• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Exit Poll Results: ತ್ರಿಪುರಾ-ನಾಗಾಲ್ಯಾಂಡ್‌ನಲ್ಲಿ ಬಿಜೆಪಿಗೆ ಅಧಿಕಾರ, ಮೇಘಾಲಯ ಜಿದ್ದಾಜಿದ್ದಿ! ಎಕ್ಸಿಟ್ ಪೋಲ್ ಭವಿಷ್ಯ

Exit Poll Results: ತ್ರಿಪುರಾ-ನಾಗಾಲ್ಯಾಂಡ್‌ನಲ್ಲಿ ಬಿಜೆಪಿಗೆ ಅಧಿಕಾರ, ಮೇಘಾಲಯ ಜಿದ್ದಾಜಿದ್ದಿ! ಎಕ್ಸಿಟ್ ಪೋಲ್ ಭವಿಷ್ಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತ್ರಿಪುರಾದಲ್ಲಿ ಫೆಬ್ರವರಿ 16ರಂದು ಚುನಾವಣೆ ನಡೆದಿದೆ. ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಸೋಮವಾರ ಮತದಾನ ನಡೆದಿದೆ. ಪ್ರತಿರಾಜ್ಯಗಳು 60  ವಿಧಾನಸಭಾ ಸ್ಥಾನಗಳನ್ನು ಹೊಂದಿವೆ. ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ತ್ರಿಪುರಾ ಮತ್ತು ನಾಗಾಲ್ಯಾಂಡ್​ನಲ್ಲಿ​ ಬಿಜೆಪಿ ಅಧಿಕಾರ ಹಿಡಿಯಲಿದೆ. ಮೇಘಾಲಯದಲ್ಲಿ ಯಾವ ಪಕ್ಷವೂ ಬಹುಮತ ಪಡೆಯುವುದಿಲ್ಲ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಮುಂದೆ ಓದಿ ...
  • Share this:

ನವದೆಹಲಿ: ಈಶಾನ್ಯದ ರಾಜ್ಯಗಳಾದ ತ್ರಿಪುರಾ, ನಾಗಾಲ್ಯಾಂಡ್​ ಮತ್ತು ಮೇಘಾಲಯದಲ್ಲಿ ವಿಧಾನಸಭಾ ಚುನಾವಣೆ (Assembly Election)  ಮುಗಿದಿದ್ದು, ಇದೀಗ ಚುನಾವಣಾ ಫಲಿತಾಂಶದ ಸಮೀಕ್ಷೆಗಳು (Exit Polls) ಹೊರಬಿದ್ದಿವೆ.  ಸಮೀಕ್ಷೆಗಳ ಪ್ರಕಾರ ತ್ರಿಪುರಾದಲ್ಲಿ (Tripura) ಬಿಜೆಪಿ ಮೈತ್ರಿ ಕೂಟ ಕ್ಲೀನ್​ ಸ್ವೀಪ್ ಮಾಡಲಿದೆ. ನಾಗಾಲ್ಯಾಂಡ್‌ನಲ್ಲಿ ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ ಹಾಗೂ ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರ ಬರಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಮೇಘಾಲಯದಲ್ಲಿ ಯಾವೊಂದು ಪಕ್ಷವೂ ಬಹುಮತ ಪಡೆಯುವುದಿಲ್ಲ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ. ಅಲ್ಲಿ ಕಾನ್ರಾಡ್ ಸಂಗ್ಮಾ ಅವರ ಎನ್‌ಪಿಪಿ (ನ್ಯಾಷನಲ್ ಪೀಪಲ್ಸ್ ಪಾರ್ಟಿ) ಏಕೈಕ ಬೃಹತ್ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆಯಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ವರದಿ ಮಾಡಿವೆ.


ತ್ರಿಪುರಾದಲ್ಲಿ ಫೆಬ್ರವರಿ 16ರಂದು ಚುನಾವಣೆ ನಡೆದಿದೆ. ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಸೋಮವಾರ ಮತದಾನ ನಡೆದಿದೆ. ಪ್ರತಿರಾಜ್ಯಗಳು 60  ವಿಧಾನಸಭಾ ಸ್ಥಾನಗಳನ್ನು ಹೊಂದಿವೆ. ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ 82.42% ಕ್ಕಿಂತ ಹೆಚ್ಚು ಮತದಾನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡು ಈಶಾನ್ಯ ರಾಜ್ಯಗಳಲ್ಲಿ ಏಕಾಂಗಿಯಾಗಿ ಅಥವಾ ಯಾವುದೇ ಮೈತ್ರಿಕೂಟದಲ್ಲಿ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಹವಣಿಸುತ್ತಿದೆ.


ಇದನ್ನೂ ಓದಿ: Rahul Gandhi: ರಾಹುಲ್‌ ಗಾಂಧಿಗೆ ಈಗಲೂ ಸ್ವಂತ ಮನೆಯಿಲ್ವಂತೆ! ಮಗನ ಹೇಳಿಕೆಗೆ ಭಾವುಕರಾದ ಸೋನಿಯಾ ಗಾಂಧಿ


ತ್ರಿಪುರಾ ಎಕ್ಸಿಟ್​ ಪೋಲ್​


ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ತ್ರಿಪುರಾದಲ್ಲಿ ಬಿಜೆಪಿ ಮತ್ತು ಐಪಿಎಫ್‌ಟಿ 36 ರಿಂದ 45 ಸ್ಥಾನಗಳನ್ನು ಗೆಲ್ಲಬಹುದು. ಇದರಿಂದ ಬಿಜೆಪಿಗೆ ಸುಲಭದಲ್ಲಿ ಅಧಿಕಾರ ಸಿಗಲಿದೆ ಎಂದು ಭವಿಷ್ಯ ನುಡಿದಿದೆ. ಎಡ ಮೈತ್ರಿಕೂಟವು 6 ರಿಂದ 11 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ತಿಪ್ರಾ ಮೋಥಾ ಪಕ್ಷ (TMP) 9 ರಿಂದ 16 ಸ್ಥಾನಗಳನ್ನು ಗೆಲ್ಲಬಹುದು.


ಜನ್ ಕಿ ಬಾತ್‌ನ ಎಕ್ಸಿಟ್ ಪೋಲ್ ಫಲಿತಾಂಶಗಳ ಪ್ರಕಾರ, ಬಿಜೆಪಿ 29-40 ಸ್ಥಾನಗಳನ್ನು ಪಡೆಯಲಿದೆ, ಎಡ ಮೈತ್ರಿ ಕೂಟ 9-16 ಸ್ಥಾನಗಳನ್ನು ಮತ್ತು ಟಿಎಂಪಿ 10-14 ಸ್ಥಾನಗಳನ್ನು ಪಡೆಯಲಿದೆ.


 ಝೀ ನ್ಯೂಸ್-ಮ್ಯಾಟ್ರಿಜ್ ಪ್ರಕಾರ ಬಿಜೆಪಿ 29-36, ಎಡಪಕ್ಷಗಳು 13-21, ಟಿಪಿಎಂ 11-16 ಇತರೆ 0-3 ಸ್ಥಾನಗಳನ್ನು ಗೆಲ್ಲಬಹುದು ಎಂದು ವರದಿ ಮಾಡಿದೆ.
ನಾಗಾಲ್ಯಾಂಡ್​ ಎಕ್ಸಿಟ್​ ಪೋಲ್​


ನಾಗಾಲ್ಯಾಂಡ್‌ನಲ್ಲಿ ಬಿಜೆಪಿ-ಎನ್‌ಡಿಪಿಪಿ 35-43 ಸ್ಥಾನಗಳಲ್ಲಿ ಭಾರಿ ಗೆಲುವು ಸಾಧಿಸಲಿದೆ ಎಂದು ಝೀ ನ್ಯೂಸ್-ಮ್ಯಾಟ್ರಿಜ್ ಎಕ್ಸಿಟ್ ಪೋಲ್ ಭವಿಷ್ಯ ನುಡಿದಿದೆ. ಕಾಂಗ್ರೆಸ್ 1-3 ಮತ್ತು ಎನ್‌ಪಿಎಫ್ 2-5 ಸ್ಥಾನಗಳ, ಇತರೆ 6-11 ಸ್ಥಾನ ಪಡೆಯಲಿದೆ ಹೇಳಿದೆ.


ಆಕ್ಸಿಸ್ ಮೈ ಇಂಡಿಯಾ ಪ್ರಕಾರ, ಎನ್​ಡಿಪಿಪಿ 28-34, ಬಿಜೆಪಿ 10-14, ಕಾಂಗ್ರೆಸ್​1-2, ಎನ್​ಪಿಎಫ್​ 3-8, ಇತರೆ 5-15 ಸ್ಥಾನಗಳಲ್ಲಿ ಗೆಲ್ಲಲಿದೆ.


ಜನ್ ಕಿ ಬಾತ್ ಭವಿಷ್ಯವಾಣಿಯ ಪ್ರಕಾರ, ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟ 35-45 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ, ನಂತರ ನಾಗಾ ಪೀಪಲ್ಸ್ ಫ್ರಂಟ್ (ಎನ್​ಪಿಎಫ್) 6-10 ಸ್ಥಾನಗಳನ್ನು ಮತ್ತು ಇತರರು 9-15 ಸ್ಥಾನಗಳನ್ನ ಗೆಲ್ಲಲಿವೆ ಎಂದು ಭವಿಷ್ಯ ನುಡಿದಿದೆ.


ಟೈಮ್ಸ್ ನೌ-ಇಟಿಜಿ ರಿಸರ್ಚ್ ಪ್ರಕಾರ ಬಿಜೆಪಿ ಮೈತ್ರಿ ನಾಗಾಲ್ಯಾಂಡ್‌ನಲ್ಲಿ 39-49 ಸ್ಥಾನಗಳನ್ನು ಗಳಿಸಲಿದೆ. ಪ್ರತಿಪಕ್ಷ ಎನ್‌ಪಿಎಫ್ 4-8 ಸ್ಥಾನಗಳನ್ನು ಗಳಿಸಿದರೆ ಇತರರು 10-17 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ.


ಮೇಘಾಲಯ ಎಕ್ಸಿಟ್ ಪೋಲ್


ಮೇಘಾಲಯದಲ್ಲಿಆಡಳಿತಾರೂಢ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) 18-24 ಸ್ಥಾನಗಳನ್ನು ಗೆಲ್ಲುತ್ತದೆ, ನಂತರ ಕಾಂಗ್ರೆಸ್ 6-12 ಸ್ಥಾನಗಳನ್ನು ಮತ್ತು ಬಿಜೆಪಿ 4-8 ಸ್ಥಾನಗಳನ್ನು ಪಡೆಯುತ್ತದೆ. ಯಾವುದೇ ಪಕ್ಷವು 31 ಸ್ಥಾನಗಳ ಬಹುಮತ ಪಡೆಯುವುದಿಲ್ಲ ಎಂದು ಆಕ್ಸಿಸ್ ಮೈ ಇಂಡಿಯಾದ ಎಕ್ಸಿಟ್ ಪೋಲ್ ಸಮೀಕ್ಷೆ ತಿಳಿಸಿದೆ.


ಜನ್​ ಕಿ ಬಾತ್​ ಸಮೀಕ್ಷೆ ಪ್ರಕಾರ, ಎನ್​ಪಿಪಿ 11-17, ಬಿಜೆಪಿ 3-7, ಕಾಂಗ್ರೆಸ್​ 6-11, ಇತರೆ 5-17 ಸ್ಥಾನಗಳನ್ನು ಗೆಲ್ಲಲಿದೆ.


ಝೀ ನ್ಯೂಸ್​ -ಮ್ಯಾಟ್ರಿಜ್​ ಮೇಘಾಲಯದಲ್ಲಿ ಎನ್​ಪಿಪಿ 21-26 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆಯಿದೆ. 2018ರಲ್ಲಿ ರಾಜ್ಯದಲ್ಲಿ ಕೇವಲ ಎರಡು ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ 6-11 ಸ್ಥಾನಗಳನ್ನು ಪಡೆಯಲಿದೆ. ಹೊಸದಾಗಿ ಕಣಕ್ಕಿಳಿದಿರುವ ತೃಣಮೂಲ ಕಾಂಗ್ರೆಸ್ 8-13 ಸ್ಥಾನಗಳೊಂದಿಗೆ ಖಾತೆ ತೆರೆಯಲಿದೆ. ಇತರರು 10-19 ಸ್ಥಾನಗಳನ್ನು ಗೆಲ್ಲುತ್ತವೆ ಎಂದು ಭವಿಷ್ಯ ನುಡಿದಿದೆ.

Published by:Rajesha M B
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು