ಬೀಜಿಂಗ್(ಡಿ.21): ಚೀನಾದಲ್ಲಿ (China) ಹೆಚ್ಚುತ್ತಿರುವ ಕೊರೋನಾ (Covid 19) ಮತ್ತೊಮ್ಮೆ ಇಡೀ ಜಗತ್ತನ್ನು ಚಿಂತೆಗೀಡು ಮಾಡಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೊಸ ಕೊರೋನಾ ಪ್ರಕರಣಗಳಿಂದ 9Covid 19 Cases) ಆರೋಗ್ಯ ಸೌಲಭ್ಯಗಳ ಕೊರತೆ ಎದುರಾಗಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್)ನ ಪ್ರತಿಷ್ಠಿತ ವಿಜ್ಞಾನಿ ಸಮೀರನ್ ಪಾಂಡಾ ಆಘಾತಕಾರಿ ವಿಷಯ ಹೇಳಿದ್ದಾರೆ. ಚೀನಾದಲ್ಲಿ ಹೆಚ್ಚುತ್ತಿರುವ ಪ್ರಕರಣಗಳನ್ನು ಗಮನಿಸಿದರೆ, ಮುಂದಿನ ಮೂರು ತಿಂಗಳಲ್ಲಿ, ಚೀನಾದಲ್ಲಿ 60 ಪ್ರತಿಶತದಷ್ಟು ಜನರು ಈ ವೈರಸ್ನಿಂದ ಸೋಂಕಿಗೆ ಒಳಗಾಗುತ್ತಾರೆ ಎಂದು ಸಮೀರನ್ ಅಂದಾಜಿಸಿದ್ದಾರೆ.
ಫಸ್ಟ್ಪೋಸ್ಟ್ನ ವರದಿಯ ಪ್ರಕಾರ, ಚೀನಾ ಜೀರೋ ಕೋವಿಡ್ ನೀತಿಯನ್ನು ಸಡಿಲಿಸಿದಾಗಿನಿಂದ, ಸೋಂಕಿತರ ಸಂಖ್ಯೆಯಲ್ಲಿ ಭಾರೀ ಜಿಗಿತ ಕಂಡುಬಂದಿದೆ ಎಂದು ಸಮೀರನ್ ಪಾಂಡಾ ಹೇಳಿದ್ದಾರೆ.
ಇದನ್ನೂ ಓದಿ: China: ಚೀನಾದಲ್ಲಿ ಕೊರೋನಾ ತಾಂಡವ, ಈ ಒಂದು ತಪ್ಪಿನಿಂದ 21 ಲಕ್ಷ ಸಾವು ಸಂಭವಿಸುವ ಶಂಕೆ!
ಅಲ್ಲದೇ ಚೀನಾದಲ್ಲಿನ ಜನರು ಸೋಂಕಿನಿಂದ ಸ್ವಲ್ಪ ಪರಿಹಾರವನ್ನು ಪಡೆಯಲು ಕನಿಷ್ಠ ಒಂದು ವರ್ಷ ಕಾಯಬೇಕಾಗುತ್ತದೆ. ಒಂದು ಅಂದಾಜಿನ ಪ್ರಕಾರ, ಮುಂದಿನ 90 ದಿನಗಳಲ್ಲಿ ಚೀನಾದ ಜನಸಂಖ್ಯೆಯ ಕನಿಷ್ಠ 60 ಪ್ರತಿಶತದಷ್ಟು ಜನರು ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ ಎಂದಿದ್ದಾರೆ.
ಇದನ್ನೂ ಓದಿ: Mental Health: ನಿಮಗೆ ಕೊರೋನಾ ಬಂದಿತ್ತಾ? ಹಾಗಾದರೆ ಈಗ ನಿಮ್ಮ ಮೆದುಳಿನ ಆರೋಗ್ಯ ಕೆಡಬಹುದು ಜಾಗ್ರತೆ
ಭಾರತದ ಬಗ್ಗೆ ವಿಜ್ಞಾನಿ ಸಮೀರನ್ ಪಾಂಡಾ ಹೇಳಿದ್ದೇನು?
ಸಮೀರನ್ ಈ ಬಗ್ಗೆ ಮಾತನಾಡುತ್ತಾ, “ಜನಸಂಖ್ಯಾಶಾಸ್ತ್ರದ ವಿಷಯದಲ್ಲಿ ಎಲ್ಲಾ ದೇಶಗಳು ಪರಸ್ಪರ ಭಿನ್ನವಾಗಿವೆ. 2020 ರಲ್ಲಿ ಏನಾಯಿತು ಅದು ಮತ್ತೆ ಪುನರಾವರ್ತನೆಯಾಗುವುದಿಲ್ಲ ಏಕೆಂದರೆ ವೈರಸ್ ಹೇಗೆ ವರ್ತಿಸುತ್ತದೆ, ಜನರು ಹೇಗೆ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದಾರೆ ಮತ್ತು ವ್ಯಾಕ್ಸಿನೇಷನ್ ವ್ಯಾಪ್ತಿ ಏನು ಎಂದು ಈಗ ನಮಗೆ ತಿಳಿದಿದೆ. ಆದ್ದರಿಂದ, ಒಂದು ದೇಶದ ಬೆಳವಣಿಗೆಯು ಇತರ ದೇಶಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅಲ್ಲ. ಸೋಂಕು ಎಷ್ಟು ಹರಡಿದೆ, ವ್ಯಾಕ್ಸಿನೇಷನ್ ಹೇಗೆ ಸಂಭವಿಸಿದೆ, ಇವೆಲ್ಲವೂ ಅವಲಂಬಿಸಿರುತ್ತದೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