Uttar Pradesh Exit Poll Results: ಯುಪಿಯಲ್ಲಿ ಮತ್ತೆ ‘ಯೋಗಿ ಸರ್ಕಾರ್’ ಎನ್ನುತ್ತಿದೆ ಚುನಾವಣೋತ್ತರ ಸಮೀಕ್ಷೆಗಳು

ಯೋಗಿ ಆದಿತ್ಯನಾಥ್​ (Yogi Adityanath) ನೇತೃತ್ವದ ಬಿಜೆಪಿ ಸರ್ಕಾರವನ್ನು (BJP Govt) ಉತ್ತರ ಪ್ರದೇಶದ ಜನತೆ ಮರು ಆಯ್ಕೆ ಮಾಡಿದ್ದಾರೆಯೇ, ಇಲ್ಲವೇ ಎಸ್​ಪಿಯ ಅಖಿಲೇಶ್​ ಯಾದವ್​ಗೆ ಮತದಾರರು ಮಣೆ ಹಾಕಿದ್ದಾರೆಯೇ ಎಂಬ ರಾಜಕೀಯ ಲೆಕ್ಕಾಚಾರ ಜೋರಾಗಿದೆ. ಮಾ.10ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.

ಸಿಎಂ ಯೋಗಿ, ಅಖಿಲೇಶ್​

ಸಿಎಂ ಯೋಗಿ, ಅಖಿಲೇಶ್​

  • Share this:
Uttar Pradesh Election 2022: ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಏಳು ಹಂತಗಳಲ್ಲಿ ನಡೆದಿದ್ದು, ಇಂದು ಕೊನೆ ಹಂತದ ಮತದಾನದೊಂದಿಗೆ (Voting) ಮುಕ್ತಾಯಗೊಂಡಿದೆ. ಕೊನೆಯ ಹಂತದಲ್ಲಿ 54 ಸ್ಥಾನಗಳಿಗೆ ಸಂಜೆ 5 ಗಂಟೆಯವರೆಗೆ 54% ಕ್ಕಿಂತ ಹೆಚ್ಚು ಮತದಾನವಾಗಿದೆ. ಈ ಹಂತದಲ್ಲಿ ಅಜಂಗಢ, ಮೌ, ಜೌನ್‌ಪುರ್, ಗಾಜಿಪುರ, ಚಂದೌಲಿ, ವಾರಣಾಸಿ, ಮಿರ್ಜಾಪುರ, ಭದೋಹಿ ಮತ್ತು ಸೋನ್‌ಭದ್ರ ಜಿಲ್ಲೆಗಳಲ್ಲಿ ಚುನಾವಣೆ ನಡೆದಿದೆ. ಯೋಗಿ ಆದಿತ್ಯನಾಥ್​ (Yogi Adityanath) ನೇತೃತ್ವದ ಬಿಜೆಪಿ ಸರ್ಕಾರವನ್ನು (BJP Govt) ಉತ್ತರ ಪ್ರದೇಶದ ಜನತೆ ಮರು ಆಯ್ಕೆ ಮಾಡಿದ್ದಾರೆಯೇ, ಇಲ್ಲವೇ ಎಸ್​ಪಿಯ ಅಖಿಲೇಶ್​ ಯಾದವ್​ಗೆ ಮತದಾರರು ಮಣೆ ಹಾಕಿದ್ದಾರೆಯೇ ಎಂಬ ರಾಜಕೀಯ ಲೆಕ್ಕಾಚಾರ ಜೋರಾಗಿದೆ. ಮಾ.10ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಉತ್ತರ ಪ್ರದೇಶದಲ್ಲಿ ಈ ಬಾರಿಯೂ ಬಿಜೆಪಿ ಮೇಲುಗೈ ಸಾಧಿಸಿದರೆ ಅತಿಹೆಚ್ಚು ಲೋಕಸಭಾ ಕ್ಷೇತ್ರಗಳಿರುವ ಈ ರಾಜ್ಯದಲ್ಲಿ ಬಿಜೆಪಿ ಪ್ರಭಾವ ವಿಸ್ತರಿಸಿ, ಮತ್ತೊಂದು ಅವಧಿಗೆ ಕೇಂದ್ರದಲ್ಲಿಯೂ ಬಿಜೆಪಿ ಸರ್ಕಾರ ಸ್ಥಾಪನೆಯಾಗಬಹುದು ಎಂದು ಹೇಳಲಾಗುತ್ತಿದೆ. ಚುನಾವಣೋತ್ತರ ಸಮೀಕ್ಷೆಗಳ ಹೊರ ಬಿದ್ದಿದ್ದು, ಯಾವ ಸಮೀಕ್ಷೆ ಏನು ಹೇಳುತ್ತಿದೆ ಎಂದು ನೋಡೋಣ..

ಪಂಚಭಾಷಾ ಚುನಾವಣೆಯ ಫಲಿತಾಂಶದ ಬಗ್ಗೆ ಮತ್ತಷ್ಟು ಮಾಹಿತಿಗೆ ಈ ಲಿಂಕ್ ಕ್ಲಿಕ್ 

ನ್ಯೂಸ್​​ ಎಕ್ಸ್​​-ಪೋಲ್​ ಸ್ಟಾರ್​​ ಚುನಾವಣೋತ್ತರ ಸಮೀಕ್ಷೆ (NewsX-Polstrat Exit Polls 2022)

BJP: 211-225

SP: 146-160

BSP:14-24

Congress: 2-6

ಇಟಿಜಿ ರಿಸರ್ಚ್​ ಚುನಾವಣೋತ್ತರ ಸಮೀಕ್ಷೆ (ETG Research Exit Polls 2022)  

BJP: 230-245

SP: 150-165

UP Republic- P-MARQ ಚುನಾವಣೋತ್ತರ ಸಮೀಕ್ಷೆ

BJP: 240

SP: 140

ಮ್ಯಾಟ್ರಿಜ್  ಚುನಾವಣೋತ್ತರ ಸಮೀಕ್ಷೆ (Matrize Exit Polls) 

BJP- 262-272 ಸ್ಥಾನಗಳ ಜೊತೆಗೆ 45.4% ಮತಗಳನ್ನು ಗಳಿಸಲಿದೆ

SP- 119-134 ಸ್ಥಾನಗಳು

BSP- 7-15 ಸ್ಥಾನಗಳು

Congress- 3-8 ಸ್ಥಾನಗಳು

ಜನ್​​ ಕಿ ಬಾತ್ ಚುನಾವಣೋತ್ತರ​ ( Jan Ki Baat) 

BJP: 240

SP: 150

BSP: 7

P-MARQ ಸಮೀಕ್ಷೆ ಯುಪಿಯಲ್ಲಿ ಬಿಜೆಪಿ 240 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದೆ. ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ 240ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು P-MARQ ಭವಿಷ್ಯ ನುಡಿದಿದೆ.

BJP+: 240

SP+: 140

BSP: 17

Congress: 4



ಸಿಎಂ ಯೋಗಿ ಪ್ರತಿಕ್ರಿಯೆ 

ಬಹುತೇಕ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ಯುಪಿಯಲ್ಲಿ ಬಿಜೆಪಿ ಸರ್ಕಾರವೇ ಮರು ಆಯ್ಕೆ ಆಗಲಿದೆ ಎಂದಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು,  ಎಲ್ಲಾ ಬಿಜೆಪಿ ಕಾರ್ಯಕರ್ತರಿಗೆ ಧನ್ಯವಾದಗಳು. ಯುಪಿಯಲ್ಲಿ ಶಾಂತಿಯುತವಾಗಿ ಚುನಾವಣೆ ನಡೆದಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಿದ್ದಕ್ಕಾಗಿ ನಾನು ಚುನಾವಣಾ ಆಯೋಗಕ್ಕೆ ಧನ್ಯವಾದ ಹೇಳುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.

 ಕಳೆದ ಚುನಾವಣೆಗಳ ಫಲಿತಾಂಶ ಹೀಗಿದೆ..

ಉತ್ತರ ಪ್ರದೇಶದಲ್ಲಿ, 2012 ರಿಂದ 2017 ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅಖಿಲೇಶ್ ಯಾದವ್ ಅವರ ಪ್ರಸ್ತುತ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಸಮಾಜವಾದಿ ಪಕ್ಷ (ಎಸ್‌ಪಿ) ನಡುವೆ ಸ್ಪರ್ಧೆ ನಿರೀಕ್ಷೆಯಿದೆ. ಕಳೆದ 2017ರ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ 403 ಸ್ಥಾನಗಳಲ್ಲಿ 312 ಗೆಲ್ಲುವ ಮೂಲಕ ರಾಜ್ಯದಲ್ಲಿ SP ಯನ್ನು ಕೇವಲ 70 ಸೀಟುಗಳಿಗೆ ಸೀಮಿತಗೊಳಿಸಿತು.
Published by:Kavya V
First published: