Explainer: ಖಾದ್ಯ ತೈಲಗಳ ಬೆಲೆ ಏರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಕ್ರಮವೇನು..? ಇಲ್ಲಿದೆ ವಿವರ!

ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಗತ್ಯ ಸರಕುಗಳ ಕಾಯ್ದೆ, 1955 ಕ್ಕೆ ತಿದ್ದುಪಡಿ ಮಾಡಿ ಸುಮಾರು ಒಂದು ವರ್ಷದ ನಂತರ ಎಣ್ಣೆಬೀಜಗಳು, ದ್ವಿದಳ ಧಾನ್ಯಗಳು, ಈರುಳ್ಳಿ ಇತ್ಯಾದಿಗಳನ್ನು ಕಾಯ್ದೆಯಿಂದ ವಿಲೀನಗೊಳಿಸಿತು ಮತ್ತು ಹೀಗಾಗಿ ಅವುಗಳನ್ನು ಸ್ಟಾಕ್ ಮಿತಿ ಹೇರಿಕೆಯಿಂದ ಮುಕ್ತಗೊಳಿಸಿತು.

ಅಡುಗೆ ಎಣ್ಣೆ.

ಅಡುಗೆ ಎಣ್ಣೆ.

 • Share this:
  ಆಹಾರ ಹಣದುಬ್ಬರ ವಿಶೇಷವಾಗಿ ದ್ವಿದಳ ಧಾನ್ಯಗಳು ಮತ್ತು ಖಾದ್ಯ ತೈಲಗಳಂತಹ (Cooking Oil) ವಿಚಾರದಲ್ಲಿ ಜನರ ವಿರೋಧ ಕಟ್ಟಿಕೊಂಡು ಯಾವುದೇ ರಾಜಕೀಯ ಪಕ್ಷವು ನಿರ್ಣಾಯಕ ಚುನಾವಣೆ ಎದುರಿಸಲು ಬಯಸುವುದಿಲ್ಲ. ಪ್ರಮುಖ ರಾಜ್ಯಗಳಾದ ಉತ್ತರ ಪ್ರದೇಶ (Uttara Pradesh) ಸೇರಿದಂತೆ ಐದು ರಾಜ್ಯಗಳಲ್ಲಿ ಚುನಾವಣೆಗೆ (5 State Election) ಕೆಲವೇ ತಿಂಗಳುಗಳು ಬಾಕಿ ಇದ್ದು, ಈ ವೇಳೆ ಕೇಂದ್ರ ಸರ್ಕಾರವು (Central Government) ವಿವಿಧ ಕ್ರಮಗಳ ಮೂಲಕ ಬೆಲೆಗಳನ್ನು ನಿಯಂತ್ರಿಸಲು ಕ್ರಮಗಳನ್ನು ತೆಗೆದುಕೊಳ್ಳಲು ಆರಂಭಿಸಿರುವುದು ಆಶ್ಚರ್ಯಕರವೇನಿಲ್ಲ. ಹಾಗೆ, ಈ ಬಾರಿ ಮುಂಗಾರು ಮಳೆ (Mansoon) ಕೆಲವೆಡೆ ಆಗಿದ್ದರೆ, ಇನ್ನೂ ಹಲವೆಡೆ ಸರಿಯಾಗಿ ಮಳೆಯಾಗಿಲ್ಲ. ಈ ಹಿನ್ನೆಲೆ ಖಾರಿಫ್ ಸುಗ್ಗಿಯ ಅನಿಶ್ಚಿತತೆಯು ಮುಂಬರುವ ದಿನಗಳಲ್ಲಿ ಅನಿಯಂತ್ರಿತ ಹಣದುಬ್ಬರದ ಬಗ್ಗೆ ಮೋದಿ ಸರ್ಕಾರವನ್ನು ಮತ್ತಷ್ಟು ತಲ್ಲಣಗೊಳಿಸಿದೆ.

  ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿದೆ..?

