Tamilnadu Exitpoll: ಡಿಎಂಕೆ ಕೈ ಹಿಡಿಯಲಿದ್ದಾರಂತೆ ತಮಿಳುನಾಡಿನ ಜನ; ಬಿಜೆಪಿಗೆ ಮುಖಭಂಗ!

ದ್ರಾವಿಡರ ನಾಡಲ್ಲಿ ಈ ಬಾರಿ ಯಾರಾಗುತ್ತಾರೆ ಬಾಸ್​? ತಮಿಳುನಾಡಿನ ಜನ ಯಾರಿಗೆ ವಿಜಿಲ್​ ಪೋಡು ಅಂತಿದ್ದಾರೆ ಗೊತ್ತಾ? AIDMK ಜೊತೆ ಕೈ ಜೋಡಿಸಿದ್ದ ಬಿಜೆಪಿಗೆ ಮುಖಭಂಗವಾಗಲಿದೆಯಾ? ಇಲ್ಲಿದೆ ಚುನಾವಣೋತ್ತ ಸಮೀಕ್ಷೆಗಳ ಸಂಪೂರ್ಣ ಚಿತ್ರಣ..

ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್​

ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್​

  • Share this:
ಬೆಂಗಳೂರು: ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಇಡೀ ದೇಶದ ಗಮನ ಸೆಳೆದಿದ್ದು, ನೆರೆಯ ತಮಿಳುನಾಡು ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಯಾವ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂಬ ಲೆಕ್ಕಾಚಾರ ಜೋರಾಗೇ ನಡೆದಿದೆ. ಮತದಾನೋತ್ತರ ಸಮೀಕ್ಷೆ ಪ್ರಕಾರ ಎಐಡಿಎಂಕೆ ಜೊತೆಗೂಡಿ ಮ್ಯಾಜಿಕ್​ ಮಾಡಲು ಮುಂದಾಗಿದ್ದ ಬಿಜೆಪಿಯ ಚುನಾವಣಾ ತಂತ್ರ ಫಲ ಕೊಟ್ಟಿಲ್ಲ ಎನ್ನಲಾಗುತ್ತಿದೆ. ಈ ಬಾರಿ ತಮಿಳಿಗರು ಡಿಎಂಕೆ ಕೈಹಿಡಿದಿದ್ದಾರೆ ಎಂದು ಬಹುತೇಕ ಸಮೀಕ್ಷೆಗಳು ಅಂದಾಜಿಸಿವೆ. ಇನ್ನು ಮೊದಲ ಬಾರಿಗೆ ಚುನಾವಣೆ ಎದುರಿಸಿದ ನಟ ಕಮಲ್​ಹಾಸನ್​ ನೇತೃತ್ವದ ಪಕ್ಷ ಎಎಂಎಂಕೆ ಒಂದಂಕಿಯಷ್ಟೇ ಸ್ಥಾನಗಳನ್ನು ಪಡೆಯಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ.

ಏ.6ರಂದು ಒಂದೇ ಹಂತದಲ್ಲಿ ತಮಿಳುನಾಡಿದ 234 ಕ್ಷೇತ್ರಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಶೇ. 71.43ರಷ್ಟು ಮತದಾರರ ತಮ್ಮ ಹಕ್ಕು ಚಲಾಯಿಸಿದ್ದರು. ರಿಪಬ್ಲಿಕ್​ ಸಿಎನ್​​ಎಕ್ಸ್​ ಸಮೀಕ್ಷೆ ಪ್ರಕಾರ ಡಿಎಂಕೆ ಈ ಬಾರಿ 160ರಿಂದ 150 ಸ್ಥಾನಗಳನ್ನು ಗೆಲ್ಲಲಿದೆ. ಎಂ.ಕೆ.ಸ್ಟಾಲಿನ್​ ಮುಖ್ಯಮಂತ್ರಿಯಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಬಿಜೆಪಿಯೊಂದಿಗೆ ಮೈತ್ರಿಯಾಗಿ ಚುನಾವಣೆ ಎದುರಿಸಿದ ಎಐಡಿಎಂಕೆಗೆ ತಮಿಳುನಾಡಿದ ಮತದಾರರು 58ರಿಂದ 68 ಕ್ಷೇತ್ರಗಳಲ್ಲಿ ಗೆಲುವನ್ನು ಕೊಡಲಿದ್ದಾರಂತೆ. ಇನ್ನು ನಟ ಕಮಲ್​ಹಾಸನ್​ ಪಕ್ಷ ಎಎಂಎಂಕೆ 4ರಿಂದ 6 ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎನ್ನಲಾಗುತ್ತಿದೆ.

ಚಾಣಕ್ಯ ಚುನಾವಣೋತ್ತರ ಸಮೀಕ್ಷೆ ಪ್ರಕಾರವೂ ತಮಿಳುನಾಡಿನಲ್ಲಿ ಈ ಬಾರಿ ಡಿಎಂಕೆನೇ ಅಧಿಕಾರ ನಡೆಸಲಿದೆ. 164ರಿಂದ 186 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಅಧಿಕಾರ ಹಿಡಿಯಲಿದ್ದಾರೆ. ಎಐಡಿಎಂಕೆ 46ರಿಂದ 48 ಕ್ಷೇತ್ರಗಳನ್ನು ಮಾತ್ರ ಪಡೆಯಲಿದೆ. ಈ ಮೂಲಕ ಬಿಜೆಪಿಯನ್ನು ತಮಿಳು ಜನ ತಿರಸ್ಕರಿಸಲಿದ್ದಾರೆ ಎನ್ನುತ್ತಿದೆ ಸಮೀಕ್ಷೆ.

ಆ್ಯಕ್ಸಿಸ್​​-ಮೈ ಇಂಡಿಯಾ ಸಮೀಕ್ಷೆ

AIADMK+   -   38-54

DMK+        -   174-195

MNM+       -    0-2AMMK+     -   1-2

ಇನ್ನು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಯಲ್ಲಿ ಏ.6ರಂದು ಒಂದೇ ಹಂತದಲ್ಲಿ 30 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ರಿಪಬ್ಲಿಕ್​ ಸಿಎನ್​ಎಕ್ಸ್​​ ಸಮೀಕ್ಷೆ ಪ್ರಕಾರ ಬಿಜೆಪಿ ಪುದುಚೇರಿಯಲ್ಲಿ ಗೆಲು ಸಾಧಿಸಲಿದೆ ಎನ್ನುತ್ತಿದೆ. ಬಿಜೆಪಿ 16-20 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್​ 11-13 ಕ್ಷೇತ್ರಗಳಲ್ಲಿ ಜಯಗಳಿಸಲಿದೆಯಂತೆ.
Published by:Kavya V
First published: