HOME » NEWS » National-international » EXPERTS BELIEVE COVID VACCINE WILL BE READY IN NEXT FEW WEEKS SAYS MODI SESR

Coronavirus: ಮುಂದಿನ ಕೆಲವಾರಗಳಲ್ಲೇ ಕೋವಿಡ್​-19 ಲಸಿಕೆ ಸಿದ್ಧ; ಪ್ರಧಾನಿ ಮೋದಿ

ದೇಶದಲ್ಲಿ ಅಗ್ಗದ ಮತ್ತು ಸುರಕ್ಷಿತವಾದ ಲಸಿಕೆ ತಯಾರಗಲಿದೆ. ನಮ್ಮ ವಿಜ್ಞಾನಿಗಳು ಕೊರೋನಾ ವೈರಸ್​ ಲಸಿಕೆ ತಯಾರಿಕೆಯಲ್ಲಿ ಯಶಸ್ವಿಯಾಗುತ್ತಾರೆ

news18-kannada
Updated:December 4, 2020, 3:06 PM IST
Coronavirus: ಮುಂದಿನ ಕೆಲವಾರಗಳಲ್ಲೇ ಕೋವಿಡ್​-19 ಲಸಿಕೆ ಸಿದ್ಧ; ಪ್ರಧಾನಿ ಮೋದಿ
ನರೇಂದ್ರ ಮೋದಿ.
  • Share this:
ನವದೆಹಲಿ (ಡಿ.4): ದೇಶದಲ್ಲಿ ಕೋವಿಡ್​ ಬಿಕ್ಕಟ್ಟು ಹೆಚ್ಚುತ್ತಿರುವ ಕೈಗೊಳ್ಳಬೇಕಾದ ಕ್ರಮ ಹಾಗೂ ಲಸಿಕೆ ವಿತರಣೆ ಕುರಿತು ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಸಲಾಯಿತು. ಸಭೆಯ ನಂತರ ಮಾತನಾಡಿದ ಅವರು, ಕೋವಿಡ್​ 19 ಲಸಿಕೆಯನ್ನು ಮೊದಲು ಆರೋಗ್ಯ ಸೇವೆ ನಿರ್ವಹಿಸುವ ಕೊರೋನಾ ವಾರಿಯರ್ಸ್​ಗೆ ನೀಡಲಾಗುವುದು. ಕೆಲವೇ ವಾರಗಳಲ್ಲಿ ಭಾರತದಲ್ಲಿ ಕೊರೋನಾ ವೈರಸ್​ ಲಸಿಕೆ ಸಿದ್ದವಾಗಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಜ್ಞಾನಿಗಳ ಹಸಿರುವ ನಿಶಾನೆ ಬಳಿಕೆ ಕೇಂದ್ರ ಈ ಲಸಿಕೆ ವಿತರಣಾ ಕಾರ್ಯಕ್ಕೆ ಮುಂದಾಗಲಿದೆ. ಲಸಿಕೆಯ ಬೆಲೆ ಮತ್ತು ಅದರ ವಿತರಣೆ ಕುರಿತು ರಾಜ್ಯಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಜಗತ್ತು ವೆಚ್ಚದಾಯಕ ಲಸಿಕೆಗಾಗಿ ಎದುರು ನೋಡುತ್ತಿದೆ, ಎಂಟು ಪರಿಣಾಮಕಾರಿ ಲಸಿಕೆಗಳು ಲಭ್ಯವಿದೆ ಎಂದು ತಜ್ಞರು ತಿಳಿಸಿದ್ದಾರೆ. ನಾವು ಅದಕ್ಕಾಗಿ ದೀರ್ಘ ಸಮಯ ಕಾಯಬೇಕಿಲ್ಲ. ಇನ್ನು ಈ ಲಸಿಕೆಯನ್ನು ಫ್ರಾಂಟ್​ಲೈನ್​ ಕೊರೋನಾ ವಾರಿಯರ್​ ಹಾಗೂ ಹಿರಿಯರಿಗೆ ನೀಡಲಾಗುವುದು. ರಾಜ್ಯಗಳೊಂದಿಗೆ ಲಸಿಕೆ ಶೇಖರಣೆ ವ್ಯವಸ್ಥೆಯನ್ನು ಪರಿಶೀಲಿಸಿದ್ದೇವೆ. ಈಗಾಗಲೇ ದೇಶದಲ್ಲಿ ಸಾವಿನ ಪ್ರಮಾಣ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಲಸಿಕೆ ವಿತರಣೆ ಕಾರ್ಯದಲ್ಲಿ ಕೇಂದ್ರ ಮತ್ತು ರಾಜ್ಯ ಒಟ್ಟಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಇದೇ ವೇಳೆ ಕೊರೋನಾ ವೈರಸ್​ ಲಸಿಕೆ ಅಭಿವೃದ್ಧಿಪಡಿಸಲಿ ದೇಶದ ವಿಜ್ಞಾನಿಗಳು ನಡೆಸುತ್ತಿರುವ ಕಾರ್ಯವನ್ನು ಅವರು ಶ್ಲಾಘಿಸಿದರು. ದೇಶದಲ್ಲಿ ಅಗ್ಗದ ಮತ್ತು ಸುರಕ್ಷಿತವಾದ ಲಸಿಕೆ ತಯಾರಗಲಿದೆ. ನಮ್ಮ ವಿಜ್ಞಾನಿಗಳು ಕೊರೋನಾ ವೈರಸ್​ ಲಸಿಕೆ ತಯಾರಿಕೆಯಲ್ಲಿ ಯಶಸ್ವಿಯಾಗುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನು ಓದಿ: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಎದುರಿಸಲು ವಿವಿಧ ಕ್ರಮಗಳಿಗೆ ತಜ್ಞರ ಸಮಿತಿ ಶಿಫಾರಸು

ಸರ್ವಪಕ್ಷ ಸಭೆಯಲ್ಲಿ ರಾಜ್ಯಸಭೆ ಪ್ರತಿಪಕ್ಷ ನಾಯಕ ಗುಲಾಮ್​ ನಬಿ ಆಜಾದ್​, ಟಿಎಂಸಿಯ ಸುದೀಪ್​ ಬಂಡೋಪಾಧ್ಯಾಯ ಮತ್ತು ಎನ್​ಸಿಪಿಯ ಶರದ್​ ಪವಾರ್​ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳ ಸುಮಾರು 12 ನಾಯಕರು ಭಾಗಿಯಾಗಿದ್ದರು. ಬೆಳಗ್ಗೆ 10.30ಕ್ಕೆ ಆರಂಭವಾದ ಸಭೆಯಲ್ಲಿ ಲೋಕಸಭೆ ಕಾಂಗ್ರೆಸ್​ ನಾಯಕ ಅಧೀರ್​ ರಂಜನ್​ ಚೌಧರಿ ಕೂಡ ಭಾಗಿಯಾಗಿದ್ದರು. ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ಗೃಹ ಸಚಿವ ಅಮಿತ್​ ಶಾ, ಆರೋಗ್ಯ ಸಚಿವ ಹರ್ವವರ್ಧನ್​ ಕೂಡ ಉಪಸ್ಥಿತರಿದ್ದರು. ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ್​ ಜೋಡಶಿ , ಅರ್ಜುಲ್​ ರಾಮ್​ ಮೇಘವಾಲ್​ , ವಿ ಮುರಳೀಧರ್​ ಮತ್ತು ಸಂಸತ್​ ನಾಯಕರು ಭಾಗಿಯಾಗಿದ್ದರು ಎಂದು ವರದಿ ತಿಳಿಸಿದೆ.

ಭಾರತದಲ್ಲಿ 95.71 ಲಕ್ಷ ಕೊರೋನಾ ಪ್ರಕರಣ ದಾಖಲಾಗಿದೆ. ಇದರಲ್ಲಿ ಗುಣಮುಖರಾದವರು ಸಂಖ್ಯೆ 90 ಲಕ್ಷ ದಾಟಿದೆ. ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇ. 94.20 ರಷ್ಟಿದೆ.
Published by: Seema R
First published: December 4, 2020, 3:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories