿಲ ಹೊರಗೆ ಹುಡುಗಿ ನೇತಾಡುವ ಭಂಗಿಯಲ್ಲಿ ಹಾಗೂ ಹುಡುಗ ಬಾಗಿಲಲ್ಲಿ ನಿಂತು ತನ್ನ ಸಂಗಾತಿಯ ಹಣೆಗೆ ಮುತ್ತಿಡುತ್ತಿರುವ ದೃಶ್ಯ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ.ಇನ್​ಸ್ಟಾಗ್ರಾಂನಲ್ಲಿ @explorerssaurus_ ಖಾತೆಯಲ್ಲಿ ಹಾಕಿರುವ ಈ ಫೋಟೋಗೆ ಈಗಾಗಲೇ 38,103 ಲೈಕ್ಸ್​​​ಗಳು ಬಂದಿವೆ. ಅದೇ ರೀತಿ ಸಾಕಷ್ಟು ಟೀಕೆಗಳು ಕೂಡ ವ್ಯಕ್ತವಾಗಿವೆ.

ನೇಣು ಹಾಕುವ ಹುದ್ದೆಗೆ ಅರ್ಜಿ ಆಹ್ವಾನ: ಅಮೆರಿಕನ್ ಸೇರಿದಂತೆ 102 ಮಂದಿಯಿಂದ ಅರ್ಜಿ ಸಲ್ಲಿಕೆ..!

ಕೇವಲ ಒಂದು ಫೋಟೋಗೋಸ್ಕರ ನಿಮ್ಮ ಜೀವದ ಜೊತೆ ಆಟವಾಡುತ್ತಿದ್ದೀರಾ..? ಕೇವಲ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​​ ಮಾಡಿ ಲೈಕ್ಸ್​​ ಪಡೆದುಕೊಳ್ಳಲು ಇಂತಹ ಸಾಹಸ ಏಕೆ..? ಎಂದು ಮಹಿಳೆಯೊಬ್ಬರು ಕಾಮೆಂಟ್​ ಮಾಡಿದ್ದಾರೆ.

ಇಬ್ಬರು ಈಡಿಯಟ್ಸ್​ ಕೇವಲ ಲೈಕ್ಸ್​​ ಪಡೆದುಕೊಳ್ಳಲು ಅಪಾಯದ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್​ ಮಾಡಿದ್ದಾರೆ. ಹೀಗೆ ಸಾಕಷ್ಟು ಮಂದಿ ಈ ಜೋಡಿಯ ಸಾಹಸಮಯ ಫೋಟೋ ಪೋಸ್​​ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
First published:March 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