  ಸಾರ್ವಜನಿಕ ವಿತರಣಾ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯದ ಆರ್ಥಿಕ ಸಲಹೆಗಾರ್ತಿ ಮನಿಷಾ ಸೇನ್‌ಶರ್ಮಾ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಗುರುವಾರ ಪತ್ರ ಬರೆದಿದ್ದು, ಖಾದ್ಯ ತೈಲ ಮತ್ತು ಎಣ್ಣೆಬೀಜಗಳ ಬೆಲೆಯ ಏರಿಕೆಯತ್ತ ಗಮನ ಹರಿಸುವಂತೆ ಸೂಚಿಸಿದ್ದಾರೆ. "ಅಗತ್ಯ ವಸ್ತುಗಳ ಕಾಯ್ದೆ 1955 ಸಾಮಾನ್ಯ ಜನರಿಗೆ ನ್ಯಾಯಯುತ ಬೆಲೆಯಲ್ಲಿ ನಿಗದಿತ ಅಗತ್ಯ ಸರಕುಗಳ ಸಮರ್ಪಕ ಲಭ್ಯತೆಯನ್ನು ಖಾತರಿಪಡಿಸುವ ಗುರಿಯನ್ನು ಹೊಂದಿದೆ ಎಂದು ಸಂಬಂಧಪಟ್ಟವರಿಗೆ ನಿರ್ದೇಶಿಸಲಾಗಿದೆ.

  ಇತ್ತೀಚೆಗೆ ಆಮದು ಸುಂಕವನ್ನು ಕಡಿತಗೊಳಿಸಿದರೂ, ಖಾದ್ಯ ತೈಲಗಳು/ಎಣ್ಣೆಬೀಜಗಳ ಬೆಲೆಗಳಲ್ಲಿ ಹಠಾತ್ ಏರಿಕೆ ಕಂಡುಬಂದಿದೆ. ಇದು ಸ್ಟಾಕ್ ಹೋಲ್ಡರ್‌ಗಳ ಅಕ್ರಮ ಸಂಗ್ರಹಣೆಯಿಂದಾಗಿರಬಹುದು ಎಂದು ಪತ್ರದಲ್ಲಿ ಹೇಳಲಾಗಿದೆ. ಅದರಂತೆ ವ್ಯಾಪಾರಿಗಳು, ಗಿರಣಿಯವರು, ಸ್ಟಾಕ್‌ ಮಾಡುವವರು ಸೇರಿ ಇತ್ಯಾದಿ ಜನರು ಹೊಂದಿರುವ ಸ್ಟಾಕ್‌ಗಳನ್ನು ಘೋಷಿಸಲು ಸರ್ಕಾರ ಕೇಳಿದೆ, ಅದನ್ನು ರಾಜ್ಯ ಸರ್ಕಾರ ಪರಿಶೀಲಿಸುತ್ತದೆ. ಅಲ್ಲದೆ ವಾರಕ್ಕೊಮ್ಮೆ ಖಾದ್ಯ ತೈಲ ಮತ್ತು ಎಣ್ಣೆಬೀಜಗಳ ಬೆಲೆಯನ್ನು ಮೇಲ್ವಿಚಾರಣೆ ಮಾಡಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ.

  ಈ ಹಿನ್ನೆಲೆ ಖಾದ್ಯ ತೈಲ ಬೆಲೆಯನ್ನು ನಿಯಂತ್ರಿಸುವಲ್ಲಿ ಇದು ಕೇಂದ್ರ ಸರ್ಕಾರದ ಎರಡನೇ ಹಸ್ತಕ್ಷೇಪವಾಗಿದೆ. ಆಗಸ್ಟ್ ಆರಂಭದಲ್ಲಿ, ಕಚ್ಚಾ ಸೋಯಾ ಬೀನ್ ಮತ್ತು ಸೂರ್ಯಕಾಂತಿ ಎಣ್ಣೆ ಹಾಗೂ ಸಂಸ್ಕರಿಸಿದ ಸೂರ್ಯಕಾಂತಿ ಮತ್ತು ಸೋಯಾ ಬೀನ್ ಎಣ್ಣೆಯ ಆಮದು ಸುಂಕವನ್ನು ಕಡಿಮೆ ಮಾಡಲಾಗಿತ್ತು. ಕಚ್ಚಾ ಸೋಯಾ ಹುರುಳಿ ಮತ್ತು ಸೂರ್ಯಕಾಂತಿ ಎಣ್ಣೆಯ ಮೇಲಿನ ಪ್ರಸ್ತುತ ತೆರಿಗೆ ಈಗ ಶೇ. 30.25 ಇದ್ದು, ಮೊದಲು ಶೇ.38.50 ಇತ್ತು. ಅಲ್ಲದೆ ಸಂಸ್ಕರಿಸಿದ ತೈಲದ ಮೇಲಿನ ಸುಂಕವನ್ನು 49.50 ರಿಂದ 41.25ಕ್ಕೆ ಇಳಿಸಲಾಗಿದೆ.

  ಕೇಂದ್ರ ಸರ್ಕಾರದ ಈ ಕ್ರಮಕ್ಕೆ ಕಾರಣ ಹುಡುಕಿದರೆ ವರ್ಷದಿಂದ ವರ್ಷಕ್ಕೆ ಖಾದ್ಯ ತೈಲಗಳ ಬೆಲೆಯಲ್ಲಿ 20-30 ಪ್ರತಿಶತದಷ್ಟು ಏರಿಕೆಯನ್ನು ಕಾಣಬಹುದು. ಜಾಗತಿಕ ಪ್ರವೃತ್ತಿಯಿಂದ ಉತ್ತೇಜಿಸಲ್ಪಟ್ಟ, ಎಲ್ಲಾ ಖಾದ್ಯ ತೈಲಗಳ ಬೆಲೆಗಳು ದೇಶಾದ್ಯಂತ ಗಮನಾರ್ಹ ಏರಿಕೆ ಕಂಡಿವೆ. ಒಂದು ವರ್ಷದ ಹಿಂದೆ 150.50 ರೂ. ನಷ್ಟಿದ್ದ ಕಡಲೆಕಾಯಿ ಎಣ್ಣೆಯ ಸರಾಸರಿ ಚಿಲ್ಲರೆ ಬೆಲೆ ಈಗ 177.91 ರೂ. ಗೆ ಏರಿದೆ. ಸೋಯಾ ಎಣ್ಣೆ (104.27 ರೂ. ರಿಂದ 151.43ರೂ.), ಸಾಸಿವೆ ಎಣ್ಣೆ (126.17 ರೂ. ರಿಂದ 172.55 ರೂ.) ಮತ್ತು ತಾಳೆ ಎಣ್ಣೆ ( 94.18 ರೂ. ನಿಂದ 132.46 ರೂ.) ಗಳಲ್ಲೂ ಇದೇ ರೀತಿಯ ಹೆಚ್ಚಳವನ್ನು ಗಮನಿಸಲಾಗಿದೆ. ವನಸ್ಪತಿ ಬೆಲೆಯೂ ಪ್ರತಿ ಲೀಟರ್‌ಗೆ 94.18 ರೂ. ನಿಂದ 132.46 ರೂ. ಗೆ ಹೆಚ್ಚಳವಾಗಿದೆ.

  ಸುಗ್ಗಿ ಕಾಲ ಹತ್ತಿರದಲ್ಲಿರುವಾಗ ಮಧ್ಯಸ್ಥಿಕೆಗಳು ಏಕೆ..?

  ಮುಂದಿನ ತಿಂಗಳು ಆರಂಭವಾಗುವ ನಿರೀಕ್ಷೆಯಿರುವ ಖಾರಿಫ್ ಸುಗ್ಗಿಯ ಆರಂಭಕ್ಕೆ ಹತ್ತಿರದಲ್ಲಿ ಈ ನಿರ್ಧಾರಕ್ಕೆ ಎರಡು ಮುಖ್ಯ ಕಾರಣಗಳನ್ನು ಹೇಳಬಹುದು. ಪತ್ರದಲ್ಲಿ ಹೇಳಿರುವಂತೆ, ಖಾದ್ಯ ತೈಲಗಳ ಬೆಲೆ ಏರಿಕೆ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಉತ್ತರ ಪ್ರದೇಶ ಸೇರಿದಂತೆ ಕೆಲ ರಾಜ್ಯಗಳ ಚುನಾವಣೆಗೆ ಮುಂಚಿತವಾಗಿ, ಆಹಾರ ಹಣದುಬ್ಬರ ಕಡಿಮೆ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ.

  ಆದರೆ, ಮುಂಗಾರಿನ ಅಸಮಾನ ಹರಡುವಿಕೆಯಿಂದಾಗಿ ಸುಗ್ಗಿಯ ಖಚಿತತೆಯ ಬಗ್ಗೆ ನೀತಿ ನಿರೂಪಕರು ಎದುರಿಸುತ್ತಿರುವ ಗೊಂದಲಗಳ ಬಗ್ಗೆ ಪತ್ರದಲ್ಲಿ ಯಾವುದೇ ಉತ್ತರವಿಲ್ಲ. ಶುಕ್ರವಾರದ ವೇಳೆಗೆ, ದೇಶದಲ್ಲಿ 720.7 ಕೇವಲ ಮಿಮೀ ಮಳೆಯಾಗಿದೆ, ಸಾಮಾನ್ಯವಾಗಿ ಈ ವೇಳೆಗೆ 777.3 ಮಿಮೀ ಮಳೆಯಾಗಬೇಕು. ಒಟ್ಟಾರೆ ಶೇಕಡಾ 7 ರಷ್ಟು ಕೊರತೆ ಕಂಡುಬಂದಿದೆ. ಕಳೆದ ಕೆಲವು ದಿನಗಳಿಂದ ಮಳೆಗಾಲದ ಪುನರುಜ್ಜೀವನವು ರೈತರಿಗೆ ಸಮಾಧಾನ ತಂದಿದೆಯಾದರೂ, ಮಳೆಯ ಅಸಮಾನ ಹರಡುವಿಕೆಯು ಈಗಾಗಲೇ ಬೆಳೆಗಳ ಮೇಲೆ ಹಾನಿಯನ್ನುಂಟುಮಾಡಿದೆ. ಜುಲೈನಿಂದ ಆರಂಭವಾದ ಮತ್ತು ಆಗಸ್ಟ್ ಅಂತ್ಯದವರೆಗೆ ಮಳೆಯ ಕೊರತೆಯಿಂದ ಬೆಳೆಗಳು ನಿರ್ಣಾಯಕ ಸಸ್ಯ ಬೆಳವಣಿಗೆಯ ಹಂತದಲ್ಲಿ ಗರಿಷ್ಠ ತೇವಾಂಶದ ಒತ್ತಡವನ್ನು ಎದುರಿಸುತ್ತಿದೆ.

  ತಮ್ಮ ಇತ್ತೀಚಿನ ಬೆಳೆ ಸ್ಥಿತಿ ಮತ್ತು ಆರೋಗ್ಯ ವರದಿಯಲ್ಲಿ, ಇಂದೋರ್ ಮೂಲದ ಸೋಯಾಬೀನ್ ಪ್ರೊಸೆಸರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (SOPA) ಬಿತ್ತನೆಯಾದ ಒಟ್ಟು 115.513 ಲಕ್ಷ ಹೆಕ್ಟೇರ್ (lh) ಬಿತ್ತನೆಯ ಪ್ರದೇಶದ ಶೇಕಡಾ 12.830 ಕ್ಕಿಂತ ಹೆಚ್ಚು ಬೆಳೆ ಕಳಪೆ ಸ್ಥಿತಿಯಲ್ಲಿದೆ ಎಂದು ಸೂಚಿಸಿದೆ. ದೇಶದ ಅತಿದೊಡ್ಡ ಸೋಯಾ ಬೀನ್ ಬೆಳೆಯುವ ಪ್ರದೇಶವಾದ ಮಧ್ಯಪ್ರದೇಶದಲ್ಲಿ, ಒಟ್ಟು 51.068 lh ಪ್ರದೇಶದ 8.741 lh ಗಿಂತ ಹೆಚ್ಚಿನ ಬೆಳೆ ಕಳಪೆ ಸ್ಥಿತಿಯಲ್ಲಿದೆ. ಅದೇ ರೀತಿ, ರಾಜಸ್ಥಾನದಲ್ಲಿ ಬಿತ್ತನೆಯಾದ ಒಟ್ಟು 8.537 ಲೀ ಸೋಯಾಬೀನ್‌ನಲ್ಲಿ 3.623 lh ಬೆಳೆ ಕೆಟ್ಟ ಸ್ಥಿತಿಯಲ್ಲಿದೆ.

  ಭಾರತ ದ್ವಿದಳ ಧಾನ್ಯಗಳ ಸಂಘದ (ಐಪಿಜಿಎ) ಉಪಾಧ್ಯಕ್ಷ ಬಿಮಲ್ ಕೊಠಾರಿ, ಆಗಸ್ಟ್‌ನಲ್ಲಿ ಮಳೆಗಾಲದ ಚಟುವಟಿಕೆಗಳಲ್ಲಿನ ಮಂದಗತಿ ಬಗ್ಗೆ ಗಮನಸೆಳೆದರು. "ಕಳೆದ ವರ್ಷಕ್ಕಿಂತ ಖಾರಿಫ್ ಬೆಳೆಯನ್ನು ಸ್ವಲ್ಪ ಹೆಚ್ಚು ಬಿತ್ತನೆ ಮಾಡಲಾಗಿದ್ದರೂ, ನಿಜವಾದ ಉತ್ಪಾದನೆಯು ಸುಗ್ಗಿಯ ಸಮಯದಲ್ಲಿ ಮಾತ್ರ ತಿಳಿಯುತ್ತದೆ. ಕಟಾವಿನ ಅವಧಿಯಲ್ಲಿ ಬೆಳೆಗಳು ಭಾರಿ ಮಳೆಯ ಚಟುವಟಿಕೆ ಎದುರಿಸಿದರೆ, ನಾವು ಉದ್ದಿನ ಹಾಗೂ ಹೆಸರು ಬೇಳೆ ಬೆಳೆಗೆ ಸ್ವಲ್ಪ ಹಾನಿ ಕಾಣಬಹುದು. ರಾಜಸ್ಥಾನದಲ್ಲಿ ಆಗಸ್ಟ್ ತಿಂಗಳಲ್ಲಿ ಒಣ ಹವೆ ಮುಂದುವರಿದಿದೆ. ಆದ್ದರಿಂದ ರಾಜ್ಯದಲ್ಲಿ ಹೆಸರು ಬೇಳೆ ಉತ್ಪಾದನೆ ತೀವ್ರವಾಗಿ ಕಡಿಮೆಯಾಗುವ ಸಾಧ್ಯತೆ ಇದೆ. ಆದರೂ, ಸೆಪ್ಟೆಂಬರ್ ಅಂತ್ಯದ ವೇಳೆಗೆ ಎಲ್ಲವೂ ಸ್ಪಷ್ಟವಾಗುತ್ತದೆ" ಎಂದು ಅವರು ವಿವರಿಸಿದರು.

  ಇದನ್ನೂ ಓದಿ: Exclusive| ಪಾಕಿಸ್ತಾನದ ಐಎಸ್​ಐ ಒತ್ತಡದಿಂದಾಗಿ ಮತ್ತೆ 26/11 ದಾಳಿ ಪುನರಾವರ್ತಿಸಲು ಯೋಜನೆ!

  ಬೆಲೆಗಳನ್ನು ನಿಯಂತ್ರಿಸಲು ಸರ್ಕಾರ ಬೇರೆಲ್ಲಿ ಹೆಜ್ಜೆ ಇಟ್ಟಿದೆ..?

