Explainer: ನೆಟ್ ಝೀರೋ ಎಂದರೇನು?; ಕುತೂಹಲ ಹುಟ್ಟಿಸಿದ ಭಾರತ-ಅಮೆರಿಕ ಭೇಟಿ

ಅಮೆರಿಕ ಮತ್ತು ಚೀನಾ ನಂತರ ಭಾರತ ಪ್ರಪಂಚದ ಮೂರನೇ ಅತಿದೊಡ್ಡ ಹಸಿರು ಮನೆ ಅನಿಲ​ ಹೊರಸೂಸುವಿಕೆಯ ಸ್ಥಾನದಲ್ಲಿದೆ. ನವದೆವಲಿ ತಮ್ಮ ವಿರೋಧವನ್ನು ಬಿಟ್ಟು 2050 ಕ್ಕೆ ನಿವ್ವಳ ಶೂನ್ಯ (ನೆಟ್ ಝೀರೋ) ಒಪ್ಪಬಹುದೇ ಎನ್ನುವುದು ಕೆರ್ರಿ ಅವರ ಭೇಟಿಯ ಉದ್ದೇಶ.

ಭಾರತ-ಅಮೆರಿಕಾ ಭೇಟಿ

ಭಾರತ-ಅಮೆರಿಕಾ ಭೇಟಿ

 • Share this:
  ನಿವ್ವಳ ಶೂನ್ಯ (ನೆಟ್ ಝೀರೋ) ಹೊರಸೂಸುವಿಕೆ ಎಂದರೆ ಎಲ್ಲಾ ಮಾನವ ನಿರ್ಮಿತ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ವಾತಾವರಣದಿಂದ ಕಡಿತ ಕ್ರಮಗಳ ಮೂಲಕ ತೆಗೆದುಹಾಕಬೇಕು. ಜಾಗತಿಕ ತಾಪಮಾನವನ್ನು ಸ್ಥಿರಗೊಳಿಸಲು ನಿವ್ವಳ ಹೊರಸೂಸುವಿಕೆಯನ್ನು ಶೂನ್ಯಕ್ಕೆ ಇಳಿಸಬೇಕು. ವಾತಾವರಣದಲ್ಲಿನ CO₂, ಮೀಥೇನ್ ಮತ್ತು ಇತರ ಹಸಿರುಮನೆ ಅನಿಲಗಳ ಪ್ರಮಾಣದಲ್ಲಿನ ಸಣ್ಣ ಬದಲಾವಣೆಗಳಿಗೆ ಭೂಮಿಯು ಈಗಾಗಲೇ ಬದಲಾವಣೆಗೆ ಒಳಪಟ್ಟಿರುವುದರಿಂದ ಇಡೀ ವ್ಯವಸ್ಥೆಯು ಮತ್ತೆ ಸಮತೋಲನಕ್ಕೆ ಬರುವವರೆಗೆ ಈ ಅನಿಲಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡಬೇಕು. ಈಗ ಈ ನಿವ್ವಳ ಶೂನ್ಯ (ನೆಟ್ ಝೀರೋ) ಹೊರಸೂಸುವಿಕೆ, ಹವಮಾನ ಬದಲಾವಣೆಯ ಬಗ್ಗೆ ಭಾರತವೂ ಸೇರಿದಂತೆ ಪ್ರಮುಖ ದೇಶಗಳು ಚಿಂತನೆ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷರ ಹವಾಮಾನದ ವಿಶೇಷ ರಾಯಭಾರಿ ಭಾರತಕ್ಕೆ ಭೇಟಿ ನೀಡಿದ್ದಾರೆ.

  ಅಮೆರಿಕ ಅಧ್ಯಕ್ಷ ವಿಶೇಷ ರಾಯಭಾರಿ ಜಾನ್ ಕೆರ್ರಿ ಅವರು ವಿಶೇಷ ಹವಾಮಾನ ರಾಯಭಾರಿಯಾಗಿ ಪ್ರಸ್ತುತ ಮೂರು ದಿನಗಳ ಭಾರತ ಪ್ರವಾಸದಲ್ಲಿದ್ದಾರೆ. ಡೊನಾಲ್ಡ್ ಟ್ರಂಪ್ ಆಡಳಿತದ ನಾಲ್ಕು ವರ್ಷಗಳಲ್ಲಿ ಸ್ಥಗಿತಗೊಂಡಿದ್ದ ಹವಾಮಾನ ಬದಲಾವಣೆಯ ಪಾಲುದಾರಿಕೆಯನ್ನು ಮತ್ತೆ ಆರಂಭಿಸುವ ಉದ್ದೇಶದಿಂದ ಈ ಭೇಟಿಗೆ ಮುಂದಾಗಿದ್ದಾರೆ.

  ಏಪ್ರಿಲ್ 22-23ರಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಆಹ್ವಾನಿಸಿರುವ ವರ್ಚುವಲ್ ಕ್ಲೈಮೇಟ್ ಲೀಡರ್ಸ್ ಶೃಂಗಸಭೆಗೆ ವಿಶೇಷ ಆಹ್ವಾನಿತರಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ಒಂದಷ್ಟು ಮಾತುಕತೆಗೆ ಮುಂದಾಗಿದ್ದಾರೆ ಜಾನ್ ಕೆರ್ರಿ. ಇದು ಹವಾಮಾನ ಬದಲಾವಣೆಯಲ್ಲಿ ಬೈಡೆನ್‌ರ ಮೊದಲ ದೊಡ್ಡ ಅಂತಾರಾಷ್ಟ್ರೀಯ ನಡೆಯಾಗಿದ್ದು, ಇದರಿಂದ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ಎಲ್ಲರೂ ಇದ್ದಾರೆ. ಅಲ್ಲದೇ ಚೀನಾ ಕೂಡ 2060 ರವೇಳೆಗೆ ಶೂನ್ಯ ನಿವ್ವಳವನ್ನು ತಲುಪುವುದಾಗಿ ತಿಳಿಸಿದೆ.

  ಅಮೆರಿಕ ಮತ್ತು ಚೀನಾ ನಂತರ ಭಾರತ ಪ್ರಪಂಚದ ಮೂರನೇ ಅತಿದೊಡ್ಡ ಹಸಿರು ಮನೆ ಅನಿಲ​ ಹೊರಸೂಸುವಿಕೆಯ ಸ್ಥಾನದಲ್ಲಿದೆ. ನವದೆವಲಿ ತಮ್ಮ ವಿರೋಧವನ್ನು ಬಿಟ್ಟು 2050 ಕ್ಕೆ ನಿವ್ವಳ ಶೂನ್ಯ (ನೆಟ್ ಝೀರೋ) ಒಪ್ಪಬಹುದೇ ಎನ್ನುವುದು ಕೆರ್ರಿ ಅವರ ಭೇಟಿಯ ಉದ್ದೇಶ.

  ಒಂದು ದೇಶವು ತನ್ನ ಹೊರಸೂಸುವಿಕೆಯನ್ನು ಶೂನ್ಯಕ್ಕೆ ತರುವುದು ಎಂದು ಹೇಳಲಾಗುವುದಿಲ್ಲ. ಬದಲಾಗಿ, ನಿವ್ವಳ ಶೂನ್ಯ (ನೆಟ್ ಝೀರೋ) ಒಂದು ಸ್ಥಿತಿಯಾಗಿದೆ. ಹೀರಿಕೊಳ್ಳುವ ಮತ್ತು ಹೊರ ಸೂಸುವ ಒಂದು ಪ್ರಕ್ರಿಯೆಯಾಗಿದೆ. ವಾತಾವರಣದಲ್ಲಿ ಹಸಿರು ಮನೆಯ ಅನಿಲವನ್ನು ಹೊರತೆಗೆಯವ ಒಂದು ಪ್ರಕ್ರಿಯೆಯಾಗಿದೆ. ಕಾಡುಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಈ ಇಂಗಾಲವನ್ನು ಹೀರಿಕೊಳ್ಳುವ ಪ್ರಕ್ರಿಯೆ ಹೆಚ್ಚಿಸಬಹುದು. ವಾತಾವರಣದಿಂದ ಅನಿಲವನ್ನು ತೆಗೆಯುವುದಕ್ಕೆ ಕಾರ್ಬನ್ ಕ್ಯಾಪ್ಚರ್ ಮತ್ತು ಸ್ಟೋರೇಜ್​ನಂತಹ ಮುಂದುವರಿದ ಟೆಕ್ನಾಲಜಿಗಳ ಅಗತ್ಯವಿದೆ.

  ಸಾಮಾನ್ಯ ಹೊರಸೂಸುವಿಕೆ​ಗಿಂತ ಹೆಚ್ಚಾಗಿ ಹೀರಿಕೊಳ್ಳುವುದು ಮತ್ತು ತೆಗೆದುಹಾಕುವುದು ಮಾಡಿದರೆ ದೇಶಕ್ಕೆ ನೆಗೆಟಿವ್ ಎಮಿಷನ್ ಆಗಿ ಪರಿವರ್ತನೆಯಾಗಬಹುದು. ಭೂತಾನ್​ನಲ್ಲಿ ಹೊರಸೂಸುವಿಕೆಗಿಂತಲೂ ಹೆಚ್ಚಾಗಿ ಹೀರಿಕೊಳ್ಳುವ ಕಾರಣ ಭೂತಾನ್​ ಅನ್ನು ಕಾರ್ಬನ್ ನೆಗೆಟಿವ್ ಎಂದು ಗುರುತಿಸಲಾಗಿದೆ.

  Trend: 30 ವರ್ಷಗಳಿಂದ ಬೆಳೆಸಿದ್ದ ಪ್ರಪಂಚದ ಅತಿ ಉದ್ದದ ಉಗುರನ್ನು ಕೊನೆಗೂ ಕತ್ತರಿಸಿದ ಮಹಿಳೆ

  ನಿವ್ವಳ ಶೂನ್ಯ (ನೆಟ್ ಝೀರೋ) 2050 ಈ ಯೋಜನೆಗೆ ಎಲ್ಲಾ ದೇಶದ ಸಹಿ ಸಂಗ್ರಹಿಸಲು ಕಳೆದ ಎರಡು ವರ್ಷಗಳಿಂದ ಅಭಿಯಾನ ನಡೆಯುತ್ತಿದೆ. ಜಾಗತಿಕ ಇಂಗಾಲದ ತಟಸ್ಥತೆ ಮೂಲಕ 2050 ರ ಹೊತ್ತಿಗೆ ಗ್ರಹಗಳ ಉಷ್ಣತೆಯು 2 ಡಿಗ್ರಿ ಸೆಲ್ಷಿಯಸ್​ಗಿಂತಲೂ ಹೆಚ್ಚಾಗದಂತೆ ನೋಡಿಕೊಳ್ಳುವ ಪ್ಯಾರಿಸ್ ಒಪ್ಪಂದದ ಗುರಿಯನ್ನು ಸಾಧಿಸುವ ಏಕೈಕ ಮಾರ್ಗವಾಗಿದೆ ಎಂದು ಹೇಳಲಾಗುತ್ತಿದೆ. ಇಂಗಾಲದ ತಟಸ್ಥತೆಯ ಗುರಿ ದಶಕಗಳಿಂದಲೂ ನಡೆಯುತ್ತಿರುವ ಚರ್ಚೆಯಾಗಿದೆ.

  ದೇಶದ ನೀತಿಗಳನ್ನು ಪಾಲಿಸುವುದರಲ್ಲಿ ದೀರ್ಘಾವಧಿಯ ನೀತಿಗಳು ಊಹಿಸುವುದು ಮತ್ತು ಮುಂದುವರೆಯುವುದನ್ನೇ ಮಾಡುತ್ತಿರುತ್ತದೆ. ಇದರಲ್ಲಿ ಗುರಿಯ ಬಗ್ಗೆ ಸ್ಪಷ್ಟತೆ ಇಲ್ಲ. ಮೊದಲು, 2050 ಅಥವಾ 2070 ರವರೆಗೆ, ಶ್ರೀಮಂತ ಮತ್ತು ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೊರಸೂಸುವಿಕೆ ಕಡಿತ ಗುರಿಗಳ ಕುರಿತು ಚರ್ಚೆಗಳು ನಡೆಯುತ್ತಿದ್ದವು. ಕೆಲವು ದಶಕಗಳಿಂದ ಅನಿರ್ದೇಶಿತ ಹೊರಸೂಸುವಿಕೆಯು ಮುಖ್ಯವಾಗಿ ಜಾಗತಿಕ ತಾಪಮಾನ ಏರಿಕೆ ಮತ್ತು ಅದರ ಪರಿಣಾಮವಾಗಿ ಹವಾಮಾನ ಬದಲಾವಣೆಗೆ ಕಾರಣವಾಗಿದೆ. ನಿವ್ವಳ ಶೂನ್ಯ (ನೆಟ್ ಝೀರೋ) ಸೂತ್ರವೂ ಯಾವುದೇ ದೇಶದ ಮೇಲೆ ಯಾವುದೇ ಹೊರಸೂಸುವಿಕೆ ಕಡಿತ ಗುರಿಗಳನ್ನು ಹೊಂದಿರುವುದಿಲ್ಲ.

  ಸದ್ಯ ಹೊರಸೂಸುವಿಕೆ ಹೆಚ್ಚು ಮಾಡುವುದು, ಹೀರಿಕೊಳ್ಳುವುದು ಮತ್ತು ತೆಗೆದುಹಾಕುವುದರ ಆಧಾರದ ಮೇಲೆ ಒಂದು ದೇಶವು ಕಾರ್ಬನ್ ತಟಸ್ಥತೆಯನ್ನು ಕಾಯ್ದುಕೊಳ್ಳುವುದು. ಅಭಿವೃದ್ಧಿ ಹೊಂದಿದ ದೇಶಗಳ ದೃಷ್ಟಿಕೋನದಿಂದ ಇದು ದೊಡ್ಡ ರಿಲ್ಯಾಕ್ಸ್. ಏಕೆಂದರೆ ಈಗ ಇದರ ಜವಾಬ್ದಾರಿ ಎಲ್ಲರ ಮೇಲೆ ಇರುವುದರಿಂದಲೂ ಕೊಂಚ ಆತಂಕದ ವಾತಾವರಣ ಕಡಿಮೆಯಾಗಿದೆ.
  Published by:Latha CG
  First published: