Exit Polls 2022 : ಪಂಜಾಬ್​​ನಲ್ಲಿ ಈ ಬಾರಿ ಎಎಪಿ, ಉತ್ತರಾಖಂಡ್​ನಲ್ಲಿ ಮತ್ತೊಮ್ಮೆ ಬಿಜೆಪಿ ಎನ್ನುತ್ತಿವೆ ಚುನಾವಣಾ ಸಮೀಕ್ಷೆ

ಇಂಡಿಯಾ ಟುಡೆ-ಆಕ್ಸಿಸ್ ಮೈ ಇಂಡಿಯಾದ ಚುನಾವಣೋತ್ತರ ಸಮೀಕ್ಷೆ ಪ್ರಕಾರ, ಕಳೆದ ಬಾರಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದ ಎಎಪಿ ಈ ಬಾರಿ ಪಂಜಾಬ್​ನಲ್ಲಿ ದೊಡ್ಡ ಬಹುಮತದಿಂದ ಗೆಲ್ಲುವ ಸಾಧ್ಯತೆ ಇದೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​

 • Share this:
  ದೇಶದ ಪಂಚರಾಜ್ಯಗಳ ಚುನಾವಣೆ ಫಲಿತಾಂಶಕ್ಕೆ ಇನ್ನೇನು ಮೂರು ದಿನ ಬಾಕಿ ಇದೆ. ಮಾರ್ಚ್​ 10 ರಂದು ಚುನಾವಣಾ ಮತ ಏಣಿಕೆ ನಡೆಯಲಿದ್ದು, ಉತ್ತರ ಪ್ರದೇಶ, ಗೋವಾ (Goa), ಪಂಜಾಬ್ (Punjab)​, ಮಣಿಪುರ (Manipur), ಉತ್ತರಾ ಖಂಡ್​ (Uttara Khand)ದಲ್ಲಿ ಯಾರು ಅಧಿಕಾರ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬುದು ಸ್ಪಷ್ಟವಾಗಲಿದೆ. ಇದಕ್ಕೂ ಮುನ್ನ ಯಾವ ರಾಜ್ಯದಲ್ಲಿ ಯಾವ ಪಕ್ಷಗಳು ಅಧಿಕಾರ ಗದ್ದುಗೆ ಏರಬಹುದು ಎಂಬ ಕುರಿತು ಚುನಾವಣಾ ಸಮೀಕ್ಷೆಗಳು (Exit Poll Result) ತಿಳಿಸಿದೆ. ಚುನಾವಣೆ ಕುರಿತು ಸಾಮಾನ್ಯವಾಗಿ ಚಾಣಕ್ಯ, CVoter ಮತ್ತು MyAxis ಇಂಡಿಯಾ ಸೇರಿದಂತೆ ಅನೇಕವು ಈ ಸಮೀಕ್ಷೆಗಳನ್ನು ನಡೆಸುತ್ತವೆ. ಅದರ ಅನುಸಾರ ಯಾವ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಬಹುದು ಎಂಬ ಸಮೀಕ್ಷೆ ಇಲ್ಲಿದೆ.

  ಚುನಾವಣೋತ್ತರ ಸಮೀಕ್ಷೆಗಳು ರಾಜ್ಯದಲ್ಲಿನ ಮತದಾರರ ಮನಸ್ಥಿತಿ ಅರಿಯಲು ಸಹಾಯ ಮಾಡಲಿದೆ. ಜೊತೆಗೆ ಮುಂದಿನ ವರ್ಷ ಎದುರಾಗಲಿರುವ ಲೋಕಸಭಾ ಚುನಾವಣೆಗೆ ಇವು ದಿಕ್ಸೂಚಿಯಾಗುವ ಸಾಧ್ಯತೆ ಇದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ. ಅದರಲ್ಲೂ ಅತಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶ ಚುನಾವಣೆ ಫಲಿತಾಂಶ ಅತ್ಯಂತ ನಿರ್ಣಯಕವಾಗಿದೆ.

  ಪಂಜಾಬ್​ -117 ಸ್ಥಾನ


  ಬಿಜೆಪಿಕಾಂಗ್ರೆಸ್​​ಎಎಪಿಇತರೆ
  ಇಂಡಿಯಾ ಟುಡೆ-ಆಕ್ಸಿಸ್ ಮೈ ಇಂಡಿಯಾ1-419-3176-90 7-11
  ಜನ್​ ಕಿ ಬಾತ್​​3-718-3160-8412-19
  ಎಬಿಪಿ ಸಿ ವೋಟರ್​7-1322-2851-6120-26
  ಟೈಮ್ಸ್​ ನೌ5227019ಕ್ಕಿಂತ ಹೆಚ್ಚು

  ಇಂಡಿಯಾ ಟುಡೆ-ಆಕ್ಸಿಸ್ ಮೈ ಇಂಡಿಯಾದ ಚುನಾವಣೋತ್ತರ ಸಮೀಕ್ಷೆ ಪ್ರಕಾರ, ಕಳೆದ ಬಾರಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದ ಎಎಪಿ ಈ ಬಾರಿ ಪಂಜಾಬ್​ನಲ್ಲಿ ದೊಡ್ಡ ಬಹುಮತದಿಂದ ಗೆಲ್ಲುವ ಸಾಧ್ಯತೆ ಇದೆ. ಇನ್ನು ಈಗಾಲೇ ಅಧಿಕಾರದಲ್ಲಿರುವ ಕಾಂಗ್ರೆಸ್​ ಈ ಬಾರಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ಸಾಧ್ಯತೆ ಇದೆ.

  ಗೋವಾ-   ಬಿಜೆಪಿಕಾಂಗ್ರೆಸ್​​ಎಎಪಿಟಿಎಂಸಿಇತರೆ
  ಇಂಡಿಯಾ ಟಿವಿ1914125
  ಎಬಿಪಿ ಸಿ ವೋಟರ್​13-1712-1625-9
  ಇಟಿಜಿ ರಿಸರ್ಚ್​​ 17-20 15-17 1 3-4

  ಗೋವಾದಲ್ಲಿ ಇಂಡಿಯಾ ಟಿವಿ ಚುನಾವಣೋತ್ತರ ಸಮೀಕ್ಷೆ ಗೋವಾದಲ್ಲಿ ಬಿಜೆಪಿ  ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ.  ಇನ್ನು ಎರಡನೇ ಪಕ್ಷವಾಗಿ ಕಾಂಗ್ರೆಸ್​​ ಹೊರ ಹೊಮ್ಮಲಿದ್ದು, ಎಎಪಿ, ಟಿಎಂಸಿ ಒಂದಂಕಿಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ

  ಉತ್ತರಾ ಖಂಡ್​- 70 ಸ್ಥಾನ


  ಬಿಜೆಪಿಕಾಂಗ್ರೆಸ್​​ಎಎಪಿಇತರೆ
  ಜನ್ ಕಿ ಬಾತ್‌ನ  ಸಮೀಕ್ಷೆ32- 4127-350-10-4
  ನ್ಯೂಸ್‌ಎಕ್ಸ್‌31- 3333-350-30- 2
  P-MARQ35- 3928-340-30-3
  ಸಿ-ವೋಟರ್​26- 3232-380-20- 3

  ಉತ್ತರಾಖಂಡ್​ನಲ್ಲಿ ಈ ಬಾರಿ ಎರಡನೇ ಬಾರಿ ಕೂಡ ಬಿಜೆಪಿ ಸರ್ಕಾರ ರಚಿಸುವ ಸಾಧ್ಯತೆ ಇದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ.  ಇನ್ನು ಎರಡೇ ಅತಿ ದೊಡ್ಡ ಪಕ್ಷವಾಗಿ ಕಾಂಗ್ರೆಸ್​​ ಪಕ್ಷ ಹೊರ ಹೊಮ್ಮಲಿದೆ.

  ಮಣಿಪುರ- 60 ಸ್ಥಾನ
  ಬಿಜೆಪಿಕಾಂಗ್ರೆಸ್​ಎನ್​ಪಿಪಿಇತರೆ
  P-MARQ27-3111-176-105-13
   ಇಂಡಿಯಾ ನ್ಯೂಸ್​​ 23-28 10-14

  ಮಣಿಪುರದಲ್ಲಿ ಈಗಾಗಲೇ ಅಧಿಕಾರದಲ್ಲಿರುವ ಬಿಜೆಪಿ ಮತ್ತೊಂದು ಬಾರಿ ಅಧಿಕಾರ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಕಾಂಗ್ರೆಸ್​ನ ಭರ್ಜರಿ ಪ್ರಚಾರದ ನಡುವೆಯೂ ಮತದಾರರು ಮತ್ತೊಮ್ಮೆ ಆಡಳಿತಾ ರೂಢ ಬಿಜೆಪಿಗೆ ಮಣೆ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ.

  ಉತ್ತರ ಪ್ರದೇಶ ಹೊರತಾಗಿ ಈ ನಾಲ್ಕು ರಾಜ್ಯಗಳ ಚುನಾವಣೆ ಏಕಹಂತದಲ್ಲಿ ಮುಗಿದಿದ್ದರೂ ಇವುಗಳ ಚುನಾವಣೋತ್ತರ ಸಮೀಕ್ಷೆಯನ್ನು ಪ್ರಕಟಿಸದಂತೆ ಚುನಾವಣಾ ಆಯೋಗ ಪ್ರಕಟಿಸಿತ್ತು. ಇಂದು ಉತ್ತರ ಪ್ರದೇಶದ ಏಳನೇ ಹಂತದ ಮತದಾನ ಮುಗಿದಿದ್ದು, ಚುನಾವಣಾ ಸಮೀಕ್ಷೆ ಹೊರ ಬಿದ್ದಿದೆ. ಮಾರ್ಚ್​ 10ರ ಗುರುವಾರ  ಮತ ಏಣಿಕೆ ನಡೆಯಲಿದ್ದು, ಅಧಿಕೃತ ಚಿತ್ರಣ ಸಿಗಲಿದೆ

  ಪಂಚಭಾಷಾ ಚುನಾವಣೆಯ ಫಲಿತಾಂಶದ ಬಗ್ಗೆ ಮತ್ತಷ್ಟು ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ  
  Published by:Seema R
  First published: