ಪಾಕ್ ಪೋಷಿತ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ; ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್​​ಗೆ ಮೋದಿ ಖಡಕ್​​ ಸೂಚನೆ

ಇವರ ಭಯೋತ್ಪಾದನೆಯಿಂದ ಭಾರತ ತೊಂದರೆ ಅನುಭವಿಸುತ್ತಿದೆ. ಹಾಗಾಗಿ ಉಭಯ ದೇಶಗಳ ವಿಚಾರದಲ್ಲಿ ಶಾಂತಿಯುತ ಮಾತುಕತೆ ಕಷ್ಠ ಎಂದಿದ್ದಾರೆ ಪ್ರಧಾನಿ ನರೇಂದ್ರ ಮೋದಿಯವರು.

Ganesh Nachikethu | news18
Updated:June 13, 2019, 8:44 PM IST
ಪಾಕ್ ಪೋಷಿತ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ; ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್​​ಗೆ ಮೋದಿ ಖಡಕ್​​ ಸೂಚನೆ
ಶೃಂಗಸಭೆಯಲ್ಲಿ ಪ್ರಧಾನಿ ಮೋದಿ
Ganesh Nachikethu | news18
Updated: June 13, 2019, 8:44 PM IST
ನವದೆಹಲಿ(ಜೂನ್​​.13): ಇಂದು ಸೆಂಟ್ರಲ್​​ ಏಷ್ಯಾದ ಕಿರ್ಗಿಸ್ತಾನ ರಾಜಧಾನಿ ಬಿಶ್ಕೆಕ್​ ನಗರದಲ್ಲಿ ನಡೆದ ಶಾಂಘೈ ಸಹಕಾರ ಸಂಘದ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗಿಯಾಗಿದ್ದರು. ಈ ಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ಜೊತೆಗೆ ನರೇಂದ್ರ ಮೋದಿಯವರು ಪ್ರಮುಖ ವಿಚಾರಗಳ ಸುತ್ತ ಮಾತುಕತೆ ನಡೆಸಿದರು. ನಮ್ಮ ಪ್ರಧಾನಿ ನಡೆಸಿದ ಮಾತುಕತೆಯೂ ಅತ್ಯಂತ ಫಲಪ್ರದ ಕಂಡಿದೆ ಎಂಬುದೀಗ ಭಾರತಕ್ಕೆ ಸಂತಸ ಸುದ್ದಿ.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಜೊತೆಗಿನ ಮಾತುಕತೆ ವೇಳೆ ಪ್ರಧಾನಿ ಮೋದಿಯವರು ಪ್ರಮುಖವಾಗಿ ಪಾಕ್ ಪೋಷಿಸುತ್ತಿರುವ ಭಯೋತ್ಪಾದನೆ ಕುರಿತು ಧ್ವನಿಯೆತ್ತಿದ್ದಾರೆ. ಇನ್ನು ಉಗ್ರರ ಜೊತೆಗೂಡಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇವರ ಭಯೋತ್ಪಾದನೆಯಿಂದಾಗಿ ಭಾರತ ತೊಂದರೆ ಅನುಭವಿಸುತ್ತಿದೆ. ಹಾಗಾಗಿ ಉಭಯ ದೇಶಗಳ ವಿಚಾರದಲ್ಲಿ ಶಾಂತಿಯುತ ಮಾತುಕತೆ ಕಷ್ಠ ಎಂದು ಖಡಕ್ಕಾಗಿಯೇ ಹೇಳಿದ್ದಾರೆ.

ಮೊದಲಿಗೆ ಕಿರ್ಗಿಸ್ತಾನದ ಬಿಶ್ಕೆಕ್​​ಗೆ ಪ್ರಧಾನಿ ಮೋದಿಯವರು ಪಾಕ್ ವಾಯುಮಾರ್ಗ ಮೂಲಕ ತೆರಳಲಿದ್ದಾರೆ ಎಂದು ಹೇಳಲಾಗಿತ್ತು. ಪ್ರಧಾನಿ ವಿಮಾನ ಪಾಕಿಸ್ತಾನದ ವಾಯುಮಾರ್ಗದಲ್ಲಿ ಸಂಚರಿಸಲಿದೆ ಎಂದು ಪಾಕಿಸ್ತಾನದ ಬಳಿ ಭಾರತ ತಾತ್ವಿಕ ಒಪ್ಪಿಗೆಯೂ ಪಡೆದಿತ್ತು. ಬಳಿಕ ಪ್ರಧಾನಿ ಮೋದಿ ಪಾಕ್ ವಾಯುಮಾರ್ಗದಲ್ಲಿ ತೆರಳದೇ ಮಾರ್ಗ ಬದಲಿಸಿದ್ದಾರೆ. ಒಮನ್, ಇರಾನ್ ಮೂಲಕ ಬಿಶ್ಕೆಕ್​​ಗೆ ಆಗಮಿಸಿ ಶೃಂಗಸಭೆಯಲ್ಲಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ: ಮಂಡ್ಯ ಬಸ್​ ದುರಂತಕ್ಕೆ ಕೇಂದ್ರ ಪರಿಹಾರ; 'ನನಗೆ ಆ ಕ್ರೆಡಿಟ್ ಬೇಡ' ಎಂದ ಸುಮಲತಾ

ಇತ್ತೀಚೆಗೆ ಫೆಬ್ರುವರಿ 26 ರಂದು ಪಾಕ್​ ಆಕ್ರಮಿತ ಬಾಲಾಕೋಟ್​​ನಲ್ಲಿದ್ದ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಶಿಬಿರ ತಾಣದ ಮೇಲೆ ಭಾರತೀಯ ಸೇನೆ ದಿಢೀರ್​​ ವಾಯುದಾಳಿ ನಡೆಸಿತ್ತು. ಈ ಘಟನೆ ನಂತರದಲ್ಲಿ ಪಾಕ್​​ ತನ್ನ ಒಟ್ಟು 11 ವಾಯುಮಾರ್ಗಗಳನ್ನು ಬಂದ್​​ ಮಾಡಿದೆ. ಈ ಪೈಕಿ ದಕ್ಷಿಣ ಪಾಕಿಸ್ತಾನದ ಎರಡು ವಾಯುಮಾರ್ಗಗಳಲ್ಲಿ ಮಾತ್ರ ಸಂಚರಿಸಲು ಭಾರತಕ್ಕೆ ಅನುಮತಿ ನೀಡಿತ್ತು. ಬೇರೆ ಮಾರ್ಗಗಳನ್ನು ಭಾರತದ ಪಾಲಿಗೆ ಪಾಕ್​ ಮುಚ್ಚಿ ಹಾಕಿದೆ.

ಹಾಗಾಗಿ ಕಿರ್ಗಿಸ್ತಾನಕ್ಕೆ ಪಾಕ್​​ ವಾಯುಮಾರ್ಗದ ಮೂಲಕ ಮೋದಿಯವರ ವಿಮಾನ ಹಾರಾಟ ನಡೆಸಲು ಭಾರತ ಅಲ್ಲಿನ ಇಮ್ರಾನ್ ಖಾನ್ ನೇತೃತ್ವದ ಸರ್ಕಾರಕ್ಕೆ ಮನವಿ ಮಾಡಿತ್ತು. ಬಳಿಕ ಖುದ್ದು ಇಮ್ರಾನ್​​ ಖಾನ್​ ಅವರೇ ತಾತ್ವಿಕ ಒಪ್ಪಿಗೆ ನೀಡಿದ್ದರು. ಅಲ್ಲದೇ ತಾವು ಕೂಡ ಶಾಂಘೈ ಸಹಕಾರ ಸಂಘದ ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವುದಾಗಿ ತಿಳಿಸಿದ್ದರು. ಜತೆಗೆ ಎರಡೂ ದೇಶಗಳ ನಡುವಿನ ಜಮ್ಮು-ಕಾಶ್ಮೀರ ವಿವಾದ ಸೇರಿದಂತೆ ಭೌಗೋಳಿಕ ಮತ್ತು ರಾಜಕೀಯ ಸಮಸ್ಯೆಗಳಿಗೆ ಪರಿಹಾರದ ಅಗತ್ಯವಿದೆ ಎಂದು ಪ್ರಧಾನಿ ಮೋದಿಯವರಿಗೆ ಇಮ್ರಾನ್​ ಖಾನ್​​ ಪತ್ರ ಬರೆದಿದ್ದರು.

ಇದನ್ನೂ ಓದಿ: ನೀತಿ ಆಯೋಗ ಸಭೆಗೆ ಸಿಎಂ ಜಗನ್​​: ಆಂಧ್ರದ ವಿಶೇಷ ಸ್ಥಾನಮಾನಕ್ಕಾಗಿ ಪಟ್ಟು
Loading...

ನಂತರ ಪ್ರಧಾನಿ ನರೇಂದ್ರ ಮೋದಿಯವರು ತನ್ನ ಮಾರ್ಗವನ್ನು ಬದಲಿಸಿದ್ಧಾರೆ. ಈ ಮೂಲಕ ಯಾವುದೇ ಕಾರಣಕ್ಕೂ ಭಾರತ ಮತ್ತು ಪಾಕ್​​ ವಿಚಾರದಲ್ಲಿ ಶಾಂತಿಯುತ ಮಾತುಕತೆಗೆ ಅವಕಾಶವಿಲ್ಲ ಎಂಬ ಎಚ್ಚರಿಕಾ ಸಂದೇಶವನ್ನು ಇಮ್ರಾನ್​ ಖಾನ್​​ಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
----------
First published:June 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...