  ಈ ವರ್ಷದ ಆರಂಭದಲ್ಲಿ ತೊಗರಿ ಬೇಳೆ ಬೆಲೆಯಲ್ಲಿ ಏರಿಕೆಯಾಗಿದ್ದು, ದ್ವಿದಳ ಧಾನ್ಯಗಳ ವಲಯದಲ್ಲಿ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮಾರ್ಚ್‌ನಲ್ಲಿ ಆಮದು ಕೋಟಾಗಳ ಆರಂಭಿಕ ಘೋಷಣೆಯೊಂದಿಗೆ ಇದು ಆರಂಭವಾಯಿತು ಮತ್ತು ನಂತರ ಮೇ ತಿಂಗಳಲ್ಲಿ ಆಮದುಗಳಿಗೆ ಪರವಾನಗಿ ಅಗತ್ಯವನ್ನು ತೆಗೆದುಹಾಕುತ್ತದೆ. ಮೇ 14 ರಂದು, ಆಹಾರ, ಸಾರ್ವಜನಿಕ ವಿತರಣೆ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯವು ಮಿಲ್ಲರ್‌ಗಳು, ಸ್ಟಾಕಿಸ್ಟ್‌ಗಳು ಮತ್ತು ವ್ಯಾಪಾರಿಗಳನ್ನು ತಮ್ಮೊಂದಿಗಿರುವ ದಾಸ್ತಾನು ಘೋಷಿಸುವಂತೆ ಕೇಳಿತು ಮತ್ತು ಇದನ್ನು ಪರಿಶೀಲಿಸುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿತು. ಮೇಲಿನ ಎಲ್ಲಾ ಕ್ರಮಗಳು ಅಪೇಕ್ಷಿತ ಪರಿಣಾಮವನ್ನು ಬೀರುವಲ್ಲಿ ವಿಫಲವಾದಾಗ, ಜುಲೈ 2ರಂದು, ಕೇಂದ್ರ ಸರ್ಕಾರವು ಪ್ರೊಸೆಸರ್‌ಗಳು ಮತ್ತು ವ್ಯಾಪಾರಿಗಳ ಮೇಲೆ ಸ್ಟಾಕ್ ಮಿತಿ ವಿಧಿಸಿತು.

  ಇದನ್ನೂ ಓದಿ: Rat poison: ನಿದ್ದೆಗಣ್ಣಿನಲ್ಲಿ ಎದ್ದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ಯುವತಿ ಸಾವು!

  ವಿಪರ್ಯಾಸವೆಂದರೆ, ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಗತ್ಯ ಸರಕುಗಳ ಕಾಯ್ದೆ, 1955 ಕ್ಕೆ ತಿದ್ದುಪಡಿ ಮಾಡಿ ಸುಮಾರು ಒಂದು ವರ್ಷದ ನಂತರ ಎಣ್ಣೆಬೀಜಗಳು, ದ್ವಿದಳ ಧಾನ್ಯಗಳು, ಈರುಳ್ಳಿ ಇತ್ಯಾದಿಗಳನ್ನು ಕಾಯ್ದೆಯಿಂದ ವಿಲೀನಗೊಳಿಸಿತು ಮತ್ತು ಹೀಗಾಗಿ ಅವುಗಳನ್ನು ಸ್ಟಾಕ್ ಮಿತಿ ಹೇರಿಕೆಯಿಂದ ಮುಕ್ತಗೊಳಿಸಿತು. ಆದರೂ, ಸುಪ್ರೀಂ ಕೋರ್ಟ್ ಜನವರಿಯಲ್ಲಿ ಕಾಯ್ದೆಗಳ ಅನುಷ್ಠಾನ ತಡೆಹಿಡಿದಿರುವುದರಿಂದ, ಕೇಂದ್ರ ಸರ್ಕಾರ ಬೆಲೆಗಳನ್ನು ನಿಯಂತ್ರಿಸಲು ಸ್ಟಾಕ್ ಮಿತಿಗಳನ್ನು ವಿಧಿಸಿದೆ.
  Published by:MAshok Kumar
  First published: